ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

Date:

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ ಏನೇನು ದಾಖಲೆ ಇಟ್ಟುಕೊಂಡಿರಬೇಕು ಎಂಬ ಜಾಗೃತಿ ಮೂಡಿಸುವ ಕೆಲಸ ಸರ್ಕಾರದ ಕಡೆಯಿಂದ ಆಗಬೇಕಿದೆ. ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದೆಂದರೆ ಅದು ಪ್ರಜಾಪ್ರಭುತ್ವವನ್ನು ರಕ್ಷಿಸುವುದು, ಸಂವಿಧಾನದ ಮೂಲ ಆಶಯವನ್ನು ಗೌರವಿಸುವುದು ಎಂದೇ ಅರ್ಥ.

ಮತದಾನದ ದಿನ ಅತ್ಯಂತ ಹೆಚ್ಚು ಸಂಭ್ರಮದಿಂದ ಎಲ್ಲ ಕೆಲಸ ಬಿಟ್ಟು ಬೆಳ್ಳಂಬೆಳಿಗ್ಗೆ ವೋಟಿಂಗ್‌ ಬೂತ್‌ ಮುಂದೆ ಸಾಲುಗಟ್ಟಿ ನಿಂತು ಮತ ಚಲಾಯಿಸುತ್ತಿದ್ದ ಬಹುತೇಕ ಮಹಿಳೆಯರು ಇನ್ಮುಂದೆ ಆ ಸಾಲಿನಿಂದ ಕಣ್ಮರೆಯಾಗಲಿದ್ದಾರೆ.

ಒಂದು ವರ್ಷದಿಂದ ಭಾರೀ ಸದ್ದು ಮಾಡುತ್ತಿರುವ ಚುನಾವಣಾ ಆಯೋಗದ ʼಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆʼ ಅಂತಿಮವಾಗಿ ಮಹಿಳೆಯರ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವುದು ಅಕ್ಷಮ್ಯ. ಐತಿಹಾಸಿಕ ಹೋರಾಟ ಮಾಡಿ ಗಳಿಸಿದ ಮತದಾನದ ಹಕ್ಕನ್ನು ಮತ್ತೆ ಬೀದಿ ಹೋರಾಟ ಮಾಡಿ ಮರುಗಳಿಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದರೆ ಅಚ್ಚರಿಯಿಲ್ಲ. ಇದು ಭಾರತದ ಹೆಣ್ಣುಮಕ್ಕಳ ಪಾಲಿಗೆ ಪರೀಕ್ಷೆಯೇ ಸರಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈಗಾಗಲೇ SIR ಪ್ರಕ್ರಿಯೆಯನ್ನು 12 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಗಿದೆ. ಇದರಲ್ಲಿ ಹೊರಬಿದ್ದ ಆಘಾತಕಾರಿ ಮಾಹಿತಿ ಎಂದರೆ, ಬಹುತೇಕ ರಾಜ್ಯಗಳಲ್ಲಿ ಮತದಾದರ ಪಟ್ಟಿಯಿಂದ ಅಧಿಕವಾಗಿ ಮಹಿಳೆಯರ ಹೆಸರುಗಳೇ ಮಾಯವಾಗಿದೆ. ಅದರಲ್ಲೂ 18-40 ವರ್ಷದೊಳಗಿನ ಮಹಿಳೆಯರೇ ಹೆಚ್ಚು.

ಬಿಹಾರದಲ್ಲಿ ಸುಮಾರು 65 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅದರಲ್ಲಿ ಮಹಿಳೆಯರ ಸಂಖ್ಯೆ ಗಮನಾರ್ಹವಾಗಿದೆ. ಸರಿಸುಮಾರು 22.7 ಲಕ್ಷದಿಂದ 23 ಲಕ್ಷದಷ್ಟು ಮಹಿಳೆಯರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಉತ್ತರ ಪ್ರದೇಶದಲ್ಲಿ 1.55 ಕೋಟಿಯಷ್ಟು ಮಹಿಳಾ ಮತದಾರರು. ತಮಿಳುನಾಡಿನಲ್ಲಿ ಸುಮಾರು 49.9 ಲಕ್ಷಕ್ಕೂ ಹೆಚ್ಚು ಮಹಿಳಾ ಮತದಾರರನ್ನು ಕೈಬಿಡಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಬಳಿಕ ಸರಿಸುಮಾರು 32.9 ಲಕ್ಷಕ್ಕೂ ಹೆಚ್ಚು ಮಹಿಳೆಯರ ಹೆಸರುಗಳನ್ನು ಅಳಿಸಿ ಹಾಕಲಾಗಿದೆ. ಮಧ್ಯಪ್ರದೇಶದಲ್ಲಿ 23.64 ಲಕ್ಷ ಮಹಿಳೆಯರು ತಮ್ಮ ಮೂಲಭೂತ ಹಕ್ಕಾದ ಮತದಾನದಿಂದ ವಂಚಿತರಾಗಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗದ ವಿರುದ್ಧ ಏಕಾಂಗಿ ಸಮರ ಸಾರಿದ್ದಾರೆ. ಲೋಕಸಭೆಯಲ್ಲಿ 100ಕ್ಕೂ ಹೆಚ್ಚು ಸಂಸದರು ಮತ್ತು ರಾಜ್ಯಸಭೆಯಲ್ಲಿ 50 ಸಂಸದರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಮಹಾಭಿಯೋಗದ ನಿರ್ಣಯಕ್ಕೆ ಸಹಿ ಹಾಕಿದ್ದಾರೆ.

ಇದೀಗ ಈ ಎಸ್‌ಐಆರ್‌ ಭೂತ ಕರ್ನಾಟಕಕ್ಕೆ ಬರಲಿದೆ, ಏಪ್ರಿಲ್‌ 6ರಿಂದ ರಾಜ್ಯದಲ್ಲಿ ಮತದಾರರ ಪರಿಷ್ಕರಣೆ ಕಾರ್ಯ ಶುರುವಾಗಲಿದೆ. ಇಲ್ಲಿ ಇನ್ನು ಅದೆಷ್ಟು ಮಹಿಳೆಯರು ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ ನೋಡಬೇಕಿದೆ. ಈಗಾಗಲೇ ಹನ್ನೆರಡು ರಾಜ್ಯಗಳಲ್ಲಿ ನಡೆದ ಪರಿಷ್ಕರಣೆಯಲ್ಲಿ ‘ಶಾಶ್ವತವಾಗಿ ಸ್ಥಳಾಂತರಗೊಂಡವರು’ ಎಂಬ ಕಾರಣ ನೀಡಿ ಕೈಬಿಡಲಾದವರಲ್ಲಿ ಶೇ.55ಕ್ಕೂ ಹೆಚ್ಚು ಮಂದಿ ಮಹಿಳೆಯರೇ ಇದ್ದಾರೆ.

ಮಹಿಳೆ ಮೊದಲು ಗುರುತಿನಚೀಟಿ ಪಡೆದಾಗ ತವರು ಮನೆಯಲ್ಲಿರುತ್ತಾಳೆ, ನಂತರ ಮದುವೆಯಾಗಿ ಬೇರೆ ಮನೆ ಸೇರುತ್ತಾಳೆ. ಅದೇ ಈಗ ಆಕೆಯ ಮತದಾನದ ಹಕ್ಕಿಗೆ ಮಾರಕವಾಗಿ ಪರಿಣಮಿಸಿದೆ. 2002ರಲ್ಲಿ ನಡೆದ ಪರಿಷ್ಕರಣೆಯ ನಂತರ ಗುರುತಿನ ಚೀಟಿ ಪಡೆದವರಲ್ಲಿ ಬಹುತೇಕರು ಮದುವೆಯಾಗಿ ಗಂಡನ ವಿಳಾಸದಲ್ಲಿರುತ್ತಾರೆ. ಆದರೆ, ಈಗ ನಡೆಯುವ ಪರಿಷ್ಕರಣೆಯಲ್ಲಿ 2003ರ ನಂತರ ಗುರುತಿನ ಚೀಟಿ ಪಡೆದ ಮಹಿಳೆಯ ಗುರುತು ಆಕೆಯ ತಂದೆ ಮತ್ತು ತಾಯಿಯ ಗುರುತಿನಚೀಟಿಯೊಂದಿಗೆ ಲಿಂಕ್‌ ಆಗಿರಬೇಕು ಎಂಬ ನಿಯಮ ಮಾಡಲಾಗಿದೆ. ಈ ಒಂದು ನಿಯಮದಿಂದಾಗಿ ತನ್ನದಲ್ಲದ ತಪ್ಪಿಗಾಗಿ ಹೆಣ್ಣುಮಕ್ಕಳು ಮತದಾನದಿಂದ ವಂಚಿತರಾಗುವುದು ಅನ್ಯಾಯ.

ಸರಿ ಸುಮಾರು ಐವತ್ತು ವರ್ಷಗಳ ಕಾಲ ಹೆಣ್ಣುಮಕ್ಕಳು ಮತದಾನದ ಹಕ್ಕು ಪಡೆಯಲು ಹೋರಾಟ ಮಾಡಿದ್ದಾರೆ. ಈಗ ಮತ್ತೊಂದು ಹೋರಾಟ ಮಾಡುವ ಅನಿವಾರ್ಯತೆ ಬಂದೊದಗಿದೆ. ಕರ್ನಾಟಕದಲ್ಲಿ ಈ ಪ್ರಕ್ರಿಯೆಯ ಮ್ಯಾಪಿಂಗ್‌ನಲ್ಲೇ ದೋಷಗಳು ಕಂಡುಬಂದಿವೆ.

ಯಾವುದೇ ಚುನಾವಣೆ ಇರಲಿ, ಮಹಿಳೆಯರು ಅದರಲ್ಲೂ ಬಡ, ರೈತ ಕುಟುಂಬದ ಹೆಣ್ಣುಮಕ್ಕಳು ನಿಜಕ್ಕೂ ಚುನಾವಣೆಯನ್ನು ಉತ್ಸವದ ರೀತಿಯಲ್ಲಿ ಪರಿಗಣಿಸಿ ಮತದಾನ ಮಾಡುತ್ತಿದ್ದಾರೆ. ಸುಶಿಕ್ಷಿತ ಅಥವಾ ಶ್ರೀಮಂತ ವರ್ಗ ಮಹಿಳೆಯರು ಮತದಾನಕ್ಕೆ ಬೂತ್‌ ಕಡೆ ಸುಳಿಯಲ್ಲ ಎಂಬ ಮಾತಿದೆ. ಆದರೆ ಬಡವರು ಒಂದು ದಿನದ ಕೂಲಿ ಬಿಟ್ಟಾದರೂ ಮತದಾನಕ್ಕೆ ಬರುತ್ತಾರೆ. ಅಷ್ಟೇ ಅಲ್ಲ ಬಹುತೇಕ ಎಲ್ಲ ಪಕ್ಷಗಳೂ ಮಹಿಳೆಯರನ್ನು ಗುರಿಯಾಗಿಸಿ ಚುನಾವಣಾ ಪೂರ್ವದಲ್ಲಿಯೇ ಯೋಜನೆಗಳನ್ನು ಘೋಷಿಸುವುದು ಮಾಮೂಲಿಯಾಗಿ ನಡೆದುಕೊಂಡು ಬಂದಿದೆ. ಅದೀಗ ಒಂದು ಹೆಜ್ಜೆ ಮುಂದೆ ಹೋಗಿ ಅಧಿಕಾರದಲ್ಲಿರುವ ಪಕ್ಷಗಳು ಚುನಾವಣೆ ಘೋಷಣೆಗೆ ತಿಂಗಳಿರುವಾಗ ಯಾವುದಾದರೂ ಒಂದು ಯೋಜನೆಯ ಅಡಿಯಲ್ಲಿ ಮಹಿಳೆಯರ ಖಾತೆಗಳಿಗೆ ಹಣ ವರ್ಗಾವಣೆ ಮಾಡುವ ಮೂಲಕ ಮಹಿಳೆಯರ ಮತಗಳನ್ನು ಖರೀದಿಗೆ ಇಳಿದಿವೆ. ಪ್ರಣಾಳಿಕೆ ಮೂಲಕ ಆಮಿಷವೊಡ್ಡುತಿದ್ದ ಪಕ್ಷಗಳು ಈಗ ತಮ್ಮ ಸರ್ಕಾರವಿರುವ ರಾಜ್ಯಗಳಲ್ಲಿ ಮೊದಲೇ ಮಹಿಳೆಯರ ಮತ ಖರೀದಿಗೆ ಇಳಿದಿವೆ. ಆ ಚಾಳಿ ಶುರುವಾಗಿದ್ದು ಮೋದಿ ಮುನ್ನಡೆಸುತ್ತಿರುವ ಬಿಜೆಪಿಯಿಂದಲೇ. ಮಧ್ಯಪ್ರದೇಶ, ಮಹಾರಾಷ್ಟ್ರ ಚುನಾವಣೆ, ಇತ್ತೀಚೆಗೆ ನಡೆದ ಬಿಹಾರ ಚುನಾವಣೆಗಳು ಇದಕ್ಕೆ ಉದಾಹರಣೆಯಾಗಿವೆ. ಬಿಹಾರದಲ್ಲಿ ಚುನಾವಣೆಗೂ ಮುನ್ನ 75 ಲಕ್ಷ ಮಹಿಳೆಯರ ಖಾತೆಗಳಿಗೆ ತಲಾ 10 ಸಾವಿರ ರೂ. ವರ್ಗಾವಣೆ ಮಾಡಿದ್ದರು ಸ್ವತಃ ಪ್ರಧಾನಿ ಮೋದಿ. ಬಿಜೆಪಿಯ ಈ ಕುತಂತ್ರದ ನಡೆಯನ್ನೇ ಇದೀಗ ತಮಿಳುನಾಡು ಡಿಎಂಕೆ ಸರ್ಕಾರ ಅನುಸರಿಸಿದೆ. ತಮಿಳುನಾಡಿನ 1.31 ಕೋಟಿ ಮಹಿಳೆಯರ ಖಾತೆಗೆ ತಲಾ 5 ಸಾವಿರ ರೂ. ಜಮೆ ಮಾಡಲಾಗಿದೆ.  ಮುಂದಿನ ತಿಂಗಳು ನಡೆಯಲಿರುವ ಅಸ್ಸಾಂ ಚುನಾವಣೆಗೆ ಅಲ್ಲಿನ ಆಡಳಿತಾರೂಢ ಬಿಜೆಪಿ ಸರ್ಕಾರ ಮತ ಖರೀದಿಸಿಯಾಗಿದೆ. 40 ಲಕ್ಷ ಮಹಿಳೆಯರ ಖಾತೆಗೆ ತಲಾ 9 ಸಾವಿರ ವರ್ಗಾವಣೆ ಮಾಡಲಾಗಿದೆ.

ಹೀಗೆ ಮಹಿಳೆಯರಿಗೆ ಆಮಿಷವೊಡ್ಡಿ, ಎಮೋಷನಲ್‌ ಬ್ಲ್ಯಾಕ್‌ಮೇಲ್‌ ಮಾಡಿ ಅಥವಾ ಹಣ, ಸೀರೆ ಕೊಟ್ಟು ಅವರ ಮತ ಖರೀದಿಗೆ ಇಳಿಯುವ ಪಕ್ಷಗಳು, ಇತ್ತ ಮಹಿಳೆಯರ ಮತದಾನದ ಹಕ್ಕುಗಳನ್ನೇ ಕಿತ್ತುಕೊಳ್ಳುವ ಎಸ್‌ಐಆರ್‌ ಬಗ್ಗೆ ಧ್ವನಿ ಎತ್ತದಿರುವುದು ವಿಪರ್ಯಾಸ. ಬಿಜೆಪಿ ಪ್ರೇರಿತ ಈ ಪ್ರಕ್ರಿಯೆ ʼನುಸುಳುಕೋರರುʼ ಎಂಬ ಹಣೆಪಟ್ಟಿಯಡಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ಳಲು ಹೊರಟಿರುವುದು ನಿಚ್ಚಳ. ಹಾಗಾಗಿ ಬಿಜೆಪಿ ಮತ್ತು ಮೈತ್ರಿ ಹೆಸರಿನಲ್ಲಿ ಅವರ ಹಂಗಿನಲ್ಲಿರುವ ಪಕ್ಷಗಳು ಧ್ವನಿ ಎತ್ತಬೇಕು ಎಂದು ನಿರೀಕ್ಷಿಸುವುದು ದುಬಾರಿಯಾದೀತು. ಆದರೆ, ಉಳಿದ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅದರಲ್ಲೂ ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ, ಎಸ್‌ಐಆರ್‌ ನಡೆಯುವ ಸಮಯದಲ್ಲಿ ಏನೇನು ದಾಖಲೆ ಇಟ್ಟುಕೊಂಡಿರಬೇಕು ಎಂಬ ಜಾಗೃತಿ ಮೂಡಿಸುವ ಕೆಲಸ ಸರ್ಕಾರದ ಕಡೆಯಿಂದ ಆಗಬೇಕಿದೆ. ರಾಜಕೀಯ ಸಂಘಟನೆ ʼಜಾಗೃತ ಕರ್ನಾಟಕʼ ಈ ನಿಟ್ಟಿನಲ್ಲಿ ಈಗಾಗಲೇ ಅಭಿಯಾನ ಕೈಗೊಂಡಿದೆ. ಅದೇ ರೀತಿ ಬೇರೆ ನಾಗರಿಕ ಸಂಘಟನೆಗಳೂ ಕಾರ್ಯಪ್ರವೃತ್ತವಾಗಬೇಕಿದೆ.

ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದೆಂದರೆ ಅದು ಪ್ರಜಾಪ್ರಭುತ್ವವನ್ನು ರಕ್ಷಿಸುವುದು, ಸಂವಿಧಾನದ ಮೂಲ ಆಶಯವನ್ನು ಪೋಷಿಸುವುದು ಎಂದೇ ಅರ್ಥ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....

ಈ ದಿನ ಸಂಪಾದಕೀಯ | ಹೆಡೆಯೆತ್ತಿ ಫೂತ್ಕರಿಸುತ್ತಿರುವ ಬಹುಸಂಖ್ಯಾತವಾದದ ಬೇರುಗಳನ್ನು ಗುರುತಿಸಿದ್ದರು ಪಣಿಕ್ಕರ್

ಹರಡಿ ಹಬ್ಬುತ್ತಿರುವ ಬಹುಸಂಖ್ಯಾತವಾದವು ಕೇವಲ ರಾಜಕೀಯ ಪ್ರವೃತ್ತಿ ಮಾತ್ರವಾಗಿರದೆ, ವ್ಯಾಪಕ ಸೈದ್ಧಾಂತಿಕ...