ಈ ದಿನ ಸಂಪಾದಕೀಯ | ಕೆ.ಆರ್.ಪೇಟೆ ದಲಿತ ಯುವಕ ಜಯಕುಮಾರ್ ಕೇಸ್‌ನಲ್ಲಿ ಪೊಲೀಸರು ಕುರುಡಾಗಿದ್ದು ಅಕ್ಷಮ್ಯ

Date:

ಸಹಜವಾಗಿ ದಾಖಲಾಗಬೇಕಿದ್ದ ಕೊಲೆ ಪ್ರಕರಣಕ್ಕೆ ಇಷ್ಟೆಲ್ಲ ಹರಸಾಹಸ ಪಡಬೇಕಾಗಿರುವುದು, ಇದು ಮತ್ತೊಂದು ಕಂಬಾಲಪಲ್ಲಿ ಪ್ರಕರಣವೆಂದು ದಲಿತರು ದುಃಖಿಸುವಂತಾಗಿರುವುದು ನಮ್ಮ ವ್ಯವಸ್ಥೆಯ ಗಾಯಗಳೇ ಸರಿ...

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ಮೇ 17ರಂದು ನಡೆದಿರುವ ದಲಿತ ಯುವಕ ಜಯಕುಮಾರ್‌ ಅವರ ಅನುಮಾನಾಸ್ಪದ ಸಾವು ಮತ್ತು ಬೆಂಕಿಯಲ್ಲಿ ಮೃತ ದೇಹ ಸಿಕ್ಕಿರುವ ಘಟನೆಯು ನಾಗರಿಕ ಸಮಾಜಕ್ಕೆ ಕಪ್ಪು ಚುಕ್ಕೆ. ಆದರೆ ಇಂತಹ ಪ್ರಕರಣದಲ್ಲಿ ಪೊಲೀಸರು ಅಸೂಕ್ಷ್ಮತೆ ಮೆರೆದಿರುವುದು ಮತ್ತಷ್ಟು ಆಘಾತಕಾರಿ ವಿಚಾರ.

ಜಯಕುಮಾರ್ ಅವರ ಪತ್ನಿ ಕೆ.ಬಿ.ಲಕ್ಷ್ಮಿ ಅನಕ್ಷರಸ್ಥೆ. ಅವರ ಸಹಿ ಇರುವ ದೂರನ್ನು ಓದಿ ತಿಳಿಸಿರುವುದಾಗಿ ವಂಚಿಸಲಾಗಿದೆ. ”ನನ್ನ ಗಂಡ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂಬುದಾಗಿ ದೂರಿನಲ್ಲಿ ನಮೂದಿಸಿರುವುದು ಆ ಸಂತ್ರಸ್ತೆಯ ಗಮನಕ್ಕೆ ಬಂದಿಲ್ಲ ಎಂಬ ಸಂಗತಿ ನಂತರದ ಬೆಳವಣಿಗೆಗಳಿಂದ ಗೊತ್ತಾಗಿದೆ. ”ಗ್ರಾಮದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದಲೂ ನಮ್ಮ ಕುಟುಂಬಕ್ಕೆ ನಿರಂತರ ಕಿರುಕುಳ ಕೊಡುತ್ತಿದ್ದ ಗ್ರಾಮದ ಸವರ್ಣೀಯ ಕುಟುಂಬದ ಅನಿಲ್‌ ಕುಮಾರನೇ ನನ್ನ ಗಂಡನನ್ನು ಕೊಂದಿದ್ದಾನೆ. ನನ್ನ ಗಂಡ ಕೊಲೆಯಾಗಿದ್ದಾರೆ ಎಂದೇ ನಾನು ಹೇಳಿದ್ದೆ. ಆದರೂ ಆತ್ಮಹತ್ಯೆ ಪ್ರಕರಣ ಎಂದು ದಾಖಲಿಸಿರುವುದು ತೀವ್ರ ನೋವಿನಲ್ಲಿದ್ದ ನನಗೆ ಆ ದಿನ ತಿಳಿಯಲಿಲ್ಲ” ಎಂದು ನೊಂದು ನುಡಿಯುತ್ತಾರೆ ಲಕ್ಷ್ಮಿ.

ಗ್ರಾಮಸ್ಥರು ನೀಡುವ ಮಾಹಿತಿಗಳು ಅನೇಕ ಸಂಗತಿಗಳನ್ನು ಬಿಚ್ಚುಡುತ್ತವೆ. ”ಬಡವನಾದ ಜಯಕುಮಾರ್‌ ಕೆಲ ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಇತ್ತ ಕುಟುಂಬಕ್ಕೆ ಆಸರೆಯಾಗಲು ಶ್ರಮಪಡುತ್ತಿದ್ದರು. ಸರ್ಕಾರದಿಂದ ಸಿಕ್ಕಿರುವ 1 ಎಕರೆ 20 ಗುಂಟೆ ಜಮೀನಿನಲ್ಲಿ ಕಲ್ಲು, ಮುಳ್ಳು, ಗಿಡ-ಗಂಟಿಗಳು ಬೆಳೆದಿರುವುದನ್ನು ತೆರವು ಮಾಡಿಸಿ, ನೆಲವನ್ನು ಸಮತಟ್ಟು ಮಾಡಿಕೊಂಡು ಜೀವನೋಪಾಯ ಕಂಡುಕೊಳ್ಳುವ ಕನಸು ಕಂಡಿದ್ದ. ಆದರೆ ಜಯಕುಮಾರ್ ಜಮೀನಿನಲ್ಲಿ ಹುಲ್ಲಿನ ಮೆದೆ ಹಾಕಿಕೊಂಡಿದ್ದ ಅನಿಲ್ ಕುಮಾರ್‌ನಿಗೆ ಎಷ್ಟು ಹೇಳಿದರೂ ಅದನ್ನು ತೆರವು ಮಾಡಲಿಲ್ಲ. ಐದು ವರ್ಷಗಳಿಂದಲೂ ಈ ವಿವಾದ ನಡೆಯುತ್ತಿತ್ತು. ಎರಡು ವರ್ಷಗಳ ಹಿಂದೆ ಹುಲ್ಲು ಖಾಲಿಯಾದ ಸಂದರ್ಭದಲ್ಲಿ, ‘ಈಗಲಾದರೂ ತೆರವು ಮಾಡಿ’ ಎಂದು ಜಯಕುಮಾರ್ ಕೇಳಿಕೊಂಡಿದ್ದರು. ಆದರೆ ಅನಿಲ್‌ಕುಮಾರ್ ರಾತ್ರೋರಾತ್ರಿ ಹುಲ್ಲಿನ ಮೆದೆ ಹಾಕಿ ಮತ್ತೆ ದಬ್ಬಾಳಿಕೆಯನ್ನು ಮುಂದುವರಿಸಿದ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ನಡುವೆ ಬೆಂಗಳೂರಿಗೆ ದುಡಿಯಲು ಬಂದ ಜಯಕುಮಾರ್, ಹಣ ಕೂಡಿಟ್ಟುಕೊಂಡು ಹೋಗಿ ಊರಿನ ಜಮೀನು ಹಸನು ಮಾಡಲು ಯೋಚಿಸಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ಅಂದರೆ ಮೇ 15ರಂದು ಅನಿಲ್‌ಕುಮಾರ್‌ ಮತ್ತೆ ಕ್ಯಾತೆ ತೆಗೆದಿದ್ದ. ”ನಿನ್ನ ಕೊಲೆ ಮಾಡಿ, ಇದೇ ಹುಲ್ಲಿನ ಮೆದೆಯಲ್ಲಿ ಸುಟ್ಟು ಹಾಕುವೆ” ಎಂದೆಲ್ಲ ಕೊಲೆ ಬೆದರಿಕೆ ಹಾಕಿದ್ದ. ಭಯಬಿದ್ದ ಜಯಕುಮಾರ್ ಕೆ.ಆರ್‌.ಪೇಟೆ ಪೊಲೀಸರಿಗೆ ಮೇ 16ರಂದು ದೂರು ನೀಡಿದ್ದರು. ಆದರೆ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಗೊತ್ತಾಗುತ್ತದೆ. ಮಾರನೇ ದಿನವೇ ಜಯಕುಮಾರ್ ಅವರ ಶವ ಮೆದೆಯ ಹುಲ್ಲಿನ ಜೊತೆಗೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಯಿತು. ”ಅನಿಲ್ ಕುಮಾರನೇ ಈ ಕೃತ್ಯ ಎಸಗಿದ್ದಾನೆ. ಅನಿಲ್‌ಕುಮಾರ್ ಊರಿನಲ್ಲಿ ಮೊದಲಿನಿಂದಲೂ ಗೂಂಡಾಗಿರಿ ಮಾಡಿಕೊಂಡು ತಿರುಗುತ್ತಿದ್ದ ವ್ಯಕ್ತಿ, ರೌಡಿ ಶೀಟರ್ ಆಗಿಯೂ ಗುರುತಿಸಿಕೊಂಡಿದ್ದ. ಪೋಕ್ಸೋ ಪ್ರಕರಣದಲ್ಲಿ ಸಿಲುಕಿ ಜೈಲಿನಲ್ಲೂ ಕೆಲಕಾಲ ಇದ್ದ” ಎಂಬ ಗಂಭೀರ ಆರೋಪವನ್ನು ಊರಿನ ದಲಿತರು ಮತ್ತು ಸವರ್ಣೀಯ ಮುಖಂಡರು ಮಾಡುತ್ತಿದ್ದಾರೆ. ಹೀಗಿರುವಾಗ ಜಯಕುಮಾರ್ ತಾನಾಗಿಯೇ ಬೆಂಕಿ ಹಚ್ಚಿಕೊಂಡು ಸಾಯುವ ಸನ್ನಿವೇಶ ಬರುವುದಾದರೂ ಎಲ್ಲಿ?

ಇದನ್ನೂ ಓದಿರಿ: ಈ ದಿನ ಸಂಪಾದಕೀಯ | ಕೊಲೆ ಕೃತ್ಯಗಳಲ್ಲಿ ಮಕ್ಕಳ ಭಾಗವಹಿಸುವಿಕೆ ಗಂಭೀರ ಮತ್ತು ಆಘಾತಕಾರಿ!

ಮೇ 17ರಂದು ಜಮೀನು ಸಮತಟ್ಟು ಮಾಡಿಸುವ ಕೆಲಸ ನಡೆಯುತ್ತಿತ್ತು. ಊಟ ತೆಗೆದುಕೊಂಡು ಹೋದ ಲಕ್ಷ್ಮಿ ಅವರು ಗಂಡನ ಶವ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವುದನ್ನು ನೋಡಿ, ಚೀರಾಡಿದ ಬಳಿಕವಷ್ಟೇ ಘಟನೆ ಬೆಳಕಿಗೆ ಬಂದಿದೆ. ಬೆಂಕಿ ಹತ್ತಿಕೊಂಡ ಬಳಿಕ ವ್ಯಕ್ತಿಯೊಬ್ಬ ಚೀರುವುದು, ಕಾವಿಗೆ ತಡೆಯಲಾರದೆ ಸುತ್ತಲೂ ಓಡಾಡುವುದು ಸಾಮಾನ್ಯ. ಆದರೆ ಮೃತದೇಹ ಬಿದ್ದಲ್ಲೇ ಬಿದ್ದಿತ್ತು. ಚೀರಾಡಿದ ದನಿಯೂ ಇಲ್ಲ, ಪಕ್ಕದಲ್ಲೇ ಇರುವ ಮನೆಯವರಿಗೂ ಘಟನೆ ಗೊತ್ತಿಲ್ಲ. ಮೊದಲು ಕೊಲೆ ಮಾಡಿ, ನಂತರ ಬೆಂಕಿ ಹಚ್ಚಿ ಸುಟ್ಟಿರುವ ಸಾಧ್ಯತೆಯೇ ಹೆಚ್ಚು ಎಂಬುದು ಪ್ರತಿಯೊಬ್ಬರ ಗುಮಾನಿ. ಲಕ್ಷ್ಮಿ ಅವರು ಹೇಳುವಂತೆ, ಜಯಕುಮಾರ್ ತನ್ನೆರಡು ಎಳೆಯ ಮಕ್ಕಳನ್ನು ಬಿಟ್ಟು ಸಾಯುವಂತಹ ವ್ಯಕ್ತಿಯಲ್ಲ.

ಈ ಎಲ್ಲವನ್ನೂ ಗಮನಿಸಿದರೆ ಇಲ್ಲಿ ಪೊಲೀಸರು ತರಾತುರಿಯಲ್ಲಿ ಪ್ರಕರಣವನ್ನು ಮುಗಿಸಿಬಿಡುವ ಧಾವಂತದಲ್ಲಿ ಇದ್ದಂತೆ ತೋರುತ್ತದೆ. ”ನನ್ನ ಗಂಡ ಆತ್ಮಹತ್ಯೆ ಮಾಡಿಕೊಂಡಿಲ್ಲ, ಕೊಲೆಯಾಗಿದ್ದಾರೆ” ಎಂದು ಲಕ್ಷ್ಮಿ ಮರುದೂರು ನೀಡಿದ್ದಾರೆ. ಮತ್ತೊಂದೆಡೆ ಆರೋಪಿ ಅನಿಲ್ ಕುಮಾರನ ಬಂಧನವೂ ಆಗಿದೆ. ಕೊಲೆ ಪ್ರಕರಣವೆಂದೇ ಪರಿಗಣಿಸಬೇಕೆಂದು ಮೇ 27ರಂದು ಕೆ.ಆರ್.ಪೇಟೆ ಚಲೋ ಹೋರಾಟವನ್ನು ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿವೆ. ಸಹಜವಾಗಿ ದಾಖಲಾಗಬೇಕಿದ್ದ ಕೊಲೆ ಪ್ರಕರಣಕ್ಕೆ ಇಷ್ಟೆಲ್ಲ ಹರಸಾಹಸ ಪಡಬೇಕಾಗಿರುವುದು, ಇದು ಮತ್ತೊಂದು ಕಂಬಾಲಪಲ್ಲಿ ಪ್ರಕರಣವೆಂದು ದಲಿತರು ದುಃಖಿಸುವಂತಾಗಿರುವುದು ನಮ್ಮ ವ್ಯವಸ್ಥೆಯ ಗಾಯಗಳೇ ಸರಿ.

ಈ ಪ್ರಕರಣದಲ್ಲಿ ಪೊಲೀಸರು ಕರ್ತವ್ಯಲೋಪ ಎಸಗಿರುವುದು ಮೇಲುನೋಟಕ್ಕೇ ಕಾಣುತ್ತಿದೆ. ತಪ್ಪಿತಸ್ಥ ಪೊಲೀಸರ ಅಮಾನತಿಗೆ ಸರ್ಕಾರ ಕ್ರಮ ವಹಿಸುವ ಜರೂರು ಇದೆ. ಇದರ ಜೊತೆಗೆ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದೆ. ಕೋಮು ಆಯಾಮದಲ್ಲಿ ಕೊಲೆಗಳಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಯಾವುದೇ ತನಿಖೆ ನಡೆಸದೆ ಸಂತ್ರಸ್ತ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರವನ್ನು ಈ ಹಿಂದೆ ನೀಡಿದೆ. ದಲಿತರ ಕೊಲೆಗಳಾದ ಸಂದರ್ಭದಲ್ಲಿ ಇಂತಹದ್ದೇ ಕ್ರಮ ತೆಗೆದುಕೊಳ್ಳುವುದು ಮಾನವೀಯ ನಡೆಯಾಗುತ್ತದೆ. ಯಾವುದೇ ಜಾತಿ, ಜನಾಂಗ, ಧರ್ಮದವರ ಜೀವವಾದರೂ ಒಂದೇ ಎಂಬ ಸಂದೇಶವನ್ನು ನೀಡುವ ನಿಟ್ಟಿನಲ್ಲಿ ಜಯಕುಮಾರ್ ಕುಟುಂಬಕ್ಕೆ 25 ಲಕ್ಷ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಬೇಕು. ಎಷ್ಟೇ ಕಾನೂನಿನ ರಕ್ಷಣೆ ಇದ್ದರೂ ದಲಿತರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ದುಷ್ಟ ಜಾತಿಗ್ರಸ್ತ ಮನಸ್ಥಿತಿಗೆ ಇನ್ನಾದರೂ ಮದ್ದು ಹುಡುಕಿಕೊಳ್ಳಬೇಕಾಗಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....