ಈ ದಿನ ಸಂಪಾದಕೀಯ | ʼವಂದೇ ಮಾತರಂ’ವಿವಾದ; ಪರಿವಾರ- ಪ್ರಧಾನಿ ಪೋಣಿಸಿದ ಸುಳ್ಳುಗಳ ಬೊಂತೆ

Date:

ಸಾವರ್ಕರ್ ಆಡಿದ್ದ ಎರಡು ದೇಶಗಳ ಮಾತನ್ನು ಕಾಂಗ್ರೆಸ್ಸಿಗರು ಯಾರಾದರೂ ಆಡಿದ್ದಿದ್ದರೆ  ಅವರನ್ನು ಚಿಂದಿ ಎಬ್ಬಿಸಲು ಪರಿವಾರ- ಪ್ರಧಾನಿ ಅರೆ ನಿಮಿಷವೂ ಹಿಂಜರಿಯುತ್ತಿರಲಿಲ್ಲ. ಸಾವರ್ಕರ್ ಲೋಪವನ್ನು ಮುಚ್ಚಿಕೊಳ್ಳಲು  ಕಪೋಲಕಲ್ಪಿತ ಸುಳ್ಳುಗಳನ್ನು ಸೃಷ್ಟಿಸಿ, ಎಂದಿನಂತೆ ಅಪಪ್ರಚಾರದ ಪ್ರವಾಹವನ್ನೇ ಹರಿಸತೊಡಗಿದೆ.

ವಂದೇ ಮಾತರಂ ಗೀತೆಗೆ 1937ರಲ್ಲಿ ಕತ್ತರಿ ಹಾಕಿದ ಕಾಂಗ್ರೆಸ್ ಕೃತ್ಯವೇ ದೇಶ ವಿಭಜನೆಗೆ ಬೀಜ ಬಿತ್ತಿತು ಎಂದು ದೂರಿದ್ದಾರೆ  ಪ್ರಧಾನಮಂತ್ರಿ. ದೇಶವು ಭಾರತ ಮತ್ತು ಪಾಕಿಸ್ತಾನವಾಗಿ ಎರಡು ಹೋಳಾಗಲು ಕಾಂಗ್ರೆಸ್ಸೇ ಕಾರಣ ಎಂದು ದೂಷಿಸಿದ್ದಾರೆ ಕಾಳಿಗಿಂತ, ಜೊಳ್ಳೇ ತುಂಬಿ ತುಳುಕಿರುವ ಆಪಾದನೆಯಿದು.

ಕಾಂಗ್ರೆಸ್ ಅಳವಡಿಸಿಕೊಂಡಿದ್ದ ವಂದೇ ಮಾತರಂ ಗೀತೆಯ ಸ್ವರೂಪವು ಕೂಡಿಸಿ ಕರೆದೊಯ್ಯುವುದಾಗಿತ್ತೇ ವಿನಾ ಒಡೆಯುವ ಉದ್ದೇಶದ್ದಾಗಿರಲಿಲ್ಲ. ಮೂಲ ವಂದೇ ಮಾತರಂ ಗೀತೆಯ ಮೊದಲ ಎರಡು ಪ್ಯಾರಾಗಳು ಈಗಲೂ ಜನ ಗಣ ಮನದೊಂದಿಗೆ ದೇಶದ ಅಧಿಕೃತ ಗೀತೆಯಾಗಿ ಉಳಿದಿದೆ. ಉಳಿದ ಭಾಗಗಳನ್ನು ಕೈಬಿಟ್ಟದ್ದೇ ದೇಶದ ಸರ್ವಜನರ ಮನಸುಗಳಲ್ಲಿ ಈ ಗೀತೆ ಉಳಿದು ಬೆಳಗಲು ಕಾರಣ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಗೀತೆಯನ್ನು ಯಾವ ರೂಪದಲ್ಲಿ ಉಳಿಸಿಕೊಂಡಿದ್ದರೂ ದೇಶವಿಭಜನೆಯನ್ನು ತಪ್ಪಿಸುವುದು ಸಾಧ್ಯವಿರಲಿಲ್ಲ. ಯಾಕೆಂದರೆ ಅದಕ್ಕೆ ಕಾರಣಗಳು ಬೇರೆಯೇ ಆಗಿದ್ದವು. ಅವುಗಳ ಮೇಲೆ ಸಂಘ ಪರಿವಾರ ಸದ್ಯಕ್ಕೆ ಜಾಣತನದ ಮುಸುಕು ಹೊದಿಸಿದೆ.  

ಬಂಕಿಮಚಂದ್ರ ಚಟರ್ಜಿ ಅವರು 1875ರಲ್ಲಿ ಬರೆದ ಗೀತೆ ‘ವಂದೇ ಮಾತರಂ. ಏಳು ವರ್ಷಗಳ ನಂತರ 1882ರಲ್ಲಿ ಬಂಕಿಮರು ರಚಿಸಿದ ಆನಂದಮಠ ಕಾದಂಬರಿಯಲ್ಲಿ ಈ ಗೀತೆಯನ್ನು ಅಳವಡಿಸಿದರು. ‘ತಾಯೇ ನಿನಗೆ ವಂದಿಸುವೆ’ ಎಂಬುದೇ ವಂದೇ ಮಾತರಂನ ಅರ್ಥ. ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯಾಗಿ ಪರಿಣಮಿಸಿದ್ದ ಈ ಗೀತೆ ವ್ಯಾಪಕ ಜನಪ್ರಿಯತೆ ಗಳಿಸಿತ್ತು. ಹಿಂದುಗಳು ಮತ್ತು ಮುಸಲ್ಮಾನರಿಬ್ಬರೂ ಗೀತೆಯನ್ನು ಹಾಡುತ್ತಿದ್ದರು. 1937ರ ಹೊತ್ತಿಗೆ ಮುಸ್ಲಿಮ್ ಲೀಗ್ ವಿರೋಧಿಸುತ್ತದೆ.

ಮುಸಲ್ಮಾನರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಜೊತೆಗೆ ಕರೆದೊಯ್ಯುವುದು ಕಾಂಗ್ರೆಸ್ ಉದ್ದೇಶವಾಗಿತ್ತು. ಈ ದಿಸೆಯಲ್ಲಿ ಅವರಿಗೆ ತೋರಿದ ರಿಯಾಯಿತಿಯಿದು. ದೇಶವಿಭಜನೆಯ ನಿಜ ಬೀಜಗಳನ್ನು ಬಿತ್ತಿದ್ದು ಈ ರಿಯಾಯಿತಿ ಅಲ್ಲ, ಬದಲಾಗಿ 1940ರಲ್ಲಿ ಮುಸ್ಲಿಮ್ ಲೀಗ್ ನ ಲಾಹೋರ್ ಅಧಿವೇಶನದಲ್ಲಿ ಕೈಗೊಳ್ಳಲಾದ ಗೊತ್ತುವಳಿ. ಮುಸಲ್ಮಾನರಿಗಾಗಿ ಪ್ರತ್ಯೇಕ ದೇಶಕ್ಕಾಗಿ ಆಗ್ರಹಿಸಿತ್ತು ಈ ಗೊತ್ತುವಳಿ.

ಇದನ್ನೂ ಓದಿ ಈ ದಿನ ಸಂಪಾದಕೀಯ | ‘ಜನ ಗಣ ಮನ’ಕ್ಕೆ ಬಿಜೆಪಿ ತಿರಸ್ಕಾರ; ರವೀಂದ್ರನಾಥ ಟ್ಯಾಗೋರ್‌ಗೆ ಅಪಚಾರ!

ಬ್ರಿಟಿಷ್ ಸರ್ಕಾರದಿಂದ ಮತ್ತೆ ಮತ್ತೆ ಕ್ಷಮಾಪಣೆ ಕೋರಿ ಪಿಂಚಣಿ ಪಡೆಯುತ್ತಿದ್ದ ವಿನಾಯಕ ದಾಮೋದರ ಸಾವರ್ಕರ್ ಅವರು ಭಾರತದಲ್ಲಿ ಅದಾಗಲೇ ಎರಡು ರಾಷ್ಟ್ರಗಳಿರುವ ಮಾತನ್ನು ಹಲವು ಬಾರಿ ಆಡಿದ್ದರು. ಆದರೆ ಈ ‘ಎರಡೂ ದೇಶಗಳು’ ಒಂದೇ ದೇಶವಾಗಿ ಉಳಿಯಬೇಕು, ಒಂದೇ ಸಂವಿಧಾನದ ಕೆಳಗೆ ಬದುಕಬೇಕು, ಅಲ್ಲಿ ಹಿಂದು ರಾಷ್ಟ್ರಕ್ಕೇ ಪ್ರಾಮುಖ್ಯತೆ ಇರಬೇಕು ಎಂದಿದ್ದರು.

ಸಾವರ್ಕರ್ ಆಡಿದ್ದ ಎರಡು ದೇಶಗಳ ಮಾತನ್ನು ಕಾಂಗ್ರೆಸ್ಸಿಗರು ಯಾರಾದರೂ ಆಡಿದ್ದಿದ್ದರೆ ಸಂಘಪರಿವಾರ ಅವರನ್ನು ಚಿಂದಿ ಎಬ್ಬಿಸಲು ಹಿಂಜರಿಯುತ್ತಿರಲಿಲ್ಲ. ಸಾವರ್ಕರ್ ತೂತನ್ನು ಮುಚ್ಚಿಕೊಳ್ಳಲು ಇತರರ ವಿರುದ್ಧ ಆಕ್ರಮಣಕಾರಿ ದಾಳಿ ನಡೆಸಿದೆ. ಕಪೋಲಕಲ್ಪಿತ ಸುಳ್ಳುಗಳನ್ನು ಹರಿಯಬಿಟ್ಟು ಅಪಪ್ರಚಾರದ ಪ್ರವಾಹ ಸೃಷ್ಟಿಸತೊಡಗಿದೆ.

1908ರಲ್ಲಿ ಅಖಿಲಭಾರತ ಮುಸ್ಲಿಮ್ ಲೀಗ್ ನ ನಾಯಕ ಸರ್ ಸೈಯದ್ ಅಹ್ಮದ್ ಖಾನ್ ವಂದೇ ಮಾತರಂ ನ್ನು ವಿರೋಧಿಸುತ್ತಾರೆ. ರಾಷ್ಟ್ರವಾದದ ಮುಸುಕಿನಲ್ಲಿ ಹಿಂದೂ ರಾಷ್ಟ್ರವಾದವನ್ನು ಬೋಧಿಸಲಾಗುತ್ತಿದೆಯೆಂದು ಆಕ್ಷೇಪಿಸುತ್ತಾರೆ. ಮುಸ್ಲಿಮ್ ವಿರೋಧದ ನಡುವೆ ಕಾಂಗ್ರೆಸ್, 1937ರಲ್ಲಿ ವಂದೇ ಮಾತರಂ ನ ಮೊದಲ ಎರಡು ಪ್ಯಾರಾಗಳನ್ನು ಮಾತ್ರ ಅಧಿಕೃತವಾಗಿ ಒಪ್ಪಿಕೊಂಡು ಉಳಿದ ಭಾಗಗಳನ್ನು ಕೈಬಿಡುತ್ತದೆ. ಮೊದಲ ಎರಡು ಪ್ಯಾರಾಗಳು ಹೀಗಿವೆ-ವಂದೇ ಮಾತರಂ, ವಂದೇ ಮಾತರಂ, ಸುಜಲಾಂ ಸುಫಲಾಂ ಮಲಯಜ ಶೀತಲಾಂ, ಸಸ್ಯಶಾಮಲಾಂ ಮಾತರಂ, ವಂದೇ ಮಾತರಂ, ಶುಭ್ರ ಜ್ಯೋತ್ಸ್ನಾ ಪುಲಕಿತ ಯಾಮಿನೀಂ, ಪುಲ್ಲಕುಸುಮಿತ ದ್ರೂಮದಲ ಶೋಭಿನೀಮ್, ಸುಹಾಸಿನೀಮ್, ಸುಮಧುರ ಭಾಷಿಣೀಂ, ಸುಖದಾಮ್ ವರದಾಮ್ ಮಾತರಂ, ವಂದೇ ಮಾತರಂ.

ಗೀತೆಗೆ ವಿರೋಧದ ಹಿನ್ನೆಲೆಯಲ್ಲಿ 1927ರಲ್ಲಿ ಪರಿಶೀಲನಾ ಸಮಿತಿಯೊಂದನ್ನು ರಚಿಸಿತು ಕಾಂಗ್ರೆಸ್. ರವೀಂದ್ರನಾಥ ಟ್ಯಾಗೋರ್, ನೆಹರೂ, ಸುಭಾಷ್ ಚಂದ್ರ ಬೋಸ್ ಅವರು ಈ ಸಮಿತಿಯಲ್ಲಿದ್ದರು. ಆನಂದಮಠ ಕಾದಂಬರಿಯನ್ನು ಇಂಗ್ಲಿಷ್ ಅನುವಾದದಲ್ಲಿ ಓದಿದ ನೆಹರು, ಟ್ಯಾಗೋರರಿಗೆ ಪತ್ರ ಬರೆದರು. ಕಾದಂಬರಿಯುವ ಮುಸಲ್ಮಾನರಿಗೆ ಕಿರಿಕಿರಿ ಉಂಟು ಮಾಡುತ್ತದೆ ಎಂದರು. ನೆಹರು ಮತ್ತು ಬೋಸ್ ಇಬ್ಬರೂ ಟ್ಯಾಗೋರ್ ಅವರೇ ಈ ವಿಷಯಕ್ಕೆ ಪರಿಹಾರ ಸೂಚಿಸಬಲ್ಲರೆಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಟ್ಯಾಗೋರ್ ಅವರೇ ಮೊದಲ ಬಾರಿಗೆ ಈ ಗೀತೆಯನ್ನು ರಾಗಕ್ಕೆ ಅಳವಡಿಸಿ ಕಾಂಗ್ರೆಸ್ ಅಧಿವೇಶನವೊಂದರಲ್ಲಿ ಹಾಡಿದ್ದರು. ನೆಹರು ಗೆ ಬರೆದ ಉತ್ತರದಲ್ಲಿ ಟ್ಯಾಗೋರ್ ಹೇಳುತ್ತಾರೆ- ಗೀತೆಯ ಮೊದಲ ಭಾಗ ತಾಯ್ನಾಡನ್ನು ಕುರಿತು ಕೋಮಲ ಭಕ್ತಿಪೂರ್ವಕ ಭಾವನೆಯನ್ನು ಪ್ರಕಟಿಸುತ್ತದೆ. ಆದರೆ ಇಡೀ ಗೀತೆಯು ಮುಸಲ್ಮಾನರ ಭಾವನೆಗೆ ನೋವುಂಟು ಮಾಡುತ್ತದೆ.

ಸುಭಾಷ್ ಚಂದ್ರ ಬೋಸರಿಗೆ ಬರೆದ ಪತ್ರದಲ್ಲಿ ಟ್ಯಾಗೋರ್ ಇನ್ನಷ್ಟು ನಿಚ್ಚಳವಾಗಿ ಹೇಳುತ್ತಾರೆ- ವಂದೇಮಾತರಂ ನ ಒಳತಿರುಳು ದೇವತೆ ದುರ್ಗೆಯ ಸ್ತುತಿಯೇ ಆಗಿದೆ. ದುರ್ಗೆ ಮತ್ತು ಬಂಗಾಳ ಒಂದೇ ಎಂದು ಬಂಕಿಮರು ಮುಕ್ತಾಯದ ಹಂತದಲ್ಲಿ ಬಿಂಬಿಸಿದರೂ, ವಿಗ್ರಹಾರಾಧನೆ ನಿಷಿದ್ಧವಿರುವ ಮುಸಲ್ಮಾನರು ದಶಬಾಹುಗಳ ದೇವಿಯನ್ನು ಸ್ವದೇಶವೆಂದು  ಪೂಜಿಸುತ್ತಾರೆಂದು ನಿರೀಕ್ಷಿಸಲಾಗದು

ಕೋಮು ಸೌಹಾರ್ದದ ಬದಲು ಕೋಮುಗಳ ನಡುವಣ ಹಗೆಗೆ ಈ ಗೀತೆ ಕಾರಣ ಆಗಬಾರದು ಎಂಬುದು ಗಾಂಧೀಜಿಯ ಅಂತಿಮ ನಿಲುವಾಗಿತ್ತು. ಮುಸಲ್ಮಾನರು ಈ ಗೀತೆಯ ಐತಿಹಾಸಿಕ ಪ್ರಾಮುಖ್ಯತೆಯನ್ನು ಗ್ರಹಿಸಬೇಕೆಂದು ಮುಸಲ್ಮಾನರಲ್ಲಿ ಮನವಿ ಮಾಡಿಕೊಂಡರು ಮತ್ತು ಅದೇ ಸಂದರ್ಭದಲ್ಲಿ ಈ ಗೀತೆಯ ಹೇರಿಕೆ ಸಲ್ಲದೆಂದೂ ಗಾಂಧೀ ಹೇಳಿದ್ದರು.

ಗಾಂಧೀಜಿಯ ಕೊಂದ ನಾಥೂರಾಮ ಗೋಡ್ಸೆ ಕೂಡ ವಂದೇ ಮಾತರಂ ನ ಉಳಿದ ಭಾಗಗಳಿಗೆ ಮುಸ್ಲಿಮರ ವಿರೋಧವನ್ನು ವಿರೋಧಿಸಿದ್ದ. “ವಂದೇ ಮಾತರಂ ಗೀತೆಯನ್ನುಕೆಲವು ಮುಸಲ್ಮಾನರು ವಿರೋಧಿಸಿದ್ದರೆಂಬ ಕಾರಣಕ್ಕಾಗಿ, ಈ ಗೀತೆಯ ಗಾಯನವನ್ನೇ ನಿಲ್ಲಿಸಿದ್ದು ಮಹಾತ್ಮನ ಕುಕೃತ್ಯವೇ ಸರಿ. ವಂದೇ ಮಾತರಂ ರಾಷ್ಟ್ರಗೀತೆಯ ಹಿಂದಿರುವ ರಾಷ್ಟ್ರೀಯ ಭಾವನೆಗೆ ಗಾಂಧೀಜಿ ತೋರಿದ ತೀವ್ರ ಅನಾದರವಿದು. ಇದೀಗ ರವೀಂದ್ರನಾಥ ಟ್ಯಾಗೋರರ ಜನ ಗಣ ಮನವನ್ನು ರಾಷ್ಟ್ರಗೀತೆಯಾಗಿ ಅಳವಡಿಸುವಂತೆ ಹೇಳಲಾಗಿದೆ. ಇದಕ್ಕಿಂತ ನೈತಿಕಸ್ಥೈರ್ಯವನ್ನು ಕುಗ್ಗಿಸುವ ದಯನೀಯ ಕೃತ್ಯ ಮತ್ತೊಂದಿದೆಯೇ” ಎಂದು ಪ್ರಶ್ನಿಸಿದ್ದ.

1950ರ ಜನವರಿ 24ರಂದು ‘ವಂದೇ ಮಾತರಂ..’ ನ್ನು ಗಣರಾಜ್ಯ ಗೀತೆಯನ್ನಾಗಿ ಅಂಗೀಕರಿಸಿತು. ರಾಷ್ಟ್ರಗೀತೆಗೆ ಸರಿಸಮನಾಗಿ ಈ ಗೀತೆಯನ್ನು ಗೌರವಿಸಬೇಕು ಎಂದು ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಹೇಳಿದ್ದರು.

ವಂದೇಮಾತರಂ ನ ಮೊದಲ ಎರಡು ಸಾಲುಗಳು ತಾಯಿ ಮತ್ತು ತಾಯಿನಾಡನ್ನು ಆವಾಹಿಸುತ್ತವೆ. ಅವುಗಳಲ್ಲಿ ಯಾವುದೇ ಧರ್ಮದ ಇಂಗಿತವಿಲ್ಲ, ನಂತರದ ಭಾಗಗಳು ಹಿಂದೂ ಧರ್ಮದ ದೇವತೆಗಳನ್ನು ಉಲ್ಲೇಖಿಸುತ್ತದೆ. ಹೀಗಾಗಿ ಉಳಿದ  ಸಾಲುಗಳನ್ನು ಕೈಬಿಡಲಾಗುತ್ತದೆ.

ವಂದೇ ಮಾತರಂ ಗೀತೆಗೆ ಕತ್ತರಿ ಆಡಿಸಿದ್ದು ಜಾತ್ಯತೀತತೆಯ ಔದಾರ್ಯ ನಡವಳಿಕೆಯೇ ವಿನಾ ದೇಶವನ್ನು ಒಡೆಯುವ ನಡೆ ಅಲ್ಲ ಎಂದು ಇತಿಹಾಸಕಾರರಾದ ಬಿಪನ್ ಚಂದ್ರ, ಸಬ್ಯಸಾಚಿ ಭಟ್ಟಾಚಾರ್ಯ, ತನಿಕಾ ಸರ್ಕಾರ್ ಮುಂತಾದವರು ವಾದಿಸಿದ್ದಾರೆ

ಭಾರತೀಯ ರಾಷ್ಟ್ರವಾದವನ್ನು, ಮುಸ್ಲಿಮ್ ವಿರೋಧಿ ಅಂತರಾತ್ಮದ ಹಿಂದುತ್ವ ರಾಷ್ಟ್ರವಾದದ ಸಂಕುಚಿತ ವ್ಯಾಪ್ತಿಗೆ  ಇಳಿಸಿ ತಮ್ಮ ಕಾದಂಬರಿಗಳಲ್ಲಿ ಬಿಂಬಿಸಿದವರು ಎಂಬ ಟೀಕೆಯನ್ನು ಬಂಕಿಮಚಂದ್ರ ಎದುರಿಸಿದ್ದಾರೆ.

ಜನ ಗಣ ಮನವನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಿದ ಸಂವಿಧಾನಸಭೆಯ ನಿರ್ಧಾರ ಆರೆಸ್ಸೆಸ್ ಗೆ ಹಿಡಿಸಿರಲಿಲ್ಲ. ವಂದೇ ಮಾತರಂ ರಾಷ್ಟ್ರಗೀತೆಯಾಗಬೇಕಿತ್ತು ಎಂದು ಬಯಸಿತ್ತು. ಮನುಸ್ಮೃತಿಯೇ ಸಂವಿಧಾನ ಆಗಬೇಕೆಂದು ವಾದಿಸಿತ್ತು. ಸಾವರ್ಕರ್, ಹೆಡಗೇವಾರ್ ಗೋಲ್ವಲ್ಕರ್ ಎಲ್ಲರೂ ಬ್ರಿಟಿಷರ ಪರವಾಗಿದ್ದವರು.

ಚಾತುರ್ವರ್ಣ್ಯದ ಆಧಾರದಲ್ಲಿ ಬ್ರಾಹ್ಮಣ ಶ್ರೇಷ್ಠತ್ವದ ಹಿಂದುತ್ವವಾದಿ ರಾಷ್ಟ್ರವನ್ನು ಸ್ಥಾಪಿಸುವುದೇ ಸಂಘಪರಿವಾರದ ಗುರಿಯಾಗಿರುವುದು ಗುಟ್ಟೇನೂ ಅಲ್ಲ.

ಈ ಹಳೆಯ ವಿವಾದವನ್ನು ಸಂಘಪರಿವಾರ ಈಗ ಮತ್ತೆ ಬಡಿದೆಬ್ಬಿಸಿದೆ. ಕೋಮುಧೃವೀಕರಣದ ಕುದಿ ಕೊಪ್ಪರಿಗೆ ಧಗಧಗಿಸಿಯೇ ಇರಿಸುವುದು ತನ್ನ ರಾಜಕಾರಣಕ್ಕೆ ಅನಿವಾರ್ಯ. ಬಾಬರಿ ಮಸೀದಿಯನ್ನು ಕೆಡವಿ ಆ ಸ್ಥಳದಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಆಯಿತು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೆಯ ಅನುಚ್ಛೇದವನ್ನು ರದ್ದು ಮಾಡಿತು. ಸಮಾಜವನ್ನು ಒಡೆಯುವ ಕಾರ್ಯಸೂಚಿಗಳು ಖಾಲಿಯಾದಾಗ ಹೊಸತರ ಹುಡುಕಾಟ ನಡೆಸಿದೆ.

ವಂದೇ ಮಾತರಂ ನೆವದಲ್ಲಿ ರಾಜಕೀಯ ವಿರೋಧಿಗಳನ್ನು ಹಣಿಯಲು ಹತಾರುಗಳನ್ನು ಮಸೆದು ಹರಿತಗೊಳಿಸತೊಡಗಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....