ಈ ದಿನ ಸಂಪಾದಕೀಯ | ‘ರೋಮಿಯೋ-ಜ್ಯೂಲಿಯೆಟ್ ವಿನಾಯಿತಿ’ ಸುಪ್ರೀಮ್ ಸೂಚನೆ ಯಾಕಾಗಿ ಸೂಕ್ತ?

Date:

ಅನ್ಯಧರ್ಮೀಯರು ಮತ್ತು ಉಚ್ಚ-ನೀಚ ಜಾತಿವರ್ಗಗಳ ನಡುವಿನ ಭೇದಭಾವದ ಪೂರ್ವಗ್ರಹಗಳು ವಿಶೇಷವಾಗಿ ಭಾರತೀಯ ಸಮಾಜದಲ್ಲಿ ಅತ್ಯಂತ ಕ್ರೂರ ಮತ್ತು ಆಳ. ವಿಶೇಷವಾಗಿ ಹುಡುಗಿಯ ಪೋಷಕರು ಹುಡುಗನನ್ನು ಪೋಕ್ಸೋ ಕಾಯಿದೆಯಡಿ ಇರುಕಿಸಿ, ಸೇಡು ತೀರಿಸಿ ವಿಕೃತ ಆನಂದ ಅನುಭವಿಸುವುದು ಜಾತಿ ವರ್ಗಗಳ ಪೂರ್ವಗ್ರಹದಿಂದಲೇ ಎಂಬುದಕ್ಕೆ ಸಾವಿರ ಸಾವಿರ ಉದಾಹರಣೆಗಳಿವೆ. ಮನಸ್ಮೃತಿಯು ಭಾರತೀಯ ಸಮಾಜದ ಮಾನಸಿಕಲೋಕದಿಂದ ಈಗಲೂ ಮರೆಯಾಗಿಲ್ಲ. ಬದಲಿಗೆ ಹೊಸ ಹೊಸ ರೂಪಗಳನ್ನು ಧರಿಸಿ ಗಹಗಹಿಸಿದೆ ಎಂಬುದನ್ನು ಮರೆಯುವುದು ಆತ್ಮವಂಚನೆಯೇ ಹೌದು.

ರೋಮಿಯೋ- ಜ್ಯೂಲಿಯೆಟ್ (Romeo and Juliet Clause) ಎಂಬುದು ಕಾನೂನು ಸಂದರ್ಭದಲ್ಲಿ ಬಳಸುವ ಪದಪ್ರಯೋಗ. ಹದಿಹರೆಯದ ಪ್ರೇಮಿಗಳಿಗೆ ಅತ್ಯಾಚಾರ ಅಪರಾಧದ ಕಾನೂನಿಂದ ರಕ್ಷಣೆ ನೀಡುವ ವಿಶೇಷ ಷರತ್ತು ಎನ್ನಬಹುದು. ವಿಲಿಯಂ ಶೇಕ್ಸ್‌ಪಿಯರ್‌ನ Romeo and Juliet ಎಂಬ ವಿಶ್ವಪ್ರಸಿದ್ಧ ದುರಂತ ನಾಟಕದ ಅಮರ ಪ್ರೇಮಿಗಳು ರೋಮಿಯೋ ಎಂಬ ಯುವಕ ಮತ್ತು ಜ್ಯೂಲಿಯೆಟ್ ಎಂಬ ಯುವತಿ. ಪರಸ್ಪರ ದ್ವೇಷಿಸುತ್ತಿದ್ದ ಕುಟುಂಬಗಳಿಗೆ ಸೇರಿದವರು. ಪ್ರಾಣತೆತ್ತು ಸಾವಿನಲ್ಲಿ ಒಂದಾದ ಜೋಡಿ.

ಸಮ್ಮತಿಯ ವಯಸ್ಸಿನ ಆಸುಪಾಸಿನ ಹದಿಹರೆಯದಲ್ಲಿ ಪರಸ್ಪರ ಸಮ್ಮತಿಯಿಂದ ಲೈಂಗಿಕ ಸಂಬಂಧ ಹೊಂದಿದರೆ, ಲೈಂಗಿಕ ದೌರ್ಜನ್ಯವೆಂದು ಗಂಭೀರ ಅಪರಾಧವನ್ನಾಗಿ ಪರಿಗಣಿಸದಿರುವ ವಿನಾಯಿತಿ ಷರತ್ತಿಗೆ ರೋಮಿಯೋ ಜ್ಯೂಲಿಯೆಟ್ ಹೆಸರನ್ನು ಇಡಲಾಗಿದೆ.

ಇದನ್ನು ಓದಿದ್ದೀರಾ? ಮರ್ಯಾದೆಗೇಡು ಹತ್ಯೆ| ದಲಿತ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ಕುಟುಂಬ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಭಾರತದ ಸಂದರ್ಭದಲ್ಲಿ ಸುಪ್ರೀಮ್ ಕೋರ್ಟು ಇದೇ ತಿಂಗಳ ಒಂಬತ್ತರಂದು ಈ ವಿನಾಯಿತಿ ಷರತ್ತನ್ನು ಕೇಂದ್ರ ಸರ್ಕಾರಕ್ಕೆ ಸೂಚಿಸಿತು. POCSO ಕಾಯ್ದೆಗೆ ಈ ವಿನಾಯಿತಿ ಷರತ್ತನ್ನು ಸೇರಿಸುವಂತೆ ಸಲಹೆ ಮಾಡಿತು. ಸುಪ್ರೀಮ್ ಕೋರ್ಟಿನಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್.ಕೋಟೀಶ್ವರ ಸಿಂಗ್ ಅವರನ್ನು ಒಳಗೊಂಡ ನ್ಯಾಯಪೀಠವು ಪೋಕ್ಸೋ ಕೇಸಿನ ಮೇಲ್ಮನವಿಯ ವಿಚಾರಣೆ ನಡೆಸಿದ ಸಂದರ್ಭ.

ಹದಿಹರೆಯದ ಪ್ರೇಮಿಗಳ ನಡುವಿನ ನಿಜವಾದ ಪ್ರೇಮ ಸಂಬಂಧಗಳನ್ನು ಹುಡುಗಿಯ ಕಡೆಯವರು, ಪೋಕ್ಸೋ ಕಾಯ್ದೆಯಡಿ ಹುಡುಗನ ವಿರುದ್ಧ ಅತ್ಯಾಚಾರದ ಕೇಸನ್ನಾಗಿ ದಾಖಲಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಮ್ ಕೋರ್ಟಿನಿಂದ ಈ ಸಲಹೆ ಮೂಡಿ ಬಂದಿದೆ. ಈ ಹಿಂದೆ ಅಮೆರಿಕೆ ಮತ್ತು ಇತರೆ ಪಾಶ್ಚಾತ್ಯ ದೇಶಗಳಲ್ಲಿ ಇದೇ ಕಾರಣಕ್ಕಾಗಿ ಇದೇ ಹೆಸರಿನ ಈ ವಿನಾಯಿತಿ ಷರತ್ತನ್ನು ಜಾರಿ ಮಾಡಲಾಗಿತ್ತು.

ಭಾರತದಲ್ಲಿ ಸಂಬಂಧ ಬೆಳೆಸಲು ಹದಿಹರೆಯದ ಕಿಶೋರಿಯರಿಗೆ ನಿಗದಿಯಾಗಿದ್ದ ಕನಿಷ್ಠ ವಯೋಮಿತಿ ಹದಿನಾರು ವರ್ಷಗಳು. ಏಳು ದಶಕಗಳಷ್ಟು ಹಿಂದಿನ ಈ ಮಿತಿಯನ್ನು 2012ರಲ್ಲಿ ಲಿಂಗಭೇದವಿಲ್ಲದೆ 18ಕ್ಕೆ ಏರಿಸಲಾಯಿತು. ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯಿದೆಯನ್ನು (Protection of Children from Sexual Offences- POCSO) ಅಂಗೀಕರಿಸಿದ ಸಂದರ್ಭವದು. ವಿಶ್ವಸಂಸ್ಥೆಯ ನಿಯಮಗಳ ಪ್ರಕಾರ 18 ವರ್ಷ ವಯಸ್ಸಿನ ಒಳಗಿನ ಕಿಶೋರಿ-ಕಿಶೋರರನ್ನು ಮಕ್ಕಳು ಎಂದೇ ಪರಿಗಣಿಸಲಾಗುತ್ತದೆ.

18ರ ಒಳಗಿನ ವ್ಯಕ್ತಿಯ ಜೊತೆಗಿನ ಯಾವುದೇ ಲೈಂಗಿಕ ಚಟುವಟಿಕೆಯು 2013ರ ಕ್ರಿಮಿನಲ್ ಕಾನೂನು (ತಿದ್ದುಪಡಿ) ಪ್ರಕಾರ ಅತ್ಯಾಚಾರದ ಅಪರಾಧ ಎನಿಸಿಕೊಳ್ಳುತ್ತದೆ. ಪಶ್ಚಿಮ ಬಂಗಾಳ, ಅಸ್ಸಾಮ್ ಹಾಗೂ ಪಶ್ಚಿಮ ಬಂಗಾಳದಿಂದ ವರದಿಯಾಗುವ ಪೋಕ್ಸೋ ಕೇಸುಗಳ ಪೈಕಿ ಶೇ.24.3ರಷ್ಟು ಪ್ರಕರಣಗಳು ವಿಶೇಷ ಸ್ವರೂಪದವು. ಹದಿಹರೆಯದ ಜೋಡಿಗಳು ಪರಸ್ಪರ ಸಮ್ಮತಿಯೊಂದಿಗೆ ಏರ್ಪಡುವ ರೊಮ್ಯಾಂಟಿಕ್ ಸಂಬಂಧಗಳಿವು. ಈ ವಿಶೇಷ ಸ್ವರೂಪದ ಪ್ರಕರಣಗಳಲ್ಲಿ ಶೇ.80.2ರಷ್ಟು ಪೋಕ್ಸೋ ಕೇಸುಗಳನ್ನು ದಾಖಲಿಸುವವರು ಹುಡುಗಿಯ ಕುಟುಂಬದವರು. ಹುಡುಗಿಯ ಸಮ್ಮತಿಯಿದ್ದರೂ, ಹುಡುಗನ ಮೇಲೆ ಅತ್ಯಾಚಾರದ ಆರೋಪ ಹೊರಿಸಲಾಗುತ್ತದೆ. ಹದಿನೆಂಟರ ಒಳಗಿನ ಹುಡುಗಿ ಒಪ್ಪಿದರೂ, ಅದು ಕಾನೂನು ಪ್ರಕಾರ ಸಮ್ಮತಿ ಎನಿಸಿಕೊಳ್ಳುವುದಿಲ್ಲ. ಒಂದೇ ಒಂದು ದಿನದ ಅಂತರದ ಕ್ರಿಯೆ ಕೂಡ ಅತ್ಯಾಚಾರವೇ.

ಹೀಗಾಗಿ ಸಮ್ಮತಿಯ ವಯಸ್ಸಿನ ಆಚೀಚೆಗೆ ಗರಿಷ್ಠ ಮೂರು ವರ್ಷಗಳ ವಯಸ್ಸಿನ ಅಂತರದ ಸಂಬಂಧಗಳಿಗೆ ಈ ವಿನಾಯಿತಿ ಷರತ್ತು ಅನ್ವಯ ಆಗಬೇಕೆಂಬುದು ಸರ್ವೋಚ್ಚ ನ್ಯಾಯಾಲಯದ ಸೂಚನೆ. 2023ರಲ್ಲಿ ಅಂದಿನ ಮುಖ್ಯನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಮುಂದೆ ಈ ವಿನಾಯ್ತಿ ಷರತ್ತನ್ನು ಕೋರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ವಿಚಾರಣೆಗೆ ಬಂದಿತ್ತು. ನ್ಯಾಯಪೀಠವು ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ಕೋರಿತ್ತು. ಆನಂತರ ಈ ವಿಚಾರಣೆಯಲ್ಲಿ ಪ್ರಗತಿಯಾದಂತೆ ತೋರಲಿಲ್ಲ.

ಇದನ್ನು ಓದಿದ್ದೀರಾ? ಧಾರವಾಡ | ಮರ್ಯಾದೆಗೇಡು ಹತ್ಯೆ ಪ್ರಕರಣ; ಲಿಂಗಾಯತ ಮಹಾಸಭಾ ಖಂಡನೆ

ಹದಿಹರೆಯದವರನ್ನು ಈ ಕಾರಣಕ್ಕಾಗಿ ಅತ್ಯಾಚಾರದ ಹೆಸರಿನಲ್ಲಿ ಶಿಕ್ಷಿಸುವುದು ಅತ್ಯಂತ ಹಾನಿಕಾರಕ. ಪರಿಹಾರವೆಂಬುದು ಒಂದು ವೇಳೆ ಸಿಕ್ಕರೆ, ಅದು ಸಿಗುವ ಹೊತ್ತಿಗೆ ತೀರಾ ಹಾನಿ ಉಂಟಾಗಿರುತ್ತದೆ ಎಂಬುದು ಕ್ರಿಮಿನಲ್ ನ್ಯಾಯವ್ಯವಸ್ಥೆಯ ತಜ್ಞರ ಬಹುಕಾಲದ ಅಭಿಮತ. ಕಾನೂನು ಪಂಡಿತರು, ಮಕ್ಕಳ ಹಕ್ಕುಗಳ ಪ್ರತಿಪಾದಕರು, ಎಳೆಯವಯಸ್ಕರ ಈ ಪರಸ್ಪರ ಸಮ್ಮತಿಯ ಸಂಬಂಧವನ್ನು ಅಪರಾಧೀಕರಣಗೊಳಿಸುವ ಕುರಿತು ಕಳವಳ ವ್ಯಕ್ತಪಡಿಸುತ್ತ ಬಂದಿದ್ದಾರೆ. ಹೀನಾತಿಹೀನ ಲೈಂಗಿಕ ಪಾತಕಿಗಳನ್ನು ಕಠಿಣವಾಗಿ ಶಿಕ್ಷಿಸುವುದು ಮತ್ತು ಇನ್ನೊಮ್ಮೆ ಇಂತಹ ಕೃತ್ಯಗಳನ್ನು ಎಸಗಲು ಹಿಂದೆಮುಂದೆ ನೋಡಬೇಕಾದ ಕಠೋರ ಕಾನೂನು ರೂಪಿಸುವುದು ಸರಿಯಾದ ಕ್ರಮವೇ ಇದ್ದೀತು. ಆದರೆ ಇನ್ನೂ ಅರಳಬೇಕಿರುವ ಅಮಾಯಕ ಮನಸುಗಳನ್ನು ಮೊಗ್ಗುಗಳಾಗಿದ್ದಾಗಲೇ ವಿವೇಚನಾರಹಿತ ಕಾನೂನಿನ ಉಕ್ಕಿನ ಪಾದ ಒರೆಸಿ ಹಾಕುವುದನ್ನು ಕಾಣಬೇಕಿರುವ ದೃಷ್ಟಿ ಯಾವುದು? ನ್ಯಾಯದಾನದ ನಿಜ ಉದ್ದೇಶ ತಲೆಕೆಳಗಾಗುವುದಿಲ್ಲವೇ?

ಸರ್ವೋಚ್ಚ ನ್ಯಾಯಾಲಯದ ಈ ಆದೇಶವು ಪೋಕ್ಸೋ ಕೇಸಿನ ಕೆಲವು ಪ್ರಾವಧಾನಗಳನ್ನು ಅದೆಷ್ಟು ವ್ಯಾಪಕವಾಗಿ ದುರ್ಬಳಕೆ ಮಾಡಲಾಗುತ್ತಿದೆ ಎಂಬುದರ ನಿಚ್ಚಳ ಸೂಚಕವೂ ಹೌದು. ಕುಟುಂಬಗಳು ತಾವು ವಿರೋಧಿಸುವ ಎಳೆಯ ಜೋಡಿಗಳ ಸಂಬಂಧವನ್ನು ಶಿಕ್ಷಿಸುವ ಹತಾರನ್ನಾಗಿ ಪೋಕ್ಸೋ ಕಾಯ್ದೆಯನ್ನು ದುರುಪಯೋಗಿಸಿವೆ. ಈ ಬಗೆಯ ದುರುಪಯೋಗವನ್ನು ದಂಡಿಸುವ ವಿಶೇಷ ಪ್ರಾವಧಾನಗಳನ್ನು ಪೋಕ್ಸೋ ಕಾಯ್ದೆಗೆ ತರುವಂತೆ ನಿರ್ದಿಷ್ಟ ಸೂಚನೆಯನ್ನು ನ್ಯಾಯಪೀಠ ನೀಡಿರುವುದು ಅತ್ಯಂತ ಮಾನವೀಯ ನಡೆ.

ಕಾಯ್ದೆ ಕಾನೂನುಗಳ ದುರುಪಯೋಗದ ವಿರುದ್ಧ ಕ್ರಮ ಕೈಗೊಳ್ಳಲು 2023ರ ನ್ಯಾಯಸಂಹಿತೆಯ 248ನೆಯ ಸೆಕ್ಷನ್ ಅಡಿ ಈಗಾಗಲೇ ಅವಕಾಶವಿದೆ. ಹೊಸ ಕಾನೂನುಗಳು ಯಾಕೆ ಬೇಕು ಎಂಬ ವಾದವಿದೆ. ಆದರೆ ಮಾನವೀಯ ನಡೆಗಳಿಗೆ ಸಾಮಾಜಿಕ ರಾಜಕೀಯ ಇಚ್ಛಾಶಕ್ತಿಯ ಸಾರ್ವಕಾಲಿಕ ಅಗತ್ಯವಿರುವುದು ಕಠೋರ ವಾಸ್ತವ. ಪರಸ್ಪರ ಒಪ್ಪಿಗೆಯ ಸರಳ ಆಲಿಂಗನ ಅಥವಾ ಅಮಾಯಕ ದೈಹಿಕ ಸಾಮೀಪ್ಯ ಕೂಡ ಪೋಕ್ಸಾ ಕಾಯ್ದೆಯ ಏಳನೆಯ ಸೆಕ್ಷನ್ ಅಡಿ ಅಪರಾಧವೆನಿಸುತ್ತದೆ. ಅನ್ಯಧರ್ಮೀಯರು ಮತ್ತು ಉಚ್ಚ-ನೀಚ ಜಾತಿವರ್ಗಗಳ ನಡುವಿನ ಭೇದಭಾವದ ಪೂರ್ವಗ್ರಹಗಳು ವಿಶೇಷವಾಗಿ ಭಾರತೀಯ ಸಮಾಜದಲ್ಲಿ ಅತ್ಯಂತ ಕ್ರೂರ ಮತ್ತು ಆಳ. ವಿಶೇಷವಾಗಿ ಹುಡುಗಿಯ ಪೋಷಕರು ಹುಡುಗನನ್ನು ಪೋಕ್ಸೋ ಕಾಯಿದೆಯಡಿ ಇರುಕಿಸಿ, ಸೇಡು ತೀರಿಸಿ ವಿಕೃತ ಆನಂದ ಅನುಭವಿಸುವುದು ಜಾತಿ ವರ್ಗಗಳ ಪೂರ್ವಗ್ರಹದಿಂದಲೇ ಎಂಬುದಕ್ಕೆ ಸಾವಿರ ಸಾವಿರ ಉದಾಹರಣೆಗಳಿವೆ. ಮನಸ್ಮೃತಿಯು ಭಾರತೀಯ ಸಮಾಜದ ಮಾನಸಿಕಲೋಕದಿಂದ ಈಗಲೂ ಮರೆಯಾಗಿಲ್ಲ. ಬದಲಿಗೆ ಹೊಸ ಹೊಸ ರೂಪಗಳನ್ನು ಧರಿಸಿ ಗಹಗಹಿಸಿದೆ ಎಂಬುದನ್ನು ಮರೆಯುವುದು ಆತ್ಮವಂಚನೆಯೇ ಹೌದು.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....