ಮೂರನೇ ತಲೆಮಾರಿನ ರಾಜಕೀಯ ಎಂಟ್ರಿಗೆ ಒಪ್ಪಿಗೆ ಮುದ್ರೆ ಒತ್ತಿದ ಸಿದ್ದರಾಮಯ್ಯ ಮೊಮ್ಮಗ

Date:

  • ಸಿದ್ದರಾಮಯ್ಯ ಪ್ರಚಾರಕ್ಕೆ ಜೊತೆಯಾದ ಮೊಮ್ಮಗ ಧವನ್
  • ತಾತನಂತೆ ನಾನೂ ರಾಜಕೀಯಕ್ಕೆ ಬರುವೆ ಎಂದ ರಾಕೇಶ್ ಪುತ್ರ

ಕೊನೆಯ ಚುನಾವಣೆ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರನೇ ತಲೆಮಾರಿನ ರಾಜಕೀಯ ಉತ್ತರಾಧಿಕಾರಿಯ ಆಗಮನವಾಗಿದೆ.

ತಾತನಂತೆಯೇ ರಾಜಕೀಯದಲ್ಲಿ ಬೆಳೆದು ಮೈಸೂರು ಜನರ ಪಾಲಿಗೆ ನಾಯಕನಾಗುವ ಭರವಸೆಯನ್ನು ಸಿದ್ದರಾಮಯ್ಯನವರ ಮೊಮ್ಮಗ ಧವನ್ ನೀಡಿದ್ದಾನೆ.

ಹೌದು, ಮಂಗಳವಾರವಷ್ಟೇ ತಾತ ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರ ಕಣದಲ್ಲಿ ಕಾಣಿಸಿಕೊಂಡ ಸಿದ್ದರಾಮಯ್ಯ ಪುತ್ರ ದಿವಂಗತ ರಾಕೇಶ್ ಪುತ್ರ ಧವನ್ ಈಗ ತಾತನ ಆಸೆ ಈಡೇರಿಸಲು ಮುಂದಾಗಿದ್ದಾನೆ.ಮೊಮ್ಮಗ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಗ ರಾಕೇಶ್ ನನ್ನು ಉತ್ತರಾಧಿಕಾರಿಯನ್ನಾಗಿ ಮಾಡಲು ಹೊರಟಿದ್ದ ಸಿದ್ದರಾಮಯ್ಯ ಆಸೆಗೆ ವಿಧಿ ತಣ್ಣೀರೆರಚಿದ ಬಳಿಕ, ಅಪ್ಪನ ಆಸೆ ಅರಿತು ಎರಡನೇ ಪುತ್ರ ಯತೀಂದ್ರ ರಾಜಕೀಯ ಪ್ರವೇಶ ಮಾಡಿ ಅವರ ಕೊರಗನ್ನ ದೂರ ಮಾಡಿದ್ದರು.

ಈಗ ತಾತನ ನಿಜ ಆಸೆ ಈಡೇರಿಸಲು ರಾಕೇಶ್ ಪುತ್ರ ಧವನ್ ಮುಂದಾಗಿದ್ದಾನೆ. ಸಿದ್ದರಾಮಯ್ಯ ನಾಮಪತ್ರ ಸಲಿಕೆಗೂ ಮುನ್ನ ಸಿದ್ದರಾಮನಹುಂಡಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ವೇಳೆ ತಾತನಿಗೆ ಧವನ್‌ ಜೊತೆಯಾಗಿದ್ದ.ಮೊಮ್ಮಗ

ಈ ಸುದ್ದಿ ಓದಿದ್ದೀರಾ? :ಈದಿನ ವಿಶೇಷ : ಸಿದ್ದರಾಮಯ್ಯ ಚುನಾವಣಾ ಪ್ರಚಾರಕ್ಕೆ ವಾಹನ ಕೊಡುಗೆ ನೀಡಿದ ಆಂಧ್ರ ಅಭಿಮಾನಿ!

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಧವನ್ ರಾಕೇಶ್, ನನಗೆ ರಾಜಕೀಯದಲ್ಲಿಆಸಕ್ತಿ ಇದೆ. ತಾತನ ರೀತಿ ಲಾ ಓದಿ ಬಳಿಕ ರಾಜಕೀಯಕ್ಕೆ ಎಂಟ್ರಿ ಕೊಡುತ್ತೇನೆ ಎಂದಿದ್ದಾನೆ.

ರಾಜಕೀಯದಲ್ಲಿರಲು ತಂದೆ ರಾಕೇಶ್ ಅವರಿಗೆ ತುಂಬಾ ಆಸೆ ಇತ್ತು. ಆದರೆ ಅವರು ತೀರಿಕೊಂಡ್ರು, ನಾನು ಅವರ ಕನಸನ್ನು ನನಸು ಮಾಡುತ್ತೇನೆ. ನಾನು ಈಗ ದ್ವಿತೀಯ ಪಿಯುಸಿ ಓದುತ್ತಿದ್ದೇನೆ. ಮುಂದೆ ತಾತನ ಆಸೆ ಈಡೇರಿಸುವೆ ಎಂದು ಧವನ್ ಹೇಳಿಕೊಂಡಿದ್ದಾನೆ.

e761f9abfdc9ef87e6de54ca37fd3aa1e8b74659897c34d58aff74e9b6c9aa14?s=150&d=mp&r=g
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

UAPA ದುರ್ಬಳಕೆ; ವಿಕಸಿತ ಭಾರತಕ್ಕೆ ಶೋಭೆ ತರಲ್ಲ: ಮೋಶಾ ಆಡಳಿತಕ್ಕೆ ಸುಪ್ರೀಂ ನ್ಯಾಯಮೂರ್ತಿ ತಪರಾಕಿ

"2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವ ರಾಜಕೀಯ ಮುಖಂಡರ ಗುರಿಯಲ್ಲಿ...

ಕೇರಳ ಚುನಾವಣೆ | ಮಂಜೇಶ್ವರ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ಮೇಲಿದೆ 242 ಕ್ರಿಮಿನಲ್ ಪ್ರಕರಣಗಳು

ಏಪ್ರಿಲ್ 9ರಂದು ಕೇರಳದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೂ ಮುನ್ನ ಅಭ್ಯರ್ಥಿಗಳು...

ಸರ್ಕಾರಿ ಅಧಿಕಾರಿಯ ಆತ್ಮಹತ್ಯೆ ಪ್ರಕರಣ: ಪಂಜಾಬ್ ಮಾಜಿ ಸಚಿವ ಲಾಲ್ಜಿತ್ ವಿರುದ್ಧ ಎಫ್‌ಐಆರ್

ಪಂಜಾಬ್ ರಾಜ್ಯ ಗೋದಾಮು ನಿಗಮದ (ಪಿಎಸ್‌ಡಬ್ಲ್ಯೂಸಿ) ಜಿಲ್ಲಾ ವ್ಯವಸ್ಥಾಪಕ ಗಗನ್‌ದೀಪ್ ಸಿಂಗ್...

ಕೇರಳ | ಭಿನ್ನಮತೀಯರಿಂದ ಚುನಾವಣೆ ಮೇಲೆ ಯಾವುದೇ ಪರಿಣಾಮ ಆಗಲ್ಲ: ಸಿಪಿಐಎಂ

ಕೇರಳದಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಎಲ್‌ಡಿಎಫ್, ಯುಡಿಎಫ್‌,...