ಚುನಾವಣೆ 2023 | ಸಚಿವರ ಸಂಪತ್ತು ಹಲವು ಪಟ್ಟು ಹೆಚ್ಚಳ

Date:

ಕೊರೊನಾ ಸೋಂಕಿತರಿಗೆ ಅಗತ್ಯವಿದ್ದ ವೆಂಟಿಲೇಟರ್, ಮಾಸ್ಕ್‌, ಸ್ಯಾನಿಟೈಸರ್, ಆಕ್ಸಿಮೀಟರ್‌ಗಳ ಖರೀದಿಯಲ್ಲಿ ಸುಧಾಕರ್ ದುಪ್ಪಟ್ಟು ಹಣ ವ್ಯಯಿಸಿ, ಅವ್ಯವಹಾರ ನಡೆಸಿದ್ದಾರೆ ಎಂದು ದೂರಲಾಗಿತ್ತು. ಆ ಬಗ್ಗೆ ಭಾರೀ ಸುದ್ದಿಯಾಗಿತ್ತು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಐವರು ಸಚಿವರು ಮತ್ತು ಅವರ ಪತ್ನಿಯರ ಸಂಪತ್ತು ಗಮರ್ನಾಹವಾಗಿ ಏರಿಕೆಯಾಗಿದೆ. 2018ರ ಚುನಾವಣೆ ಸಮಯದಲ್ಲಿ ಅವರು ಘೋಷಿಸಿದ್ದ ಆಸ್ತಿಗೂ, 2023ರ ಚುನಾವಣಾ ನಾಮಪತ್ರದಲ್ಲಿ ಘೋಷಿಸಿರುವ ಆಸ್ತಿಗಳಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಈ ಐವರು ಸಚಿವರ ಘೋಷಿತ ಆಸ್ತಿ ಮೂರರಿಂದ ಎಂಟು ಪಟ್ಟು ಹೆಚ್ಚಳವಾಗಿದೆ.

ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ ಸುಧಾಕರ್, ರಾಜ್ಯ ಸಹಕಾರ ಸಚಿವ ಎಸ್.ಟಿ ಸೋಮಶೇಖರ್, ಇಂಧನ ಸಚಿವ ವಿ ಸುನಿಲ್ ಕುಮಾರ್, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ್ ಮತ್ತು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ – ಆಸ್ತಿಯಲ್ಲಿ ಭಾರೀ ಏರಿಕೆ ಮಾಡಿಕೊಂಡಿರುವ ಸಚಿವರು.

2019ರಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡ 17 ಬಂಡುಕೋರರ ಪೈಕಿ ಸುಧಾಕರ್ ಕೂಡ ಒಬ್ಬರು. 2020ರಲ್ಲಿ ಜಗತ್ತನ್ನು ನಡುಗಿಸಿದ ಕೊರೊನಾ ಸಾಂಕ್ರಾಮಿಕ ರೋಗ ಉಲ್ಬಣಗೊಂಡಿದ್ದ ಒಂದು ಮತ್ತು ಎರಡನೇ ಅಲೆಯ ಸಮಯದಲ್ಲಿ ಸುಧಾಕರ್‌ ಅವರು ಟೂಲ್‌ಕಿಟ್‌ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದರು. ಕೊರೊನಾ ಸೋಂಕಿತರಿಗೆ ಅಗತ್ಯವಿದ್ದ ವೆಂಟಿಲೇಟರ್, ಮಾಸ್ಕ್‌, ಸ್ಯಾನಿಟೈಸರ್, ಆಕ್ಸಿಮೀಟರ್‌ಗಳ ಖರೀದಿಯಲ್ಲಿ ಸುಧಾಕರ್ ದುಪ್ಪಟ್ಟು ಹಣ ವ್ಯಯಿಸಿ, ಅವ್ಯವಹಾರ ನಡೆಸಿದ್ದಾರೆ ಎಂದು ದೂರಲಾಗಿತ್ತು. ಆ ಬಗ್ಗೆ ಭಾರೀ ಸುದ್ದಿಯಾಗಿತ್ತು. ಈ ನಡುವೆ ಸುಧಾಕರ್‌ ಅವರು ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ಗಳಲ್ಲಿ ಆಸ್ತಿ ವಿವರಗಳ ಪ್ರಕಾರ, 2018ರಲ್ಲಿ 1.11 ಕೋಟಿಯಿದ್ದ ಸುಧಾಕರ್ ಅವರ ಚರಾಸ್ತಿ, 2023ರಲ್ಲಿ 2.79 ಕೋಟಿಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಸ್ಥಿರಾಸ್ತಿಗಳು ಹೆಚ್ಚೂ-ಕಡಿಮೆ ಒಂದೇ ಆಗಿವೆ.

ಸುಧಾಕರ್ ಅವರ ಪತ್ನಿ ಡಾ. ಪ್ರೀತಿ ಜಿಎ ಅವರ ಸ್ಥಿರಾಸ್ತಿಯಲ್ಲಿ ಭಾರಿ ಏರಿಕೆ ಕಂಡಿದೆ. 2018ರಲ್ಲಿ 1.17 ಕೋಟಿ ರೂಪಾಯಿಗಳಿದ್ದ ಸ್ಥಿರಾಸ್ತಿ 2023ರ ವೇಳೆಗೆ 16.1 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನ ಸದಾಶಿವನಗರದಲ್ಲಿ 14.92 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಖರೀದಿಸಿದ್ದಾರೆ.

ಮೈತ್ರಿ ಸರ್ಕಾರ ಪತನದಲ್ಲಿ ಪಾತ್ರವಹಿಸಿದ್ದ ಮತ್ತೊಬ್ಬ ಬಂಡುಕೋರ ಎಸ್‌.ಟಿ ಸೋಮಶೇಖರ್‌ ಅವರ ಚರಾಸ್ತಿ 2018ರಲ್ಲಿ 67.83 ಲಕ್ಷವಿತ್ತು. ಇದೀಗ, 5.46 ಕೋಟಿಗೆ ಅಂದರೆ ಎಂಟು ಪಟ್ಟು ಏರಿಕೆಯಾಗಿದೆ.

ಮತ್ತೊಂದೆಡೆ, ಸುನೀಲ್ ಕುಮಾರ್ ಅವರ ಚರಾಸ್ತಿಯು 2018ರಲ್ಲಿ 53.27 ಲಕ್ಷ ರೂ. ಇತ್ತು. ಆ ಆಸ್ತಿ 2023ರಲ್ಲಿ 1.59 ಕೋಟಿ ರೂ.ಗೆ ಅಂದರೆ ಮೂರು ಪಟ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಅವರ ಸ್ಥಿರಾಸ್ತಿಗಳು ರೂ 1.68 ಕೋಟಿಯಿಂದ ರೂ 4.03 ಕೋಟಿಗೆ ಎರಡೂವರೆ ಪಟ್ಟು ಹೆಚ್ಚಾಗಿದೆ.

ನಿರಾಣಿ ಅವರ ಚರಾಸ್ತಿ ಕಳೆದ ಐದು ವರ್ಷಗಳಲ್ಲಿ 16 ಕೋಟಿ ರೂ.ಗಳಿಂದ 27.22 ಕೋಟಿ ರೂ.ಗೆ ಏರಿಕೆಯಾಗಿದ್ದು, ಅವರ ಸ್ಥಿರಾಸ್ತಿ 4.58 ಕೋಟಿ ರೂ.ಗಳಿಂದ 8.6 ಕೋಟಿ ರೂ.ಗೆ ಏರಿಕೆಯಾಗಿದೆ. ಅವರ ಪತ್ನಿ ಕಮಲಾ ನಿರಾಣಿ ಅವರ ಚರಾಸ್ತಿ 2018ರಲ್ಲಿ 11.58 ಕೋಟಿ ರೂ. ಇತ್ತು. ಈಗ 38.35 ಕೋಟಿ ರೂ.ಗೆ ಏರಿಕೆ ಕಂಡಿದೆ.

ಈ ಸುದ್ದಿ ಓದಿದ್ದೀರಾ?: ಬಿಜೆಪಿ 60 ದಾಟದು, ಕಾಂಗ್ರೆಸ್‌ ಕನಿಷ್ಠ 130 ಸ್ಥಾನ ಗೆಲ್ಲಲಿದೆ: ವೀರಪ್ಪ ಮೊಯ್ಲಿ

ಸಿ.ಸಿ ಪಾಟೀಲ್ ಅವರ ಚರಾಸ್ತಿ 2018ರಿಂದ 2023ರ ನಡುವೆ 94.36 ಲಕ್ಷದಿಂದ 3.28 ಕೋಟಿ ರೂ.ಗೆ ಏರಿಕೆಯಾಗಿದೆ. ಇದೇ ಐದು ವರ್ಷಗಳ ಅವಧಿಯಲ್ಲಿ ಅವರ ಸ್ಥಿರಾಸ್ತಿಯು 4.47 ಕೋಟಿಯಿಂದ 7.2 ಕೋಟಿಗೆ ಏರಿಕೆ ಕಂಡಿದೆ.

ಸಚಿವರು ತಮ್ಮ ಅಫಿಡವಿಟ್‌ಗಳಲ್ಲಿ ಸಲ್ಲಿಸಿರುವ ಆಸ್ತಿ ವಿವರ

ಕೆ ಸುಧಾಕರ್
2023

ಚರಾಸ್ತಿ – 2.79 ಕೋಟಿ ರೂ. (ಪತ್ನಿ ಡಾ. ಪ್ರೀತಿ ಜಿಎ 6.59 ಕೋಟಿ)
ಸ್ಥಿರಾಸ್ತಿ – 2.66 ಕೋಟಿ ರೂ. (ಪತ್ನಿ 16.1 ಕೋಟಿ, 2022ರ ಸೆಪ್ಟೆಂಬರ್ 1ರಂದು ಸದಾಶಿವನಗರದಲ್ಲಿ 14.92 ಕೋಟಿ ರೂ. ಮೌಲ್ಯದ ಮನೆ ಖರೀದಿಸಿದ್ದಾರೆ)
ಖರ್ಚು-ವೆಚ್ಚ – ರೂ 1.6 ಕೋಟಿ (ಪತ್ನಿ 19.06 ಕೋಟಿ)

2018

ಚರಾಸ್ತಿ – ರೂ 1.11 ಕೋಟಿ (ಪತ್ನಿ 10.76 ಕೋಟಿ)
ಸ್ಥಿರಾಸ್ತಿ – ರೂ 2.34 ಕೋಟಿ (1.17 ಕೋಟಿ)
ಖರ್ಚು-ವೆಚ್ಚ – ರೂ 15.94 ಲಕ್ಷ (ಪತ್ನಿ 10.7 ಕೋಟಿ)
—————————-

ಎಸ್.ಟಿ ಸೋಮಶೇಖರ್
2023

ಚರಾಸ್ತಿ – 5.46 ಕೋಟಿ ರೂ.
ಸ್ಥಿರಾಸ್ತಿ – 8.91 ಕೋಟಿ ರೂ.
ಖರ್ಚು-ವೆಚ್ಚ – 1.22 ಕೋಟಿ ರೂ.

2018

ಚರಾಸ್ತಿ – 67.83 ಲಕ್ಷ ರೂ.
ಸ್ಥಿರಾಸ್ತಿ – 8.14 ಕೋಟಿ ರೂ.
ಖರ್ಚು-ವೆಚ್ಚ – 92 ಲಕ್ಷ ರೂ.

—————————-

ವಿ ಸುನಿಲ್ ಕುಮಾರ್
2023

ಚರಾಸ್ತಿ – 1.59 ಕೋಟಿ ರೂ. (ಪತ್ನಿ 1.42 ಕೋಟಿ)
ಸ್ಥಿರಾಸ್ತಿ – 4.03 ಕೋಟಿ ರೂ.
ಖರ್ಚು-ವೆಚ್ಚ – 45.15 ಲಕ್ಷ ರೂ.

2018

ಚರಾಸ್ತಿ – 53.27 ಲಕ್ಷ ರೂ. (62.29 ಲಕ್ಷ)
ಸ್ಥಿರಾಸ್ತಿ – 1.68 ಕೋಟಿ ರೂ.
ಖರ್ಚು-ವೆಚ್ಚ – 69.43 ಲಕ್ಷ ರೂ.
———————————

ಮುರುಗೇಶ್ ನಿರಾಣಿ
2023

ಚರಾಸ್ತಿ – 27.22 ಕೋಟಿ ರೂ. (ಪತ್ನಿ ಕಮಲಾ ನಿರಾಣಿ 38.35 ಕೋಟಿ)
ಸ್ಥಿರಾಸ್ತಿ – 8.6 ಕೋಟಿ ರೂ. (23.85 ಕೋಟಿ)
ಖರ್ಚು-ವೆಚ್ಚ – 22.62 ಕೋಟಿ ರೂ. (47.56 ಕೋಟಿ)

2018
ಚರಾಸ್ತಿ – 16 ಕೋಟಿ ರೂ. (ಹೆಂಡತಿ 11.58 ಕೋಟಿ)
ಸ್ಥಿರಾಸ್ತಿ – 4.58 ಕೋಟಿ (20.3 ಕೋಟಿ)
ಖರ್ಚು-ವೆಚ್ಚ – 8.31 ಕೋಟಿರೂ. (15.23 ಕೋಟಿ)
—————————

ಸಿ.ಸಿ ಪಾಟೀಲ್
2023

ಚರಾಸ್ತಿ – 3.28 ಕೋಟಿ ರೂ.
ಸ್ಥಿರಾಸ್ತಿ – 7.2 ಕೋಟಿ ರೂ.
ಖರ್ಚು-ವೆಚ್ಚ – 3.22 ಕೋಟಿ ರೂ.

2018

ಚರಾಸ್ತಿ – 94.36 ಲಕ್ಷ ರೂ.
ಸ್ಥಿರಾಸ್ತಿ – 4.47 ಕೋಟಿ ರೂ.
ಖರ್ಚು-ವೆಚ್ಚ – 1.09 ಕೋಟಿ ರೂ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...

ರಾಜ್ಯಸಭೆಗೆ ಸದಾನಂದಗೌಡರ ಪರ ಬಿಎಸ್‌ವೈ ; ದೇವೇಗೌಡರ ಪರ ಹೆಚ್‌ಡಿಕೆ ಲಾಬಿ

ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆ ಸಚಿವ ಹೆಚ್‌.ಡಿ ಕುಮಾರಸ್ವಾಮಿ ನವದೆಹಲಿಯಲ್ಲಿ...