ಈ ದಿನ ಸಂಪಾದಕೀಯ |ಅಂಧಭಕ್ತರ ಕಿವಿಗೆ ಹೂ ಮುಡಿಸಿದ ಮೋಶಾ ಜೋಡಿ!

Date:

ಮೋದಿ ಭಕ್ತರು-ಬೆಂಬಲಿಗರೂ ಸೇರಿದಂತೆ ಈ ಹಂತದಲ್ಲಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಕೂಡದು ಎಂಬುದು ಬಹುಸಂಖ್ಯಾತ ಭಾರತೀಯರ ಭಾವನೆಯಾಗಿತ್ತು. ಆದರೆ ಕ್ರಿಕೆಟ್ ಆಡಿ ಅಂಧ ಭಕ್ತರನ್ನು ಮುಟ್ಠಾಳರನ್ನಾಗಿಯೂ, ಮುಟ್ಠಾಳರನ್ನು ಅಂಧ ಭಕ್ತರನ್ನಾಗಿಯೂ ಮಾಡಿದೆ ಮೋಶಾ ಜೋಡಿ.

ಭಾರತ ಮತ್ತು ಪಾಕಿಸ್ತಾನದ ನಡುವೆ ಹಗೆಯ ಹೊಗೆ ಅಡಗದಂತೆ ನೋಡಿಕೊಳ್ಳುತ್ತ ಬಂದಿತ್ತು ಪಾಕಿಸ್ತಾನಿ ಸೇನೆ ಮತ್ತು ಐ.ಎಸ್.ಐ. ಗಡಿಯ ಈಚೆ ಬದಿಯಿಂದ ಈ ಕೆಲಸವನ್ನು ಅಷ್ಟೇ ಘನವಾಗಿ ಮಾಡಿಕೊಂಡು ಬಂದಿವೆ ಮೋದಿ ಸರ್ಕಾರ ಮತ್ತು ಸಂಘ ಪರಿವಾರ.  

“ನೀರೂ ನೆತ್ತರೂ ಒಟ್ಟಿಗೆ ಹರಿಯುವುದು ಸಾಧ್ಯವಿಲ್ಲ” ಎಂದು ಪ್ರಧಾನಮಂತ್ರಿ ಹೇಳಿದ್ದುಂಟು. ಆ ಹೇಳಿಕೆ ಐದು ತಿಂಗಳಷ್ಟು ಹಿಂದಿನದು. ಪಹಲ್ಗಾಮ್ ಭಯೋತ್ಪಾದಕ ದಾಳಿಯು 26 ಭಾರತೀಯ ಜೀವಗಳನ್ನು ಪಾಕ್ ಪ್ರಾಯೋಜಿತ ಭಯೋತ್ಪಾದಕರು ಪೈಶಾಚಿಕವಾಗಿ ಬಲಿ ತೆಗೆದುಕೊಂಡ ಸಂದರ್ಭದ ಮಾತು. ಸಿಂಧೂ ನದಿಯ ನೀರು ಪಾಕಿಸ್ತಾನಕ್ಕೆ ಸಿಗದಂತೆ ತಡೆಯುವುದಾಗಿ ಸಾರಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದರೆ ಸಿಂಧೂ ನದಿಯ ಹನಿ ನೀರನ್ನೂ ಪಾಕಿಸ್ತಾನಕ್ಕೆ ನೀಡುವುದಿಲ್ಲ ಎಂಬ ಮೋಶಾ ಸರ್ಕಾರದ ಹೇಳಿಕೆ ಅದೆಷ್ಟು ಪೊಳ್ಳು ಎಂಬುದು ಸಾಬೀತಾಗಿದೆ. ಪಹಲ್ಗಾಮ್ ಭಾರತೀಯ ನಾಗರಿಕರು ಮತ್ತು ಫುಲ್ವಾಮದಲ್ಲಿ ಭಾರತೀಯ ಯೋಧರ ನೆತ್ತರು ಹರಿಸಿದ ಪಾಕಿಸ್ತಾನಿಗಳೊಂದಿಗೆ ಮೊನ್ನೆ ಕ್ರಿಕೆಟ್ ಆಡಿದೆ ಮೋಶಾ ಸರ್ಕಾರ.

“ನೀರೂ ನೆತ್ತರು ಒಟ್ಟಿಗೆ ಹರಿಯುವುದಿಲ್ಲವೆಂದು ಹೇಳಿದ್ದೇವೇ ವಿನಾ, ನೀರೂ ಕ್ರಿಕೆಟ್ ಆಟವೂ ಒಟ್ಟಿಗೆ ಹರಿಯುವುದಿಲ್ಲ ಎಂದು ಹೇಳಿಲ್ಲ” ಎಂಬ ಭಂಡ ವಾದವನ್ನು ಮುಂದೆ ಮಾಡಿದೆ ಬಿಜೆಪಿ. ಬಿಜೆಪಿಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ರಾಕೇಶ್ ಸಿನ್ಹ ಮೊನ್ನೆ ಕೆಲ ಕ್ಷಣಗಳು ಅವಾಕ್ಕಾದ ನಂತರ ಚೇತರಿಸಿಕೊಂಡು ಪ್ರಶ್ನೆಯೊಂದಕ್ಕೆ ನೀಡಿದ ಉತ್ತರವಿದು.

ಮೋದಿ ಸರ್ಕಾರ ಮನಸ್ಸು ಮಾಡಿದ್ದರೆ ಈ ಪಂದ್ಯವನ್ನು ಸಲೀಸಾಗಿ ನಿಲ್ಲಿಸಬಹುದಿತ್ತು. ಬಹುದೇಶಗಳ ಪಂದ್ಯಾವಳಿಗಳಲ್ಲಿ ಆಡದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೇ ಪಾಕಿಸ್ತಾನವನ್ನು ಹೊರಗಿಡುವ ದಾರಿಯೂ ಇದೆ ಎಂದು ಗೃಹಸಚಿವ ಅಮಿತ್ ಶಾ 2019ರ ವಿಡಿಯೋ ಸಂದರ್ಶನವೊಂದರಲ್ಲಿ ಹೇಳಿದ್ದುಂಟು. ಆಗ ಸಾಧ್ಯವಿದ್ದದ್ದು ಈಗ ಅಸಾಧ್ಯ ಆಗಿದ್ದೇಕೆ? ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿದವರಿಗೆ ಜುಜುಬಿ ಪಂದ್ಯವೊಂದನ್ನು ನಿಲ್ಲಿಸುವುದು ಅದ್ಯಾವ ಘನಂದಾರಿ ಕೆಲಸ?

ಮೋದಿ ಭಕ್ತರು-ಬೆಂಬಲಿಗರೂ ಸೇರಿದಂತೆ ಈ ಹಂತದಲ್ಲಿ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಕೂಡದು ಎಂಬುದು ಬಹುಸಂಖ್ಯಾತ ಭಾರತೀಯರ ಭಾವನೆಯಾಗಿತ್ತು. ಆದರೆ ಕ್ರಿಕೆಟ್ ಆಡಿ ಅಂಧ ಭಕ್ತರನ್ನು ಮುಟ್ಠಾಳರನ್ನಾಗಿಯೂ, ಮುಟ್ಠಾಳರನ್ನು ಅಂಧ ಭಕ್ತರನ್ನಾಗಿಯೂ ಮಾಡಿದೆ ಮೋಶಾ ಜೋಡಿ.

ಬಹುದೇಶಗಳ ನಡುವೆ ನಡೆಯುವ ಏಷ್ಯಾ ಕಪ್ ಪಂದ್ಯಾವಳಿಗಳಲ್ಲಿ ಪಾಕಿಸ್ತಾನದ ವಿರುದ್ದದ ಪಂದ್ಯವನ್ನು ನಾವು ಬಿಟ್ಟುಕೊಟ್ಟರೆ ‘ಪಾಯಿಂಟುಗಳು’ ಕೈ ತಪ್ಪುತ್ತವೆ ಎಂಬ ಸಮಜಾಯಿಷಿ ನೀಡಿದ್ದಾರೆ ಮೋದಿ ಸಂಪುಟದ ಸಚಿವ ಅನುರಾಗ್ ಠಾಕೂರ್. ಅಲ್ಲಿಗೆ ಪಾಯಿಂಟುಗಳೇ ಪರಮ ಎಂದಾಯಿತಲ್ಲ?

ಪಾಕಿಸ್ತಾನದೊಂದಿಗೆ ಆಟವನ್ನೂ ಆಡಿ, ಭಾರತೀಯ ಕ್ರಿಕೆಟ್ ಮಂಡಳಿಯ ಜೇಬುಗಳನ್ನೂ ತುಂಬಿಸುವುದು ಅಪ್ಪಟ ಅವಕಾಶವಾದ ಮತ್ತು ಡಾಂಭಿಕತೆಯ ವಿಜೃಂಭಣೆ. ಮೋದಿ ಸರ್ಕಾರ ಅಂಧ ಭಕ್ತರ ಕಿವಿಗೆ ಅದೆಷ್ಟು ಸಲೀಸಾಗಿ ಹೂವಿಡುತ್ತದೆ ಎಂಬುದಕ್ಕೆ ಇನ್ನೂ ಒಂದು ತಾಜಾ ಉದಾಹರಣೆ. ಮೋದಿ- ಗೋದಿ ಮೀಡಿಯಾಕ್ಕೆ ಮೋಶಾ-ಜೈ ಶಾ ಹೆಸರು ಹೇಳುವ ಧೈರ್ಯವಿಲ್ಲ. ಬದಲಿಗೆ ಸಚಿನ್ ತೆಂಡುಲ್ಕರ್, ಗವಾಸ್ಕರ್, ಸೌರವ್ ಗಂಗೂಲಿ, ಸೋನಿ ಟಿವಿ, ಪ್ರಾಯೋಜಕರ ಹೆಸರಿಡಿದು ಚೀರಾಡಿ ಗಂಟಲು ಹರಿದುಕೊಂಡದ್ದು ಬಲು ದೊಡ್ಡ ತಮಾಷೆ.

‘ಪರಂಪರಾಗತ ವೈರಿ’ ದೇಶಗಳ ನಡುವೆ ನಡೆಯುವ ಕ್ರಿಕೆಟ್ ಪಂದ್ಯಗಳು ಹತಾರುಗಳಿಲ್ಲದೆ ನಡೆಯುವ ಸಮರಗಳ ಸ್ವರೂಪವನ್ನೇ ತಳೆದುಬಿಟ್ಟಿವೆ. ಹಾಗೆಂದು ಅವುಗಳನ್ನು ಮೀಡಿಯಾ ಮೂಲಕ ಬಿಂಬಿಸಲಾಗುತ್ತದೆ. ಪಂದ್ಯಗಳು ನಡೆಯುವ ಕ್ರೀಡಾಂಗಣಗಳು ಕಡಲಿನಂತೆ ಮೊರೆಯುತ್ತವೆ. ಸಾಮಾಜಿಕ ಜಾಲತಾಣಗಳು ಕದನದ ಕಣಗಳೇ ಆಗಿಬಿಡುತ್ತವೆ. ಸೋತ ದೇಶದ ಜನಜೀವನಕ್ಕೆ ಆ ಕ್ಷಣಗಳಲ್ಲಾದರೂ ಮಂಕು ಕವಿಯುತ್ತದೆ. ಗೆದ್ದ ದೇಶದಲ್ಲಿ ಕಿವಿ ಕಿವುಡಾಗಿಸುವ ಪಟಾಕಿಗಳ ಅಟ್ಟಹಾಸ. ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳ ಜೇಬುಗಳು ಝಣಝಣಿಸುತ್ತವೆ. ಹಗೆತನದ ಬೆಂಕಿಗೆ ಇನ್ನಷ್ಟು ಎಣ್ಣೆ ಎರೆಯಲಾಗುತ್ತದೆ.

ಭಾರತದೊಂದಿಗೆ ಯಾವ ರೀತಿಯಲ್ಲಾದರೂ ಸಂಬಂಧ ಕುದುರಿಸಿ, ತಾನು ಯಾವ ಅಪರಾಧವನ್ನೂ ಎಸಗಿಲ್ಲ ಎಂದು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಟಿಸಲು ಪಾಕಿಸ್ತಾನಕ್ಕೆ ಮೋದಿ ಸರ್ಕಾರ ನೀಡಿದ ಅವಕಾಶವಿದು. ಅದೂ ಭಾರತೀಯ ನಾಗರಿಕರ ಹತ್ಯೆ-ನೆತ್ತರ ನೆನಪುಗಳು ಇನ್ನೂ ಹಸಿಹಸಿಯಾಗಿರುವಾಗ. ಇಂತಹ ಅವಕಾಶವನ್ನು ಪಾಕಿಸ್ತಾನಕ್ಕೆ ನಿರಾಕರಿಸುವುದಕ್ಕಿಂತ ಪಾಯಿಂಟುಗಳು ಮುಖ್ಯವಾಗಿ ಹೋಗಿವೆ ಮೋದಿ ಸರ್ಕಾರಕ್ಕೆ.

ಪಹಲ್ಗಾಮ್ ದಾಳಿ ನಡೆದ ಎರಡನೆಯ ದಿನವೇ (ಏಪ್ರಿಲ್ 24) ಬಿಹಾರಕ್ಕೆ ತೆರಳಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತಾಡಿದ್ದ ವ್ಯವಹಾರಸ್ಥರು ಮೋದಿ. ಆ ಹೊತ್ತಿನಲ್ಲಿ ಪಹಲ್ಗಾಮದ ಕಳೇಬರಗಳಿಗೆ ಬೆಂಕಿಯನ್ನೂ ಕೊಟ್ಟಿರಲಿಲ್ಲ. ದೇಶಕ್ಕೆ ದೇಶವೇ ಶೋಕ ಆಚರಿಸುತ್ತಿದ್ದರೂ ಅವರು ಲೆಕ್ಕಿಸಲಿಲ್ಲ. ಭಾರತೀಯರ ನೆತ್ತರನ್ನು ಚುನಾವಣೆಗಳ ಪ್ರಚಾರಕ್ಕೆ ಬಳಸುವಷ್ಟು ಅಗ್ಗ ಆಗಿಸಿದ್ದರು.

ಬಿಹಾರಕ್ಕೆ ಹೋಗಿ ನನ್ನ ರಕ್ತದಲ್ಲಿ ಸಿಂಧೂರ ಹರಿಯುತ್ತಿದೆ ಎಂದು ಭಾಷಣ ಮಾಡಿದ್ಜರು. ಈ ಹಿಂದೆ ತಮ್ಮ ರಕ್ತದಲ್ಲಿ ವ್ಯಾಪಾರ ಹಣ ಹರಿಯುತ್ತಿದೆ, ಸೇನೆಯ ಯೋಧನಿಗೆ ಸಾಹಸದ ಪ್ರವೃತ್ತಿ ಎಷ್ಟು ಪ್ರಮಾಣದಲ್ಲಿ ಇರುತ್ತದೆಯೋ ಅದಕ್ಕಿಂತ ಜಾಸ್ತಿ ಸಾಹಸ ಪ್ರವೃತ್ತಿ ಒಬ್ಬ ವ್ಯಾಪಾರಿಯಲ್ಲಿರುತ್ತದೆ ಎಂದು ಅವರು ಹೇಳಿದ್ದ ವಿಡಿಯೋಗಳು ಈಗಲೂ ಅಂತರ್ಜಾಲದಲ್ಲಿ ಸಿಗುತ್ತವೆ.

ಜಯ್ ಶಾ ಅವರು ದೇಶದ ಗೃಹಮಂತ್ರಿ ಅಮಿತ್ ಶಾ ಅವರ ಪುತ್ರ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿಯಾಗಿದ್ದವರು ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ. ಪಾಕ್ ವಿರುದ್ಧದ ಹಾಲಿ ಏಷ್ಯನ್ ಕಪ್ ಪಂದ್ಯಗಳ ಪ್ರಸಾರದ ಹಕ್ಕುಗಳಿಂದ ಬರುವ ಶೇ. 80ರಷ್ಟು ಆದಾಯ ಭಾರತ ಕ್ರಿಕೆಟ್ ಮಂಡಳಿಗೂ, ಶೇ. 5.75ರಷ್ಟು ಪಾಕಿಸ್ತಾನಕ್ಕೂ ಹಂಚಿಕೆಯಾಗುತ್ತದೆ.

ಸಿಂಧೂ ನದಿಯ ಹನಿ ನೀರನ್ನೂ ಕೊಡುವುದಿಲ್ಲವೆಂದು ಗರ್ಜಿಸಿದ್ದ ಮೋಶಾ, ಪಾಕಿಸ್ತಾನಕ್ಕೆ ಹಣದ ಹೊಳೆಯನ್ನೇ ಹರಿಸಿದರು. 2019ರ ಪುಲ್ವಾಮ ಹುತಾತ್ಮರ ಹೆಸರಿನಲ್ಲಿ ಮತಯಾಚನೆ ಮಾಡಿ ಲೋಕಸಭಾ ಚುನಾವಣೆಗಳಲ್ಲಿ 353 ಸೀಟುಗಳ ಭರ್ಜರಿ ಗೆಲುವು ಸಾಧಿಸಿದ್ದರು ಮೋದಿ. ತರುವಾಯ ಪಹಲ್ಗಾಮ್ ಘಟಿಸುವ ತನಕ ಪುಲ್ವಾಮಾ ಮರೆತೇ ಹೋಯಿತು. ಈ ಪ್ರಶ್ನೆಗಳನ್ನು ಎತ್ತಿದ್ದವರು ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲರು. ಈ ಪ್ರಶ್ನೆಗಳನ್ನು ಎತ್ತಿದ್ದ ಮಾಜಿ ರಾಜ್ಯಪಾಲ ಸತ್ಪಾಲ್ ಮಲ್ಲಿಕ್ ಬಗೆ ಬಗೆಯ ದಾಳಿಗಳನ್ನು ಎದುರಿಸಿ ಹಾಸಿಗೆ ಹಿಡಿದು ಪ್ರಾಣ ಬಿಟ್ಟರು. ಅವರ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ.

ಭಾರತೀಯರು ಧಾರ್ಮಿಕ ಭೇದಭಾವ ಮರೆತು ಒಗ್ಗಟ್ಟಾಗಿ ನಿಂತು ಈ ಕೃತ್ಯವನ್ನು ಖಂಡಿಸಿದರು ಎಂದು  ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದರು. ಇಡೀ ದೇಶ ಒಟ್ಟಾಗಿ ನಿಂತಿದ್ದೇನೋ ಹೌದು. ಆದರೆ ಈ ಒಗ್ಗಟ್ಟಿನ ಮುಸುಕಿನ ಮರೆಯಲ್ಲಿ ಮುಸ್ಲಿಮ್ ದ್ವೇಷದ ಹೆದ್ದೆರೆಗಳು ಫೂತ್ಕರಿಸಿದ್ದು ಸುಳ್ಳೇನು? ಈ ದ್ವೇಷವನ್ನು ಉತ್ಪಾದಿಸಿ ಹಂಚಿ ಹಬ್ಬಿಸಿದ ಶಕ್ತಿಗಳು ಯಾವುವು? ಮುಸಲ್ಮಾನರು ಹಿಂದೂಗಳ ಪಾಲಿಗೆ ಅಪಾಯಕಾರಿ, ಅವರನ್ನು ಶಿಕ್ಷಿಸಬೇಕು ಎಂಬ ಕಥಾನಕವನ್ನು ವರ್ಷಗಳಿಂದ ಕಟ್ಟಿ ನಿಲ್ಲಿಸಿ ಇದೀಗ ಅದನ್ನು ಪುನಃ ನವೀಕರಿಸಿದವರು ಯಾರು? ನಾನಾ ರಾಜ್ಯಗಳಲ್ಲಿ ಕಾಶ್ಮೀರಿಗಳನ್ನು ಹೆದರಿಸಿ ಹಲ್ಲೆ ನಡೆಸಿ ಓಡಿಸಿದವರು ಯಾರು? ಅಧಿಕಾರ, ಹಣ, ರಾಜಕಾರಣದ ಮುಂದೆ ಉಳಿದೆಲ್ಲವೂ ಗೌಣವೇ?

‘ಜನತೆಯನ್ನು ಮೂರ್ಖರೆಂದು ಭಾವಿಸುವುದನ್ನು ಇನ್ನಾದರೂ ನಿಲ್ಲಿಸಿ’ ಎಂಬುದು ಮೋದಿಯವರೇ ಹೇಳಿದ ಮಾತು. ಮೋದಿಯವರು ಖುದ್ದು ತಮ್ಮ ಮಾತಿಗಾದರೂ ಕಿವಿಗೊಡಬೇಕಿದೆ. ಜನತೆಯನ್ನು ಮುಟ್ಠಾಳರನ್ನಾಗಿಸುವುದನ್ನು ನಿಲ್ಲಿಸಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....