‘Kuku TV’ ಮಾದರಿ ಆ್ಯಪ್‌ಗಳ ‘ಬಿಲಿಯನೇರ್‌’ ಆಟಕ್ಕೆ ನೆಟ್ಟಿಗರು ಫೆಡ್‌-ಅಪ್‌! ಏನಿದರ ಅಸಲಿಯತ್ತು?

Date:

ಸೋಷಿಯಲ್ ಮೀಡಿಯಾದಲ್ಲಿ ನೋಡುವ 'ಬಿಲಿಯನೇರ್' ಕಥೆಗಳು ನಮ್ಮ ಸಮಯ ಮತ್ತು ಕುತೂಹಲವನ್ನು ಹದವಾಗಿ ಬೇಯಿಸಿ ಹಣವಾಗಿ ಬದಲಾಯಿಸುವ ಡಿಜಿಟಲ್ ಕಾರ್ಖಾನೆಗಳು. ಡಿಜಿಟಲ್ ಯುಗದಲ್ಲಿ ಸಮಯ & ಕುತೂಹಲವೇ ಕಂಪನಿಗಳ ಬಂಡವಾಳ. ಅವುಗಳ ಬಲೆಗೆ ಬೀಳಬೇಕೋ ಬೇಡವೋ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟದ್ದು.

ಭಿಕ್ಷುಕನಾಗಿದ್ದವನು ದಿಢೀರ್ ಬಿಲಿಯನೇರ್ ಆಗುವುದು, ಅತ್ತೆ-ಮಾವನಿಂದ ಅವಮಾನಕ್ಕೊಳಗಾದ ಅಳಿಯ ದೊಡ್ಡ ಸಾಮ್ರಾಜ್ಯ ಕಟ್ಟುವುದು, ಕಸ ಗುಡಿಸುವವನು ಕೋಟ್ಯಧಿಪತಿಯಾಗಿ ವಿರೋಧಿಗಳಿಗೆ ಶಾಕ್ ಕೊಡುವುದು… ಇತ್ತೀಚೆಗೆ ಟ್ರೆಂಡ್‌ನಲ್ಲಿರುವುದರ ಜತೆಗೆ ಕಿರಿಕಿರಿಯನ್ನೂ ಉಂಟು ಮಾಡುತ್ತಿರುವ ಶಾರ್ಟ್‌ ಸ್ಟೋರಿ ಮಾಡೆಲ್. 15 ನಿಮಿಷದ ವಿಡಿಯೋ ತೋರಿಸಿ, ಕಥೆಯ ರೋಚಕ ಘಟ್ಟದಲ್ಲಿ ಸಬ್‌ಸ್ಕ್ರಿಪ್ಷನ್ ಬಲೆಗೆ ಬೀಳಿಸುವ ಈ ಆಡಿಯೋ-ವಿಡಿಯೋ ಆ್ಯಪ್‌ಗಳ ಅಸಲಿ ಅಜೆಂಡಾ ಏನು? ಜನರ ಭಾವನೆ ಮತ್ತು ಕುತೂಹಲವನ್ನೇ ಬಂಡವಾಳವಾಗಿಸಿಕೊಂಡು ಕೋಟಿ ಕೋಟಿ ಹಣ ಬಾಚುವ ಈ ‘ಬಿಲಿಯನೇರ್’ ಮಾಯಾಲೋಕದ ಕರಾಳ ಸತ್ಯವೇನು?

ನೀವು ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್ ಬಳಸುವವರಾಗಿದ್ದರೆ, ಈ ವಿಚಿತ್ರ ಅನುಭವ ಖಂಡಿತ ಆಗಿರುತ್ತದೆ. ಸ್ಕ್ರೋಲ್‌ ಮಾಡುವಾಗ ಆಗಾಗ ಕೆಲ ಸ್ಪೆಷಲ್‌ ವಿಡಿಯೋಗಳು ಕಾಣಿಸುತ್ತವೆ. ಒಬ್ಬ ವ್ಯಕ್ತಿ ಅಥವಾ ಮಹಿಳೆಯನ್ನು ಅತೀವವಾಗಿ ಅವಮಾನಿಸುತ್ತಿರುವಂತೆ, ಕಥೆಯ ನಾಯಕ ಬಿಲಿಯನೇರ್ ಆಗಿದ್ದರೂ, ಆ ಸತ್ಯ ಮುಚ್ಚಿಟ್ಟು ಬಡವನಾಗಿ ಬದುಕುತ್ತಿರುವಂತೆ, ಸಂಬಂಧಿಕರು ಬಡ ನಾಯಕನನ್ನು ಹೀಯಾಳಿಸುತ್ತಿರುವಂತೆ, ಇನ್ಯಾರೋ ಬಂದು ಅವ ಬಿಲಿಯನೇರ್‌ ಅಂದಾಗ ಎಲ್ಲರೂ ಶಾಕ್‌ಗೆ ಒಳಗಾಗಿ ಅವನ ಬಳಿ ಕ್ಷಮೆ ಕೇಳುತ್ತಿರುವಂತೆ… ಕಥೆ ರೋಚಕ ಘಟ್ಟ ತಲುಪಿದಾಗ ವಿಡಿಯೋ ಕಟ್ ಆಗಿ, “ಮುಂದಿನ ಭಾಗಕ್ಕಾಗಿ ಸಬ್‌ಸ್ಕ್ರೈಬ್ ಮಾಡಿ” ಎಂಬ ಪಾಪ್‌ಅಪ್‌ ಅಥವಾ ಪೇ ವಾಲ್‌ ಸ್ಕ್ರೀನ್‌ ಮೇಲೆ ಬಂದಾಗ ಅದೆಷ್ಟು ಕಿರಿಕಿರಿಯಾಗುತ್ತದಲ್ಲವೇ?

WhatsApp Image 2026 03 17 at 2.56.01 PM

ಈ ಕಿರಿಕಿರಿ ಉಂಟು ಮಾಡುವುದೇ, ಇಂದು ಡಿಜಿಟಲ್ ಮಾರುಕಟ್ಟೆಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುತ್ತಿರುವ ‘ಕುಕು ಎಫ್‌ಎಂ’ (Kuku FM), ‘ಪಾಕೆಟ್ ಎಫ್‌ಎಂ’ (Pocket FM), ‘ಕುಕು ಟಿವಿ’, ‘ಬೆಸ್ಟ್‌ ಕನ್ನಡ ಡ್ರಾಮಾಸ್‌’, ‘ಸ್ಟೋರಿ ಟಿವಿ’ಯಂತಹ ಸಂಸ್ಥೆಗಳ ಪಕ್ಕಾ ಬಿಸಿನೆಸ್ ಪ್ಲಾನ್. ಆರಂಭದಲ್ಲಿ ಕೊರಿಯನ್ ಅಥವಾ ಚೀನೀ ಶಾರ್ಟ್ ಫಿಲ್ಮ್‌ಗಳನ್ನು ಡಬ್ ಮಾಡಿ ಬಿಡುತ್ತಿದ್ದ ಈ ಸಂಸ್ಥೆಗಳು, ಈಗ ನೇರವಾಗಿ ಭಾರತದ ಬಹುತೇಕ ಪ್ರಾದೇಶಿಕ ಭಾಷೆಗಳಲ್ಲಿ ಇಂತಹ ಸರಣಿಗಳನ್ನು ನಿರ್ಮಿಸುತ್ತಿವೆ. ಇದರ ಹಿಂದಿನ ಸೈಕಾಲಜಿ ಮತ್ತು ಬಿಸಿನೆಸ್ ಮೆಕ್ಯಾನಿಸಂ ನಿಜಕ್ಕೂ ಬೆರಗುಗೊಳಿಸುವಂತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಬಿಲಿಯನೇರ್‌ ಗ್ರೂಮ್‌ ಈಸ್‌ ಮೈ ನ್ಯೂ ಹಸ್ಬೆಂಡ್, ದ ಸ್ವೀಪರ್‌ ಬಿಲಿಯನೇರ್‌, ದ ಡಾಕ್ಟರ್‌ vs ಬಿಲಿಯನೇರ್‌, ಮೈ ಹೋಂಲೆಸ್‌ ಬಿಲಿಯನೇರ್‌ ಹಸ್ಬೆಂಡ್‌, ಮೈ ಸೀಕ್ರೆಟ್‌ ಬಿಲಿಯನೇರ್‌, ಸೆಕೆಂಡ್‌ ಕ್ಲಾಸ್‌ ಬಿಲಿಯನೇರ್… ಇವು ಆ ಕಥೆಗಳ ಶೀರ್ಷಿಕೆಗಳು. ಈ ಎಲ್ಲಾ ಕಥೆಗಳ ಹಿಂದಿನ ಪ್ಯಾಟರ್ನ್ ಮತ್ತು ನರೇಷನ್ ಒಂದೇ. ಪ್ರೀತಿ, ಸಂಬಂಧಗಳಿಗಿಂತ ಹೆಚ್ಚಾಗಿ ಇಲ್ಲಿ ‘ಹಣ’ ಮತ್ತು ‘ಸೇಡು’ ಮುಖ್ಯ ವಸ್ತು.

ನಾಯಕ ತಾನು ಬಿಲಿಯನೇರ್ ಎನ್ನುವುದನ್ನು ಮರೆಮಾಚಿ ಸಾಮಾನ್ಯನಂತೆ ಬದುಕುತ್ತಿರುತ್ತಾನೆ. ಆತನ ನಿಜವಾದ ಅಸ್ತಿತ್ವ ಗೊತ್ತಿಲ್ಲದ ಸಂಬಂಧಿಕರು ಅಥವಾ ಆತನನ್ನು ಪ್ರೀತಿಸಿದವರೇ ಆತನನ್ನು ಬಡವನೆಂದು ಗೇಲಿ ಮಾಡುತ್ತಾರೆ. ಮನುಷ್ಯನ ಸಹಜ ಗುಣವೆಂದರೆ, ಅನ್ಯಾಯಕ್ಕೊಳಗಾದವರ ಪರವಾಗಿ ನಿಲ್ಲುವುದು. ವಿಡಿಯೋದಲ್ಲಿ ನಾಯಕನಿಗಾಗುವ ಅವಮಾನ, ನೋಡುಗನಿಗೆ ಆತನ ಮೇಲೆ ಕನಿಕರ ಹುಟ್ಟುವಂತೆ ಮಾಡುತ್ತದೆ ಮತ್ತು ಮುಂದೆ ಆತ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬ ಕುತೂಹಲ ತೀವ್ರವಾಗುತ್ತದೆ. ಇದನ್ನೇ ಮನಃಶಾಸ್ತ್ರದಲ್ಲಿ ‘ಎಮೋಷನಲ್ ಹುಕ್’ (Emotional Hook) ಎನ್ನಲಾಗುತ್ತದೆ.

ಬಳಿಕ ಆ ಬಡವ ಎಂದು ನಂಬಿದ್ದ ವ್ಯಕ್ತಿ ತನ್ನ ಅಸಲಿ ಮುಖ ತೋರಿಸಿದಾಗ, ಅವಮಾನ ಮಾಡಿದವರು ಚಡಪಡಿಸುತ್ತಾರೆ. ಈ ದೃಶ್ಯ ನೋಡುವವರಿಗೆ ಒಂದು ರೀತಿಯ ಸಮಾಧಾನ ಅಥವಾ ‘ಡೋಪಮೈನ್ ಕಿಕ್’ ನೀಡುತ್ತದೆ. ಈ ಕಥೆಗಳಲ್ಲಿ ನಾಯಕ ಬಡವನಾಗಿದ್ದಾಗ ಬಿಟ್ಟು ಹೋದವರು ಹಣ ಬಂದ ಮೇಲೆ ಮತ್ತೆ ಕಾಲು ಹಿಡಿಯಲು ಬರುತ್ತಾರೆ. ಹಣದ ವ್ಯಾಮೋಹ ಮತ್ತು ಸಂಬಂಧಗಳ ಕುಸಿತವನ್ನು ತೀವ್ರವಾಗಿ ಚಿತ್ರಿಸಿ ಜನರ ಭಾವನೆಗಳೊಂದಿಗೆ ಆಟವಾಡಿದರೂ ಇದು ಪ್ರಸ್ತುತ ಸಮಾಜದ ನಿಜ ಮುಖವೇ ಆಗಿದೆ. ಇಲ್ಲಿ ಜನ ಹೆಚ್ಚು ಕನೆಕ್ಟ್‌ ಆಗುತ್ತಾರೆ.

‘ಸಂಕ್ ಕಾಸ್ಟ್ ಫ್ಯಾಲಸಿ’ (Sunk Cost Fallacy) ಎಂಬ ವ್ಯವಹಾರ ತಂತ್ರವನ್ನ ಈ ಸಂಸ್ಥೆಗಳು ಸಮರ್ಥವಾಗಿ ಬಳಸಿಕೊಳ್ಳುತ್ತವೆ. ಸಾಮಾನ್ಯವಾಗಿ ಜಾಹೀರಾತುಗಳು ಸೆಕೆಂಡ್‌ಗಳಲ್ಲಿರುತ್ತವೆ. ಆದರೆ ಈ ಆ್ಯಪ್‌ಗಳು 15 ರಿಂದ 20 ನಿಮಿಷಗಳ ಕಾಲ ಸುದೀರ್ಘ ವಿಡಿಯೋಗಳನ್ನು ಪ್ರದರ್ಶನಕ್ಕಿಟ್ಟಿರುತ್ತವೆ. ಒಬ್ಬ ಮನುಷ್ಯ ಒಂದು ಕೆಲಸಕ್ಕಾಗಿ ಈಗಾಗಲೇ 15 ನಿಮಿಷ ವ್ಯಯಿಸಿದ್ದಾನೆ ಎಂದರೆ, ಆತ ಆ ಕೆಲಸವನ್ನು ಅರ್ಧಕ್ಕೆ ಬಿಡಲು ಇಷ್ಟಪಡುವುದಿಲ್ಲ. ಆಗ ಆತ ₹99 ಅಥವಾ ₹199 ಕಟ್ಟಿ ಸಬ್‌ಸ್ಕ್ರೈಬ್ ಮಾಡಲು ಹಿಂದೆಮುಂದೆ ನೋಡುವುದಿಲ್ಲ.”ಇಷ್ಟೊತ್ತೇ ನೋಡಿದ್ದೇನೆ, ಇನ್ನುಳಿದ ಕಥೆಯನ್ನು ತಿಳಿದುಕೊಳ್ಳದಿದ್ದರೆ, ಕಳೆದ 15 ನಿಮಿಷವೂ ವ್ಯರ್ಥವಾಗುತ್ತದಲ್ಲ, ಸ್ವಲ್ಪವಾದರೂ ನೋಡಿಬಿಡೋಣ” ಎಂದುಕೊಳ್ಳುತ್ತಾನೆ. ಅಲ್ಲಿಗೆ ಸಂಸ್ಥೆಗಳ ಪ್ಲಾನ್‌ ಪಕ್ಕಾ ವರ್ಕ್‌ ಆಗಿದೆ ಎಂದರ್ಥ.

ಆರಂಭದಲ್ಲಿ ಇವು ಕೇವಲ ಕೊರಿಯನ್ ಡ್ರಾಮಾಗಳ ಡಬ್ಬಿಂಗ್ ಆಗಿದ್ದವು. ಆದರೆ ಭಾರತೀಯ ಮಾರುಕಟ್ಟೆಯ ನಾಡಿಮಿಡಿತ ಅರಿತ ಈ ಕಂಪನಿಗಳು ಈಗ ಸ್ಥಳೀಯ ನಟರನ್ನೇ ಬಳಸಿ ಕನ್ನಡ, ತೆಲುಗು, ತಮಿಳು, ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ವಿಡಿಯೋ ತಯಾರಿಸುತ್ತಿವೆ. ಇದರಿಂದಾಗಿ ಕಥೆಗಳು ಇನ್ನು ಹೆಚ್ಚು ನೈಜವಾಗಿ ಮತ್ತು ಹತ್ತಿರವಾಗಿ ಕಾಣಿಸುತ್ತವೆ. ಈ ಸರಣಿಗಳಲ್ಲಿ ಸಿನಿಮಾ ಗುಣಮಟ್ಟ ಇಲ್ಲದಿದ್ದರೂ, ಸೀರಿಯಲ್‌ಗಳಿಗಿಂತ ವೇಗವಾಗಿ ಕಥೆ ಸಾಗುವುದರಿಂದ ಯುವಜನತೆ ಮತ್ತು ಗೃಹಿಣಿಯರು ಇದಕ್ಕೆ ಬೇಗನೆ ಮಾರುಹೋಗುತ್ತಿದ್ದಾರೆ.

image 2026 03 17T170812.560

ಪ್ರಾದೇಶಿಕ ಭಾಷೆಗಳಲ್ಲಿ ಕಥೆಗಳು ಬಂದಾಗ, ಜನರಿಗೆ ಬ್ರ್ಯಾಂಡ್ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ಭಾರತದ ಗ್ರಾಮೀಣ ಭಾಗದ ಜನರ ಬಳಿಯೂ ಈಗ ಸ್ಮಾರ್ಟ್‌ಫೋನ್ ಇರುವುದರಿಂದ, ಈ ಆ್ಯಪ್‌ಗಳಿಗೆ ವೀಕ್ಷಕರ ಸಂಖ್ಯೆಗೇನೂ ಕೊರತೆಯಿಲ್ಲ. ಉದ್ಯಮದ ವಿಸ್ತರಣೆ ಎಷ್ಟು ಸಲೀಸಾಗಿ ಆಗಿಹೋಯಿತಲ್ಲ!

ನಿಮಗೆ ವಿಡಿಯೋಗಳು ಕಿರಿಕಿರಿ ಅನಿಸಬಹುದು, ಆದರೆ ಈ ಆ್ಯಪ್‌ಗಳ ಮಾಲೀಕರಿಗೆ ಇದೊಂದು ಕುಬೇರನ ಖಜಾನೆ.

  • ಸಬ್‌ಸ್ಕ್ರಿಪ್ಷನ್ ಮಾಡೆಲ್: ಒಮ್ಮೆ ನೀವು ಒಂದು ಕಥೆಗಾಗಿ ಸಬ್‌ಸ್ಕ್ರೈಬ್ ಮಾಡಿದರೆ, ಅಂತಹ ಸಾವಿರಾರು ಕಥೆಗಳ ಲೈಬ್ರರಿ ನಿಮ್ಮ ಮುಂದೆ ತೆರೆದುಕೊಳ್ಳುತ್ತದೆ. ಒಮ್ಮೆ ಅಭ್ಯಾಸವಾದರೆ, ಜನರು ತಿಂಗಳ ಫೀಸ್ ಕಟ್ಟುತ್ತಲೇ ಇರುತ್ತಾರೆ.
  • ಡೇಟಾ ಲಾಭ: ನೀವು ಯಾವ ರೀತಿಯ ಕಥೆಗಳನ್ನು ಇಷ್ಟಪಡುತ್ತೀರಿ ಎಂಬುದನ್ನು ಅಲ್ಗಾರಿದಮ್‌ಗಳು ಟ್ರ್ಯಾಕ್ ಮಾಡುತ್ತವೆ. ಮುಂದೆ ನಿಮಗೆ ಅದೇ ರೀತಿಯ ಕಥೆಗಳನ್ನು ಶಿಫಾರಸು ಮಾಡಲಾಗುತ್ತದೆ. ಇನ್ನೊಂದು, ಇನ್ನೊಂದು, ಎಂದುಕೊಂಡು ಸಬ್‌ಸ್ಕ್ರೈಬ್‌ ಮಾಡಿ ರಾಶಿ ಸ್ಟೋರಿಗಳನ್ನ ನೋಡುತ್ತೀರಿ.
  • ಕಡಿಮೆ ವೆಚ್ಚ, ಹೆಚ್ಚಿನ ಲಾಭ: ಇಂತಹ ಸರಣಿಗಳಿಗೆ ದೊಡ್ಡ ಸಿನಿಮಾಗಳಂತೆ ಕೋಟಿಗಟ್ಟಲೆ ಖರ್ಚಾಗುವುದಿಲ್ಲ. ಸಣ್ಣ ಸೆಟ್, ಸ್ಥಳೀಯ ಕಲಾವಿದರನ್ನು ಬಳಸಿ ವೇಗವಾಗಿ ನಿರ್ಮಿಸಬಹುದು. ಆದರೆ ಅದರ ಪ್ರಚಾರಕ್ಕೆ ಬಳಸುವ ಸೋಷಿಯಲ್ ಮೀಡಿಯಾ ಅಲ್ಗಾರಿದಮ್‌ಗಳು ಕೋಟ್ಯಂತರ ರೂಪಾಯಿಗಳ ಲಾಭವನ್ನು ತಂದುಕೊಡುತ್ತವೆ.

ಈ ಎಲ್ಲಾ ಕಥೆಗಳು ಗುನುಗುವುದಿಷ್ಟೇ.. ಹಣವಿದ್ದರೆ ಜಗತ್ತು ನಿಮ್ಮ ಕಾಲಬುಡಕ್ಕೆ ಬರುತ್ತದೆ. ಇಲ್ಲಿ ಮೌಲ್ಯ, ಸಂಸ್ಕಾರಕ್ಕಿಂತ ಹೆಚ್ಚಾಗಿ ಹಣದ ಪವರ್ ತೋರಿಸುವುದಕ್ಕೇ ಆದ್ಯತೆ. ಬಿಟ್ಟೋದವರು ಮತ್ತೆ ಹಣದ ಹಿಂದೆ ಬರುವುದು, ಬಡವನಾಗಿದ್ದಾಗ ತುಳಿದವರು ಶ್ರೀಮಂತನಾದ ಮೇಲೆ ಕ್ಷಮೆ ಕೇಳುವುದು ಇವೆಲ್ಲವೂ ಮನುಷ್ಯನ “ಇಗೊ” (Ego) ಅಥವಾ ಅಹಂ ಅನ್ನು ತಣಿಸುವ ದೃಶ್ಯಗಳು.

ಇದನ್ನೂ ಓದಿ: ಡಿಜಿಟಲ್ ಚಕ್ರವ್ಯೂಹ: ಅಲ್ಗಾರಿದಂಗಳು ಮಿದುಳನ್ನೇ ‘ಹೈಜಾಕ್’ ಮಾಡುತ್ತವೆ ಎಚ್ಚರ!

ಸೋಷಿಯಲ್ ಮೀಡಿಯಾದಲ್ಲಿ ನೀವು ನೋಡುವ “ಬಿಲಿಯನೇರ್” ಕಥೆಗಳು ನಿಮ್ಮ ಸಮಯ ಮತ್ತು ಕುತೂಹಲವನ್ನು ಹದವಾಗಿ ಬೇಯಿಸಿ ಹಣವಾಗಿ ಬದಲಾಯಿಸುವ ಡಿಜಿಟಲ್ ಕಾರ್ಖಾನೆಗಳು. ಮುಂದಿನ ಬಾರಿ ಇಂತಹ ವಿಡಿಯೋಗಳು ನಿಮ್ಮ ಫೋನ್‌ನಲ್ಲಿ ಬಂದಾಗ, ಅಲ್ಲಿ ಬಿಲಿಯನೇರ್ ಆಗುತ್ತಿರುವುದು ವಿಡಿಯೋದ ನಾಯಕನಲ್ಲ, ಬದಲಾಗಿ ನಿಮ್ಮ 15 ನಿಮಿಷ ಸಮಯವನ್ನು ಖರೀದಿಸುತ್ತಿರುವ ಆ ಆ್ಯಪ್ ಸಂಸ್ಥೆಗಳು ಎಂಬುದು ನೆನಪಿರಲಿ. ಡಿಜಿಟಲ್ ಯುಗದಲ್ಲಿ ನಮ್ಮ ಕುತೂಹಲವೇ ಈ ಕಂಪನಿಗಳ ಬಂಡವಾಳ. ಆ ಬಲೆಗೆ ಬೀಳಬೇಕೋ ಅಥವಾ ಸ್ಕ್ರೋಲ್ ಮಾಡಿ ಮುಂದೆ ಹೋಗಬೇಕೋ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟದ್ದು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ಕದನ ವಿರಾಮ ಸೋಗಿನಲ್ಲಿ ಅಮೆರಿಕದ ಹೈಡ್ರಾಮ: ಟ್ರಂಪ್ ದಾಳಿ ಮುಂದೂಡಿಕೆಗೆ ಇರಾನ್ ವ್ಯಂಗ್ಯ

ಯುದ್ಧೋನ್ಮಾದಲ್ಲಿ ಮೆರೆಯುತ್ತಿದ್ದ ಅಮೆರಿಕ ಕೊನೆಗೂ ಇರಾನ್‌ನ ಖಡಕ್ ಎಚ್ಚರಿಕೆಗೆ ಮಣಿದಂತೆ ಕಾಣುತ್ತಿದೆ....