ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹುಲಿಗರಡಿ, ಸತ್ತಿಕಲ್ಲು ವ್ಯಾಪ್ತಿಯಲ್ಲಿ ಚಿರತೆ ದಾಳಿ ಮಾಡಿ ಹಸುವನ್ನು ಕೊಂದಿರುವ ಘಟನೆ ನಡೆದಿದೆ.
ಹುಲಿಗರಡಿ ಗಣೇಶ್ ಭಟ್ ಅವರ ಮನೆ ಸಮೀಪ ಕರುವಿನ ಮೇಲೆ ದಾಳಿ ಮಾಡಿದೆ. ಎರಡು ಘಟನೆಯಲ್ಲೂ ಹಸುವಿನ ಹೊಟ್ಟೆಯ ಭಾಗಕ್ಕೆ ದಾಳಿ ಮಾಡಿದೆ. ಈ ಹಿಂದೆಯೂ ಇಂತಹ ಘಟನೆಗಳ ಕುರಿತು ಸ್ಥಳೀಯರಿಗೆ ಚಿರತೆಯ ಸಂಚಾರದ ಬಗ್ಗೆ ತಿಳಿದು ಸೆರೆ ಹಿಡಿಯುವಂತೆ ಸ್ಥಳೀಯ ಅರಣ್ಯ ಅಧಿಕಾರಿಗೆ ಮನವಿ ಮಾಡಲಾಗಿತ್ತು.
ಇದನ್ನೂ ಓದಿದ್ದೀರಾಚಿಕ್ಕಮಗಳೂರು l 2.50 ಲಕ್ಷ ನಗದು ಕಳ್ಳತನ; ಸಿಸಿ ಕ್ಯಾಮರದಲ್ಲಿ ಸೆರೆ
ಹಾಗೆಯೇ, ಅರಣ್ಯ ಇಲಾಖೆಯವರು ಬೋನ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಚಿರತೆ ಇದುವರೆಗೆ ಚಿರತೆ ಸೆರೆ ಆಗದೆ, ಪದೇ ಪದೇ ಹಸುಗಳ ಮೇಲೆ ದಾಳಿ ಮಾಡುತ್ತಿರುವುದು ಸ್ಥಳೀಯರು ಭಯದ ವಾತಾವರಣದಲ್ಲಿ ಬದುಕಬೇಕಾಗಿರುವ ಪರಿಸ್ಥಿತಿ ಎದುರಾಗಿದೆ.





