ಈ ದಿನ ಸಂಪಾದಕೀಯ | ‘ಭಾರತದ ಹೃದಯ’ವೇ ಸೆಕ್ಯುಲರಿಸಂ, ಸೋಷಿಯಲಿಸಂ; ಬುದ್ಧನೇ ಇವುಗಳ ಪ್ರವರ್ತಕ

Date:

"ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಸಂವಿಧಾನದಲ್ಲೇ ಅಂತರ್ಗತವಾಗಿ ಹರಿದಿವೆ, ಹೀಗಾಗಿ ಅವುಗಳನ್ನು ವಿಶೇಷವಾಗಿ ಉಲ್ಲೇಖಿಸುವ ಅಗತ್ಯವಿಲ್ಲ" ಎಂದು ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದರೆ ಹೊರತು, ಆ ಪ್ರಸ್ತಾಪಗಳನ್ನು ವಿರೋಧಿಸಿರಲಿಲ್ಲ.

ಜಾತ್ಯತೀತತೆ (ಸೆಕ್ಯುಲರಿಸಂ) ಮತ್ತು ಸಮಾಜವಾದದ (ಸೋಷಿಯಲಿಸಂ) ವಿರುದ್ಧ ಬಿಜೆಪಿ ಮತ್ತು ಸಂಘಪರಿವಾರದ ಅಸಹನೆ ಇಂದು ಮೊನ್ನೆಯದಲ್ಲ. ಸಂವಿಧಾನದಲ್ಲಿ ಅಡಕವಾಗಿರುವ ಈ ಎರಡು ಮೌಲ್ಯಗಳನ್ನು ಮೂಲೋತ್ಪಾಟನೆ ಮಾಡಲು ಇನ್ನಿಲ್ಲದ ಹರಸಾಹಸ ಮಾಡುತ್ತಿರುವ ಇವರು, ಪದೇ ಪದೇ ”ಮೂಲ ಸಂವಿಧಾನದಲ್ಲಿ ಜಾತ್ಯತೀತತೆ ಮತ್ತು ಸಮಾಜವಾದ ಎಂಬ ಪದಗಳು ಇರಲಿಲ್ಲ. ಅವುಗಳನ್ನು ತುರ್ತುಪರಿಸ್ಥಿತಿಯ ಕಾಲದಲ್ಲಿ ಪ್ರಜಾಪ್ರಭುತ್ವ ವಿರೋಧಿ ರೀತಿಯಲ್ಲಿ ಸೇರಿಸಲಾಯಿತು” ಎಂದು ಹೇಳುತ್ತಾರೆ. ಇಂತಹದ್ದೇ ವಾದದ ನೆಲೆಯಲ್ಲಿ ರಾಜ್ಯಸಭಾ ಬಿಜೆಪಿ ಸದಸ್ಯ ಭೀಮ್ ಸಿಂಗ್, ‘ಸಂವಿಧಾನ (ತಿದ್ದುಪಡಿ) ಮಸೂದೆ, 2025 (ಪೀಠಿಕೆಗೆ ತಿದ್ದುಪಡಿ)’ ಮಂಡಿಸಿದ್ದಾರೆ. ಇದೊಂದು ಖಾಸಗಿ ಮಸೂದೆಯಾದರೂ ಸಂಘಪರಿವಾರದ ಮಂದಿ ಮತ್ತೆಮತ್ತೆ ಈ ನಕಲಿ ವಾದವನ್ನು ಪ್ರಸ್ತಾಪಿಸುವುದನ್ನು ಗಂಭೀರವಾಗಿ ಆಲೋಚಿಸಬೇಕಾಗುತ್ತದೆ. ಎಂದಿಗೂ ಈ ದೇಶದ ‘ಸೆಕ್ಯುಲರ್’ ಗುಣವನ್ನು ಒಪ್ಪದ ಮತ್ತು ಮುಸೊಲಿನಿ ಮಾದರಿಯ ‘ಫ್ಯಾಸಿಸ್ಟ್’ ವ್ಯವಸ್ಥೆಯನ್ನು ಬಯಸುವವರ ಹುನ್ನಾರಗಳನ್ನು ಅರಿತುಕೊಳ್ಳಬೇಕಾಗುತ್ತದೆ.

‘ಸೆಕ್ಯುಲರಿಸಂ’, ‘ಸೋಷಿಯಲಿಸಂ’ ಕೇವಲ ಪದಗಳಷ್ಟೇ ಅಲ್ಲ, ಸಂವಿಧಾನದ ಹೃದಯಭಾಗವೂ ಆಗಿದೆ ಎಂಬುದು ಸಂಘಪರಿವಾರದ ಮಂದಿಗೂ ಗೊತ್ತಿದೆ. ”ಹೃದಯದಲ್ಲಿರುವ ಪದವು ಪೀಠಿಕೆಯ ಭಾಗದಲ್ಲಿ ಇರಬಾರದು ಎಂದು ವಾದಿಸುವುದೇಕೆ?” ಎಂಬ ಪ್ರಶ್ನೆಯೇ ಅವರ ಉದ್ದೇಶಗಳನ್ನು ಬಯಲು ಮಾಡುತ್ತದೆ. ಡಾ.ಬಿ.ಆರ್. ಅಂಬೇಡ್ಕರ್ ಅವರೇ ಈ ಎರಡು ಪದಗಳನ್ನು ಸೇರಿಸುವ ಅಗತ್ಯವಿಲ್ಲ ಎಂಬ ಅಭಿಪ್ರಾಯ ತಾಳಿದ್ದರೆಂದು ಪ್ರಚಾರ ಮಾಡುತ್ತಾರೆ. ಆ ಮೂಲಕ ಅಂಬೇಡ್ಕರ್ ಅವರನ್ನು ‘ಸೆಕ್ಯುಲರ್ ಮತ್ತು ಸೋಷಿಯಲಿಸಂ’ ಪದಗಳ ವಿರೋಧಿ ಎಂಬಂತೆ ತೋರಿಸಲಾಗುತ್ತದೆ. ತಮ್ಮ ಸಮರ್ಥನೆಗೆ ಸಂಸದ ಭೀಮ್ ಸಿಂಗ್ ಅವರು ಅಂಬೇಡ್ಕರ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಸಂವಿಧಾನ ಸಮರ್ಪಣೆ- ಬಿಜೆಪಿ ಆಡುವುದೊಂದು, ಮಾಡುವುದು ಮತ್ತೊಂದು!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಸಂವಿಧಾನದಲ್ಲೇ ಅಂತರ್ಗತವಾಗಿ ಹರಿದಿವೆ. ಹೀಗಾಗಿ ಅವುಗಳನ್ನು ವಿಶೇಷವಾಗಿ ಉಲ್ಲೇಖಿಸುವ ಅಗತ್ಯವಿಲ್ಲ ಎಂದು ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದರೆ ಹೊರತು, ಆ ಪ್ರಸ್ತಾಪಗಳನ್ನು ವಿರೋಧಿಸಿರಲಿಲ್ಲ. ಸಂವಿಧಾನ ಪ್ರಸ್ತಾವನೆಯ ಕುರಿತು ನಡೆದ ಚರ್ಚೆಗಳನ್ನು ಈ ದೃಷ್ಟಿಯಲ್ಲಿ ನೋಡಬೇಕಾಗುತ್ತದೆ. ಸಂವಿಧಾನ ರಚನಾ ಸಭೆಯ ಕೊನೆಯ ದಿನಗಳಲ್ಲಿ ಪ್ರಸ್ತಾವನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಕೆ.ಟಿ. ಶಾ ಅವರು, ”ಮುನ್ನುಡಿಯಲ್ಲಿ ಸೋಷಿಯಲಿಸಂ (ಸಮಾಜವಾದ) ಪದ ಸ್ಪಷ್ಟವಾಗಿ ಸೇರಿಸಬೇಕು” ಎಂದಿದ್ದರು. ಅದಕ್ಕೆ ಅಂಬೇಡ್ಕರ್, ”…ಇಂದು ಶೋಷಕ ಬಂಡವಾಳಶಾಹಿ ಸಮಾಜಕ್ಕಿಂತ ಸಮಾಜವಾದಿ ಸಮಾಜ ಉತ್ತಮವೆಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಮುಂದಿನ ಪೀಳಿಗೆ ಬಂಡವಾಳಶಾಹಿ ಸಮಾಜಕ್ಕೆ ವಿರುದ್ಧವಾಗಿ ಸಮಾಜವಾದಕ್ಕಿಂತ ಉತ್ತಮವಾದ ಮತ್ತೊಂದು ವ್ಯವಸ್ಥೆಯನ್ನು ಹುಡುಕಬಹುದು” ಎನ್ನುತ್ತಾರೆ. ಮುಂದುವರಿದು, ”…ಅಷ್ಟು ಮಾತ್ರವಲ್ಲ. ಸಂವಿಧಾನದಲ್ಲಿ ಈಗ ಅಡಕಗೊಳಿಸಲಾಗಿರುವ  ಪರಿಚ್ಛೇದ 4ರ ಪ್ರಭುತ್ವ ನಿರ್ದೇಶನಾ ತತ್ವಗಳೆಲ್ಲ ಸಮಾಜವಾದಿ ಆಶಯಗಳನ್ನು ಪಾಲಿಸುವಂತೆ ಪ್ರಭುತ್ವಕ್ಕೆ ಮಾರ್ಗದರ್ಶನ ಮಾಡುತ್ತಿದೆ” ಎನ್ನುತ್ತಾರೆ. ಇಂತಹದ್ದೇ ಅಭಿಪ್ರಾಯವನ್ನು ‘ಜಾತ್ಯತೀತತೆ’ ಕುರಿತೂ ತಾಳುತ್ತಾರೆ.

”ಅಂಬೇಡ್ಕರ್ ಅವರು ಸಂವಿಧಾನವು ಮತ್ತು ಅದರ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಪ್ರಭುತ್ವವು ಪಕ್ಕಾ ಸೆಕ್ಯುಲರ್ ಹಾಗೂ ಸಮಾಜವಾದಿಯಾಗಿಯಾಗಿಯೇ ಇರಬೇಕೆಂದು ನಿರೀಕ್ಷಿಸಿದ್ದರು. ಸಂವಿಧಾನದ ಮುನ್ನುಡಿಯಲ್ಲಿ ಆ ಪದಗಳಿರಬೇಕೆ ಬೇಡವೇ ಎಂಬ ಬಗ್ಗೆ ಅವರ ಅಭಿಪ್ರಾಯ ತಾಂತ್ರಿಕ ಸ್ವರೂಪದ್ದೇ ವಿನಾ ತಾತ್ವಿಕ ರೂಪದ್ದಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ” ಎಂದು ಬರೆಯುತ್ತಾರೆ ರಾಜಕೀಯ ವಿಶ್ಲೇಷಕರಾದ ಶಿವಸುಂದರ್.

ನಮ್ಮ ಸಂವಿಧಾನದ ಜೀವಾಳವೇ ಜಾತ್ಯತೀತ ಮತ್ತು ಸಮಾಜವಾದ ಎಂದು ಅಂಬೇಡ್ಕರ್ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬೇಕಾಗುತ್ತದೆ. ‘ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ- 17, ಭಾಗ 1’ರಲ್ಲಿ (Dr. Babasaheb Ambedkar Writings and Speeches Vol. 17 Part 1) ದಾಖಲಾಗಿರುವ ಪ್ರಕಾರ, ”ನಮ್ಮ ಸಂವಿಧಾನದಲ್ಲಿ ನಾವು ಪಾಲಿಸ ಹೊರಟಿರುವುದು ಜಾತ್ಯತೀತ ಮತ್ತು ಸಮಾಜವಾದಿ ಪ್ರಜಾಪ್ರಭುತ್ವ” ಎಂದು ಅಂಬೇಡ್ಕರ್ ಅವರೇ ಹೇಳಿದ್ದರು. ಇಂಗ್ಲಿಷ್ ಆವೃತ್ತಿಯ 17ನೇ ಸಂಪುಟ ಭಾಗ 1ರ ಪು.ಸಂ. 378- 382ರವರೆಗೆ ಇರುವ ಮಾತುಕತೆಯನ್ನು ಗಮನಿಸಬಹುದು. ಕನ್ನಡ ಆವೃತ್ತಿ ಸಂಪುಟ 17ರಲ್ಲಿ ಪು.ಸಂ. 339- 343ರಲ್ಲಿ ಈ ಮಾತುಗಳು ದಾಖಲಾಗಿವೆ. ಇಂಗ್ಲಿಷ್ ಕಾದಂಬರಿಕಾರರಾದ ಮುಲ್ಕ್ ರಾಜ್ ಆನಂದ್‍ರವರು, 1950ರ ಮೇ ತಿಂಗಳ ಒಂದು ಸಂಜೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಮುಂಬಯಿಯ ಕೊಲಬದಲ್ಲಿ ಮಾತುಕತೆ ನಡೆಸುತ್ತಾ, ”ಸಂವಿಧಾನ ರಚನೆಯ ಸಂದರ್ಭದಲ್ಲಿ ತಾವು ವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೀರಾ? ನನಗನ್ನಿಸಿದಂತೆ ನಿಮ್ಮ ಸಮಿತಿಯು ಮೂಲಭೂತ ಹಕ್ಕುಗಳನ್ನು ಕೊಟ್ಟಿದೆ. ಆಶ್ಚರ್ಯವೆಂದರೆ, ಅದರ ಜೊತೆಗೇ ಆಸ್ತಿಯ ಹಕ್ಕನ್ನೂ ದಯಪಾಲಿಸಿದ್ದೀರಿ. ಶ್ರೀಮಂತರಿಗೆ ಇದೊಂದು ಭಾರೀ ವರದಾನವಾಗಿದೆಯಲ್ಲವೆ? ಬಡವರಲ್ಲಿಯೇ ಬಡವರಾದ ಅಸ್ಪೃಶ್ಯರಿಗೆ ಇದರಿಂದ ಅತ್ಯಂತ ಅನಾನುಕೂಲವಾಗಿದೆ” ಎನ್ನುತ್ತಾರೆ. ಅದಕ್ಕೆ ಅಂಬೇಡ್ಕರ್ ಅವರು, ”ನಾವು ಸಂವಿಧಾನವನ್ನು ಜಾತ್ಯತೀತ ತತ್ವ, ಸಮಾಜವಾದ ಪ್ರಜಾಪ್ರಭುತ್ವ ಇವುಗಳ ತಳಹದಿಯ ಮೇಲೆ ಕಟ್ಟಿದ್ದೇವೆ. ಮುಂದೆ ಸರ್ಕಾರ ತೆಗೆದುಕೊಳ್ಳಬಹುದಾದ ನಿರ್ಧಾರಗಳಿಂದಾಗಿ ಗೇಣಿದಾರರಿಗೆ, ಉಳುವವರಿಗೆ ಭೂಮಿ ಸಿಕ್ಕರೆ, ಆಗ ವ್ಯಕ್ತಿಯ ಹಕ್ಕುಗಳನ್ನು ಕಾಪಾಡಿದಂತಾಗಿ, ಶೋಷಣೆಗೆ ಕಿಂಚಿತ್ತೂ ಎಡೆಯಿರುವುದಿಲ್ಲ. ಬಹುತೇಕ ಅಸ್ಪೃಶ್ಯರು, ಹಾಗೆಯೇ ಕೆಲ ಸವರ್ಣೀಯರು ಮತ್ತು ಮುಸ್ಲಿಮರು ಭೂಹೀನರಾಗಿದ್ದಾರೆ” ಎನ್ನುತ್ತಾರೆ. ಇದು ಅಂಬೇಡ್ಕರ್ ಅವರ ದೃಷ್ಟಿಕೋನಗಳು. ತಮ್ಮ ಜೀವಿತಾವಧಿಯುದ್ದಕ್ಕೂ ಅಸಮಾನತೆಯ ವಿರುದ್ಧ ಹೋರಾಡಿದ, ಬುದ್ಧನ ದಾರಿಯಲ್ಲಿ ನಡೆದ ಅಂಬೇಡ್ಕರರರು ‘ಸೆಕ್ಯುಲರಿಸಂ’, ‘ಸೋಷಿಯಲಿಸಂ’ ವಿರೋಧಿಸಿದ್ದರು ಎಂದು ಬಿಂಬಿಸುವುದೇ ರಾಜಕೀಯ ದುರುದ್ದೇಶಪೂರಿತ ಆಲೋಚನೆ.

‘ಸೆಕ್ಯುಲರಿಸಂ’- ಈ ದೇಶದ ನಾಡಿಮಿಡಿತ. ಇದನ್ನು ಸರ್ವೋಚ್ಚ ನ್ಯಾಯಾಲಯವೇ ಹಲವು ಸಲ ಪ್ರತಿಪಾದಿಸಿದೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ, 1976ರಲ್ಲಿ ಇಂದಿರಾ ಗಾಂಧಿಯವರು ‘ಜಾತ್ಯತೀತ’ ಪದವನ್ನು ಪೀಠಿಕೆಯಲ್ಲಿ ಸೇರಿಸುವ ಮೂರು ವರ್ಷಗಳ ಹಿಂದೆಯೇ, ಅಂದರೆ 1973ರಲ್ಲಿ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಕೊಟ್ಟಿತ್ತು. ಅದರಲ್ಲಿ, ”ಸೆಕ್ಯುಲರಿಸಂ ಎಂಬುದು ಭಾರತದ ಸಂವಿಧಾನದ ಮೂಲ ರಚನೆಯ ಭಾಗ. ಸಂಸತ್ತಿಗೆ ಸಂವಿಧಾನದ ಮೂಲ ರಚನೆಯನ್ನು (basic structure of the constitution) ಬದಲಿಸುವ ಅಧಿಕಾರವಿಲ್ಲ” ಎಂದು ಸ್ಪಷ್ಟವಾಗಿ ಹೇಳಿತ್ತು. 1994ರಲ್ಲಿ ಎಸ್‌.ಆರ್. ಬೊಮ್ಮಾಯಿ ಪ್ರಕರಣದಲ್ಲಿ, 1995ರ ಜೀವವಿಮಾ ನಿಗಮ ಪ್ರಕರಣದಲ್ಲಿ, 2019ರ ಅಯೋಧ್ಯಾ -ಬಾಬ್ರಿ ತೀರ್ಪಿನಲ್ಲಿ ಇದೇ ಸಂಗತಿಯನ್ನು ಪುನರ್ ಉಚ್ಚರಿಸಿದೆ. ಸಮಾಜವಾದ ಮತ್ತು ಸೆಕ್ಯುಲರಿಸಂ ತೆಗೆದು ಹಾಕಬೇಕೆಂದು ಸಲ್ಲಿಕೆಯಾಗಿದ್ದ ಅರ್ಜಿಗಳನ್ನು 2024ರಲ್ಲಿ ತಿರಸ್ಕರಿಸಿದಾಗಲೂ ಮತ್ತದೇ ಮಾತನ್ನು ಕೋರ್ಟ್ ನೆನಪಿಸಿದೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಪೆಹ್ಲೂಖಾನ್‌ಗೆ ಬಗೆದ ಅದೇ ದ್ರೋಹ ಕಾದಿದೆಯೇ ಅಖ್ಲಾಕ್‌ಗೆ?

ಸಂವಿಧಾನದ  14, 15, 25, 26, ಮತ್ತು 29ನೇ ವಿಧಿಗಳು ಸೆಕ್ಯುಲರಿಸಂ ಎತ್ತಿ ಹಿಡಿದಿವೆ. ಸರ್ಕಾರಕ್ಕೆ ಯಾವುದೇ ಧರ್ಮವಿಲ್ಲ ಎಂದು ಸ್ಪಷ್ಟಪಡಿಸಿವೆ. ಹಾಗೆಯೇ 38 (1), 38 (2), 39 (a), 39 (b), 39 (c), 39 (d), 41 ವಿಧಿಗಳೆಲ್ಲವೂ ಸಮಾಜವಾದಿ ಆಶಯಗಳನ್ನು ಉಸಿರಾಡುತ್ತಿವೆ. ಹೀಗಿದ್ದರೂ ಮತ್ತೆಮತ್ತೆ ‘ಸೆಕ್ಯುಲರಿಸಂ’ ಮತ್ತು ‘ಸೋಷಿಯಲಿಸಂ’ ಮೇಲೆ ಪ್ರಹಾರ ಮಾಡುವುದನ್ನು ಸಂಘಪರಿವಾರದ ಮೂಲದವರು ಬಿಟ್ಟಿಲ್ಲ. ಜಾತ್ಯತೀತವಾಗಿ ಬ್ರಿಟಿಷರ ವಿರುದ್ಧ ಭಾರತೀಯರು ಹೋರಾಡುವಾಗ, ಮತಾಂಧತೆಯನ್ನು ಉದ್ಧೀಪಿಸುವ ಕೃತ್ಯಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆಯವರಿಗೆ ‘ಭಾರತದ ನಿಜಗುಣ’ ಸರ್ವಕಾಲಕ್ಕೂ ಅಪಥ್ಯ. ಅವರು ಬಯಸಿದ ಶ್ರೇಣೀಕೃತ ಭಾರತಕ್ಕೆ ವಿರುದ್ಧವಿರುವ ಸಂವಿಧಾನವೂ ಅವರಿಗೆ ನುಂಗಲಾರದ ತುತ್ತು.

ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಈ ನೆಲದ್ದಲ್ಲ ಎನ್ನುವವರಿಗೆ ಸಾಂಸ್ಕೃತಿಕ ಹಿನ್ನೆಲೆಯಿಂದಲೂ ಉತ್ತರಿಸಬೇಕಾಗುತ್ತದೆ. ಈ ನೆಲದ ಮೊದಲ ಸೆಕ್ಯುಲರ್ ಮತ್ತು ಸೋಷಿಯಲಿಸ್ಟ್ ಎಂದರೆ ‘ಬುದ್ಧ’ ಎಂಬುದನ್ನು ಮನನ ಮಾಡಿಕೊಡಬೇಕಾಗುತ್ತದೆ. ಬುದ್ಧ ಪ್ರತಿಪಾದಿಸಿದ ‘ಮೈತ್ರಿ’ ಪರಿಕಲ್ಪನೆಗಿಂತ ಮಿಗಿಲಾದ ‘ಸೆಕ್ಯುಲರ್’ ದೃಷ್ಟಿಕೋನವಿದೆಯೇ? ‘ಮನುಷ್ಯನಿಗೆ ಪ್ರೀತಿ ಅಗತ್ಯ. ಆದರೆ ಅದೊಂದೇ ಸಾಲದು, ನಮಗೆ ಬೇಕಾದದ್ದು ಮೈತ್ರಿ. ಅದು ಪ್ರೀತಿಗಿಂತ ಹೆಚ್ಚು ವಿಶಾಲ. ಮನುಷ್ಯರೊಂದಿಗೆ ಮಾತ್ರವಲ್ಲ, ಎಲ್ಲ ಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕು ಎಂಬುದೇ ಮೈತ್ರಿಯ ಅರ್ಥ’ ಎನ್ನುತ್ತಾನೆ ಬುದ್ಧ. ಇದಲ್ಲವೇ ಈ ನೆಲದ ‘ಸೆಕ್ಯುಲರಿಸಂ’?

ಬುದ್ಧನ ಸಮಾಜವಾದಿ ದೃಷ್ಟಿಕೋನಗಳ ಕುರಿತು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೆಳಕು ಚೆಲ್ಲಿದ್ದಾರೆ. ನವೆಂಬರ್ 26, 1956ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆದ 4ನೇ ವಿಶ್ವ ಬೌದ್ಧ ಸಮ್ಮೇಳನದಲ್ಲಿ ಅಂಬೇಡ್ಕರ್ ಅವರು ಮಾಡಿದ ಭಾಷಣವೇ ‘ಬುದ್ಧ ಅಥವಾ ಕಾರ್ಲ್‌ಮಾರ್ಕ್ಸ್’. ಕಮ್ಯುನಿಸ್ಟ್ ಆಲೋಚನೆಗಳಿಗೂ ಬುದ್ಧನ ಚಿಂತನೆಗಳಿಗೂ ಇರುವ ಸಾಮ್ಯತೆಯನ್ನು ಗುರುತಿಸುವ ಅಂಬೇಡ್ಕರ್ ಅವರು, ಬುದ್ಧನ ಸಮಾಜವಾದದ ನೆಲೆಗಳನ್ನು ವಿವರಿಸುತ್ತಾರೆ.

”ಸಮಾಜದ ಒಳಿತಿಗಾಗಿ ದುಃಖವನ್ನು ನಿರ್ಮೂಲನೆ ಮಾಡಲು ಖಾಸಗಿ ಆಸ್ತಿಯನ್ನು ತೊಡೆದು ಹಾಕಬೇಕು” ಎಂಬುದು ಬುದ್ಧನ ಆಶಯ. ”ವರ್ಗ-ವರ್ಗದ ನಡುವೆ ಹಿತಾಸಕ್ತಿಗಳ ಸಂಘರ್ಷವಿದೆ. ಆಸ್ತಿಯ ಖಾಸಗಿ ಒಡೆತನ, ಒಂದು ವರ್ಗಕ್ಕೆ ಅಧಿಕಾರವನ್ನೂ ಇನ್ನೊಂದು ವರ್ಗಕ್ಕೆ ದುಃಖವನ್ನೂ ಶೋಷಣೆಯ ಮೂಲಕ ತರುತ್ತದೆ” ಎಂದು ಬೌದ್ಧಿಸಂ ಪ್ರತಿಪಾದಿಸುತ್ತದೆ.

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಮೃತದೇಹದೊಂದಿಗೇ ಯುವತಿ ಮದುವೆ; ಮರ್ಯಾದೆಗೇಡು ಹತ್ಯೆಗಳಿಗೆ ಕೊನೆ ಎಂದು?

ಬುದ್ಧ ಮತ್ತು ಆನಂದನ ನಡುವೆ ನಡೆದ ಸಂಭಾಷಣೆಯೇ ಇದಕ್ಕೆ ಉದಾಹರಣೆ. ಆ ಮಾತುಕತೆ ಹೀಗಿದೆ:

ಬುದ್ಧ- ”ಸಂಗ್ರಹಣೆಯಿಂದ ದುರಾಸೆ ಉಂಟಾಗುತ್ತದೆಂದು ಹೇಳಿದ್ದೇನೆ. ಈಗ, ಆನಂದ, ಅದು ಯಾವ ರೀತಿ ಉಂಟಾಗುತ್ತದೆಂದು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಯಾರಿಂದಲೂ ಅಥವಾ ಯಾವುದರಿಂದಲೂ, ಎಲ್ಲಿ ಯಾವುದೇ ಬಗೆಯ ಅಥವಾ ಯಾವುದೇ ವಿಧದ ಸಂಗ್ರಹಣೆ ಇಲ್ಲವೋ ಆಗ, ಸಂಗ್ರಹಣೆಯ ನಿರ್ಮೂಲನೆಯಿಂದಾಗಿ, ಯಾವುದೇ ರೀತಿಯ ಸಂಗ್ರಹಣೆ ಇಲ್ಲದಿರುವುದರಿಂದ ದುರಾಸೆಯು ಯಾವ ರೂಪದಲ್ಲಿ ತಾನೆ ಇದ್ದೀತು?

ಆನಂದ: ”ಇರಲಾರದು, ತಂದೆ.”

ಬುದ್ಧ: ”ಆದ್ದರಿಂದ, ಆನಂದ, ಆಸ್ತಿಯೇ ಸಂಗ್ರಹಣೆಯ ಮೂಲ, ಮೂಲಕಾರಣ, ಮೂಲಾಧಾರ, ಮೂಲೋತ್ಪತ್ತಿಯಾಗಿದೆ.

ಸಂಪತ್ತಿನ ಅನಗತ್ಯ ಕ್ರೋಡೀಕರಣವನ್ನು ವಿರೋಧಿಸಿದ ಬುದ್ಧನ ಸಮಾಜವಾದಿ ದೃಷ್ಟಿಕೋನವನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಆದ್ದರಿಂದ ಬುದ್ಧ ಕಟ್ಟಿದ ಭಾರತವೇ ಮೂಲದಲ್ಲಿ ಜಾತ್ಯತೀತ ಮತ್ತು ಸಮಾಜವಾದಿ. ನಮ್ಮ ಸಾಂಸ್ಕೃತಿಕ ನಾಯಕ ಬಸವಣ್ಣನವರು ”ಇವನಾರವ ಎನ್ನಬೇಡ, ಇವನಮ್ಮವ ಎನ್ನಬೇಕು” ಎನ್ನುತ್ತಾರೆ. ವಚನಕಾರ್ತಿ ಆಯ್ದಕ್ಕಿ ಲಕ್ಕಮ್ಮ, ”ಈಸಕ್ಕಿಯ ಆಸೆ ನಮಗೇಕೆ?” ಎಂದು ಅನಗತ್ಯ ಸಂಪತ್ತನ್ನು ವಿರೋಧಿಸುತ್ತಾರೆ. ಇದು ಈ ನೆಲದ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ. ಬಿಜೆಪಿ ಮತ್ತು ಸಂಘಪರಿವಾರವು ಈ ದೇಶದ ಮೂಲಗುಣಗಳನ್ನು ವಿರೋಧಿಸುತ್ತಿರುವುದು ಏತಕ್ಕೆ? ಅವರು ಬಯಸುತ್ತಿರುವ ಸಾಮಾಜಿಕ ವ್ಯವಸ್ಥೆ ಯಾವುದು? ಅವರ ನಿಜವಾದ ಉದ್ದೇಶಗಳೇನು? ಎಂದು ಜನತೆ ಪ್ರಶ್ನಿಸಿಕೊಳ್ಳಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....