ಕರ್ನಾಟಕ ಕ್ರೀಡಾಕೂಟ | ನೆಟ್ ಬಾಲ್ ; ಹಾಸನ, ದಕ್ಷಿಣ ಕನ್ನಡ ತಂಡಗಳು ಚಾಂಪಿಯನ್ : ಸೈಕ್ಲಿಂಗ್ ನಲ್ಲಿ ನೀಲ್, ಪಾಯಲ್ ಗೆ ಸ್ವರ್ಣ

Date:

 ಹಾಸನ ಮತ್ತು ದಕ್ಷಿಣ ಕನ್ನಡ ತಂಡಗಳು ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟ 2025-26 ರ ನೆಟ್ ಬಾಲ್ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿವೆ. 

ನೆಟ್ ಬಾಲ್, ಸೈಕ್ಲಿಂಗ್ ಮತ್ತು ಕಬಡ್ಡಿ ಕ್ರೀಡೆಗಳಲ್ಲಿ ಪದಕ ನಡೆದವು. ತುಮಕೂರು ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಪುರುಷರ ಫೈನಲ್ ನಲ್ಲಿ ತುಮಕೂರು ತಂಡದ ವಿರುದ್ಧ ಹಾಸನ ತಂಡ 36-35 ಅಂಕಗಳ ಅಂತರದಿಂದ ರೋಚಕವಾಗಿ ಜಯ ಸಾಧಿಸಿತು. 3ನೇ ಕ್ವಾರ್ಟರ್ ಅಂತ್ಯಕ್ಕೆ ಎರಡು ತಂಡಗಳು ತಲಾ 27 ಅಂಕಗಳಿಸಿ ಸಮಬಲ ಸಾಧಿಸಿದ್ದವು. ಇದರಿಂದ ಕೊನೆಯ ಕ್ವಾರ್ಟರ್ ನಲ್ಲಿ ಪಂದ್ಯ ರೋಚಕತೆಗೆ ತಿರುಗಿತು. ಕೊನೆ ಕ್ಷಣದಲ್ಲಿ ಆತಿಥೇಯ ತುಮಕೂರು ತಂಡವನ್ನು ಒಂದು ಅಂಕದಿಂದ ಸೋಲಿಸಿದ ಹಾಸನ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಮೈಸೂರು ಮತ್ತು ದಕ್ಷಿಣ ಕನ್ನಡ ತಂಡಗಳು ಜಂಟಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು.

1002695539

ಮಹಿಳೆಯರ ಫೈನಲ್ ಪಂದ್ಯದಲ್ಲಿ ಬೆಂಗಳೂರು ನಗರ ತಂಡವನ್ನ 28-17 ಅಂಕಗಳಿಂದ ಸೋಲಿಸಿದ ದಕ್ಷಿಣ ಕನ್ನಡ ಜಿಲ್ಲಾ ತಂಡ ಪ್ರಶಸ್ತಿಗೆ ಭಾಜನವಾಯಿತು. ಬೆಂಗಳೂರು ನಗರ ತಂಡ ಹೆಚ್ಚು ಪ್ರತಿರೋಧ ನೀಡದೆಯೇ ಸೋಲಿಗೆ ಶರಣಾಯಿತು. ಹಾಸನ ಮತ್ತು ಬೆಂಗಳೂರು ದಕ್ಷಿಣ ಮಹಿಳಾ ತಂಡಗಳು 3ನೇ ಸ್ಥಾನ ಪಡೆದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸೈಕ್ಲಿಂಗ್ ನಲ್ಲಿ ನೀಲ್, ಪಾಯಲ್ ಗೆ ಸ್ವರ್ಣ: 

ಬೆಂಗಳೂರು ಹೊನ್ನವರ ರಸ್ತೆಯಲ್ಲಿ ನಡೆದ ಪುರುಷರ ರೋಡ್ ಸೈಕ್ಲಿಂಗ್ ನ ಮಾಸ್ ಸ್ಟಾರ್ಟ್ ವಿಭಾಗದಲ್ಲಿ ಬೆಳಗಾವಿಯ ನೀಲ್ ಐವರ್ ಡಿಸೋಜಾ 57:47:008 ಸೆಕೆಂಡ್ ನಲ್ಲಿ ಕ್ರಮಿಸಿ ಸ್ವರ್ಣ ಪದಕ ಗೆದ್ದುಕೊಂಡರು. ಧಾರವಾಡದ ಸ್ವಯಂ ಎಂ ಕಠಾರೆ (57:47:234 ಸೆ.) ಮತ್ತು ಬಾಗಲಕೋಟೆಯ ಉದಯ ಕುಮಾರ ಹಂಡಿ (57:47:856 ಸೆ.) ಬೆಳ್ಳಿ ಮತ್ತು ಕಂಚಿನ ಪಡೆದುಕೊಂಡರು.

1002695530 1

ಮಹಿಳೆಯರ ರೋಡ್ ಸೈಕ್ಲಿಂಗ್ ನ ಮಾಸ್ ಸ್ಪಾರ್ಟ್ ವಿಭಾಗದಲ್ಲಿ ವಿಜಯಪುರದ ಪಾಯಲ್ ಚವ್ಜಾಣ (58:20:474), ಬಾಗಲಕೋಟೆಯ ಪೂಜಾ ಮಠಪತಿ (58:21:086) ಮತ್ತು ಬಾಗಲಕೋಟೆಯ ನಂದಾ ಚಿಂಚಕಂಡಿ (58:21:546) ಮೊದಲ ಮೂರು ಸ್ಥಾನ ಪಡೆದು ಪದಕಗಳಿಗೆ ಕೊರಳೊಡ್ಡಿದರು.

ಇದೇ ಸ್ಪರ್ಧೆಯ ಪುರುಷರ ರೋಡ್ ಸೈಕ್ಲಿಂಗ್ ಸ್ಪರ್ಧೆಯ 40 ಕಿಲೋ ಮೀಟರ್ ತಂಡ ವಿಭಾಗದಲ್ಲಿ ಬಾಗಲಕೋಟೆ ತಂಡ ಸ್ವರ್ಣ ಗೆದ್ದಿತು. (55:11;118 ಸೆ. – ಮಲ್ಲಿಕಾರ್ಜುನ ಎಚ್. ಶಿರೋಳ, ಸಾಗರ ಪೂಜಾರಿ, ಶ್ರೀಶೈಲ್ ವೀರಾಪೂರ, ಉದಯ ಕುಮಾರ ಹಂಡಿ), ಮೈಸೂರು ತಂಡ (58:28:858 ಸೆ.- ವಿಶಾಖ ಕೆ.ವಿ., ಸೋಮೇಶ್ ಜಿ., ಚರಿತ್ ಗೌಡ ಸಿ.) ಮತ್ತು ವಿಜಯಪುರ ತಂಡ (59:39:805 ಸೆ.- ಯರಗುರಪ್ಪ ಗಡ್ಡಿ, ಗೌತಮ್ ಬೇಲೆರಿ, ಸದಾನಂದ ಬಿರಾದಾರ, ಸಚಿನ್ ರಂಜಣಗಿ) ಮಹಿಳೆಯರ ರೋಡ್ ಸೈಕ್ಲಿಂಗ್ 40 ಕಿಲೋ ಮೀಟರ್ ತಂಡ ವಿಭಾಗದಲ್ಲಿ ಬಾಗಲಕೋಟೆ ತಂಡ (32:44:546 ಸೆ.- ಪೂಜಾ ಮಠಪತಿ, ನಿವೇದಿತಾ, ನಂದಾ ಚಿಚತಂಡಿ), ವಿಜಯಪುರ (33:45:398 ಸೆ. – ಪಾಯಲ್ ಚವ್ಹಾಣ, ಅಕ್ಷತಾ ಭೂತನಾಳ, ಕಾವೇರಿ ಎಂ. ಡೊಳ್ಳಿ), ಧಾರವಾಡ (33:58:862 ಸೆ. – ಕೀರ್ತಿ ನಾಯಕ, ಭೀಮವ್ವ ಮಾಳಗೊಂಡ, ಶೈಲಾ ಎಚ್. ನ್ಯಾಮಗೌಡ) ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡವು.

ಬೆಂಗಳೂರು ನಗರ ತಂಡಗಳು ಟಿಟಿ ಚಾಂಪಿಯನ್:

ಬೆಂಗಳೂರು ನಗರ ಪುರುಷರ-ಮಹಿಳಾ ತಂಡಗಳು ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿವೆ. ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಬೆಂಗಳೂರು ನಗರ ಪುರುಷರ ತಂಡ 3-1ರಿಂದ ದಕ್ಷಿಣ ಕನ್ನಡ ತಂಡವನ್ನ ಸೋಲಿಸಿ ಚಾಂಪಿಯನ್ ಆಯಿತು. ಸೆಮಿಫೈನಲ್ ನಲ್ಲಿ ಸೋತ ಕಲಬುರಗಿ ಮತ್ತು ಬೆಳಗಾವಿ ತಂಡಗಳು 3ನೇ ಸ್ಥಾನ ಪಡೆದವು.

1002695529

ಬೆಂಗಳೂರು ಮಹಿಳಾ ತಂಡ ಸಹ 3-0 ಸೆಟ್ ಗಳಿಂದ ದಕ್ಷಿಣ ಕನ್ನಡ ತಂಡವನ್ನು ಮಣಿಸಿ ಚಾಂಪಿಯನ್ ಎನಿಸಿಕೊಂಡಿತು. ಸೆಮಿಫೈನಲ್ ನಲ್ಲಿ ಪರಾಭವಗೊಂಡ ಧಾರವಾಡ ಹಾಗೂ ಮೈಸೂರು ತಂಡಗಳು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು. ಪುರುಷರ-ಮಹಿಳೆಯರ ಎರಡು ವಿಭಾಗದಲ್ಲೂ ದಕ್ಷಿಣ ಕನ್ನಡ ತಂಡ ರನ್ನರ್ ಅಪ್ ಆಯಿತು.

ಜುಡೋದಲ್ಲಿ ಬೆಂಗಳೂರು ನಗರ ಪದಕ ಬೇಟೆ:

ಡಾ.ಜಿ. ಪರಮೇಶ್ವರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪುರುಷರ 81 ಕೆಜಿ ಜುಡೋದಲ್ಲಿ ಮೊಹಮ್ಮದ್ ಯಾಕುಬ್ ಖಾನ್, ಸುದೀಪ್ ರಮೇಶ್ ರಾಥೋಡ್ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಗೆದ್ದರು. ಪವನ್ ವಿಕಾಸ್ ಮತ್ತು ಜಯ ಸೂರ್ಯ ಕಂಚು ಗೆದ್ದರು. ಪುರುಷರ 90 ಕೆಜಿ ವಿಭಾಗದಲ್ಲಿ ಬೆಂಗಳೂರು ನಗರದ ಮನೋಜ್ ನಾಯ್ದು, ಬೆಳಗಾವಿಯ ಬಿಎಸ್ ರೋಹನ್ ಮೊದಲೆರಡು ಸ್ಥಾನ ಪಡೆದರು. ವಿಜಯಪುರದ ಅಭಿಷೇಕ್ ವಿ ಕಾಲೆ ಮತ್ತು ಕೆ. ತೌಸಿಫ್ ಜಂಟಿ 3ನೇ ಸ್ಥಾನ ಪಡೆದರು.

1002695537 1

ಪುರುಷರ 100 ಕೆಜೆ ವಿಭಾಗದಲ್ಲಿ ಬೆಂಗಳೂರು ನಗರದ ರವಿಚಂದ್ರ ಡೇರ್ ಎಸ್, ವಿಜಯಪುರದ ಸಂದೀಪ್ ಪಿ ಲಮಾಣಿ, ಬೆಳಗಾವಿಯ ಓಂಕಾರ್ ಮಿನಾಚೆ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು. 

ಪುರುಷರ 100 ಪ್ಲಸ್ ಕೆಜಿ ವಿಭಾಗದಲ್ಲಿ ಮೈಸೂರಿನ ವಿಕಾಸ್ ಕುಮಾರ್ ಎನ್ ಮತ್ತು ಬೆಳಗಾವಿಯ ರಾಹುಲ್ ಲಂಕೆನ್ನವರ್ ಚಿನ್ನ-ಬೆಳ್ಳಿ ಗೆದ್ದರು.

ಫುಟ್ಬಾಲ್ : ಸೆಮಿಫೈನಲ್ ಗೆ ಮೈಸೂರು

ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪುರುಷರ ಫುಟ್ಬಾಲ್ ನಲ್ಲಿ ಮೈಸೂರು ತಂಡ ಸೆಮಿಫೈನಲ್ ಪ್ರವೇಶಿಸಿದೆ. ಶನಿವಾರ ದಾವಣಗೆರೆ ವಿರುದ್ದ 8-0ಯಿಂದ ಜಯ ಸಾಧಿಸಿದ್ದ ಮೈಸೂರು ತಂಡ ಭಾನುವಾರ ಶಿವಮೊಗ್ಗ ವಿರುದ್ದ 3-0,ಯಿಂದ ಗೆದ್ದು ಬಿ ಗ್ರೂಪ್ ನಿಂದ ಮೊದಲ ತಂಡವಾಗಿ ಸೆಮಿಫೈನಲ್ ಗೆ ಹೆಜ್ಜೆ ಇಟ್ಟಿತು. 

ಬಿ ಗ್ರೂಪ್ ನಲ್ಲಿ ಇನ್ನೊಂದು ಸೆಮಿಫೈನಲ್ ಸ್ಥಾನಕ್ಕೆ ಬೆಳಗಾವಿ ಮತ್ತು ಶಿವಮೊಗ್ಗ ನಡುವೆ ಜಿದ್ದಾಜಿದ್ದಿ ಬಿದ್ದಿದೆ. ಎ ಗ್ರೂಪ್ ನಿಂದ ಈಗಾಗಲೇ ಕೊಡಗು ಮತ್ತು ಉತ್ತರ ಕನ್ನಡ ತಂಡಗಳು ಸೆಮಿಫೈನಲ್ಸ್ ಪ್ರವೇಶಿಸಿವೆ.

ಇಂದಿನಿಂದ ಬಾ ಸ್ಕೆಟ್ ಬಾಲ್ ಪಂದ್ಯಾವಳಿ

ತುಮಕೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಕ್ರೀಡಾಕೂಟದಲ್ಲಿ ಸೋಮವಾರದಿಂದ ಬಾಸ್ಕೆಟ್ ಬಾಲ್ ಪಂದ್ಯಗಳು ಆರಂಭವಾಗಲಿವೆ.

 ಹೆಗ್ಗೆರೆಯಲ್ಲಿರುವ ಶ್ರೀ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿರುವ ಬಾಸ್ಕೆಟ್ ಬಾಲ್ ಮೈದಾನವನ್ನ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ಪುರುಷರ-ಮಹಿಳೆಯರ ಬ್ಯಾಸ್ಕೆಟ್ ಪಂದ್ಯಗಳಿಗೂ ಪರಮೇಶ್ವರ್ ಅವರು ಚಾಲನೆ ನೀಡಲಿದ್ದಾರೆ. ಬೆಳಗ್ಗೆ 7ರಿಂದ ಪಂದ್ಯಗಳು ಆರಂಭವಾಗಲಿವೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...