ಬೆಳಗಾವಿ: ಜಿಲ್ಲೆಯ ರಾಜಕೀಯ ವಲಯದ ಗಮನ ಸೆಳೆದಿದ್ದ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ ಬ್ಯಾಂಕ್) ಚುನಾವಣೆಯಲ್ಲಿ ಜಾರಕಿಹೊಳಿ ಪ್ಯಾನಲ್‌ನ ಅಭ್ಯರ್ಥಿಗಳಾದ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರು ಅಧ್ಯಕ್ಷರಾಗಿ ಹಾಗೂ ಶಾಸಕ ರಾಜು ಕಾಗೆ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಲಕ್ಷ್ಮಣ ಸವದಿ ಹಾಸ್ಯಮಿಶ್ರಿತ ಶೈಲಿಯಲ್ಲಿ ಮಾತನಾಡಿ, “ನನ್ನ ಚೋಪಡಿ ಲೆಕ್ಕದಂತೆಯೇ ಫಲಿತಾಂಶ ಬಂದಿದೆ. ನಾನು ಹಾಕುವ ಲೆಕ್ಕದಲ್ಲಿ ಭಾಗಾಕಾರ, ಗುಣಾಕಾರ ತಪ್ಪಾಗುವುದಿಲ್ಲ,” ಎಂದು ತಿಳಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಚುನಾವಣೆ ಜಾರಕಿಹೊಳಿ, ಕತ್ತಿ ಮತ್ತು ಸವದಿ ಕುಟುಂಬಗಳ ರಾಜಕೀಯ ಪ್ರತಿಷ್ಠೆಯಾಗಿ ಪರಿಣಮಿಸಿದ್ದರೂ, ಅಂತಿಮವಾಗಿ ಸವದಿ ಪಾಳೆಯದ ಲೆಕ್ಕ ಸರಿ ಬಂದಂತಾಗಿದೆ ಎಂದು ಹೇಳಿದ್ದಾರೆ.





