ಕೆ.ಜಿ.ಎಫ್:ಅಂಬೇಡ್ಕರ್ ಭವನದ ಕಟ್ಟಡವನ್ನು ನಿಮ್ಮ ಗಮನಕ್ಕೆ ಬಾರದೆ ಹೇಗೆ ಕೆಡವಲಾಯಿತ್ತು ಮತ್ತು ದಶಕಗಳಿಂದ ಇದ್ದಂತಹ ರಾಜಕಾಲುವೆಯನ್ನು ಹೇಗೆ ಪ್ರಭಾವಿಗಳು ಮುಚ್ಚಿದ್ದಾರೆ ಗ್ರಾಮ ಪಂಚಾಯ್ತಿವತಿಯಿಂದ ಕೈಗೊಂಡಿರುವ ಕ್ರಮವೇನು ನೀವು ಪಂಚಾಯ್ತಿಯಲ್ಲಿ ಕಳೆದ 7 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಿರಿ ಈ ಭಾಗದ ದಲಿತರಿಗೆ ನೀವು ಮಾಡಿರುವ ಅಭಿವೃದ್ಧಿ ಕೆಲಸಗಳ ಲೀಸ್ಟ್ ನೀಡಿ ಎಂದು ದೊಡ್ಡ ದ್ವನಿಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಹೋಬಳಿಯ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿವೇಶನ ರಹಿತ ಕಡು ಬಡವರ ಫನಾನುಭವಿಗಳನ್ನು ಗುರುತಿಸಿ ನಿವೇಶನಗಳನ್ನು ಮಂಜೂರು ಮಾಡಬೇಕು ಮನೆ ಇಲ್ಲದವರಿಗೆ ಮನೆಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಎಂ.ರಾಮಪ್ಪ, ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ದಲಿತರು ಹಿಂದುಳಿದ ವರ್ಗದವರು ವಾಸಿಸುತ್ತಿದ್ದಾರೆ ವಸತಿ ಇಲ್ಲದೆ ಗುಡಿಸಲಿನಲ್ಲಿ 5 ರಿಂದ 10 ಮಂದಿ ಕುಟುಂಬಸ್ಥರು ಕಷ್ಟಂದ ಪರಿಸ್ಥಿತಿಯಲ್ಲಿ ವಾಸ ಮಾಡುತ್ತಿದ್ದಾರೆ ಈ ಹಿನ್ನಲೆಯಲ್ಲಿ ಟಿ.ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 197 ರಲ್ಲಿ ಲಭ್ಯವಿರುವ ಸರ್ಕಾರಿ ಖರಾಬು ಜಮೀನಿನಲ್ಲಿ 200 ಕುಟುಂಬಗಳು ಗುಡಿಸಲುಗಳನ್ನು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ ಕಂದಾಯ ಇಲಾಖೆ 2 ಎಕರೆ 37 ಗುಂಟೆ ಜಮೀನು ಮಂಜೂರು ಮಾಡಿದ್ದರೆ.
ಆದರೆ 2 ಎಕರೆ 37 ಗುಂಟೆ ಜಮೀನು ಸಾಲುವುದಿಲ್ಲ ನಮಗೆ ಕನಿಷ್ಟ ಪಕ್ಷ 5 ಎಕರೆ ಜಮೀನು ಮಂಜೂರು ಮಾಡುವಂತೆ ಆಗ್ರಹಿಸಿ ಅವರುಗಳಿಗೆ ಹಕ್ಕು ಪತ್ರಗಳನ್ನು ನೀಡುವಂತೆ ಒತ್ತಾಯಿಸುತ್ತಲ್ಲೆ ಬಂದಿದ್ದರು ಶಾಸಕಿ ರೂಪಕಲಾ ಇಂದು ನಾಳೆ ಎಂದು ಹೇಳುತ್ತಾ ಕಾಲಹರಣ ಮಾಡುತ್ತಾ ಇಧೀಗ 197 ರ ಸರ್ವೆ ನಂಬರ್ ಅರಣ್ಯ ಮೀಸಲು ಪ್ರದೇಶವಾಗಿರುವುದರಿಂದ ಅಲ್ಲಿ ನಿಮಗೆ ಮಂಜೂರು ಮಾಡಲು ಸಾಧ್ಯವಾಗುವುದಿಲ್ಲ ಎಂದು ಕೈಗೆ ಸಿಗುತ್ತಿಲ್ಲ ದಲಿತ ಕೋಟದಿಂದ ಆಯ್ಕೆಯಾಗಿರುವ ಶಾಸಕರು ದಲಿತರಿಗೆ ಅನ್ಯಾಯ ಮಾಡುತ್ತಿರುವುದು ಎಷ್ಟು ಮಾತ್ರ ಸರಿ ಎಂಬುದನ್ನು ಜನರೇ ತೀರ್ಮಾನ ಮಾಡಬೇಕಿದೆ ಎಂದ ಹೇಳಿದರು.
ದಲಿತರಿಗೆ ಜಮೀನು ನೀಡಲು ಹಿಂದೇಟು ಹಾಕುತ್ತಿರುವ ಗ್ರಾಮ ಪಂಚಾಯ್ತಿ ಹಾಗೂ ಕಂದಾಯ ಅಧಿಕಾರಿಗಳು ಆದೇ ಸರ್ವೆನಂಬರ್ 197 ರಲ್ಲಿ 5 ಎಕರೆ ಜಮೀನಿನನ್ನು ಗ್ರಾಮ ಪಂಚಾಯ್ತಿ ಕಚೇರಿಯು ತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ ಮಂಜೂರು ಮಾಡಲಾಗಿದೆ ಆದರೆ ದಲಿತರಿಗೆ 5 ಎಕರೆ ಜಮೀನು ನೀಡಲು ಮಾತ್ರ ಸಾಧ್ಯವಾಗುತ್ತಿಲ್ಲ ಅಂದರೆ ಹೇಗೆ ದಲಿತ ಕುಟುಂಭಗಳಿಗೆ ಜಮೀನು ಮಂಜೂರು ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಅನಿರ್ಧಿಷ್ಟವಾದಿ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
15 ನೇ ಹಣಕಾಸು ಯೋಜನೆಯಡಿ ಬಿಡುಗಡೆಗೊಂಡಿರುವ ಅನುದಾನವನ್ನು ಗ್ರಾಮದ ಅಭಿವೃದ್ಧಿಗೆ ಬಳಸದೆ ರಾಜಕೀಯ ಜನಪ್ರತಿನಿಧಿಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು ಹಾಗೂ 22.75 ರಡಿ ಬಿಡುಗಡೆಗೊಳ್ಳುವ ಅನುದಾನವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿರುವ ವಿಶೇಷಚೇತನರಿಗೆ ಸರ್ಕಾರಿ ಸೌಲಭ್ಯಗಳನ್ನು ವಿತರಿಸಬೇಕು ಗ್ರಾಮ ಪಂಚಾಯ್ತಿಗಳಲ್ಲಿ ಸರಿಯಾಗಿ ಗ್ರಾಮ ಸಭೆಗಳನ್ನು ನಡೆಸಬೇಕು ಎಂದು ಹೇಳಿದರು.
ಇದೇ ವೇಳೆ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮೂರ್ತಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಯ್ಯಪಲ್ಲಿ ಮಂಜುನಾಥ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಇದನ್ನು ಓದಿದ್ದೀರಾ..?ಮತಗಳ್ಳತನ ವಿರುದ್ಧ ಕಾಂಗ್ರೆಸ್‌ನಿಂದ ಸಹಿ ಸಂಗ್ರಹ ಅಭಿಯಾನ
ಈ ಪ್ರತಿಭಟನೆಯಲ್ಲಿ ದಲಿತ ಮುಖಂಟರಾದ ಸುಬ್ಬರಾಯಪ್ಪ , ವಿಜಯಮ್ಮ,ಲಕ್ಷ್ಮಮ್ಮ,ಪ್ರತೀಮ ಬಂಗಾರಪೇಟೆ ತಾಲ್ಲೂಕು ಸಂಚಾಲಕರಾದ ಯಲ್ಲಪ್ಪ, ರಾಮಪ್ರಸನ್ನ , ಸುಬ್ರಮಣಿ ಯಲ್ಲಮ್ಮ ಚಂದ್ರಣ್ಣ,ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ನಾರಾಯಣಸ್ವಾಮಿ, ವೆಂಕಟೇಶ್,ನಾಗರಾಜ್ ಹಾಗೂ ಇತರರು ಹಾಜರಿದ್ದರು.





