ಧಾರವಾಡ | ದನದ ಕೊಟ್ಟಿಗೆಗೆ ಬೆಂಕಿ; 6 ಜಾನುವಾರುಗಳು ಸಜೀವ ದಹನ

Date:

ದನದ ಕೊಟ್ಟಿಗೆಗೆ ಬೆಂಕಿ ಬಿದ್ದು, ಆರು ಜಾನುವಾರುಗಳು ಜೀವಂತ ದಹನವಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಯಲ್ಲಪ್ಪ ಹುಡೆದ ಎಂಬುವರ ಹೊಲದಲ್ಲಿದ್ದ ಗುಡಿಸಲಿಗೆ (ದನದ ಕೊಟ್ಟಿಗೆ) ಮಂಗಳವಾರ ಸಂಜೆ ಬೆಂಕಿ ಬಿದ್ದಿದೆ. ಪರಿಣಾಮವಾಗಿ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಜೀವಂತವಾಗಿ ಸುಟ್ಟುಹೋಗಿವೆ.

ಘಟನೆ ಬಗ್ಗೆ ಗ್ರಾಮದ ನಿವಾಸಿ ಎಸ್.ಎನ್ ಪಾಟೀಲ್ ಈದಿನ.ಕಾಮ್ ಜೊತೆ ಮಾತನಾಡಿದ್ದು, “ಬೆಂಕಿಬಿದ್ದ ಗುಡಿಸಲು ಊರಿನಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ. ಗುಡಿಸಲಿನ ಮಾಲೀಕ ಯಲ್ಲಪ್ಪ ಸೊಳ್ಳೆಗಳನ್ನು ಓಡಿಸಲು ಒಲೆ ಹಚ್ಚಿದ್ದಾರೆ. ಅವರು ಊರಿನೊಳಗಿದ್ದ ಮನೆಗೆ ತೆರಳಿದ ಬಳಿಕ, ಬೆಂಕಿ ಹೊತ್ತಿಕೊಂಡಿದೆ. ಕೊಟ್ಟಿಯಲ್ಲಿದ್ದ ಒಂದು ಜಾನುವಾರು ಅಪಾಯದಿಂದ ಪಾರಗಿದೆ” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈದಿನ.ಕಾಮ್ ಜೊತೆಗೆ ನಿಂಗಮ್ಮ ಸವಣೂರ ಮಾತನಾಡಿ, “ಈಗಾಗಲೇ ಅವಘಡ ಸಂಭವಿಸಿದ ಸ್ಥಳಕ್ಕೆ ತಹಶೀಲ್ದಾರ್ ಮತ್ತು ಗ್ರಾಮ ಲೆಕ್ಕಾಧಿಕಾರಿ (ತಲಾಟಿ) ಭೆಟ್ಟಿನೀಡಿ ಪರಿಶೀಲನೆ ನಡೆಸಿದ್ದಾರೆ. ನಷ್ಟದಲ್ಲಿ ಸಿಲುಕಿರುವ ಯಲ್ಲಪ್ಪ ಹುಡೇದ ಅವರಿಗೆ ಅಧಿಕಾರಿಗಳು ನಷ್ಟಪರಿಹಾರ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

ಬಸವರಾಜ ಕಳಸೂರ ಮಾತನಾಡಿ, “ಹೊಲದಲ್ಲಿದ್ದ ದನದ ಕೊಟ್ಟಿಗೆ ಅಷ್ಟೇ ಅಲ್ಲದೆ ಪಕ್ಕದಲ್ಲಿರುವ ಹುಲ್ಲಿನ ಬಣವೆಯೂ ಸುಟ್ಟು ಹೋಗಿದೆ. ಎರಡು ಜರ್ಸಿ ಆಕಳು, ಎರಡು ಎತ್ತುಗಳು, ದನಗಳು ಎಲ್ಲವೂ ಬೆಂಕಿಯಲ್ಲಿ ಸುಟ್ಟು ಹೋಗಿವೆ. ಸರ್ಕಾರವು ನಷ್ಟ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಬ್ಬಳ್ಳಿ | ಹುಲಿ ಉಗುರು ಪ್ರಕರಣ: ವಾಣಿಜ್ಯನಗರಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ

ರಾಜ್ಯದಲ್ಲಿ ಹುಲಿ ಉಗುರು ಪ್ರಕರಣಗಳು ಹೆಚ್ಚು ಬೆಳಕಿಗೆ ಬರುತ್ತಿದ್ದು, ವಾಣಿಜ್ಯನಗರಿಯಲ್ಲಿ ಅರಣ್ಯ...

ಧಾರವಾಡ | ಸರ್ಕಾರ ʼಗ್ಯಾರಂಟಿʼ ಯೋಜನೆ ನೀಡದಿದ್ದರೂ ಪರವಾಗಿಲ್ಲ, ಮದ್ಯ ಮಾರಾಟ ಬಂದ್‌ ಮಾಡಲಿ

ರಾಜ್ಯದ 600 ಸಣ್ಣ ಗ್ರಾಮ ಪಂಚಾಯತಿಗಳಲ್ಲಿ ಮದ್ಯ ಮಾರಾಟಕ್ಕೆ ಪರವಾನಿಗೆ ಕೊಡುವ...

ಧಾರವಾಡ | ಆಯುಷ್ ಕೋರ್ಸ್ ಶುಲ್ಕ ಹೆಚ್ಚಳ; ಎಐಡಿಎಸ್‌ಓ ಖಂಡನೆ

ಆಯುಷ್ ಕೋರ್ಸ್ ಶುಲ್ಕವನ್ನು ಏಕಾಏಕಿ  ಶೇ 25ರಷ್ಟು ಹೆಚ್ಚಿಸಿರುವ  ರಾಜ್ಯ ಸರ್ಕಾರದ...

ನಮ್ಮ ಸಚಿವರು | ಸಂತೋಷ್ ಲಾಡ್: ಅಕ್ರಮ ಗಣಿಗಾರಿಕೆಯ ನೆರಳಿನ ರಾಜಕಾರಣ

ಬಿಜೆಪಿ ಸರ್ಕಾರದ ಕೆ.ಸುಧಾಕರ್, ಮುನಿರತ್ನ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಕೆಂಪಣ್ಣ ವಿರುದ್ಧ...