ನೀಲಿ ಶಾಲು ಕಳಚಿಟ್ಟ ಎನ್‌ ಮಹೇಶ್‌ಗೆ ಸೋಲಿನ ಭೀತಿ

Date:

ಚುನಾವಣಾ ಮತ ಎಣಿಕೆ ತ್ವರಿತಗತಿಯಲ್ಲಿ ನಡೆಯುತ್ತಿದೆ. ಕೆಲವೆಡೆ ಈಗಗಲೇ 10 ಸುತ್ತುಗಳ ಮತ ಎಣಿಕೆ ಮುಗಿದಿದೆ. ಬಿಎಸ್‌ಪಿಯಿಂದ ಉಚ್ಚಾಟನೆಗೊಂಡು, ನೀಲಿ ಶಾಲು ಕಳಚಿಟ್ಟು ಹಿಂದುತ್ವವಾದಿಗಳ ಕೇಸರಿ ಶಾಲು ಧರಿಸಿದ್ದ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್‌ ಮಹೇಶ್‌ ಭಾರೀ ಹಿನ್ನಡೆ ಅನುಭವಿಸಿದ್ದಾರೆ.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಎ.ಆರ್‌ ಕೃಷ್ಣಮೂರ್ತಿ ಮುನ್ನಡೆ ಸಾಧಿಸಿದ್ದಾರೆ. ಇದೂವರೆಗೆ ಎಣಿಕೆಯಾಗಿರುವ ಮತಗಳ ಪೈಕಿ 61,858 ಮತಗಳನ್ನು ಪಡೆದು ಕೃಷ್ಣಮೂರ್ತಿ ಮುನ್ನಡೆಯಲ್ಲಿದ್ದಾರೆ. 28,124 ಮತಗಳನ್ನು ಪಡೆದು ಎನ್‌ ಮಹೇಶ್ ಭಾರೀ ಹಿನ್ನಡೆಯಲ್ಲಿದ್ದಾರೆ.

ದಲಿತ ಚಳುವಳಿಗೆ ತಿಲಾಂಜಲಿ ಇಟ್ಟು ಕೇಸರಿ ಪಡೆ ಸೇರಿರುವ ಮಹೇಶ್ ಅವರನ್ನು ಸೋಲಿಸಬೇಕೆಂದು ಕ್ಷೇತ್ರ ಜನರು ನಿರ್ಧರಿಸಿದ್ದಾರೆ ಎನ್ನಲಾಗಿತ್ತು. ಈಗ ಮತ ಎಣಿಕೆಯು ಅದನ್ನು ಸಾಕ್ಷೀಕರಿಸುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...