ಚಿಂತಾಮಣಿ : ವ್ಯಕ್ತಿಗಳ ವ್ಯಕ್ತಿತ್ವವನ್ನು ಕೌಶಲ ಮತ್ತು ಬುದ್ದಿವಂತಿಕೆಯನ್ನು ಕೇವಲ ಅಂಕಗಳಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ಎಚ್.ಎನ್.ನಾಗಮೋಹನ್ ದಾಸ್ ಅಭಿಪ್ರಾಯಪಟ್ಟರು.
ತಾಲ್ಲೂಕು ಅಡಳಿತ ತಾಲ್ಲೂಕು ಪಂಚಾಯಿತಿ ಹಾಗೂ ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಿಂದುಳಿದವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವೃತ್ತಿ ಮಾರ್ಗದರ್ಶನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದರು.
ಆಧುನಿಕ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಹೆಜ್ಜೆ,ಹೆಜ್ಜೆಗೂ ಸ್ಪರ್ಧೆ ಇದೆ.ಸ್ಪರ್ಧಾತ್ಮಕ ವಿಶ್ವದಲ್ಲಿ ಕಷ್ಟಪಟ್ಟು ವ್ಯಾಸಂಗ ಮಾಡಿ ಅಂಕಗಳನ್ನು ಪಡೆಯುವುದು ಮುಖ್ಯ ಜೀವನದ ಬಗ್ಗೆ ಕನಸುಗಳನ್ನು ಕಾಣುವುದು ಮುಖ್ಯ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಹೆಚ್ಚಿನ ಸಾಧನೆಯನ್ನು ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜೀವನದಲ್ಲಿ ಶಿಕ್ಷಣ ಮುಖ್ಯ ಸಮಾಜದಲ್ಲಿ ಎಲ್ಲ ಕ್ಷೇತ್ರಗಳ ಜನರನ್ನು ಎಲ್ಲ ಹಂತಗಳಲ್ಲೂ ಮುನ್ನೆಡೆಸುವುದು ದೇಶದ ಸಂವಿಧಾನ ಸಂವಿಧಾನದ ಕುರಿತು ದೇಶದ ಪ್ರತಿಯೊಬ್ಬ ಪ್ರಜೆಗೂ ಅವಶ್ಯಕತೆ ಇದೆ ಸಂವಿಧಾನದ ಕೊರತೆಯಿದೆ ಸಂವಿಧಾನವನ್ನು ತಿಳಿದುಕೊಂಡು ಅದರಂತೆ ಬದುಕಿದರೆ ಜೀವನದಲ್ಲಿ ಸರಿಯಾದ ದಿಕ್ಕಿನಲ್ಲಿ ಸಾಗಬಹುದು ಎಂದು ತಿಳಿಸಿದರು.
ರಾಜ ಮಹಾರಾಜರ ನಂತರ ಪ್ರಜಾಪ್ರಭುತ್ವದ ಆಡಳಿತ ಜಾರಿಗೆ ಬಂತು ಶಾಸನಗಳನ್ನು ರೂಪಿಸಿವುದು ಶಾಸಕಾಂಗ ಅವುಗಳನ್ನು ಕಾರ್ಯರೂಪಕ್ಕೆ ತರುವುದು ಕಾರ್ಯಾಂಗ ಉಲ್ಲಂಘಿಸಿ ಕಾನೂನು ಮೀರಿದರೆ ವಿಚಾರಣೆ ನಡೆಸಿ ಶಿಕ್ಷೆ ಕೊಡುವ ಕರ್ತವ್ಯ ನ್ಯಾಯಾಂಗ ಮೂರು ಕ್ಷೇತ್ರಗಳಲ್ಲೂ ಸ್ವೇಚ್ಛಾಚಾರದಿಂದ ನಡೆದುಕೊಳ್ಳಲು ಪ್ರಕರಣಗಳು ಹೆಚ್ಚಾಗುತ್ತಿದ್ದವು.
ಸ್ವೇಚ್ಚಾಚಾರದಿಂದ ಕಡಿವಾಣ ಹಾಕಲು ಮೂರು ಅಂಗಗಳ ಸರಿಯಾದ ದಾರಿಯಲ್ಲಿ ಸಾಗುವ ಹಿನ್ನಲೆಯಲ್ಲಿ ಕಾನೂನುಗಳು, ಹಕ್ಕುಗಳು, ಕರ್ತವ್ಯಗಳ ವಿವರಗಳುಳ್ಳ ಸಂವಿಧಾನ ರಚನೆ ಆಯಿತು ಎಂದರು.
ವಿಶ್ವದ ದೇಶಗಳಲ್ಲಿ 200 ದೇಶಗಳಲ್ಲಿ 190 ದೇಶಗಳು ತಮ್ಮದೆ ಅದ ಸ್ವತಂತ್ರ ಸಂವಿಧಾನಗಳನ್ನು ಹೊಂದಿವೆ. ನಮ್ಮ ದೇಶದ ಸಂವಿಧಾನ ಬಂದು 75 ವರ್ಷವಾದರೂ ಬಹುತೇಕ ಜನರು ಸಂವಿಧಾನವನ್ನು ಓದಲಿಲ್ಲ ಅನೇಕ ವಕೀಲರು ನ್ಯಾಯಾಧೀಶರು ಸಹ ಪೂರ್ಣವಾಗಿ ಸಂವಿಧಾನವನ್ನು ಅಧ್ಯಯನ ಮಾಡಿಲ್ಲಸಂವಿಧಾನ ಒಂದು ಕಥೆ ಕಾದಂಬರಿ ಕವಿತೆಯಲ್ಲ ದೇಶದ ಪ್ರತಿಯೊಬ್ಬರು ಸಂವಿಧಾನವನ್ನು ಓದಬೇಕು ಅದರಂತೆ ನಡೆದುಕೊಳ್ಳಬೇಕು ಎಂದರು.
ಬೆಂಗಳೂರಿನ ಕಾನೂನು ವಿಶ್ವವಿದ್ಯಾಲಯದ ಡೀನ್ ಎನ್.ಸತೀಶಗೌಡ ಮಾತನಾಡಿ ವಿದ್ಯಾರ್ಥಿಗಳಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಸಿದ್ದತೆ ವ್ಯಕ್ತಿತ್ವ ವಿಕಸನ ಆತ್ಮಸ್ಥೈರ್ಯವನ್ನು ಗಳಿಸಿಕೊಳ್ಳುವ ಹಿನ್ನಲೆಯಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಇದನ್ನು ಓದಿದ್ದೀರಾ..? ಕುಂಬಾರ ಮಹಾಸಭಾ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾಗಿ ಡಾ.ಕೆ.ನಾಗರಾಜ್ ನೇಮಕ
ಹಿಂದುಳಿದವರ್ಗಗಳ ಕಲ್ಯಾಣ್ ಇಲಾಖೆಯ ಜಿಲ್ಲಾಧಿಕಾರಿ ಕೆ.ವಿ ಮುನಿರತ್ನಮ್ಮ,ತಾಲ್ಲೂಕು ಕಲ್ಯಾಣಾಧಿಕಾರಿ ಆರ್.ಸಕ್ಪಾಲ್,ಬಾಗೇಪಲ್ಲಿ ತಾಲ್ಲೂಕು ಅಧಿಕಾರಿ ಆರ್.ಶಿವಪ್ಪ,ಗುಡಿಬಂಡೆಯ ಶಂಕರಪ್ಪ,ಗೌರಿಬಿದನೂರಿನ ವನಜಾಕ್ಷಿ ಭಾಗವಹಿಸಿದ್ದರು.





