ಈ ದಿನ ಸಂಪಾದಕೀಯ | ಮೋದಿ- ಸಿದ್ದು ಸರ್ಕಾರಗಳ ನಡೆ ಅನುಕರಣೀಯ ಅಲ್ಲ; ಶೋಭೆ ತರುವುದಿಲ್ಲ

Date:

ಮೋದಿ ಸರ್ಕಾರಕ್ಕೆ ಲೋಕಸಭೆ, ರಾಜ್ಯಸಭೆ ಎರಡೂ ಕಡೆ ಬಹುಮತ ಇದೆ. ಮಸೂದೆ ಬಿದ್ದು ಹೋಗುವ ಪ್ರಶ್ನೆಯೇ ಇಲ್ಲ. ಆದರೂ ಚರ್ಚೆ ನಡೆಯದೇ ಹಲವಾರು ಮಸೂದೆಗಳನ್ನು ಮೋದಿ ಸರ್ಕಾರ ಜಾರಿಗೊಳಿಸಿದೆ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಕೂಡ ಒಕ್ಕೂಟ ಸರ್ಕಾರದ ಮಾದರಿಯನ್ನು ಅನುಸರಿಸುತ್ತಿದೆಯೇ ಎಂಬ ಅನುಮಾನ ಮೂಡಿದೆ

ನಿನ್ನೆ (ಡಿ.18)ಒಂದೇ ದಿನ ಕರ್ನಾಟಕ ಸರ್ಕಾರ ಮತ್ತು ಒಕ್ಕೂಟ ಸರ್ಕಾರಗಳೆರಡೂ ತಮ್ಮ ಎರಡು ಮಸೂದೆಗಳನ್ನು ಪ್ರಜಾಪ್ರಭುತ್ವ ವಿರೋಧಿ ಹಾದಿಯಲ್ಲಿ ಅಂಗೀಕರಿಸಿಕೊಂಡಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸನಗಳನ್ನು ಮಾಡುವವರು ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು. ಅದೂ ಪರ ವಿರೋಧ ಚರ್ಚೆ ನಡೆದು ಬಹುಮತದಿಂದಲೇ ಆಗಬೇಕಿರುವ ಪ್ರಕ್ರಿಯೆ. ಆದರೆ, ಬಹುಮತ ಇದೆ ಎಂಬ ಮಾತ್ರಕ್ಕೆ ಚರ್ಚೆಗೆ ಅವಕಾಶ ನೀಡದೇ ವಿಪಕ್ಷಗಳ ಧ್ವನಿ ಅಡಗಿಸುವ ಸರ್ವಾಧಿಕಾರಿ ನಡೆ ಅಪಾಯಕಾರಿ.

ಮೋದಿ ಸರ್ಕಾರ ಯುಪಿಎ ಸರ್ಕಾರ ಜಾರಿಗೆ ತಂದಿದ್ದ  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬದಲಿಸಿ, ‘ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) – (ವಿಬಿ-ಜಿ ರಾಮ್ ಜಿ)’ಮಸೂದೆಯನ್ನು ಗುರುವಾರ ಲೋಕಸಭೆ ಅಂಗೀಕರಿಸಿತು. ಮಹಾತ್ಮಗಾಂಧಿ ಹೆಸರು ಕೈಬಿಟ್ಟಿರುವ ಬಗ್ಗೆ ಮತ್ತು ರಾಜ್ಯ ಸರ್ಕಾರಗಳ ಮೇಲೆ ಭಾರೀ ಆರ್ಥಿಕ ಹೊರೆ ಹೇರಿರುವ ಮಸೂದೆಯ ವಿರುದ್ಧ ವಿಪಕ್ಷಗಳು ಭಾರೀ ಪ್ರತಿಭಟನೆ ನಡೆಸುತ್ತಿವೆ. ಮಸೂದೆಯನ್ನು ಮೋದಿ ಸರ್ಕಾರ ಚರ್ಚೆಗೆ ಅವಕಾಶ ನೀಡದೆ ಅಂಗೀಕರಿಸಿರುವ ಕೃತ್ಯ ಖಂಡನೀಯ. ಮಸೂದೆಯನ್ನು ಸಂಸದೀಯ ಸ್ಥಾಯಿಸಮಿತಿಗೆ ಒಪ್ಪಿಸುವಂತೆ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಕಾಂಗ್ರೆಸ್‌ ಸಂಸದ ಕೆ ಸಿ ವೇಣುಗೋಪಾಲ್‌ ಮನವಿ ಮಾಡಿದ್ದರು. ಎಂಟು ತಾಸು ಚರ್ಚೆ ನಡೆದಿದ್ದು ನಾನಾ ಪಕ್ಷಗಳ 98 ಸದಸ್ಯರು ಮಸೂದೆ ಬಗ್ಗೆ ಮಾತನಾಡಿದ್ದಾರೆ ಎಂದು ಮನವಿಯನ್ನು ಬಿರ್ಲಾ ತಳ್ಳಿ ಹಾಕಿದ್ದಾರೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದೇಶದ ಕೋಟ್ಯಂತರ ಕಡು ಬಡವರಿಗೆ ಕೂಲಿಯ ಆಧಾರವಾಗಿರುವ, ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಮನರೇಗ ಯೋಜನೆಯ ಆಶಯವನ್ನೇ ಕೊಂದಿರುವ ತಿದ್ದುಪಡಿ ತಂದಾಗ, ರಾಜ್ಯಗಳಿಗೆ ಹೆಚ್ಚು ಆರ್ಥಿಕ ಹೊರೆಯಾಗುವ ಮಸೂದೆಯ ಸಾಧಕ ಬಾಧಕಗಳ ಚರ್ಚೆಗೆ ಕೇವಲ ಎಂಟು ತಾಸು ಸಾಕೇ? ಸ್ಪೀಕರ್ ಅವರ ಈ ಸಮಜಾಯಿಷಿಯು ವಿಪಕ್ಷಗಳ ಧ್ವನಿ ಅಡಗಿಸುವ ನಿರಂಕುಶಾಧಿಕಾರದ ಲಕ್ಷಣಗಳಲ್ಲದೇ ಮತ್ತೇನೂ ಅಲ್ಲ. 

ರಾಜ್ಯಗಳಿಗೆ ಶೇ 40 ಹಣಕಾಸು ಹೊರೆ ಹೊರಿಸಿರುವುದು, ಕೆಲಸ ನಿಗದಿ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ತನ್ನ ಕೈಲೇ ಇಟ್ಟುಕೊಂಡಿರುವುದು ನಿಜಕ್ಕೂ ಗಹನ ಚರ್ಚೆಗೆ ಅರ್ಹವಾಗಿರುವ ವಿಚಾರ. ರಾಜ್ಯಗಳ ಸಮಸ್ಯೆಗಳನ್ನು ಆಲಿಸಿ ಸರಿಯಾದ ರೀತಿಯಲ್ಲಿ ಮಾರ್ಪಾಡು ಅಥವಾ ಮನವರಿಕೆ ಮಾಡುವ ಅವಕಾಶ ಇತ್ತು. ಮಸೂದೆ ತರುವ ಮುನ್ನವೇ ರಾಜ್ಯ ಸರ್ಕಾರಗಳನ್ನು ಸಮಾಲೋಚನೆಗೆ ಕರೆಯಬೇಕಿತ್ತು. ಆದರೆ, ಜನತಂತ್ರದ ಮೇಲೆ ಬುಲ್ಡೋಜರ್ ಹರಿಸುವ ಮೋದಿ ಸರ್ಕಾರದ ಇಂತಹ ಧೋರಣೆ ಹೊಸದೇನಲ್ಲ. 

ಈ ಹನ್ನೊಂದು ವರ್ಷಗಳಲ್ಲಿ ಇಂತಹ ಹಲವು ಮಸೂದೆಗಳನ್ನು ಚರ್ಚೆಗೆ ಅನುಮತಿ ನೀಡದೆಯೇ ಜಾರಿಗೆ ತಂದಿದೆ. ಕೊರೋನಾ ಸಮಯದಲ್ಲಿ ಸಂಸತ್ತಿನಲ್ಲಿ ಚರ್ಚೆ ನಡೆಸದೆಯೇ ಮೂರು ಕೃಷಿ ಕಾಯ್ದೆ ಜಾರಿಗೆ ತಂದು ನಂತರ ಒಂದೂವರೆಗಳ ವರ್ಷ ಕಾಲ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸಿ ಮೋದಿಯವರನ್ನು ಮಣಿಸಿದ್ದು ಇತಿಹಾಸ. ಈ ಮಸೂದೆಗೂ ಅದೇ ರೀತಿಯ ಹೋರಾಟದ ಅಗತ್ಯ ಇದೆ.   

ಮೋದಿ ಸರ್ಕಾರಕ್ಕೆ ಲೋಕಸಭೆ, ರಾಜ್ಯಸಭೆ ಎರಡೂ ಕಡೆ ಬಹುಮತ ಇದೆ. ಮಸೂದೆ ಬಿದ್ದು ಹೋಗುವ ಪ್ರಶ್ನೆಯೇ ಇಲ್ಲ. ಆದರೂ ಚರ್ಚೆ ನಡೆಯದೇ ಹಲವಾರು ಮಸೂದೆಗಳನ್ನು ಮೋದಿ ಸರ್ಕಾರ ಜಾರಿಗೊಳಿಸಿದೆ. ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಕೂಡ ಒಕ್ಕೂಟ ಸರ್ಕಾರದ ಮಾದರಿಯನ್ನು ಅನುಸರಿಸುತ್ತಿದೆಯೇ ಎಂಬ ಅನುಮಾನ ಮೂಡಿದೆ. ನಿನ್ನೆ(ಡಿ.೧೮) ಬೆಳಗಾವಿಯಲ್ಲಿ  ಅಧಿವೇಶನದಲ್ಲಿ ದ್ವೇಷ ಭಾಷಣಕ್ಕೆ ತಡೆ ಹಾಕುವ ನಿಟ್ಟಿನಲ್ಲಿ “ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ” 2025 ವಿಪಕ್ಷಗಳ ವಿರೋಧ ಹಾಗೂ ಧರಣಿ ನಡುವೆ ಹೆಚ್ಚಿನ ಚರ್ಚೆಗೆ ಅವಕಾಶ ಆಗದಂತೆ ಮಸೂದೆ ಅಂಗೀಕಾರಗೊಂಡಿತು.

ವಿಧೇಯಕದ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿ “ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನ ಸಮಾಜಕ್ಕೆ ನೋವಾಗುವ ರೀತಿಯಲ್ಲಿ ಮಾತುಗಳನ್ನು ಆಡುತ್ತಿದ್ದಾರೆ. ಇದರ ಪ್ರಮಾಣ ಜಾಸ್ತಿಯಾಗಿದೆ. ಅದರ ಪರಿಣಾಮವಾಗಿ ಸಮಾಜದಲ್ಲಿ ಕೊಲೆಗಳು, ಹೊಡೆದಾಟಗಳು ನಡೆದಿವೆ. ಇದನ್ನು ನಿಯಂತ್ರಣ ಮಾಡಬೇಕಾಗಿದೆ” ಎಂದರು.

ಮಸೂದೆಯ ಮುಖ್ಯ ಉದ್ದೇಶ ಸರಿಯಾಗಿಯೇ ಇದೆ. ಇದು ಬಿಜೆಪಿಯ ಕೋಮುವಾದಿ ನಾಯಕರಿಗೆ ಕಹಿ ಸಂಗತಿ. ದ್ವೇಷ ಭಾಷಣಕ್ಕೆ ಕಡಿವಾಣ ಅಂದರೆ ಬಿಜೆಪಿ ಸಂಘಪರಿವಾರದ ನಾಯಕರ ಭಾಷಣಕ್ಕೆ ತಡೆ ಎಂಬಂತಾಗಿದೆ. ಯಾಕೆಂದರೆ ಅವರ ಭಾಷಣ ಮುಸ್ಲಿಮರನ್ನು ಉದ್ದೇಶಿಸಿ ಪ್ರಚೋದನಕಾರಿ ಹೇಳಿಕೆ ಇಲ್ಲದೇ ಮುಂದೆ ಸಾಗುವುದೇ ಇಲ್ಲ. ಧಾರ್ಮಿಕ ಆಚರಣೆ, ಹಬ್ಬ ಏನೇ ಇರಲಿ ಪ್ರಚೋದನಕಾರಿ ಹೇಳಿಕೆ ನೀಡುವುದು ಕೆಲವರಿಗೆ ಚಾಳಿಯಾಗಿದೆ. ಅದರಲ್ಲೂ ಕರಾವಳಿಯ ಮೂರ್ನಾಲ್ಕು ಶಾಸಕರು ದ್ವೇಷ ಭಾಷಣಕ್ಕೆ ಖ್ಯಾತರಾಗಿದ್ದಾರೆ. ಇವೆಲ್ಲದಕ್ಕೆ ಕಡಿವಾಣ ಬಿತ್ತು ಎಂದಾದರೆ ಬಿಜೆಪಿಯ ಮತ ಬ್ಯಾಂಕ್‌ ರಾಜಕಾರಣ ಬೇರೆ ದಾರಿ ಹುಡುಕಬೇಕಾಗುತ್ತದೆ. ಹಾಗಾಗಿ ಬಿಜೆಪಿ ಈ ವಿಧೇಯಕಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದೆ. ಆದರೆ, ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡದೆ ಅಂಗೀಕಾರಗೊಂಡಿರುವುದು ಪ್ರಜಾಪ್ರಭುತ್ವ ನಡೆ ಅಲ್ಲ. ಮೋದಿ ಸರ್ಕಾರದ ನಡೆಯನ್ನು ಟೀಕಿಸುವ ಕಾಂಗ್ರೆಸ್‌ ತಾನೂ ಅದೇ ಹಾದಿ ಹಿಡಿದಿರುವುದು ಶೋಭೆ ಅಲ್ಲ. 

ಕಳೆದ ಒಂದು ದಶಕದಲ್ಲಿ ಹಿಂದುತ್ವದ ಅಮಲೇರಿಸಿಕೊಂಡ ಸಂಘಟನೆಗಳು, ಸ್ವಾಮೀಜಿಗಳು, ರಾಜಕೀಯ ನಾಯಕರು  ಧರ್ಮ ಹೆಸರಿನಲ್ಲಿ ದ್ವೇಷ ಭಾಷಣಕ್ಕೆ ಯಾವುದೇ ಕಡಿವಾಣ ಇಲ್ಲದಂತಾಗಿದೆ. ಈ ದೇಶದ ಅಂತಃಸತ್ವವಾಗಿರುವ ಸರ್ವಧರ್ಮ ಸಮನ್ವಯತೆಗೆ ಧಕ್ಕೆ ತರುವ ಇಂತಹ ದ್ವೇಷ ಭಾಷಣದ ವಿರುದ್ಧ ಕಠಿಣ ಕಾನೂನು ತಂದ ಮೊದಲ ರಾಜ್ಯ ಕರ್ನಾಟಕ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆಯ ಅಂಶಗಳು ಮಸೂದೆಯಲ್ಲಿವೆ ಮತ್ತು ದ್ವೇಷ ಭಾಷಣ ಎಂದರೆ ಏನು ಎಂಬ ವ್ಯಾಖ್ಯೆಯನ್ನು ಪೊಲೀಸ್ ಅಧಿಕಾರಿಗಳ ವಿವೇಚನೆಗೇ ಬಿಡಲಾಗಿದೆ. ಪೊಲೀಸರ ಕೈಯಲ್ಲಿ ಇಂತಹ ಅಧಿಕಾರ ನೀಡುವುದು ಅಪಾಯಕರ. ಅಧಿಕಾರದಲ್ಲಿರುವ ಸರ್ಕಾರಗಳ ಮರ್ಜಿ ಅನುಸರಿಸುವ ಪೊಲೀಸ್ ಅಧಿಕಾರಿಗಳು, ಆಳುವವರಿಗೆ ತಕ್ಕಂತೆ ದ್ವೇಷ ಭಾಷಣದ ವ್ಯಾಖ್ಯೆಯನ್ನು ಮಾಡಿ ಕ್ರಮ ಜರುಗಿಸುತ್ತಾರೆ. ಕಾಂಗ್ರೆಸ್ ಪಕ್ಷ ಇಂದು ಆಳುವ ಪಕ್ಷವಾಗಿದೆ. ಆದರೆ ತಾನು ಪ್ರತಿಪಕ್ಷ ಆದಾಗ ದ್ವೇಷಭಾಷಣದ ಈ ಬಾಣ ತನ್ನೆಡೆಗೆ ಕೂಡ ತಿರುಗೀತು. ಅಷ್ಟೇ ಅಲ್ಲ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರು, ಹೋರಾಟಗಾರರ ವಿರುದ್ಧವೂ ದ್ವೇಷಭಾಷಣದ ಕಾಯಿದೆಯ ಅಸ್ತ್ರವನ್ನು ಪ್ರಯೋಗಿಸುವುದಿಲ್ಲ ಎಂಬ ಖಾತರಿಯಾದರೂ ಏನು? ಇಂತಹ ಜನತಾಂತ್ರಿಕ ಆತಂಕಗಳನ್ನು ರಾಜ್ಯ ಸರ್ಕಾರ ಪರಿಶೀಲಿಸಬೇಕಿತ್ತು. ವಿರೋಧ ಪಕ್ಷವಾದ ಬಿಜೆಪಿಗೆ ಚರ್ಚೆಗೆ ಅವಕಾಶ ನೀಡಬೇಕಿತ್ತು. ಈ ಮಸೂದೆ ಚರ್ಚೆಯ ನಂತರ ಅಂಗೀಕಾರ ಆಗಬೇಕಿತ್ತು.

ಮೋದಿ ಸರ್ಕಾರ ಜಿ ರಾಮ್ ಜಿ ಮಸೂದೆ ಮತ್ತು ಸಿದ್ದು ಸರ್ಕಾರ ದ್ವೇಷ ಭಾಷಣ ಮಸೂದೆಯನ್ನು ವಿಪಕ್ಷಗಳ ದರಕಾರೇ ಇಲ್ಲದೆ ನುಗ್ಗಿಸಿ ಅಂಗೀಕಾರ ಪಡೆದಿರುವುದು ಅನುಕರಣೀಯ ನಡೆ ಅಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....