ಕೋಲಾರ :- ಹಳೆ ಬಸ್‌ನಿಲ್ದಾಣದಲ್ಲಿ ಹೂ ಮಾರಾಟಗಾರರ ಹಾಗೂ ಹೂ ಬೆಳೆಗಾರರ ಸಮಸ್ಯೆ ಆಲಿಸಲು ಮಾರುಕಟ್ಟೆಗೆ ಭೇಟಿ ನೀಡಿದ ಸಂಸದರಾದ ಮಲ್ಲೇಶ ಬಾಬು ರವರು ಮಾರುಕಟ್ಟೆಯನ್ನು ವಿಕ್ಷಣೆ ಮಾಡಿ ಹೂ ಬೆಳೆಗಾರರಿಗೆ ತೊಂದರೆ ನೀಡದಂತೆ ನಗರಸಭೆ ಕಮಿಷನರ್ ನವೀನ್ ರವರಿಗೆ ಸೂಚನೆ ನೀಡಿ ಮಾರುಕಟ್ಟೆಗೆ ಮೂಲಭೂತ ಸೌರ್ಕಯಗಳನ್ನು ಒದಗಿಸುವಂತೆ ಸೂಚನೆ ನೀಡಿದರು.
ಮೂರು ದಿನದ ಹಿಂದೆ ಹೂ ಮಾರುಕಟ್ಟೆಗೆ ಭೇಟಿ ನೀಡಿದ ನಗರಸಭೆ ಕಮೀಷನರ್ ನವೀನ್ ರವರು ರೈತರ ಹೂ ಹರಾಜು ಹಾಕದಂತೆ ಸೂಚನೆ ನೀಡಿದ್ದು ಇದ್ದರಿಂದ ಕೆರಳಿದ್ದ ರೈತರು ವ್ಯಾಪಾರಸ್ಥರು ರೈತಸಂಘದವರು ಹೂವನ್ನು ರಸ್ತೆಗೆ ಸುರಿಯುವ ನಿರ್ಧಾರ ಕೈಗೊಂಡಿರುವ ವಿಷಯ ತಿಳಿದು ಮಾರುಕಟ್ಟೆಗೆ ಬಂದ ಸಂಸದರು ಹೂ ಬೆಳೆಗಾರರ ರೈತರ ಜೊತೆ ಚರ್ಚೆ ಮಾಡಿ ಸ್ಥಳದಲ್ಲಿದ್ದ ನಗರಸಭೆ ಕಮೀಷನರ್ ರವರಿಗೆ ಅನಾಧೀಕೃತ ಅಂಗಡಿಗಳನ್ನು ತೆರೆವುಗೊಳಿಸಿ ಅದನ್ನು ಬಿಟ್ಟು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ಹೂ ಬೆಳೆಗಾರರಿಗೆ ತೊಂದರೆ ಯಾಗದಂತೆ ಕ್ರಮ ವಹಿಸಿ ಎಂದು ಸೂಚನೆ ಮಾಡುವ ಜೊತೆಗೆ ಇಂದಿರಾ ಕ್ಯಾಂಟಿನ್ ಪಕ್ಕದಲ್ಲಿರುವ ಸ್ಥಳವನ್ನು ಅಭಿವೃದ್ಧಿಪಡಿಸಿ ಪಾರ್ಕಿಂಗ್ ವ್ಯವಸ್ಥೆಮಾಡಿ ಎಂದು ಸೂಚಿಸಿದರು.
50-60 ವರ್ಷಗಳಿಂದ ಹಳೇ ಬಸ್ ನಿಲ್ದಾಣೆದಲ್ಲಿ ಹೂ ವ್ಯಾಪಾರ ಮಾಡಿಕೊಂಡು ರೈತರು ತರುವ ಹೂವನ್ನು ಹರಾಜು ಹಾಕಿ ಉತ್ತಮ ಬೆಲೆ ನೀಡುತ್ತಿದ್ದ ಈಗ ಏಕಾಏಕಿ ನಗರಸಭೆ ಹೊಸ ಕಾನೂನು ತರುವುದು ರೈತರಿಗೆ ಅನ್ಯಾಯ ಮಾಡಿದಂತೆ ರೈತರಿಗೆ ತೊಂದರೆಯಾದರೆ ರೈತರ ಪರವಾಗಿ ಬೀದಿಗಿಳಿಯುವ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡುವ ಜೊತೆಗೆ ವ್ಯಾಪಾರಸ್ಥರು ರೈತರು ಸಹ ಮಾರುಕಟ್ಟೆಯಲ್ಲಿ ಸಮಸ್ಯೆಯಾಗದಂತೆ ಅಧಿಕಾರಿಗಳಿಗೆ ಸಹಕಾರಿಸಬೇಕೆಂದು ಸಲಹೆ ನೀಡಿದರು.
ಗಲ್‌ಪೇಟೆ ಉಪನೀರಿಕ್ಷರಾದ ಭಾರತಿ ರವರು ಮಾತನಾಡಿ ರೈತರು ಹೂ ತಂದ ಗಾಡಿಗಳನ್ನು ಬೇರೆ ಕಡೆ ಪಾರ್ಕಿಂಗ್ ಮಾಡಿ ಸಂಚಾರಿ ಅಡಚಣೆ ಆಗದಂತೆ ರೈತರ ಸಹಕರಿಸಿ ಯಾವುದೇ ದಂಡ ಹಾಕಿಸಿಕೊಳ್ಳದಂತೆ ಪೊಲೀಸ್ ರವರಿಗೆ ಸಹಕರಿಸಬೇಕೆಂದು ರೈತರಿಗೆ ಸಲಹೆ ನೀಡಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ ನಾರಾಯಣಗೌಡ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆಯುತ್ತಿರುವ ಟೆಮೋಟ ಮತ್ತಿತರ ಬೆಳೆಗಳಿಗೆ ರೋಗ ನಿಯಂತ್ರಣಕ್ಕೆ ಬಾರದ ಪರ್ಯಾಯವಾಗಿ ಜಿಲ್ಲೆಯಲ್ಲಿ ರೈತರು ಹೂ ಬೆಳೆಯನ್ನು ಬೆಳೆದು ಜೀವನ ರೂಪಿಸಿಕೊಳ್ಳುತ್ತಿರುವ ಸಮಯದಲ್ಲಿ ಕಷ್ಟಪಟ್ಟು ಬೆಳೆದ ಹೂವನ್ನು ಮಾರುಕಟ್ಟೆಗೆ ತಂದರೆ ಅಧಿಕಾರಿಗಳ ದೌರ್ಜನ್ಯದಿಂದ ಹರಾಜು ಪ್ರಕ್ರಿಯೇ ಸ್ಥಗೀತವಾಗಿ ಹೂಬೆಲೆಯು ಕುಸಿದು ರೈತರನ್ನು ಕೆರಳುವಂತೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಳೆ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶದ ನೆಪದಲ್ಲಿ ಹೂ ಬೆಳೆಗಾರರು ಮತ್ತು ರೈತರ ಮೇಲೆ ಅಧಿಕಾರಿಗಳ ದೌರ್ಜನ್ಯ ಸಹಿಸುವುದಿಲ್ಲ ನಗರಾಧ್ಯಂತಹ ನೂರಾರು ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಒತ್ತುವರಿಧಾರರಿಂದ ನಗರ ಸಭೆ ಜಮೀನು ವಶ ಪಡಿಸಿಕೊಳ್ಳಲು ತಾಕತ್ತು ಇಲ್ಲದೇ ರೈತರ ಜೀವನಾಡಿಯಾಗಿರುವ ಹೂ ಮಾರುಕಟ್ಟೆಯ ಮೇಲೆ ಅಧಿಕಾರಿಗಳಗೆ ಏಕೆ ಕಣ್ಣು ಎಂದು ಕೀಡಿಕಾರಿದರು.
ಖಾಲಿ ಇರುವ ಜಾಗವನ್ನು ಮೊದಲು ಅಭಿವೃದ್ಧಿಪಡಿಸಿಲಿ ಇಲ್ಲವೇ ನಗರದಲ್ಲಿ ಹೂ ಮಾರುಕಟ್ಟೆಗೆ ಸೂಕ್ತವಾದ ಜಾಗ ಗುರುತಿಸಿ ಅದನ್ನು ಬಿಟ್ಟು ಸ್ವಚ್ಛತೆಯಿಲ್ಲದ ಶೌಚಾಲಯಗಳ ನೀರು ಹರಿಯುವ ಜಾಗದಲ್ಲಿ ರೈತರು ಹೂ ಮಾರಾಟ ಮಾಡಿಕೊಳ್ಳಲಿ ಎಂದು ಹೇಳುವ ಅಧಿಕಾರಿಗಳೇ ಯಾವತ್ತಾದರು ಒಂದು ಎಕರೆ ಹೂ ಬೆಳೆದು ಅದರ ಕಷ್ಟದ ಹರಿವು ಇದೆಯೇ ಎಂದು ಪ್ರಶ್ನೆ ಮಾಡುವ ಜೊತೆಗೆ ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸಿ ಇಲ್ಲವೇ ರಸ್ತೆಗಳಲ್ಲಿ ಹೂ ಹರಾಜು ಹಾಕುತ್ತೇವೆಂದು ಎಚ್ಚರಿಕೆ ನೀಡಿದರು.
ನಂತರ ಮಾತನಾಡಿದ ನಗರಸಭೆ ಕಮಿಷನರ್ ನವೀನ್ ರವರು ರೈತರಿಗೆ ವ್ಯಾಪಾರಸ್ಥರಿಗೆ ತೊಂದರೆ ನೀಡುವುದಿಲ್ಲ ಜೊತೆಗೆ ಒತ್ತುವರಿ ಮಾಡಿಕೊಂಡಿರುವ ಅನಧಿಕೃತ ಅಂಗಡಿಗಳನ್ನು ತೆರವು ಮಾಡಿ ಇಂದಿರ ಕ್ಯಾಂಟಿನ್ ಪಕ್ಕ ಪಾರ್ಕಿಂಗ ವ್ಯವಸ್ಥೆ ಮಾಡುವ ಭರವಸೆಯನ್ನು ಸಂಸದರ ಸಮ್ಮುಖದಲ್ಲಿ ರೈತರಿಗೆ ನೀಡಿದರು.
ಇದನ್ನು ಓದಿದ್ದೀರಾ..? ಸರ್ಕಾರಿ ಗೋಮಾಳದಲ್ಲಿ ಅಕ್ರಮ ಸೋಲಾರ್ ಪ್ಲಾಟ್ ವಿರುದ್ಧ ಕ್ರಮಕ್ಕೆ ಒತ್ತಾಯ: ಸಂದಾ ಮುನಿಸ್ವಾಮಿ
ಹೋರಾಟದಲ್ಲಿ ಇರಗಸಂದ್ರ ವಿಶ್ವನಾಥ, ಜಿಲ್ಲಾಧಕ್ಷ ಈಕಂಬಳ್ಳಿ ಮಂಜುನಾಥ ಕೆ.ಎಂ.ಕೆ ಹೂ ಮಾರಾಟಗಾರರಾದ ಗೋಪಾಲ ಕೃಷ್ಣ, ಕಿಲಾರಿಪೇಟೆ ಮಣಿ, ಮುನಿಯಪ್ಪ ವಿನಯ್, ಕೃಷ್ಣಮೂರ್ತಿ ಚಲಪತಿ, ಗಿರೀಶ್, ನಟರಾಜ್ ದಿಂಬ ನಾಗರಾಜ್, ನೂರಾರು ರೈತರರು ವ್ಯಾಪಾರಸ್ಥರು ಹಾಗೂ ರೈತ ಸಂಘದ ಕಾರ್ಯಕರ್ತರು ಭಾಗವಹಿಸಿದರು





