ಈ ದಿನ ಸಂಪಾದಕೀಯ | ಬಿಹಾರದಲ್ಲಿ ಕೋಟಿ ಉದ್ಯೋಗದ ಭರವಸೆ; ಹಳೆಯ ಭರವಸೆ ಎಲ್ಲಿ ಹೋಯಿತು ಮೋದೀಜೀ?

Date:

ಚುನಾವಣಾ ಪೂರ್ವದ ಭರವಸೆಗಳನ್ನು ಈಡೇರಿಸದೇ ಇರುವ ಬಹುದೊಡ್ಡ ‘ಟ್ರ್ಯಾಕ್‌ ರೆಕಾರ್ಡ್‌’ ಬಿಜೆಪಿ ಹೆಸರಿನಲ್ಲಿದೆ. ಅದು ಹನ್ನೊಂದು ವರ್ಷಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿಯ ಭರವಸೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಆಗಿತ್ತು. ಮೂರನೇ ಬಾರಿಗೆ ಅಧಿಕಾರ ಹಿಡಿದರೂ ಅದನ್ನು ಮರೆತೇ ಹೋಗಿದೆ ಮೋದಿ ಸರ್ಕಾರ. ಕಾಂಗ್ರೆಸ್‌ ಕಾಲದಲ್ಲಿ ಕಟ್ಟಿದ ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಿದ್ದು, ವಿಮಾನ ನಿಲ್ದಾಣ, ರೈಲ್ವೆ ನಿರ್ವಹಣೆಯನ್ನೂ ತಮ್ಮ ಸ್ನೇಹಿತ ಅದಾನಿಗೆ ಧಾರೆ ಎರೆದಿದ್ದಾರೆ.

ಬಿಹಾರ ಚುನಾವಣೆಗೆ ವಾರವಷ್ಟೇ ಬಾಕಿ ಇದೆ. ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ ಮಂಗಳವಾರ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಪ್ರಣಾಳಿಕೆಯ ಮೊದಲ ಅಂಶ ರಾಜ್ಯದ ಪ್ರತಿ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ. ಇಂಡಿಯಾ ಒಕ್ಕೂಟ ಸರ್ಕಾರ ರಚಿಸಿದ 20 ತಿಂಗಳೊಳಗೆ ಈ ಯೋಜನೆಯನ್ನು ಬಿಹಾರದಾದ್ಯಂತ ಜಾರಿಗೆ ತರಲಾಗುವುದು ಎಂದು ತೇಜಸ್ವಿ ಯಾದವ್‌ ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಶುಕ್ರವಾರ ತನ್ನ ಪ್ರಣಾಳಿಕೆಯನ್ನು ತರಾತುರಿಯಲ್ಲಿ ಬಿಡುಗಡೆ ಮಾಡಿದೆ. ತೇಜಸ್ವಿ ಯಾದವ್‌ ಎಲ್ಲ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ಎಂದರೆ, ಎನ್‌ಡಿಎ ಒಂದು ಕೋಟಿ ಸರ್ಕಾರಿ ಉದ್ಯೋಗ ಎಂದು ಜವಾಬು ನೀಡಿದೆ. ಇಂಡಿಯಾ ಒಕ್ಕೂಟದ ಪ್ರಣಾಳಿಕೆಯನ್ನು ಕಾಪಿ ಹೊಡೆದಿದೆ. ಯಾವ ಯೋಜನೆ ಹೆಚ್ಚು ಜನರನ್ನು ಸೆಳೆಯುತ್ತೋ ಆ ಯೋಜನೆಯನ್ನು ಬೇರೆ ಪಕ್ಷಗಳ ಪ್ರಣಾಳಿಕೆಯಿಂದ ಕಾಪಿ ಹೊಡೆಯುವುದು ಬಿಜೆಪಿ ಹಲವು ರಾಜ್ಯಗಳಲ್ಲಿ ಅನುಸರಿಸಿಕೊಂಡು ಬಂದಿರುವ ಹಳೆಯ ಚಾಳಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ವರ್ಷದ ಜನವರಿಯ ದೆಹಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯನ್ನು ಕಾಪಿ ಹೊಡೆದು ʼಮಹಿಳಾ ಸಮೃದ್ಧಿ ಯೋಜನೆʼಯಡಿ ಪ್ರತಿ ತಿಂಗಳು ಎಲ್ಲ ಮಹಿಳೆಯರ ಖಾತೆಗೆ 2,500 ರೂ. ಹಣ ಹಾಕುವ ಭರವಸೆಯನ್ನು ಬಿಜೆಪಿ ನೀಡಿತ್ತು. ಆದರೆ ಅದು ಈವರೆಗೂ ಜಾರಿಯಾಗಿಲ್ಲ. ಕರ್ನಾಟಕದ ಗ್ಯಾರಂಟಿ ಯೋಜನೆಯನ್ನು ಚುನಾವಣಾ ಸಭೆಗಳಿಂದ ಹಿಡಿದು, ಅದು ಜಾರಿಯಾದ ನಂತರವೂ ಹಿಗ್ಗಾಮುಗ್ಗಾ ಟೀಕಿಸಿದ್ದ ಬಿಜೆಪಿ, ಪ್ರಧಾನಿ ಮೋದಿ  ಲೋಕಸಭಾ ಚುನಾವಣೆಗೆ ‘ಮೋದಿಕಿ ಗ್ಯಾರಂಟಿ’ ಎಂದು ಪ್ರಣಾಳಿಕೆಗೆ ಹೆಸರು ನೀಡಿದ್ದರು. ನಂತರ ನಡೆದ ಎಲ್ಲ ರಾಜ್ಯಗಳ ಚುನಾವಣೆಯಲ್ಲಿ ಉಚಿತ ಯೋಜನೆಗಳನ್ನು ಘೋಷಿಸಿದ್ದರು. ರಾಜಕಾರಣದಲ್ಲಿ ನಾಚಿಕೆ ಹೇಸಿಗೆಗೆ ಜಾಗವಿಲ್ಲ ಎಂಬುದನ್ನು ಮೋದಿ ಸಾಹೇಬರು ಹೆಜ್ಜೆಹೆಜ್ಜೆಗೆ ರುಜುವಾತು ಮಾಡುತ್ತಲೇ ಬಂದಿದ್ದಾರೆ.

ಒಂದು ಕೋಟಿ ಲಕ್ಷಾಧೀಶ ದೀದಿ, ನಾಲ್ಕು ನಗರಗಳಲ್ಲಿ ಮೆಟ್ರೋ ರೈಲು ಸೇವೆಗಳು ಮತ್ತು ರಾಜ್ಯದಲ್ಲಿ ಏಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ನಿರ್ಮಿಸುವ ಭರವಸೆ ಎನ್‌ಡಿಎ ನೀಡಿದೆ. ಹೀಗೆ ಭರವಸೆಗಳ ಮಹಾಪೂರವನ್ನೇ ಹರಿಸಲಾಗಿದೆ. ಚುನಾವಣೆ ಘೋಷಣೆಗೆ ವಾರ ಇರುವಾಗ ಪ್ರಧಾನಿ ಮೋದಿ ಅವರು 75ಲಕ್ಷ ಮಹಿಳೆಯರ ಖಾತೆಗೆ ತಲಾ ಹತ್ತು ಸಾವಿರ ರೂಪಾಯಿ ಹಣ ಜಮೆ ಮಾಡಿ ವೋಟ್‌ ಖರೀದಿಗೆ ಇಳಿದಿದ್ದರು. ಈ ಋಣವೇ ಗೆಲುವಿನ ದಡ ಸೇರಿಸುತ್ತದೆ ಎಂಬ ಭರವಸೆಯಿಂದ ಸರ್ಕಾರಿ ಉದ್ಯೋಗ ನೀಡುವ ಭರವಸೆಯನ್ನು ತೇಲಿ ಬಿಟ್ಟಿದ್ದಾರೆ ಎನಿಸುತ್ತದೆ. ಭರವಸೆಯ ಪಟ್ಟಿ ನೋಡಿದರೆ, ‘ಇಂಡಿಯಾ’ ಜೊತೆ ಪೈಪೋಟಿಗಿಳಿದು, ಕಾಟಾಚಾರಕ್ಕೆ ಮಾಡಿದಂತಿದೆ. ಪ್ರಣಾಳಿಕೆ ಬಿಡುಗಡೆ ಪತ್ರಿಕಾಗೋಷ್ಠಿಯಲ್ಲಿ ಅಮಿತ್ ಶಾ, ನಡ್ಡಾ, ನಿತೀಶ್ ಕುಮಾರ್‌ ಕೇವಲ 26 ಸೆಕೆಂಡು ಮಾತ್ರ ಇದ್ದು ಅಚ್ಚರಿ ಮೂಡಿಸಿದ್ದಾರೆ. ಮೋದಿ ಹಾಜರಿರಲಿಲ್ಲ.

ಚುನಾವಣಾ ಪೂರ್ವದ ಭರವಸೆಗಳನ್ನು ಈಡೇರಿಸದೇ ಇರುವ ಬಹುದೊಡ್ಡ ‘ಟ್ರ್ಯಾಕ್‌ ರೆಕಾರ್ಡ್‌’ ಬಿಜೆಪಿ ಹೆಸರಿನಲ್ಲಿದೆ. ಅದು ಹನ್ನೊಂದು ವರ್ಷಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿಯ ಭರವಸೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಆಗಿತ್ತು. ಮೂರನೇ ಬಾರಿಗೆ ಅಧಿಕಾರ ಹಿಡಿದರೂ ಅದನ್ನು ಮರೆತೇ ಹೋಗಿದೆ ಮೋದಿ ಸರ್ಕಾರ. ಕಾಂಗ್ರೆಸ್‌ ಕಾಲದಲ್ಲಿ ಕಟ್ಟಿದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಿದ್ದು, ವಿಮಾನ ನಿಲ್ದಾಣ, ರೈಲ್ವೆ ನಿರ್ವಹಣೆಯನ್ನೂ ತಮ್ಮ ಸ್ನೇಹಿತ ಅದಾನಿಗೆ ಧಾರೆ ಎರೆದಿದ್ದಾರೆ. ಆ ಮೂಲಕ ಈ ದೇಶದ ಯುವಕರ ಸರ್ಕಾರಿ ಉದ್ಯೋಗದ ಕನಸನ್ನು ನುಚ್ಚು ನೂರಾಗಿಸಿದ್ದಾರೆ. ಹೊಸ ಕೈಗಾರಿಕೆ ಸ್ಥಾಪನೆಯ ಮಾತೇ ಇಲ್ಲ. ಇನ್ನೆಲ್ಲಿ ಉದ್ಯೋಗ ಸೃಷ್ಟಿ! ಇದರ ಮಧ್ಯೆ ಬಿಹಾರದಲ್ಲಿ ಒಂದು ಕೋಟಿ ಸರ್ಕಾರಿ ಉದ್ಯೋಗ ಎಲ್ಲಿಂದ ಕೊಡುತ್ತಾರೆ? ಒಂದು ರಾಜ್ಯಕ್ಕೆ ಏಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುತ್ತಾರೆ ಎಂದರೆ ಯಾಕಾಗಿ? ಅದರಲ್ಲಿ ಪ್ರಯಾಣಿಸುವ ಅಷ್ಟೊಂದು ಮಂದಿಯಾದರೂ ಯಾರು? ಇಪ್ಪತ್ತು ವರ್ಷಗಳಿಂದ ಬಿಹಾರದಲ್ಲಿ ಬಿಜೆಪಿ ಮೈತ್ರಿಕೂಟಗಳೇ ಅಧಿಕಾರ ನಡೆಸಿವೆ. ಆದರೂ ರಾಜ್ಯ ಯಾಕೆ ಇನ್ನೂ ಹಿಂದುಳಿದಿದೆ? ಈಗ ಮತ್ತೆ ಅಧಿಕಾರ ಹಿಡಿದರೆ ಎಲ್ಲ ಭರವಸೆಯನ್ನು ಈಡೇರಿಸುವ ಆ ಮಂತ್ರದಂಡ ಯಾವುದು? ದಕ್ಷಿಣ ಭಾರತಕ್ಕೆ ಅತ್ಯಂತ ಹೆಚ್ಚು ವಲಸೆ ಬರುವ ಕಾರ್ಮಿಕರಲ್ಲಿ ಬಿಹಾರಿಗಳೇ ಹೆಚ್ಚು. ಇವೆಲ್ಲ ಏನನ್ನು ಸೂಚಿಸುತ್ತದೆ?

ಪಕೋಡಾ ಮಾರಾಟವೂ ಉದ್ಯೋಗ ಎಂದು ತಮ್ಮ ಎರಡನೇ ಅವಧಿಯಲ್ಲಿ ಮೋದಿ ಬಣ್ಣಿಸಿದ್ದರು. ಈಗ ರೀಲ್ಸ್‌ ಮಾಡಿ ಯುವಜನರು ಹಣ ಗಳಿಸುತ್ತಿದ್ದಾರೆ. ಇದಕ್ಕೆ ಬಿಜೆಪಿಯ ಯೋಜನೆಗಳೇ ಕಾರಣ ಎಂದಿದ್ದಾರೆ. ಎಲ್ಲರೂ ಹೊಟ್ಟೆಪಾಡಿಗೆ ತಮಗೆ ದಕ್ಕಿದ ಉದ್ಯೋಗ ಮಾಡಿಯೇ ಬದುಕುತ್ತಿದ್ದಾರೆ. ಆದರೆ, ಉನ್ನತ ಶಿಕ್ಷಣ ಪಡೆದ ಯುವಕರೂ ಅದನ್ನೇ ಮಾಡಿ ಬದುಕುವುದಿದ್ದರೆ ಶಿಕ್ಷಣ ಯಾಕೆ ಬೇಕು. ನೂರಾರು ವಿಶ್ವವಿದ್ಯಾಲಯ ಕಟ್ಟಿ ಏನು ಸಾಧನೆ ಮಾಡಬೇಕಿದೆ? ಹೇಗಾದರೂ ಆಗಲಿ ಚುನಾವಣೆಗಳನ್ನು ಗೆದ್ದುಬಿಡಬೇಕು ಅಷ್ಟೇ. ಎಲ್ಲ ರಾಜ್ಯಗಳನ್ನೂ ಗೆಲ್ಲಬೇಕು, ದೇಶದ ಅಧಿಕಾರ ತಮ್ಮ ಕೈಯಲ್ಲೇ ಇರಬೇಕು. ಅದಕ್ಕಾಗಿ ಮತ ಕಳ್ಳತನಕ್ಕೆ ಇಳಿದವರಿಗೆ ಗೆಲುವಿನ ರುಚಿ ಹತ್ತಿದೆ. ಅದಕ್ಕಿರುವ ಕಳ್ಳ ದಾರಿಗಳೂ ಗೊತ್ತಿವೆ. ಭರವಸೆ ಈಡೇರಿಸಬೇಕು, ಜನರ ಬದುಕು ಹಸನಾಗಬೇಕು ಎಂಬ ಯಾವ ಕಾಳಜಿಯೂ ಬಿಜೆಪಿಗೆ ಇದ್ದಂತಿಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಚುನಾವಣೆಗೆ ಮುನ್ನ ಜನರ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಒಂದು ಹಂತಕ್ಕೆ ಮಾಡುತ್ತಿವೆ. ಆದರೆ, ಬಿಜೆಪಿ ನಂತರವೂ ಅದೇ ಕೆಲಸವನ್ನು ಇಡಿಯಾಗಿ ಸಾರಾಸಗಟಾಗಿ ಮಾಡುತ್ತಿದೆ. ಮೋದಿಯವರ ಭಾಷಣದ ವಿಷಯಗಳೇ ಈ ಮಾತಿಗೆ ಸಾಕ್ಷಿ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಹತ್ತಾರು ಸವಾಲುಗಳ ನಡುವೆಯೂ ಐದು ಗ್ಯಾರಂಟಿಗಳನ್ನು ಆರು ತಿಂಗಳೊಳಗೆ ಜಾರಿ ಮಾಡಿದೆ. ಅಷ್ಟರ ಮಟ್ಟಿಗೆ ಮತದಾರರ ನಂಬಿಕೆಗೆ ಅರ್ಹವಾಗಿದೆ. ಆದರೆ ದೆಹಲಿಯಲ್ಲಿ ಬಿಜೆಪಿ ಅಧಿಕಾರ ಹಿಡಿದು ಹತ್ತು ತಿಂಗಳಾದರೂ ಮಹಿಳೆಯರ ಖಾತೆಗೆ ಹಣ ಹಾಕಿಲ್ಲ. ಮಹಾರಾಷ್ಟ್ರದಲ್ಲೂ ಬಿಜೆಪಿ ಕೊಟ್ಟ ಭರವಸೆ ಉಳಿಸಿಕೊಂಡಿಲ್ಲ. ಮಹಿಳೆಯರ ಖಾತೆಗೆ ಹಣ ಹಾಕುವ ‘ಮುಖ್ಯಮಂತ್ರಿ ಲಡ್ಕಿ ಬಾಹಿಣ್’ ಯೋಜನೆ ಜಾರಿಗೆ ಹತ್ತಾರು ನಿರ್ಬಂಧಗಳನ್ನು ಹೇರಲಾಗಿದೆ. ಫಲಾನುಭವಿಗಳ ಸಂಖ್ಯೆಯನ್ನು ತೀವ್ರವಾಗಿ ಕುಗ್ಗಿಸಲಾಗಿದೆ.

ಬಿಹಾರ ಚುನಾವಣೆ ಒಂದು ವರ್ಷ ದೂರದಲ್ಲಿದ್ದಾಗಲೇ, ವೋಟುಗಳ ಮೇಲೆ ಕಣ್ಣಿಟ್ಟು ಸಾವಿರಾರು ಕೋಟಿಯ ಯೋಜನೆ, ಅನುದಾನ ಕೊಡುತ್ತಿದೆ ಒಕ್ಕೂಟ ಸರ್ಕಾರ. ಏಪ್ರಿಲ್‌ನಲ್ಲಿ ದೇಶವೇ ಬೆಚ್ಚು ಬೀಳುವಂತಹ ಪೆಹಲ್ಗಾಮ್‌ ಭಯೋತ್ಪಾದಕ ಘಟನೆ ನಡೆದು ಜನಮಾನಸ ದುಃಖದಲ್ಲಿದ್ದಾಗಲೂ ವಿದೇಶ ಪ್ರವಾಸದಿಂದ ಮರಳಿದ ಪ್ರಧಾನಿ ಕಾಶ್ಮೀರಕ್ಕೆ ಹೋಗದೇ, ತುರ್ತು ಸರ್ವಪಕ್ಷ ಸಭೆಗೂ ಹೋಗದೇ ಬಿಹಾರಕ್ಕೆ ತೆರಳಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಭಾಷಣ ಕುಟ್ಟಿದ್ದರು. ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದರು. ಗೆಲ್ಲಲೇಬೇಕೆಂಬ ಪರಮಾವಧಿ ಹಪಾಹಪಿಯಿದು. 

ಬಿಹಾರದ ಜನ ಬಣ್ಣದ ಮಾತುಗಳಿಗೆ, ಭಾವಾವೇಶಕ್ಕೆ, ಹುಸಿ ದೇಶಭಕ್ತಿಗೆ ಮರುಳಾಗದೆ ಮತ ಚಲಾಯಿಸಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....