ಕೆ.ಜಿ.ಎಫ್: ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಲು ವಿಜ್ಞಾನ ಮತ್ತು ವಸ್ತು ಪ್ರದರ್ಶನ, ಪ್ರತಿಭಾ ಕಾರಂಜಿ ಹಾಗೂ ತಂತ್ರಜ್ಞಾನ ಇತರೆ ಕಾರ್ಯಕ್ರಮಗಳು ಸೂಕ್ತ ವೇದಿಕೆಯಾಗಿದೆ ಎಂದು ದತ್ತ ಸಾಯಿ ಶಾಲಾ ಕಾರ್ಯದರ್ಶಿ ಅ.ಮು ಲಕ್ಷ್ಮೀನಾರಾಯಣ್ ಹೇಳಿದರು.
ಪಟ್ಟಣದ ಅಂಕತಟ್ಟಹಳ್ಳಿ ಮುಖ್ಯರಸ್ತೆಯಲ್ಲಿರುವ ದತ್ತಸಾಯಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕೇವಲ ಶಿಕ್ಷಣ ಕ್ಷೇತ್ರ ದಲ್ಲಿ ಮಾತ್ರ ಅಲ್ಲದೆ, ಇಂತಹ ವಿಜ್ಞಾನ ವಸ್ತು ಪ್ರದರ್ಶನ ಕ್ರೀಡೆ ಪ್ರತಿಭಾ ಕಾರಂಜಿ ಸೇರಿದಂತೆ ಇನ್ನೂ ಅನೇಕ ವಿನೂತನ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಲು ಉತ್ತಮ ವೇದಿಕೆ ಯಾಗಿದೆ ಎಂದು ಹೇಳಿದರು.
ಶಾಲೆಯ ಶಿಕ್ಷಕರು ಸಹ ಶಿಕ್ಷಣದ ಜೊತೆಗೆ ತಿಂಗಳಿಗೆ ಒಮ್ಮೆ ಇಂತಹ ಜ್ಞಾನಾರ್ಜನೆಯ ತರಗತಿಗಳನ್ನು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದ ರಿಂದ ಮಕ್ಕಳಲ್ಲಿ ಜ್ಞಾನ ಇಂದಿನ ಆಧುನಿಕ ಜಗತ್ತಿನ ನಡೆಯುತ್ತಿರುವ ತಂತ್ರಜ್ಞಾನ ಮತ್ತು ವಿದ್ಯಮಾನಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ ತಮ್ಮಲ್ಲಿ ಹಡಗಿರುವ ಸೂಪ್ತ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದರು.
ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ವಿವಿಧ ಕಾರ್ಯಕ್ರಮಗಳನ್ನು ಬೇತಮಂಗಲದ ವಿವಿಧ ಶಾಲೆಯ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಮಕ್ಕಳಿಂದ ಅದರ ಉಪಯೋಗ ಪ್ರಯೋಜನ ಮತ್ತು ವಿವರಣೆಯನ್ನು ವಿವರವಾಗಿ ತಿಳಿದುಕೊಂಡು ತಾವು ಸಹ ಇತಂಹ ಪ್ರಯೋಗಗಳನ್ನು ನಡೆಸುವುದಾಗಿ ತಿಳಿಸಿದರು.
ಇದನ್ನು ಓದಿದ್ದೀರಾ..? ನರಸಾಪುರದಲ್ಲಿ ಅಂಬೇಡ್ಕರ್ ವೃತ್ತ ಹೆಸರಿಡಲು ಕನ್ನಡ ಸೇನೆ ಒತ್ತಾಯ
ಈ ಸಂದರ್ಭದಲ್ಲಿ ದತ್ತ ಸಾಯಿ ಶಾಲೆಯ ಆಡಳಿತ ಅಧಿಕಾರಿ ಜಲಜಾ ಮಂಜುನಾಥ್, ಮುಖ್ಯ ಶಿಕ್ಷಕಿ ಜಾಸ್ಮಿನ್ ಸುಜಾತ, ಗ್ರಾಮೀಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಂಗೂಲಪ್ಪ, ಖಜಾಂಚಿ ಪ್ರಭಾಕರ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ್, ರೂರಲ್ ಡಿಗ್ರಿ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ವಿಜಯೇಂದ್ರ, ನಿರ್ದೇಶಕ ವಿಜಯೇಂದ್ರ, ಹಾಗೂ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಶಿಕ್ಷಕರು ಶಾಲೆಯ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.





