ಸಂಚಾರದಟ್ಟಣೆ ಆತಂಕದಲ್ಲಿ ಪರೀಕ್ಷಾ ಕೇಂದ್ರ ತಲುಪಿದ ಅಭ್ಯರ್ಥಿಗಳು

Date:

  • ಪದಗ್ರಹಣ ಕಾರ್ಯಕ್ರಮ ಸಿಇಟಿ ಮುಗಿದ ನಂತರ ಮಾಡಬಹುದಿತ್ತು
  • ಮಲ್ಯ ರಸ್ತೆ ಬಳಿ ದಟ್ಟಣೆ; ರೋಗಿಗಳಿಗೂ ಟ್ರಾಫಿಕ್ ಕಂಟಕ

ಹಲವು ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಬರೆಯು ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪದಗ್ರಹಣ ಕಾರ್ಯಕ್ರಮ ಒಂದೇ ದಿನ ನಿಯೋಜಿಸಿದ್ದ ಕಾರಣ ಪರೀಕ್ಷಾರ್ಥಿಗಳು ಸಂಚಾರ ದಟ್ಟಣೆಯ ಆತಂಕಕ್ಕೆ ಒಳಗಾಗಿದ್ದರು.

ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಹಿನ್ನೆಲೆ, ಕಂಠೀರವ ಕ್ರೀಡಾಂಗಣದ ವ್ಯಾಪ್ತಿಯಲ್ಲಿರುವ ಕಾಲೇಜುಗಳಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮುಂಜಾನೆ ಎಂಟಕ್ಕೆ ಹಾಜರಿರಲು ಸೂಚಿಸಲಾಗಿತ್ತು.

ಆದರೆ, ಸಂಚಾರ ದಟ್ಟಣೆ ಮಧ್ಯೆ ಪರೀಕ್ಷಾ ಕೇಂದ್ರ ತಲುಪುವುದುದಾದರು ಹೇಗೆ ಎಂದು ಸಿಇಟಿ ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದ್ದರು. ಪರೀಕ್ಷೆ ದಿನವೇ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಸಿದ ಕಾಂಗ್ರೆಸ್‌ನ ನಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಾಗ್ಯುದ್ಧಕ್ಕೆ ಕಾರಣವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಂಚಾರ ದಟ್ಟನೆಯಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಪರೀಕ್ಷಾ ಕೇಂದ್ರಗಳ ಬಳಿ ಪರೀಕ್ಷಾ ಆರಂಭವಾಗುವುದಕ್ಕೂ ಐದಾರು ಗಂಟೆಗಳ ಮುನ್ನವೇ ಹಾಜರಾಗಿದ್ದರು. ಪರೀಕ್ಷಾ ಕೇಂದ್ರಗಳ ಬಳಿ ಬಿಗಿ ಬಂದೋಬಸ್ತ್‌ ಇತ್ತು. ವಿದ್ಯಾರ್ಥಿಗಳು ತಮ್ಮ ದಾಖಲೆಗಳನ್ನು ತೋರಿಸಿದ ನಂತರ ಅವರನ್ನು ಕೇಂದ್ರದ ಒಳಗೆ ಬಿಡಲಾಗುತ್ತಿತ್ತು.

ಕಂಠೀರವ ಕ್ರೀಡಾಂಗಣದ ಪಕ್ಕದಲ್ಲಿರುವ ವಿಠಲ್ ಮಲ್ಯ ರಸ್ತೆಯಲ್ಲಿ ಜನಜಂಗುಳಿ ಜೊತೆಗೆ ದಟ್ಟಣೆ ಹೆಚ್ಚಾಗಿದ್ದು, ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಭಾರಿ ತೊಂದರೆಯಾಗಿದೆ. ಅದಲ್ಲದೆ ರಸ್ತೆತಡೆಯಿಂದಾಗಿ ಮಲ್ಯ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೂ ತೊಂದರೆಯಾಗುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಇಟಿ. 1

ಈ ಬಗ್ಗೆ ವಕೀಲ ವಿನಯ್ ಕೂರಗಾಯಲ ಶ್ರೀನಿವಾಸ ಅವರು ಟ್ವೀಟ್ ಮಾಡಿದ್ದು, ಸಿಇಟಿ ಸಮಯದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ತಪ್ಪು. ಇದನ್ನು ಮಧ್ಯಾಹ್ನ ಅಥವಾ ಸಂಜೆಯೂ ಮಾಡಬಹುದಿತ್ತು. ಸಿಇಟಿ ಬರೆಯುವ  ತುಂಬಾ ಒತ್ತಡದ ಮಧ್ಯೆ, ಪರೀಕ್ಷಾ ಕೇಂಧ್ರಗಳಿಗೆ ತಲುಪುವುದು ಇನ್ನೂ ಸಂಕಷ್ಟಕ್ಕೆ ಸಿಲುಕಿಸುವುದು. ಇದೊಂದು ಅವರ ಭವಿಷ್ಯ ನಿರ್ಣಾಯಕ ಪರೀಕ್ಷೆ. ಪ್ರಮಾಣ ವಚನಕ್ಕಾಗಿ ವಿದ್ಯಾರ್ಥಿಗಳ ಜೀವನವನ್ನು ಇಷ್ಟು ಹಗುರವಾಗಿ ತೆಗೆದುಕೊಂಡರೆ ಹೇಗೆ ?? ಎಂದು ಆರೋಪಿಸಿದ್ದಾರೆ.

ವಿನಯ್

ಕಾಂಗ್ರೆಸ್ ಬಹುಮತ ಪಡೆದು ಜಯಗಳಿಸಿದ ನಂತರ ಇಷ್ಟು ದಿನ ಮುಖ್ಯ ಮಂತ್ರಿ ಯಾರು ಎಂದು ಆಯ್ಕೆ ಮಾಡುವುದಕ್ಕೆ ಸಮಯ ಕಳೆದ ನೀವು ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಇಷ್ಟು ಕಾತುರತೆ ಏಕೆ? ರೋಡ್ ಶೋ ನೀಟ್ ಪರೀಕ್ಷೆ ಅಭ್ಯರ್ಥಿಗಳಿಗೆ ತೊಂದರೆ ಆಗುತ್ತದೆ ಎಂದವರಿಗೆ ಇವತ್ತಿನ ಸಿಇಟಿ ಅಭ್ಯರ್ಥಿಗಳಿಗೆ ಆಗುವ ತೊಂದರೆ ಕಾಣುವುದಿಲ್ಲವೇ? ನಿರ್ದಿಷ್ಟ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮ ಎಂದು ರಿಯಾಯತಿಯೇ? ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

KCET | ಸಿಇಟಿ ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ ದಿನಾಂಕ ವಿಸ್ತರಣೆ

ಸಿಇಟಿ 2026 (KCET) ಅರ್ಜಿ ಸಲ್ಲಿಕೆ, ಶುಲ್ಕ ಪಾವತಿ ಅವಧಿಯನ್ನು ಕರ್ನಾಟಕ...

ಕೆಪಿಎಸ್‌ ಶಾಲೆ ತೆರೆದು ಆರ್‌ಎಸ್‌ಎಸ್‌ಗೆ ಬಲ ಕೊಡಲು ಕಾಂಗ್ರೆಸ್‌ ಹೊರಟಿದೆ : ನಿರಂಜನಾರಾಧ್ಯ ಆಕ್ರೋಶ

“ಬಾಯಿಬಿಟ್ಟರೆ ಸಂವಿಧಾನವನ್ನು ಕಾಪಾಡುತ್ತೇವೆ ಅಂತ ಹೇಳುವ ಕಾಂಗ್ರೆಸ್‌ ಸರ್ಕಾರ, ಸಂವಿಧಾನ ವಿರೋಧಿಯಾಗಿ...

NEP ತಿರಸ್ಕರಿಸಿದ್ದೇವೆ ಎನ್ನುವ ರಾಜ್ಯ ಸರ್ಕಾರ ಇಲ್ಲಿ ಅದನ್ನೇ ಜಾರಿಗೊಳಿಸುತ್ತಿದೆ: ಪಿ ನಿರಂಜನಾರಾಧ್ಯ

ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತಂದವರೇ ಯುಪಿಎ ಸರ್ಕಾರ. ಇಂತಹ ಮಹತ್ವದ...