ಈ ದಿನ ಸಂಪಾದಕೀಯ | ಭಾರತ ಮಾತೆಯನ್ನು ಪೂಜಿಸುವ ಬಿಜೆಪಿಯವರು ʼಮಾತೆʼಯರನ್ನು ಗೌರವಿಸುವುದು ಯಾವಾಗ?

Date:

ಬಿಜೆಪಿ ನಾಯಕರಿಗೆ ಹೀಗೆ ಬಾಯಿಗೆ ಬಂದಂತೆ ಮಾತನಾಡಿ ನಂತರ ಕೋರ್ಟ್‌ ಮೊರೆ ಹೋಗುವುದು, ಅಲ್ಲಿಂದ ಪ್ರಕರಣಕ್ಕೆ ತಡೆ ತರುವುದು ಗೊತ್ತಿದೆ. ಆ ಧೈರ್ಯದಿಂದಲೇ ಅವರು ಮತ್ತೆ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತಿದ್ದಾರೆ. ಆದರೆ ಇಂತಹ ತಪ್ಪುಗಳನ್ನು ಪುನರಾವರ್ತನೆಯಾಗಿ ಮಾಡುವವರಿಗೆ ಕೋರ್ಟ್‌ಗಳೇ ಸರಿಯಾದ ಪಾಠ ಕಲಿಸಬೇಕಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂದರೆ ಅವರು ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಎಲ್ಲ ಅಧಿಕಾರಿಗಳಿಗೆ ಮುಖ್ಯಸ್ಥರು. ಅಂತಹ ಅಧಿಕಾರಿ ಶಾಲಿನಿ ರಜನೀಶ್‌ ಹಗಲು ಸಿಎಂಗೆ, ರಾತ್ರಿ ಸರ್ಕಾರಕ್ಕೆ ಕೆಲಸ ಮಾಡುತ್ತಾರೆ ಎಂದು ಬಿಜೆಪಿಯ ಎಂಎಲ್‌ಸಿ ಎನ್‌ ರವಿಕುಮಾರ್‌ ಅವರ ಕೀಳು ಅಭಿರುಚಿಯ ಹೇಳಿಕೆ ಅವರಿಗೆ ಹೆಣ್ಣುಮಕ್ಕಳ ಬಗ್ಗೆ ಇರುವ ಅಗೌರವ, ಅಸಡ್ಡೆಯ ಮನಸ್ಥಿತಿ ತೋರಿಸುತ್ತದೆ. ಕಳೆದ ಸೋಮವಾರ ಸರ್ಕಾರದ ವಿರುದ್ಧ ವಿಧಾನಸೌಧದ ಆವರಣದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುವಾಗ ರವಿಕುಮಾರ್‌ ಕೀಳುಮಟ್ಟದ ಜೋಕ್‌ ಹೇಳಿ ಜೋರಾಗಿ ನಕ್ಕಿದ್ದಾರೆ. ಅವರ ಬಳಿಯೇ ಇದ್ದ ಪೊಲೀಸ್‌ ಅಧಿಕಾರಿಯೂ ನಕ್ಕು ಸುಮ್ಮನಾಗಿದ್ದಾರೆ. ಪೊಲೀಸ್‌ ಅಧಿಕಾರಿಗೆ ತಾನು ಚೀಫ್‌ ಸೆಕ್ರೇಟರಿಯ ಅಡಿಯಲ್ಲೇ ಬರುತ್ತೇನೆ ಎಂಬ ಪ್ರಜ್ಞೆ ಇದ್ದಂತಿಲ್ಲ. ಅಷ್ಟೇ ಅಲ್ಲ ಆತನದೂ ಅದೇ ಮನಸ್ಥಿತಿ ಎಂದೂ ಅರ್ಥ ಮಾಡಿಕೊಳ್ಳಬಹುದು.

ರವಿಕುಮಾರ್‌ ಅವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಗುರುವಾರ ಎಫ್‌ಐಆರ್‌ ದಾಖಲಾಗಿದೆ. ಇಂದು (ಶುಕ್ರವಾರ) ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ಎನ್. ರವಿಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಿಜೆಪಿ ನಾಯಕರಿಗೆ ಹೀಗೆ ಬಾಯಿಗೆ ಬಂದಂತೆ ಮಾತನಾಡಿ ನಂತರ ಕೋರ್ಟ್‌ ಮೊರೆ ಹೋಗುವುದು, ಅಲ್ಲಿಂದ ಪ್ರಕರಣಕ್ಕೆ ತಡೆ ತರುವುದು ಗೊತ್ತಿದೆ. ಆ ಧೈರ್ಯದಿಂದಲೇ ಅವರು ಮತ್ತೆ ಮತ್ತೆ ಅದೇ ತಪ್ಪುಗಳನ್ನು ಮಾಡುತ್ತಿದ್ದಾರೆ. ಆದರೆ ಇಂತಹ ತಪ್ಪುಗಳನ್ನು ಪುನರಾವರ್ತನೆ ಮಾಡುವವರಿಗೆ ಕೋರ್ಟ್‌ಗಳೇ ಸರಿಯಾದ ಪಾಠ ಕಲಿಸಬೇಕಿದೆ.

ಕಳೆದ ಬೆಳಗಾವಿ ಅಧಿವೇಶನದ ಕೊನೆಯ ದಿನ ವಿಧಾನ ಪರಿಷತ್ತಿನಲ್ಲಿ ಸದನ ಮುಗಿಯುವ ವೇಳೆಗೆ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ಮಧ್ಯೆ ಮಾತಿನ ಚಕಮಕಿ ನಡೆಯುವಾಗ ರಾಜ್ಯದ ಏಕೈಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಘನತೆಗೆ ಧಕ್ಕೆ ತರುವ ಹೇಳಿಕೆ ನೀಡಿದ್ದವರು ಬಿಜೆಪಿಯ ಸಿ ಟಿ ರವಿ. ನಂತರ ಪೊಲೀಸರು ಬಂಧಿಸಿ ಕೋರ್ಟ್‌ ಆದೇಶದ ಮೇಲೆ ಬಿಡುಗಡೆ ಮಾಡಿದ್ದರು. ಆದರೆ ಈ ಪ್ರಕರಣದ ವಿಚಾರಣೆಗೆ ಹೈಕೋರ್ಟ್‌ ತಡೆ ನೀಡಿದೆ. ಒಬ್ಬ ಮಹಿಳೆಯ ಘನತೆಗೆ ಧಕ್ಕೆ ತರುವ ಪದ ಬಳಸಿದ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷೆ ಕೊಡಲು ಕೋರ್ಟ್‌ಗಳೇ ತಯಾರಿಲ್ಲ. ಸಿ ಟಿ ರವಿ ವಿಧಾನ ಪರಿಷತ್ತಿನೊಳಗೆ ಸಚಿವೆಗೆ ಒಂದಲ್ಲ ಏಳು ಬಾರಿ ʼಪ್ರಾಸ್ಟಿಟ್ಯೂಟ್‌ʼ ಎಂಬ ಪದ ಬಳಸಿದ್ದಾರೆ ಎಂಬುದಕ್ಕೆ ವಿಡಿಯೋ ದಾಖಲೆ ಇದೆ. ಆದರೆ ಆತನ ವಿರುದ್ಧ ವಿಧಾನಪರಿಷತ್‌ ಸಭಾಪತಿ ಯಾವುದೇ ಶಿಸ್ತು ಕ್ರಮ ಜರುಗಿಸಲು ಮುಂದಾಗುವ ಬದಲು ಆರೋಪಿಯ ಪರವಾಗಿ ರಾಜಿಗೆ ಯತ್ನಿಸಿದ್ದರು. ಅಷ್ಟು ಹಿರಿಯ ರಾಜಕಾರಣಿ, ಸಭಾಪತಿ ಬಸವರಾಜ ಹೊರಟ್ಟಿ ಒಬ್ಬ ಸ್ತ್ರೀನಿಂದಕನ ಪರ ನಿಲ್ಲದೇ ಶಿಸ್ತುಕ್ರಮ ಜರುಗಿಸಿದ್ದರೆ ಅದು ಉಳಿದವರಿಗೆ ಪಾಠವಾಗುತ್ತಿತ್ತು.

ಈ ಪ್ರಕರಣ ಮಾಸುವ ಮುನ್ನವೇ, ಕಲಬುರ್ಗಿಯಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಪ್ರತಿಭಟನೆ ನಡೆಸುವಾಗ ಇದೇ ರವಿಕುಮಾರ್‌ ಅಕಾರಣವಾಗಿ ಅಲ್ಲಿನ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರನ್ನು ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಪಾಲಿಸ್ತಾನದಿಂದ ಬಂದವರು ಎಂದು ನಿಂದಿಸಿದ ಪ್ರಕರಣದಲ್ಲಿ ಕೋರ್ಟ್‌ ನಿಂದ ಛೀಮಾರಿ ಹಾಕಿಸಿಕೊಂಡು, ಡಿಸಿ ಮುಂದೆ ಹೋಗಿ ಕ್ಷಮೆ ಕೇಳಿದ್ದರು. ಇದೇ ಫೌಜಿಯಾ ತರನ್ನುಮ್ ಅವರನ್ನು ಭಾರತ ಚುನಾವಣಾ ಆಯೋಗವು 2024-25ನೇ ಸಾಲಿನ ಅತ್ಯುತ್ತಮ ಚುನಾವಣಾ ಪದ್ಧತಿ ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದಿದ್ದಕ್ಕಾಗಿ ಪ್ರಶಸ್ತಿ ನೀಡಿ ಗೌರವಿಸಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಪ್ರಶಸ್ತಿ ಪ್ರದಾನ ಮಾಡಿದ್ದರು. ಅಂತಹ ಒಬ್ಬ ಸಮರ್ಥ ಅಧಿಕಾರಿಯ ಬಗ್ಗೆ ಮಾತನಾಡುವಾಗ ಆಕೆ ಮುಸ್ಲಿಂ ಎಂಬ ಕಾರಣಕ್ಕೆ ಪಾಕಿಸ್ತಾನದಿಂದ ಬಂದವರು ಎಂದು ಅವಮಾನಿಸಿದ್ದು ಬಿಜೆಪಿಯ ನಾಯಕರಲ್ಲಿ ಅಂತರ್ಗತವಾಗಿರುವ ಕೋಮುವಾದಿ ಮನಸ್ಥಿತಿ ಮತ್ತು ಇಸ್ಲಾಮೋಫೋಬಿಯಾ ತೋರಿಸುತ್ತದೆ. ಆದರೆ, ಫೌಜಿಯಾ ಪ್ರಕರಣದಲ್ಲಿ ರವಿಕುಮಾರ್‌ ವಿರುದ್ಧ ಬಿಜೆಪಿ, ವಿಧಾನಪರಿಷತ್‌ ಸಭಾಪತಿ, ಕೋರ್ಟ್‌ ಗಂಭೀರವಾಗಿ ಪರಿಗಣಿಸಿ ಕ್ರಮ ವಹಿಸಿದ್ದರೆ ಶಾಲಿನಿ ರಜನೀಶ್‌ ವಿರುದ್ಧ ಹೀಗೆ ನಿಂದನಾ ಹೇಳಿಕೆ ನೀಡುವಾಗ ಸ್ವಲ್ಪ ಯೋಚಿಸುತ್ತಿದ್ದರು.

ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಮತ್ತು ಪತ್ನಿ ಸುನಂದಾ ಪುಷ್ಕರ್‌ ಸಂಬಂಧದ ಬಗ್ಗೆ ಕೀಳಾಗಿ ಮಾತನಾಡಿದ್ದರು. ʼನೂರು ಕೋಟಿಯ ಗೆಳತಿʼ ಎಂದಿದ್ದರು. ಇದೇ ಚಾಳಿ ಈಗಲೂ ಮುಂದುವರಿದಿದೆ. ಸೋನಿಯಾ ಗಾಂಧಿ ಅವರನ್ನು ಬಾರ್‌ ಡಾನ್ಸರ್‌ ಎಂದು ಕರೆಯುವ ಮೋದಿ ಭಕ್ತಪಡೆ ಆಕೆಯನ್ನು ಈಗಲೂ ಇಟಲಿಯವಳು ಎಂದು ನಿಂದಿಸುತ್ತಿದ್ದಾರೆ. ರಾಹುಲ್‌ ಗಾಂಧಿ ಇಟಲಿ ಮಾತೆಯ ಮಗ ಎಂದು ಹೀಗಳೆಯುತ್ತಿದ್ದಾರೆ. ರಾಷ್ಟ್ರದ ಮೊದಲ ಪ್ರಧಾನಿ ನೆಹರೂ ಪುತ್ರಿ ಪ್ರಧಾನಿ ಇಂದಿರಾ ಅವರ ಸೊಸೆಯಾಗಿ, ಪ್ರಧಾನಿ ರಾಜೀವ್‌ ಗಾಂಧಿ ಪತ್ನಿಯಾಗಿ ಪತಿಯ ಹತ್ಯೆಯ ನಂತರವೂ ಈ ದೇಶದಲ್ಲೇ ಉಳಿದು ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಿದವರು ಸೋನಿಯಾ ಗಾಂಧಿ. ಈ ದೇಶದಲ್ಲಿ 55ವರ್ಷಗಳಿಂದ ನೆಲೆಸಿದ್ದಾರೆ. ನಾಲ್ಕು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದೆಯಾಗಿದ್ದಾರೆ. ಈಗ ರಾಜ್ಯಸಭಾ ಸದಸ್ಯೆ. ಆದರೆ ಆಕೆಯ ಮಾನಹಾನಿ ನಿಂತಿಲ್ಲ. ಮೊನ್ನೆಯಷ್ಟೇ ಸೋನಿಯಾ ಅವರು ಆಸ್ಪತ್ರೆಗೆ ದಾಖಲಾದ ಸುದ್ದಿಗೆ ಬಿಜೆಪಿ ಬೆಂಬಲಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಸಂಭ್ರಮಿಸಿದ್ದರು. ವಿದೇಶದಲ್ಲಿ ಭಾರತೀಯರು ದೇಶದ ಅಧ್ಯಕ್ಷರೋ, ಪ್ರಧಾನಿಗಳೋ ಆದಾಗ ಹೆಮ್ಮೆಯ ಪದಗಳನ್ನುದುರಿಸುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಕ್ತರ ಈ ನಡವಳಿಕೆಯನ್ನು ಒಮ್ಮೆಯೂ ಖಂಡಿಸಿಲ್ಲ.

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಶವಾಸಿಗಳನ್ನು ಒಗ್ಗೂಡಿಸಲು ರಾಷ್ಟ್ರೀಯವಾದಿಗಳು ಬಳಸಿದ ಪದ ʼಮಾತೃಭೂಮಿʼ, ʼಭಾರತಾಂಬೆʼ. ಆದರೆ ಬಿಜೆಪಿ ಮತ್ತು ಆರೆಸ್ಸೆಸ್‌ ಈ ಪದವನ್ನು ಹೈಜಾಕ್‌ ಮಾಡಿ ತಮ್ಮ ದೇಶಪ್ರೇಮದ ಸಂಕೇತದಂತೆ ಬಳಸುತ್ತಿದ್ದಾರೆ. ಹೆಣ್ಣುಮಕ್ಕಳಿಗೆ ಉನ್ನತ ಸ್ಥಾನಮಾನ ಗೌರವ ನೀಡಿದ್ದೇವೆ ಎಂದು ಡಂಗುರ ಸಾರುವ ಬಿಜೆಪಿ ನಾಯಕರ ನಿಜ ಬಣ್ಣ ಆಗಾಗ ಬಯಲಾಗುತ್ತಿರುತ್ತದೆ. ಭಾರತ ಮಾತೆಗೆ ಗೌರವ ಕೊಡುವುದೆಂದರೆ ಭಾರತದೊಳಗಿನ ಮಾತೆಯರಿಗೆ ಗೌರವ ಕೊಡುವುದು ಎಂದು ಅರ್ಥ ಎಂಬ ಸತ್ಯವನ್ನು ಇಂತಹ ನಾಲಿಗೆ ಹರಿಬಿಡುವ ನಾಯಕರಿಗೆ ಅರ್ಥ ಮಾಡಿಸಬೇಕಿದೆ. ಎನ್‌ ರವಿಕುಮಾರ್‌ ಸ್ತ್ರೀವಿರೋಧಿ ಹೇಳಿಕೆ ಇದೇ ಕಡೆಯದಾಗಲಿ. ಅಂತಹ ಪಾಠ ಕಲಿಸುವ ಕೆಲಸ ಕೋರ್ಟ್‌ ಮಾಡಬೇಕಿದೆ.

WhatsApp Image 2025 11 17 at 3.23.18 PM
ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ|ಗುಜರಾತಿನ ದಲಿತರಿಗೆ ಗಗನ ಕುಸುಮವಾಗೇ ಉಳಿದ ನ್ಯಾಯ

ಗುಜರಾತಿನ ಜನಸಂಖ್ಯೆಯಲ್ಲಿ ದಲಿತರ ಪ್ರಮಾಣ ಕಡಿಮೆ. ಶೇ.6.34 ಮಾತ್ರ. ಇಲ್ಲಿ ದಲಿತರಿಗಿಂತ...

ಈ ದಿನ ಸಂಪಾದಕೀಯ | ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್‌!

ಇಂಧನ ಭದ್ರತೆಯನ್ನು ಕಾಪಾಡಿಕೊಳ್ಳಲು ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿಯಿಂದ ಹಾದುಹೋಗಲು ಅವಕಾಶ...

ಈ ದಿನ ಸಂಪಾದಕೀಯ | SIR ಹೆಸರಲ್ಲಿ ಮಹಿಳೆಯರ ಮತದಾನದ ಹಕ್ಕಿನ ಹರಣ ಅಕ್ಷಮ್ಯ

ಕರ್ನಾಟಕದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕಿದೆ. ಎಸ್‌ಐಆರ್‌ ನಡೆಯುವ ಸಮಯದಲ್ಲಿ...

ಈ ದಿನ ಸಂಪಾದಕೀಯ | ಕಾಂಗ್ರೆಸ್ಸಿಗರಿಗೆ ಇಂದಿರಾ ಬೇಕು, ಬಡವರ ಕ್ಯಾಂಟೀನ್ ಬೇಡ

ಶಾಸಕರು, ಸಚಿವರು, ಅಧಿಕಾರಿಗಳು ವಾರಕ್ಕೊಂದು ಸಲವಾದರೂ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ-ತಿಂಡಿ ಮಾಡಬೇಕಿದೆ....