ಕೃಷ್ಣಾ ತಟದಲ್ಲಿ ಬಲಾಢ್ಯರ ಸೊಕ್ಕು ಮುರಿದ ಮಹಿಳೆ ಕರೆಮ್ಮ

Date:

ಕರೆಮ್ಮರನ್ನು ನೇರವಾಗಿ ಎದುರಿಸಲಾಗದೆ ಕಾಂಗ್ರೆಸ್‌-ಬಿಜೆಪಿಯಲ್ಲಿ ಮಾವ-ಅಳಿಯ ಒಳಒಪ್ಪಂದ ಮಾಡಿಕೊಂಡು, ತಮ್ಮ ಹಣಬಲವನ್ನು ಪ್ರಯೋಗಿಸಿ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಮತ್ತು ತಾಲೂಕನ್ನು ತಮ್ಮ ಹಿಡಿತದಲ್ಲೇ ಇಟ್ಟಕೊಳ್ಳಬೇಕೆಂಬ ಹಟಕ್ಕೆ ಬಿದ್ದಿದ್ದರು. ತಂತ್ರ ಎಣೆದಿದ್ದರು. ಆದರೂ, ಕರೆಮ್ಮ ಗೆದ್ದು ಬೀಗಿದರು.

ಕೃಷ್ಣಾ ನದಿಯ ತಟದಲ್ಲಿರುವ ರಾಯಚೂರು ಜಿಲ್ಲೆಯ ದೇವದುರ್ಗ ವಿಧಾನಸಭಾ ಕ್ಷೇತ್ರವೂ ಈ ಬಾರಿಯ ಚುನಾವಣೆಯಲ್ಲಿ ಭಾರೀ ಸದ್ದು ಮಾಡಿದ ಕ್ಷೇತ್ರಗಳಲ್ಲೊಂದು. ಕಳೆದ 20 ವರ್ಷಗಳಿಂದ ಅರಕೇರಾ ಕುಟುಂಬಕ್ಕೆ ಮಾತ್ರ ಸೀಮಿತವಾಗಿದ್ದ ಕ್ಷೇತ್ರ ಈ ಬಾರಿ ದಿ.ಎ ವೆಂಕಟೇಶ ನಾಯಕ ಕುಟುಂಬೇತರರಿಗೆ ಒಲಿದಿದೆ. ಪ್ರತೀ ಚುನಾವಣೆಯಲ್ಲಿಯೂ ಒಂದೇ ಕುಟುಂಬದ ವ್ಯಕ್ತಿಗಳು ಮೂರು ಪಕ್ಷಗಳಿಂದ ಸ್ಪರ್ಧಿಸುತ್ತಿದ್ದುದರಿಂದ, ಅನ್ಯರು ಗೆಲ್ಲುವುದಿರಲಿ ಸ್ಪರ್ಧಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಬಾರಿ ಕರೆಮ್ಮ ಜಿ ನಾಯಕ ಎನ್ನುವ ಸಾಮಾನ್ಯ ದಿಟ್ಟ ಮಹಿಳೆ, ಬಿಜೆಪಿಯ ಕೆ ಶಿವನಗೌಡನಾಯಕ ಎನ್ನುವ ಬಲಾಢ್ಯನನ್ನು ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದಾರೆ.

2005ರಲ್ಲಿ ಗ್ರಾಮ ಪಂಚಾಯತಿ ಚುನಾವಣೆಯ ಮೂಲಕ ರಾಜಕೀಯ ಪ್ರವೇಶ ಮಾಡಿ ಅವಿರೋಧವಾಗಿ ಮುಷ್ಠೂರು ಪಂಚಾಯತಿಯ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಕಾಂಗ್ರೆಸ್‌ ಕಾರ್ಯಕರ್ತೆಯಾಗಿದ್ದ ಇವರು ನಂತರ ಮಹಿಳಾ ಘಟಕದ ತಾಲ್ಲೂಕಾಧ್ಯಕ್ಷರಾಗಿ ಪಕ್ಷಸಂಘಟನೆಗೆ ದುಡಿದು ರಾಜಕೀಯದಲ್ಲಿ ಸಕ್ರೀಯರಾದ ಕರೆಮ್ಮ ಅ ನಂತರ ಜಿಲ್ಲಾ ಪಂಚಾಯತಿಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆಗ ಪಕ್ಷ ಬಿ.ಫಾರ್ಮ್‌ ನೀಡಿ ಮತ್ತೆ ವಾಪಸ್‌ ಪಡೆದಿದ್ದರಿಂದ ಬೇಸತ್ತ ಇವರು ಕಾಂಗ್ರೆಸ್‌ ನಿಂದ ಹೊರ ಬಂದರು. ನಂತರ ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾಗಿ ಕ್ಷೇತ್ರಾದಾದ್ಯಂತ ಸಂಚರಿಸಿ ಪಕ್ಷ ಸಂಘಟಿಸಿ ಜನಮನ್ನಣೆ ಗಳಿಸಿದರು.

2018ರ ವಿಧಾನಸಭೆ ಚುನಾವಣೆಗೆ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾದರು. ಕ್ಷೇತ್ರದಲ್ಲಿ ಇದನ್ನು ಗಮನಿಸಿದ ಬಿಜೆಪಿಯ ಕೆ.ಶಿವನಗೌಡನಾಯಕ ಹಣಬಲವನ್ನು ಬಳಸಿ ಕುತಂತ್ರದಿಂದ ಟಿಕೆಟ್‌ನ್ನು ಕರೆಮ್ಮ ಅವರಿಗೆ ತಪ್ಪಿಸಿ, ತಮ್ಮ ಸಂಬಂಧಿಕರಾದ ಶ್ರೀನಿವಾಸ ಪೂಜಾರಿ ಎನ್ನುವ ವ್ಯಕ್ತಿಗೆ ಕೊಡಿಸಿದ್ದರು. ಅ ನಂತರ ಟಿಕೆಟ್‌ ವಂಚಿತರಾದ ಕರೆಮ್ಮ ಜನಾಭಿಪ್ರಾಯವನ್ನು ಪಡೆದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರವನ್ನು ಕೈಗೊಂಡರು. 2018ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು 26,000 ಮತಗಳನ್ನು ಪಡೆಯುವ ಮೂಲಕ ಮೂರನೆಯ ಸ್ಥಾನಕ್ಕಿಳಿದು ಸೋಲು ಕಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸೋತರೂ ದೃತಿಗೆಡದ ಗಟ್ಟಿಗಿತ್ತಿ, ದಿಟ್ಟ ಮಹಿಳೆಯಾದ ಹಳ್ಳಿಗಾಡಿನ ಕರೆಮ್ಮ, ಮತ್ತೆ ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತ ಸಣ್ಣಪುಟ್ಟ ಕೆಲಸಗಳಿಗೆ ಬೆನ್ನುಲುಬಾಗಿ ನಿಂತು ಕಳೆದ ಐದು ವರ್ಷ ಕ್ಷೇತ್ರದಲ್ಲಿ ವಿರೋಧ ಪಕ್ಷದ ರೀತಿಯಲ್ಲಿ ಹಾಲಿ ಶಾಸಕರ ವಿರುದ್ಧ ದನಿ ಎತ್ತುವ ಮೂಲಕ ಅಪಾರ ಜನರ ಪ್ರೀತಿ, ವಿಶ್ವಾಸ, ನಂಬಿಕೆಯನ್ನು ಗಳಿಸಿಕೊಂಡು ಜನರ ಮನಸ್ಸನ್ನು ಗೆದ್ದರು. ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿ ಶಾಸಕರಾಗಿದ್ದು ಯಾರದ್ದೋ ಬೆಂಬಲದಿಂದಲ್ಲ, ಸತತ 8 ವರ್ಷಗಳಿಂದ ಕ್ಷೇತ್ರದ ಜನರ ಕಷ್ಟ ಸುಖಗಳಲ್ಲಿ ಆಭಗಿಯಾಗಿದ್ದರ ಪರಿಣಾಮ. 200 ಹಳ್ಳಿಗಳ ಜನ ಊರಿನ ಮಗಳೆಂದು ಹಾರೈಸಿ, ಸನ್ಮಾನಿಸಿ, ಉಡಿ ತುಂಬಿ ಹಾರೈಸಿದ್ದು, ಜೊತೆಗೆ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜನರ ಸಮಸ್ಯೆಗಳನ್ನ ಆಲಿಸಿದ್ದು ಗೆಲುವಿಗೆ ಕಾರಣವಾಗಿದೆ. ಇಂಥ ಸಾಹಸದ ಮಹಿಳೆಯ ಗೆಲುವು ಜೆಡಿಎಸ್‌ ಪಕ್ಷಕ್ಕೆ ದೊಡ್ಡ ಸಾಧನೆಯೇ ಅನಿಸಲಿಲ್ಲ.

ಕ್ಷೇತ್ರದಲ್ಲಿ ನಡೆದ ಪಂಚರತ್ನ ಯಾತ್ರೆ, ಮತಯಾಚನೆಯ ಬೃಹತ್‌ ಸಮಾವೇಶದಲ್ಲಿ ಒಬ್ಬ ಸಾಮಾನ್ಯ ಹೆಣ್ಣು ಮಗಳು ಸೇರಿಸಿದ್ದ ಜನಸ್ತೋಮವನ್ನು ಕಂಡು ಸಭೆಯಲ್ಲಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಕರೆಮ್ಮ ಈಗಾಗಲೇ ಗೆದ್ದುಬಿಟ್ಟಿದ್ದಾರೆ ಎಂದು ಹೇಳಿದ್ದರು. ಇದೆಲ್ಲ ಸಾಧ್ಯವಾಗೋಕೆ ಜನರ ಜೊತೆಗೆ ನಿರಂತರ ಸಂಪರ್ಕ ಸರಣಿಯಾಗಿ ಪರಿಶ್ರಮ ಮತ್ತು ಕಠಿಣ ಪ್ರಯತ್ನವಿದ್ದರೆ ಮಾತ್ರ ಗೆಲುವಾಗಬಲ್ಲದು ಎಂಬುದನ್ನು ನಿರೂಪಿಸಿದರು.

ಶಿವನಗೌಡ ನಾಯಕ ಜಿಲ್ಲೆಯಲ್ಲಿ ಪ್ರಭಾವಿ ನಾಯಕ ಬಿಜೆಪಿ ಪಕ್ಷದ ಹೈಕಮಾಂಡ್‌ ಜೊತೆಗೂ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಆದರೆ ತಾಲ್ಲೂಕಿನಲ್ಲಿ ವಿಪರೀತ ಮರಳು ದಂಧೆ, ಮಟಕಾ ದಂಧೆಯಂಥ ಕೆಲಸಗಳು ಇವರ ಕುಮ್ಮಕ್ಕುನಿಂದ ಲೈಸೆನ್ಸ್‌ ಇಲ್ಲದೆ ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಮೆರೆಯುತ್ತಿವೆ. ಅಷ್ಟೇ ಅಲ್ಲದೇ ಬಾರ್‌ ‍‍& ವೈನ್‌ ಶಾಪ್‌ ಗಳು ತನ್ನ ಮಾಲೀಕತ್ವದಲ್ಲಿ ಅತೀ ಹೆಚ್ಚು ಜಿಲ್ಲೆಯಲ್ಲಿವೆ. ಜಿಲ್ಲೆಗೆ ಬಂದ ಪ್ರತೀ ಅಧಿಕಾರಿಗಳು ತನ್ನದೇ ಮಾತು ಕೇಳಿಕೊಂಡು ಇರಬೇಕೆನ್ನುವ ದುರಂಹಕಾರಿ, ಯಾವುದೇ ಅಧಿಕಾರಿಗಳು ಇರಲಿ ಏಕವಚನದಲ್ಲಿ ಬಾಯಿಗೆ ಬಂದಂತೆ ಮಾತಾಡುವ ವ್ಯಕ್ತಿ. ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದರೂ ಅಭಿವೃದ್ಧಿ ಕಾಣದ ಕ್ಷೇತ್ರವಾಗಿದೆ.

ಈ ಬಾರಿಯೂ ಕರೆಮ್ಮರನ್ನು ನೇರವಾಗಿ ಎದುರಿಸಲಾಗದೆ ಕಾಂಗ್ರೆಸ್‌-ಬಿಜೆಪಿಯಲ್ಲಿ ಮಾವ-ಅಳಿಯ ಒಳಒಪ್ಪಂದ ಮಾಡಿಕೊಂಡು, ತಮ್ಮ ಹಣಬಲವನ್ನು ಪ್ರಯೋಗಿಸಿ ಚುನಾವಣೆಯಲ್ಲಿ ಗೆಲ್ಲಬೇಕೆಂಬ ಮತ್ತು ತಾಲ್ಲೂಕನ್ನು ತಮ್ಮ ಹಿಡಿತದಲ್ಲೇ ಇಟ್ಟಕೊಳ್ಳಬೇಕೆಂಬ ಹಟದಿಂದ ಕರೆಮ್ಮರ ವಿರುದ್ಧ ಅವರದ್ಧೇ ಕುಟುಂಬದ ರೂಪಾ ಶ್ರೀನಿವಾಸ ನಾಯಕ್‌ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು. ಯಾಕೆಂದರೆ ರೂಪಾ ಅವರು ರೈತಸಂಘದಲ್ಲಿ ಗುರುತಿಸಿಕೊಂಡಿದ್ದಾರೆ. ಅವರೂ ಸ್ಪರ್ಧಿಸಿದರೆ, ಕರೆಮ್ಮಗೆ ದೊರೆಯಬಹುದಾದ ಒಂದಷ್ಟು ಮತಗಳನ್ನು ರೂಪಾ ಸೆಳೆಯಬಹುದು ಎನ್ನುವ ಲೆಕ್ಕಾಚಾರವೂ ಇವರಲ್ಲಿತ್ತು ಆದರೆ ಅದು ಫಲ ನೀಡಲಿಲ್ಲ.

ಇನ್ನು ಒಂದು ಕಾಲದಲ್ಲಿ ದೇವದುರ್ಗ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಆದರೆ ಈಗ ಕ್ಷೇತ್ರದಲ್ಲಿ ಒಳಒಪ್ಪಂದ ರಾಜಕಾರಣದಿಂದ ಕಾಂಗ್ರೆಸ್‌ ಪಕ್ಷ 3,000 ಮತಗಳು ಪಡೆಯುವ ಮೂಲಕ ತನ್ನ ಠೇವಣಿ ಕಳೆದುಕೊಂಡಿದೆ. ಕಾಂಗ್ರೆಸ್‌ ನಲ್ಲಿದ್ದ ಬಿ.ವಿ ನಾಯಕ್, ಅಧಿಕಾರದಾಸೆಗಾಗಿ ಬಿಜೆಪಿ ಸೇರಿಕೊಂಡು ಮಾನ್ವಿಯಿಂದ ಸ್ಪರ್ಧಿಸಿ ಸೋತರು, ದೇವದುರ್ಗದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀದೇವಿನಾಯಕ ಬಿಜೆಪಿಯ ಶಿವನಗೌಡ ನಾಯಕ್‌ ಇಬ್ಬರು ರಾತ್ರೋರಾತ್ರಿ ಅಣ್ಣತಂಗಿಯ ಒಪ್ಪಂದದ ರಾಜಕಾರಣವವನ್ನು ಅರ್ಥ ಮಾಡಿಕೊಂಡ ಕ್ಷೇತ್ರದ ಜನ ಪಕ್ಷದ ಕೆಲವು ಕಾರ್ಯಕರ್ತರು ಮತ್ತು ಮುಖಂಡರು ಜೆಡಿಎಸ್‌ನತ್ತ ಮುಖ ಮಾಡಿದರು.

images 1

ಈದಿನ.ಕಾಮ್‌ ಜೊತೆ ಮಾತನಾಡಿದ ಕರೆಮ್ಮ, “ತಾಲ್ಲೂಕಿನಲ್ಲಿ ಇದುವರೆಗೂ ಹೇಳಿಕೊಳ್ಳುವಂಥ ಅಭಿವೃದ್ಧಿ ಕಂಡಿಲ್ಲ. ತಾಲ್ಲೂಕಿನಲ್ಲಿ ಅಪೌಷ್ಟಿಕತೆ ಹೆಚ್ಚಿದೆ, ಸರಿಯಾದ ಆಸ್ಪತ್ರೆ ವ್ಯವಸ್ಥೆಯಿಲ್ಲ, ಹಳ್ಳಿಗಳಿಗೆ ಸರಿಯಾದ ಬಸ್ಸುಗಳ ವ್ಯವಸ್ಥೆ ಇಲ್ಲ, ಮಹಿಳೆಯರಿಗೆ ಸರಿಯಾದ ಶೌಚಾಲಯ ವ್ಯವಸ್ಥೆಯಿಲ್ಲ ಈ ಸಮಸ್ಯೆಗಳನ್ನು ಮೊದಲು ಅಭಿವೃದ್ಧಿ ಮಾಡಬೇಕು ಕ್ಷೇತ್ರದಲ್ಲಿ ಮಹಿಳೆಯರಿಗೆ ಮೊದಲ ಆಧ್ಯತೆ ನೀಡುತ್ತೇವೆ. ಜೊತೆಗೆ ಕೆಲವು ಹಳ್ಳಿಗಳಿಗೆ ನೀರಾವರಿ ವ್ಯವಸ್ಥೆಯಿಲ್ಲ ಅದನ್ನು ಜಾರಿ ಮಾಡಿಕೊಡಲು ಸರ್ಕಾರದ ಮೇಲೆ ಒತ್ತಡ ತಂದು ಅದನ್ನು ಜಾರಿಗೆ ತರುವ ಕೆಲಸ ಮಾಡುತ್ತೇನೆ “ ಎಂದು ಹೇಳಿದರು.

ಚುನಾವಣೆಯೆಂದರೆ ಅಭ್ಯರ್ಥಿಗಳು ಕೋಟಿಗಟ್ಟಲೇ ದುಡ್ಡು ಖರ್ಚು ಮಾಡಿ ಮತಗಳನ್ನು ಪಡೆದರೆ, ಆದರೆ ಅತ್ಯಂತ ಹಿಂದುಳಿದ ತಾಲ್ಲೂಕೆಂದು ಖ್ಯಾತಿ ಪಡೆದ ದೇವದುರ್ಗದಲ್ಲಿ ಜನರೇ ಅಭ್ಯರ್ಥಿಗಳ ಖರ್ಚು ನಿಭಾಯಿಸುವ ಪದ್ಧತಿಯನ್ನು ಈ ಕರೆಮ್ಮ ನಿರೂಪಿಸಿಬಿಟ್ಟರು. ಪ್ರತಿಯೊಂದು ಗ್ರಾಮವು ಕೂಡ ಚುನಾವಣಾ ಖರ್ಚಿಗಾಗಿ 2000-100000 ರೂ.ವರೆಗೆ ಅವರ ಉಡಿಯಲ್ಲಿ ಹಾಕಿ ಆಶೀರ್ವದಿಸಿ, ಹಾರೈಸುತ್ತಿದ್ದು ಕೂಡ ಉದಾಹರಣೆಯಿದೆ. ʼಚುನಾವಣೆಯ ಹಿಂದಿನ ದಿನ ಒಂಭತ್ತು ನಾಯಕರ ದೊಡ್ಡಿಗಳಿಂದ ಒಂಭತ್ತು ಲಕ್ಷ ರೂಪಾಯಿ ಕೊಡಲು ಬಂದರೆ ಅದನ್ನು ತೆಗೆದುಕೊಳ್ಳದೆ ಈಗಾಗಲೇ ಬಂದಿರುವ ಹಣ ನನ್ನಲ್ಲಿ ಹಾಗೇ ಉಳಿದಿದೆ, ಅದು ಖರ್ಚಾಗಿಲ್ಲ ನಿಮ್ಮದೇ ಊರಿನಲ್ಲಿ ನೀವೇ ಖರ್ಚು ಮಾಡಿ ಎಂದು ವಾಪಸ್ಸ್‌ ಕಳಿಸಿದ್ದರುʼ ಎಂದು ಸ್ಥಳೀಯರೊಬ್ಬರು ಹೇಳುತ್ತಾರೆ.

ಕರೆಮ್ಮ ಎರಡು ಬಾರಿ ಸೋತರು ಜನರ ಸಂಪರ್ಕ ಬಿಡಲಿಲ್ಲ. ನಿರಂತರವಾಗಿ ಜನರೊಂದಿಗೆ ಇರುವುದು ಅವರ ಗೆಲುವಿಗೆ ದಾರಿ ಮಾಡಿಕೊಟ್ಟಿದೆ. ಇತ್ತೀಚೆಗೆ, ಗಬ್ಬೂರಿಗೆ ತಾಲೂಕು ಸ್ಥಾನಮಾನವನ್ನು ತಪ್ಪಿಸಿದ ಹಾಲಿ ಶಾಸಕರು, ಸ್ವಂತ ಊರಾದ ಅರಕೇರಾವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವ ಮೂಲಕ ಇಲ್ಲಿನ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರಿಂದ ಕೆಲವು ಬಿಜೆಪಿ (ಲಿಂಗಾಯತ) ಮುಖಂಡರು ಶಿವನಗೌಡ ವಿರುದ್ಧ ತಿರುಗಿ ಬಿದ್ದಿದ್ದು ಕೂಡ ಕರೆಮ್ಮಗೆ ಲಾಭವಾಗಿದೆ.

ಈ ಲೇಖನ ಓದಿದ್ದೀರಾ?: ಕರ್ನಾಟಕ ಚುನಾವಣೆ | ಯಡಿಯೂರಪ್ಪ ಕಣ್ಣೀರಿಗೆ ಭಾರಿ ಬೆಲೆತೆತ್ತ ಬಿಜೆಪಿ

ಸರಳತೆಯ ಜೊತೆಗೆ ಜನಗಳ ನಿರಂತರ ಸಂಪರ್ಕ ಮತ್ತು ಶಿವನಗೌಡ ಮತ್ತು ಪ್ರತಿಸ್ಪರ್ಧಿಗಳ ಕ್ಷುಲ್ಲಕ ಮಾತುಗಳು ಕರೆಮ್ಮನನ್ನು ಒಬ್ಬ ಜನನಾಯಕಿಯನ್ನಾಗಿ ರೂಪುಗೊಳಿಸಿದವು. ನಿರಂತರ ಸಂಪರ್ಕವಿದ್ದರೆ ಸಾಕು ಚುನಾವಣೆ ಗೆಲ್ಲಬಹುದು ಅಂತ ರಾಜ್ಯಕ್ಕೆ ತೋರಿಸಿಕೊಟ್ಟರು. ಈ ಗೆಲುವು ಇವತ್ತು ನಿನ್ನೆಯದಲ್ಲ ಕರೆಮ್ಮನವರ ಸತತ 10ವರ್ಷಗಳ ಪ್ರಯತ್ನ ಕ್ಷೇತ್ರದ ತುಂಬೆಲ್ಲ ಸಂಚರಿಸಿ ಜನಮನ ಗೆದ್ದಿರುವುದೇ ಈ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಯಿತು. ಸೋಲಿಸಲು ವಿರೋಧಿಗಳಿಂದ ಎಷ್ಟೇ ಪ್ರಯತ್ನ ನಡೆದರೂ ಕುಟುಂಬ ರಾಜಕಾರಣಿಗಳ ತಂತ್ರ-ಕುತಂತ್ರಗಳ ಆಟ ನಡೆಯಲಿಲ್ಲ.

ರಾಜ್ಯದಲ್ಲಿ ಹೆಚ್ಚಿನ ಜನರು ಬೆಂಗಳೂರು, ಹೈದರಾಬಾದ್‌, ಬಾಂಬೆ ಮತ್ತು ಪುಣೆ ನಗರಗಳಿಗೆ ವಲಸೆ ಹೋದರೂ ಇಲ್ಲಿನ ಜನರ ಸಮಸ್ಯೆಗಳು ಸದ್ದು ಮಾಡಲೇ ಇಲ್ಲ. ಅದರಂತೆ ಈ ದಿಟ್ಟಮಹಿಳೆಯ ಗೆಲುವು ಹತ್ತು ವರ್ಷಗಳ ಕಾಲ ಬಲಾಢ್ಯರ ಕೊಟ್ಟಿರುವ ಕಿರುಕುಳ ಅಷ್ಟಿಷ್ಟಲ್ಲ. ಅದೆಲ್ಲವನ್ನೂ ಎದುರಿಸಿ ನಿಂತು ಇವತ್ತು ಜಯ ಸಾಧಿಸಿದರು. ಇಂಥ ಹೋರಾಟದ ಗೆಲುವು ಪಕ್ಷದ ಮುಖ್ಯಸ್ಥರಿಗೆ ಗೊತ್ತಾಗುವುದೇ ಇಲ್ಲ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...

ಗದಗ | ದಲಿತ ಯುವಕರ ಮೇಲೆ ಹಲ್ಲೆ, ಜಾತಿ ನಿಂದನೆ ಆರೋಪ ಖಂಡಿಸಿ ದಲಿತ ಮುಖಂಡರ ಪ್ರತಿಭಟನೆ 

ದಲಿತ ಸಮುದಾಯದ ಜಕ್ಕಲಿ ಗ್ರಾಮದ ಅಂದಪ್ಪ ಮಾದರ ಮತ್ತು ಅವರ ಸ್ನೇಹಿತರ...

ಉತ್ತರ ಕನ್ನಡ | ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಮಾರ್ಚ್‌ನಲ್ಲಿ ಹೆಚ್ಚುವರಿ ಸೀಮೆಎಣ್ಣೆ ವಿತರಣೆ

ಉತ್ತರ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಪಡಿತರ ಚೀಟಿದಾರರಿಗೆ ಕೇಂದ್ರ ಸರ್ಕಾರದಿಂದ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...