ಕೆಜಿಎಫ್ : ಶ್ರೀ ಭಕ್ತ ಕನಕದಾಸರ 538ನೇ ಕನಕ ಜಯಂತೋತ್ಸವವನ್ನು ನ 8 ರಂದು ನಾಳೆ ಕೆಜಿಎಫ್ ತಾಲೂಕಿನಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲು ನಿಶ್ಚಯಿಸಿದ್ದೇವೆ ಎಂದು ಕೆಜಿಎಫ್ ನ ಕರ್ನಾಟಕ ಪ್ರದೇಶದ ಕುರುಬರ ಸಂಘದ ಮುಖಂಡರುಗಳು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾಳೆ ನ 8 ರಂದು ಶ್ರೀ ಭಕ್ತ ಕನಕದಾಸರ 538ನೇ ಜಯಂತೋತ್ಸವದ ಪ್ರಯುಕ್ತ ತಾಲೂಕು ಆಡಳಿತ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘ ಕೆಜಿಎಫ್ ವತಿಯಿಂದ ನಗರ ಹಾಗೂ ಗ್ರಾಮೀಣ ಭಾಗದಿಂದ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಿದ್ದು ಸಮಯ 11 ಗಂಟೆಗೆ ನಗರಸಭೆ ಉದ್ಯಾನವನದಲ್ಲಿರುವ ಶ್ರೀ ಕನಕದಾಸರ ಪುತ್ತಲಿಗೆ ಮಾಲಾರ್ಪಣೆ ಮಾಡಿ ವೇದಿಕೆ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಭಕ್ತ ಕನಕದಾಸರ ಜಯಂತಿ ನಮ್ಮ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ ಈ ದಿನವನ್ನು ಸಮರ್ಪಕವಾಗಿ ಬಹಳ ವಿಜೃಂಭಣೆಯಿಂದ ಮಾಡಲಿದ್ದು ಎಲ್ಲಾ ಕುಲಬಾಂಧವರು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಹ್ವಾನ ನೀಡಿದರು.
ಲಕ್ಷ್ಮಿ ಆನೆ ಮೆರವಣಿಗೆ: ಶ್ರೀ ಭಕ್ತ ಕನಕದಾಸರ 538ನೇ ಜಯಂತೋತ್ಸವದ ಪ್ರಯುಕ್ತ ಕಾಡು ಸಿದ್ದೇಶ್ವರ ಮಠದಿಂದ ಲಕ್ಷ್ಮಿ ಆನೆ ನಗರಕ್ಕೆ ಬರಲಿದ್ದು ಆನೆ ಮೇಲೆ ಶ್ರೀ ಕನಕದಾಸರ ಪುತ್ತಲೆಯನ್ನು ಇರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಶ್ರೀ ಕನಕದಾಸರ ಜಯಂತೋತ್ಸವದ ಪ್ರಯುಕ್ತ ಡೊಳ್ಳು ಕುಣಿತ ವೀರಗಾಸೆ ಕುಣಿತ ಕೊಂಬು ಕಹಳೆ ತಮಟೆ ವಾದ್ಯ ಕೀಲು ಕುದುರೆ ಗಾರಡಿ ಗೊಂಬೆ ಉದ್ದ ಮನುಷ್ಯ ಹಾಗೂ ಪೂಜಾರಿಗಳಿಂದ ತೆಂಗಿನಕಾಯಿ ಪವಾಡ ಮತ್ತು ಮುಂತಾದ ಕಾರ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ ಎಂದು ತಿಳಿಸಿದರು.
3000 ರಿಂದ 3500 ಜನ ಸೇರುವ ನಿರೀಕ್ಷೆ: ಶ್ರೀ ಭಕ್ತ ಕನಕದಾಸರ ಜಯಂತಿಯ ಪ್ರಯುಕ್ತ ಕೆಜಿಎಫ್ ನಗರದಲ್ಲಿ ಇದೇ ಮೊದಲ ಬಾರಿಗೆ ಕಾಡುಸಿದ್ದೇಶ್ವರ ಮಠದಿಂದ ಲಕ್ಷ್ಮಿ ಆನೆಯನ್ನು ತರಿಸಲಿದ್ದು ಈ ಲಕ್ಷ್ಮಿ ಆನೆ ಮೆರವಣಿಗೆಯನ್ನು ವೀಕ್ಷಿಸಲು ಸುಮಾರು 3000 ದಿಂದ 3500 ಜನ ಸೇರುವ ಸಂಭವವಿದೆ ಎಂದರು.
ಇದನ್ನು ಓದಿದ್ದೀರಾ…?ದೇವನಹಳ್ಳಿ |ಬೋಟಿಂಗ್ ವಿಹಾರಕ್ಕೆ ಸಚಿವ ಕೆ.ಹೆಚ್ ಮುನಿಯಪ್ಪ ಚಾಲನೆ
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಕೆಜಿಎಫ್ ತಾಲೂಕು ಅಧ್ಯಕ್ಷರಾದ ನಂಜುಂಡಗೌಡ ,ಕುರುಬ ಸಮುದಾಯದ ಮುಖಂಡರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ.ನಾಗರಾಜ್. ಎಂಬಿಎ ಕೃಷ್ಣಪ್ಪ. ಚಂದ್ರಕಾಂತ್. ಬೆಟ್ಕೂರು ಶ್ರೀನಿವಾಸ್ ಹಾಗೂ ಉಪಸ್ಥಿತರಿದ್ದರು.





