ಸಿದ್ದಿ ಸಮುದಾಯವರು ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಕಂಬಳಕ್ಕೆ ಕರೆಸಿ ಎಂದು ಮನವಿ ಮಾಡಿದ್ದ ಕಾರಣಕ್ಕೆ ಬ್ರಿಜ್ ಭೂಷಣ್ ಸಿಂಗ್ ಅವರಿಗೆ ಆಹ್ವಾನ ನೀಡಿದ್ದೆವು ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ ತಿಳಿಸಿದ್ದರು. ಈ ಕುರಿತು ಮಾತನಾಡಿದ ಸಿದ್ದಿ ಸಮುದಾಯದ ಜನರು ಬ್ರಿಜ್ ಭೂಷಣ್ ಸಿಂಗ್ ಕಾರ್ಯಕ್ರಮಕ್ಕೆ ಬರುತ್ತಿರುವುದಕ್ಕೂ ನಮಗೂ ಸಂಬಂಧವೇ ಇಲ್ಲ. ನಾವು ಮನವಿ ಮಾಡಿದ ಕಾರಣಕ್ಕೆ ಅವರನ್ನು ಕರೆಸುತ್ತಿದ್ದೇವೆ ಎಂಬುದು ಸುಳ್ಳು. ಸುಮ್ಮನೆ ನಮ್ಮ ಸಮುದಾಯದ ಮೇಲೆ ಆರೋಪ ಹೊರಿಸಬೇಡಿ ಎಂದು ಸಮುದಾಯದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ರಿಜ್ ಭೂಷಣ್ ಆಹ್ವಾನಕ್ಕೂ ನಮಗೂ ಸಂಬಂಧವಿಲ್ಲ: ಸಿದ್ಧಿ ಸಮುದಾಯ
Date:




