ಈ ದಿನ ಸಂಪಾದಕೀಯ | ಮನೆಮುರುಕ ಮಹಾ‘ನಾಯಕ’ ಮೊದಲಿಗನಲ್ಲ, ಕಡೆಯವನೂ ಆಗಿರುವುದಿಲ್ಲ!

Date:

ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ತೀರಿ ಹೋಗಿದ್ದಾರೆ. ಮಹಾರಾಷ್ಟ್ರದ ಅಧಿಕಾರ ರಾಜಕಾರಣ ಮತ್ತೊಮ್ಮೆ ಮಗ್ಗುಲು ಬದಲಾಯಿಸುತ್ತಿದೆ. ಕೇಂದ್ರದಲ್ಲಿ ಸರ್ವಾಧಿಕಾರ ಹಿಡಿದಿರುವ ಮೋಶಾ ಜೋಡಿ ಹೊಸ ತಂತ್ರೋಪಾಯ ಹೆಣೆಯಬೇಕಿದೆ. ಹೊಸ ‘ಮನೆ ಮುರುಕ’ ‘ಮಹಾ ನಾಯಕ’ರನ್ನು ಹುಡುಕಿಕೊಳ್ಳಬೇಕಿದೆ.

2023ರ ಜೂನ್ 27, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಭೋಪಾಲ್ ನಲ್ಲಿ ವಿಧಾನಸಭಾ ಚುನಾವಣೆ ಪ್ರಚಾರ ಭಾಷಣ ಮಾಡುತ್ತಿದ್ದರು. ‘ಮಹಾರಾಷ್ಟ್ರದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ 70 ಸಾವಿರ ಕೋಟಿ ರುಪಾಯಿಗಳ ಹಗರಣದಲ್ಲಿ ಸಿಲುಕಿದೆ’ ಎಂಬ ಆಪಾದನೆ ಮಾಡಿದರು.

ಅಷ್ಟೊಂದು ದೊಡ್ಡ ಮೊತ್ತದ ಅವ್ಯವಹಾರ ನಡೆದಿದ್ದು, ಆಪಾದಿತರನ್ನು ಮಟ್ಟ ಹಾಕುವುದಾಗಿ ಬಹಿರಂಗವಾಗಿ ಸಾರಿದವರು ಸಣ್ಣ ವ್ಯಕ್ತಿಯೇನೂ ಅಲ್ಲ. ಪ್ರಧಾನಿಯವರೇ ಖುದ್ದು ಮಟ್ಟ ಹಾಕುವುದಾಗಿ ಸಾರಿದ್ದ ವ್ಯಕ್ತಿ ಅವರದೇ ಪಕ್ಷದಲ್ಲಿ ನಾಲ್ಕೇ ದಿನಗಳಲ್ಲಿ ಉಪಮುಖ್ಯಮಂತ್ರಿಯಾಗುತ್ತಾನೆ. ಇದಕ್ಕಿಂತ ದೊಡ್ಡ ಪವಾಡ ಉಂಟೇ? 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

70 ಸಾವಿರ ಕೋಟಿ ರುಪಾಯಿ ಜುಜುಬಿ ಮೊತ್ತವೇನಲ್ಲ, ಉದಾಹರಣೆಗೆ ಗೃಹಜ್ಯೋತಿ, ಗೃಹಲಕ್ಷ್ಮೀ, ಶಕ್ತಿ, ಅನ್ನಭಾಗ್ಯ, ಯುವನಿಧಿ ಎಂಬ ಐದು ಗ್ಯಾರಂಟಿಗಳ ಅನುಷ್ಠಾನಕ್ಕಾಗಿ ವರ್ಷವೊಂದಕ್ಕೆ ವಿನಿಯೋಗಿಸುತ್ತಿರುವ ಅಂದಾಜು ಮೊತ್ತ 52 ಸಾವಿರ ಕೋಟಿ ರುಪಾಯಿ. ಅಜಿತ್ ಪವಾರ್ ವಿರುದ್ಧ ಮೋದೀಜಿ ಮಾಡಿದ್ದ ಆರೋಪ 70 ಸಾವಿರ ಕೋಟಿ ರುಪಾಯಿಯದು. ಸಿದ್ದರಾಮಯ್ಯ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳ ಒಂದೂಕಾಲು ವರ್ಷದ ಬಜೆಟ್ಟು!

ಪ್ರತಿಪಕ್ಷಗಳನ್ನು ಒಡೆದು, ಅವುಗಳ ಸರ್ಕಾರ ಕೆಡವಿ, ಬಿಜೆಪಿ ಸಮ್ಮಿಶ್ರ ಸರ್ಕಾರ ಸ್ಥಾಪಿಸಲು 70 ಸಾವಿರ ಕೋಟಿ ರುಪಾಯಿಯ ಆರೋಪವನ್ನೂ ಕಡೆಗಣಿಸುವ ಪಕ್ಷ ಅಥವಾ ನಾಯಕ ಮಾಡುವ ಆಪಾದನೆಗಳನ್ನು ದೇಶ ಎಷ್ಟು ಗಂಭೀರವಾಗಿ ಸ್ವೀಕರಿಸಬೇಕು ಎಂಬ ಪ್ರಶ್ನೆಯನ್ನು ಮತದಾರರು ಜಗ್ಗಿಸಿ ಕೇಳುವ ಕಾಲ ಬರಬೇಕಾಗಿದೆ.

ಪ್ರತಿಪಕ್ಷಗಳ ಪ್ರತಿಯೊಬ್ಬ ಭ್ರಷ್ಟ ನಾಯಕನನ್ನೂ ಮಟ್ಟ ಹಾಕುವುದಾಗಿ 2023ರ ಜೂನ್ 27ರಂದು ಮೋದಿಯವರು ತಮ್ಮ ಎಂದಿನ ಗರ್ಜಿಸುವ ಹಾವಭಾವದಲ್ಲಿ ಗುಡುಗಿದ್ದರು. ಈ 70 ಸಾವಿರ ಕೋಟಿ ರುಪಾಯಿ ಹಗರಣ ಆರೋಪಿ ಬೇರಾರೂ ಅಲ್ಲದೆ, ಖುದ್ದು ಅಜಿತ್ ಪವಾರ್ ಆಗಿದ್ದರು.

ಆದರೆ ಪ್ರಧಾನಿ 70 ಸಾವಿರ ಕೋಟಿ ರುಪಾಯಿ ಹಗರಣದ ಆರೋಪ ಮಾಡಿದ್ದು 2023ರ ಜೂನ್ 27ರಂದು. ನಾಲ್ಕೇ ದಿನಗಳ ನಂತರ ಜುಲೈ 2.ರಂದು ಎನ್.ಸಿ.ಪಿ.ಯನ್ನು ಅಡ್ಡಡ್ಡ ಸೀಳಿತ್ತು ಬಿಜೆಪಿ. ಎನ್.ಸಿ.ಪಿ. ನಾಯಕ ಅಜಿತ್ ಪವಾರ್ ಮತ್ತು ಅವರ ಬಣವನ್ನು ಸಮ್ಮಿಶ್ರ ಸರ್ಕಾರಕ್ಕೆ ಸೇರಿಸಿಕೊಂಡು ಉಪಮುಖ್ಯಮಂತ್ರಿ ಹುದ್ದೆಯನ್ನು ಅವರಿಗೆ ನೀಡಿತ್ತು ಬಿಜೆಪಿ. ಅವರೊಂದಿಗೆ ಬಂದಿರುವ ಇತರೆ ಶಾಸಕರಿಗೆ ಮಂತ್ರಿ ಸ್ಥಾನಗಳನ್ನೂ ನೀಡಿತ್ತು. ಈ ಶಾಸಕರ ಮೇಲೆಯೂ ಭ್ರಷ್ಚಾಚಾರದ ಗಂಭೀರ ಆರೋಪಗಳಿದ್ದವು. ಅಜಿತ್ ಮತ್ತು ಅವರ ಈ ಸಮೀಪವರ್ತಿಗಳ ಮೇಲೆ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದಂತಹ ಕೇಂದ್ರೀಯ ಏಜೆನ್ಸಿಗಳನ್ನು ಛೂ ಬಿಟ್ಟದ್ದು ಇದೇ ಮೋದಿ ಸರ್ಕಾರ.

ಅಜಿತ್ ಜೊತೆ ಬಿಜೆಪಿ ಸಂಗ ಬೆಳೆಸಿರುವ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಪ್ರಫುಲ್ ಪಟೇಲ್ ಆಸ್ತಿಪಾಸ್ತಿಗಳನ್ನು ಜಾರಿ ನಿರ್ದೇಶನಾಲಯ 2022ರಲ್ಲಿಯಷ್ಟೇ ಮುಟ್ಟುಗೋಲು ಹಾಕಿಕೊಂಡಿತ್ತು. ತಾವು ಈ ಹಿಂದೆ ಮಹಾರಾಷ್ಟ್ರದ ಲೋಕೋಪಯೋಗಿ ಸಚಿವರಾಗಿದ್ದಾಗ ಸಾವಿರ ಕೋಟಿ ರುಪಾಯಿಗಳ ಹಗರಣಕ್ಕಾಗಿ ಎರಡು ವರ್ಷ ಜೈಲಿನಲ್ಲಿದ್ದು ಹೊರಬಂದಿರುವವರು ಇದೇ ಪಕ್ಷದ ಮತ್ತೊಬ್ಬ ತಲೆಯಾಳು ಛಗನ್ ಭುಜಬಲ್. ಇಂತಹುದೇ ಮತ್ತೊಬ್ಬ ನಾಯಕ ಹಸನ್ ಮುಶ್ರಿಫ್. ಜಾರಿ ನಿರ್ದೇಶನಾಲಯ ಈತನ ಬೆನ್ನು ಬಿದ್ದಿತ್ತು.

ಅಜಿತ್ ದಾದಾ ಜೈಲಿನ ಕಂಬಿ ಎಣಿಸುವಂತೆ ಮಾಡುತ್ತೇವೆ, ಜೈಲಿನಲ್ಲಿ ಹಿಟ್ಟು ಬೀಸಲು ಹಚ್ಚುತ್ತೇವೆ ಎಂದೆಲ್ಲ ಅಂದು ಸಾರ್ವಜನಿಕ ಭಾಷಣ ಮಾಡಿ ಪ್ರತಾಪ ಕೊಚ್ಚಿಕೊಂಡಿದ್ದರು ಮಹಾರಾಷ್ಟ್ರದ ಹಾಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್. 2023ರಲ್ಲಿ ಮೋದಿ ಆಡಿದ್ದ ಮಾತುಗಳನ್ನು ನಾಲ್ಕೇ ದಿನಗಳಲ್ಲಿ ನುಂಗಿಕೊಳ್ಳುವಂತೆ ಮನವರಿಕೆ ಮಾಡಿದವರು ಇದೇ ಫಡಣವೀಸ್.

ಅಜಿತ್ ಪವಾರ್ ಪಾತ್ರಧಾರಿಯಾಗಿದ್ದ ಮತ್ತೊಂದು ವಿಪರೀತ ವಿಡಂಬನೆಯನ್ನು ಇಲ್ಲಿ ಉಲ್ಲೇಖಿಸಬೇಕಿದೆ. ಅದೆಂದರೆ 2019ರಲ್ಲಿ ಅಜಿತ್ ಪವಾರ್ ಅವರನ್ನು ರಾತ್ರೋರಾತ್ರಿ ಅಪಹರಿಸಿ ಬೆಳಗಿನ ಜಾವ ಉಪಮುಖ್ಯಮಂತ್ರಿಯ ಪ್ರಮಾಣವಚನ ಕೊಡಿಸಿತ್ತು ಬಿಜೆಪಿ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ತೆಗೆದುಕೊಂಡವರು ಫಡಣವೀಸ್ ಅವರೇ. ಮೋದಿ-ಶಾ ಅವರ ಅನುಮತಿಯಿಂದಲೇ ಈ ಕಾರ್ಯಾಚರಣೆ ಜರುಗಿತ್ತು. ಆ ಸಂದರ್ಭದಲ್ಲಿ ಅಜಿತ್ ಪವಾರ್ ಮೇಲಿನ 70 ಸಾವಿರ ಕೋಟಿ ರುಪಾಯಿಗಳ ಆಪಾದನೆಯನ್ನು ಹಿಂಪಡೆಯಲಾಗಿದೆ ಎಂದು ಘೋಷಿಸಲಾಗಿತ್ತು. ಪವಾರ್ ಎನ್.ಸಿ.ಪಿ.ಗೆ ಮರಳಿದ ಕೂಡಲೇ ಈ ಆಪಾದನೆಗೆ ಜೀವ ಬರುತ್ತದೆ. ತೊರೆದ ತಕ್ಷಣವೇ ಅಡಗಿ ಹೋಗುತ್ತದೆ!

ಶರದ್ ಪವಾರ್ ಸ್ಥಾಪಿಸಿದ ಎನ್.ಸಿ.ಪಿ.ಯನ್ನೂ, ಬಾಳಾಸಾಹೇಬ್ ಠಾಕರೆ ಹುಟ್ಟು ಹಾಕಿ ಬೆಳೆಸಿದ ಶಿವಸೇನೆಯನ್ನೂ ಒಡೆದು ಹೋಳು ಮಾಡಿ ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಕೆಡವಿ ಶಿಂಧೆ-ಪವಾರ್-ಫಡಣವೀಸ್ ಸರ್ಕಾರವನ್ನು ರಚಿಸಿತ್ತು ಮೋಶಾ ಜೋಡಿ.

ಬಿಜೆಪಿಯ ಬಳಿ ದೈತ್ಯ ವಾಷಿಂಗ್ ಮಷೀನ್ ಉಂಟು.ಈ ವಾಷಿಂಗ್ ಮಷೀನ್ ಗೆ ಬಳಸುವ ನೀರು ಸಾಕ್ಷಾತ್ ಗಂಗಾಜಲ. ಹೀಗಾಗಿ ಈ ವಾಷಿಂಗ್ ಮಷೀನಿಗೆ ಹಾಕಿದರೆ ಭ್ರಷ್ಟಾತಿಭ್ರಷ್ಟರೂ, ಕಡು ಪಾತಕಿಗಳೂ ಪರಮಪವಿತ್ರರಾಗಿ ಹೊರ ಬರುತ್ತಾರೆ ಎಂಬ ವ್ಯಂಗ್ಯವೊಂದು ಚಾಲ್ತಿಗೆ ಬಂದಿತು. ಈ ಉಪಮೆ ಅತಿರಂಜಿತ ಎನಿಸಿದರೂ ಅಸತ್ಯವೇನೂ ಅಲ್ಲ.

ಅಜಿತ್ ಪವಾರ್ ಮೇಲೆ 70 ಸಾವಿರ ಕೋಟಿ ರೂ. ಹಗರಣದ ಆರೋಪಿ ಎಂದು ಮೋದಿಯವರೂ, ಅಜಿತ್ ಜೈಲುಪಾಲಾಗಿ ಹಿಟ್ಟು ಬೀಸುವುದು ತಪ್ಪದೆಂದು ಮಹಾರಾಷ್ಟ್ರದ ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಭಾಷಣ ಮಾಡಿರುವ ವಿಡಿಯೋಗಳು ಯೂಟ್ಯೂಬ್ ನಲ್ಲಿ ಈಗಲೂ ಸಲೀಸಾಗಿ ಸಿಗುತ್ತವೆ.

ಹಣಕಾಸಿನ ಅಪರಾಧದಡಿ ಇಡಿ ದಾಳಿಯಾಗಿ ಪ್ರಕರಣ ಎದುರಿಸುತ್ತಿರುವ ಉದ್ಯಮ ಸಂಸ್ಥೆಗಳು, ಖಾಸಗಿ ಬ್ಯಾಂಕುಗಳು, ಕಪ್ಪು ಪಟ್ಟಿಗೆ ಒಳಗಾದ ಸಂಸ್ಥೆಗಳು ಬಿಜೆಪಿಗೆ ಚುನಾವಾಣಾ ಬಾಂಡ್‌ ಮೂಲಕ ದೇಣಿಗೆ ನೀಡಿರುವುದು, ಅದಕ್ಕೆ ಪ್ರತಿಯಾಗಿ ಇಡಿ ಪ್ರಕರಣಗಳು ಮುಕ್ತಾಯಗೊಂಡಿರುವ ‘ಇಂದ್ರಜಾಲ’ ಕಳೆದ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳಿರುವಾಗ ಬಟಾ ಬಯಲಾಗಿತ್ತು. ಚುನಾವಣಾ ಬಾಂಡ್‌ನ ಮಾಹಿತಿ ಬಹಿರಂಗಪಡಿಸಬೇಕು ಎಂಬ ಸುಪ್ರೀಂ ಕೋರ್ಟ್‌ ಎಸ್‌ಬಿಐಗೆ  ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ ನಂತರ ಅನಿವಾರ್ಯವಾಗಿ ಬಾಂಡ್‌ ನೀಡಿದವರ ಮಾಹಿತಿ ಬಹಿರಂಗಪಡಿಸಲಾಗಿತ್ತು. ಆ ವೇಳೆ  ಮೋದಿ ಸರ್ಕಾರದ ಬಣ್ಣ ಬಯಲಾಗಿತ್ತು. ಆ ನಂತರ ಇಡಿ ದಾಳಿಗಳು ಪಕ್ಷಪಾತದ ಗಬ್ಬು ನಾತ ಬೀರುತ್ತಿವೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ, ನಾ ಖಾವೂಂಗ ಖಾನೇ ದೂಂಗ ಎಂದು ಅಬ್ಬರದ ಭಾಷಣ ಬಿಗಿದ ನರೇಂದ್ರ ಮೋದಿ ಅವರು ಭ್ರಷ್ಟಾಚಾರವನ್ನು ತಡೆಯಲೆಂದೇ ಇರುವ ಜಾರಿ ನಿರ್ದೇಶನಾಲಯವನ್ನು ಹೇಗೆಲ್ಲ ದುರುಪಯೋಗಪಡಿಸಿಕೊಂಡಿದ್ದರು ಎಂಬುದು ದೇಶದ ಜನರ ಮುಂದೆ ಬಹಿರಂಗವಾಗಿತ್ತು. ಆರ್ಥಿಕ ಅಪರಾಧಿಗಳು, ಭ್ರಷ್ಟರನ್ನೆಲ್ಲ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿ, ಮಂತ್ರಿ, ಮುಖ್ಯಮಂತ್ರಿ ಮಾಡಿ ಅವರನ್ನು ದೋಷಮುಕ್ತಗೊಳಿಸಿ ಪ್ರಜಾಪ್ರಭುತ್ವಕ್ಕೆ ಕಳಂಕ ತಂದಿದ್ದಾರೆ. ತಮ್ಮ ಮೂರನೆಯ ಅಧಿಕಾರಾವಧಿಯಲ್ಲೂ ಇಡಿಯ ದುರುಪಯೋಗವನ್ನು ನಿಲ್ಲಿಸಿಲ್ಲ ಮೋದಿ.

ಈ ದಾಳಿ ಕೇವಲ ಪ್ರತಿಪಕ್ಷಗಳ ಸರ್ಕಾರಗಳಿರುವ ರಾಜ್ಯಗಳು, ಪ್ರತಿಪಕ್ಷಗಳ ನಾಯಕರು, ಟೀಕೆ ಟಿಪ್ಪಣಿ ಮಾಡುವವರ ಮೇಲೆ ಇಡಿಯನ್ನು ಛೂ ಬಿಡಲಾಗುತ್ತಿದೆ. ಪ್ರತಿಪಕ್ಷಗಳ ಹಲವು ನಾಯಕರು ಇಡಿ ದಾಳಿಯ ಭಯಕ್ಕೆ ಬಿಜೆಪಿ ಸೇರಿಕೊಂಡದ್ದೂ ಇದೆ. ದಾಳಿ ನಡೆದ ನಂತರ ಕೆಲವರು ಬಿಜೆಪಿ ಸೇರಿದ್ದೂ ಇದೆ. ಬಿಜೆಪಿ ಸೇರಿದ ನಂತರ ದಾಳಿಗಳು ನಿಂತು ಬಿಡುತ್ತವೆ. ತನಿಖೆ ಕೂಡ ಕ್ರಮೇಣ ಸ್ಥಗಿತಗೊಳ್ಳುತ್ತದೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಅಶೋಕ ಚವ್ಹಾಣ್ ಅವರನ್ನು ಆದರ್ಶ್ ಹೌಸಿಂಗ್ ಸೊಸೈಟಿ ಹಗರಣದ ಮುಖ್ಯ ಆರೋಪಿಯೆಂದು ಭರ್ಜರಿ ಭಾಷಣ ಮಾಡಿದ್ದವರು ಖುದ್ದು ಮೋದಿಯವರೇ. ನಮ್ಮ ಯೋಧರ ಹುತಾತ್ಮರ ಕುಟುಂಬಗಳಿಗೆ ಮೋಸ ಮಾಡಿದ್ದರೆಂದು 2019ರ ಚುನಾವಣಾ ಭಾಷಣದಲ್ಲೇ ದಾಳಿ ನಡೆಸಿದ್ದರು. ಅಂತಹವರು ಈಗ ಬಿಜೆಪಿಯಲ್ಲಿದ್ದಾರೆ. ನಾನು ಬಿಜೆಪಿ ಸೇರದೆ ಹೋದರೆ ಆದರ್ಶ್ ಹಗರಣದಲ್ಲಿ ನನ್ನ ಮಗಳನ್ನು ಬಂಧಿಸುವ ಬೆದರಿಕೆ ಹಾಕಿದ್ದಾರೆಂದು ಚವ್ಹಾಣ್ ತಮ್ಮ ತಾಯಿಯ (ಸೋನಿಯಾಗಾಂಧಿ) ಮುಂದೆ ಕಣ್ಣೀರುಗರೆದರೆಂದು ರಾಹುಲ್ ಗಾಂಧಿ ಬಹಿರಂಗ ಭಾಷಣದಲ್ಲಿ ಹೇಳಿದರು. ರಾಹುಲ್ ಹೇಳಿಕೆಯನ್ನು ಚವ್ಹಾಣ್ ಮತ್ತು ಬಿಜೆಪಿ ಈವರೆಗೆ ಅಲ್ಲಗಳೆದಿಲ್ಲ.

ಅಜಿತ್ ಪವಾರ್ ಅವರಿಗೆ ಮೊದಲೇ ಶಿವಸೇನೆಯನ್ನು ಒಡೆದು ಹೊರಬಂದು ಫಡಣವೀಸ್ ಕೈ ಕುಲುಕಿ ಮುಖ್ಯಮಂತ್ರಿ ಗದ್ದುಗೆ ದಕ್ಕಿಸಿಕೊಂಡಿದ್ದವರು ಏಕನಾಥ ಶಿಂಧೆ. ದಡ ಸೇರಿದ ಮೇಲೆ ಅಂಬಿಗನ ಹಂಗ್ಯಾಕೆ ಎಂಬುದು ಮೋಶಾ ಯುಗದ ಬಿಜೆಪಿಯ ಧೋರಣೆ. ಶಿಂಧೆ-ಅಜಿತ್ ಪವಾರ್ ಅವರಿಂದ ಮನೆಮುರಿಸಿ ಅವರನ್ನು ಎಡಬಲಕ್ಕಿಟ್ಟುಕೊಂಡು ಇತ್ತೀಚೆಗೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳನ್ನು ಗೆದ್ದಿತ್ತು ಬಿಜೆಪಿ. ಶಿವಸೇನೆಯ ಮನೆ ಮುರಿದು ಬಂದ ಶಿಂಧೆಯವರಿಗೆ ಬಿಜೆಪಿ ನೀಡಿದ್ದ ಮುಖ್ಯಮಂತ್ರಿ ಹುದ್ದೆ ನಾಯಿ ತಲೆಯ ಮೇಲಿನ ಬುತ್ತಿಯಾಗಿ ಕಳೆದು ಹೋಯಿತು. ವಿಧಾನಸಭಾ ಚುನಾವಣೆಯ ನಂತರ ಫಡಣವೀಸ್ ಮುಖ್ಯಮಂತ್ರಿಯಾದರು. ಶಿಂಧೆಯವರನ್ನು ಮೂಲೆಗುಂಪು ಮಾಡಲು ಮುಂದಾಗಿತ್ತು ಮೋದಿ-ಅಮಿತ್ ಶಾ-ಫಡಣವೀಸ್ ತ್ರಿವಳಿ.

ಅಜಿತ್ ಪವಾರ್ ಇದೀಗ ವಿಮಾನ ಅಪಘಾತದಲ್ಲಿ ತೀರಿ ಹೋಗಿದ್ದಾರೆ. ಮಹಾರಾಷ್ಟ್ರದ ಅಧಿಕಾರ ರಾಜಕಾರಣ ಮತ್ತೊಮ್ಮೆ ಮಗ್ಗುಲು ಬದಲಾಯಿಸುತ್ತಿದೆ. ಕೇಂದ್ರದಲ್ಲಿ ಸರ್ವಾಧಿಕಾರ ಹಿಡಿದಿರುವ ಮೋಶಾ ಜೋಡಿ ಹೊಸ ತಂತ್ರೋಪಾಯ ಹೆಣೆಯಬೇಕಿದೆ. ಹೊಸ ‘ಮನೆ ಮುರುಕ’ ‘ಮಹಾ ನಾಯಕ’ರನ್ನು ಹುಡುಕಿಕೊಳ್ಳಬೇಕಿದೆ.

ಅಧಿಕಾರ ಮತ್ತು ಐಶ್ವರ್ಯದ ಆಮಿಷಗಳಿಗಾಗಿ ಮನೆ ಮುರಿಯುವ ರಾಜಕಾರಣಿಗಳ ಸರಣಿಯಲ್ಲಿ ಶಿಂಧೆ, ಅಜಿತ್ ಪವಾರ್ ಮೊದಲಿಗರೇನಲ್ಲ, ಕೊನೆಯವರೂ ಆಗಿರುವುದಿಲ್ಲ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....