ಭಾರತದ ನಿರುದ್ಯೋಗಿ ಯುವಜನರಲ್ಲಿ 67% ಮಂದಿ ಪದವೀಧರರು

Date:

ಭಾರತದಲ್ಲಿ ನಿರುದ್ಯೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ನಿರುದ್ಯೋಗ ದರವು ಹೆಚ್ಚುತ್ತಲೇ ಇದೆ. ಈ ನಿರುದ್ಯೋಗಿ ಯುವಜನರಲ್ಲಿ ಅರ್ಧಕ್ಕಿಂತ ಹೆಚ್ಚು ಅಂದರೆ, ಬರೋಬ್ಬರಿ 67% ಯುವಜನರು ಪದವೀಧರರಾಗಿದ್ದಾರೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

ಮಂಗಳವಾರ ಬಿಡುಗಡೆಯಾದ ‘ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ 2026’ ಶೀರ್ಷಿಕೆಯ ವರದಿಯಲ್ಲಿ, 20-29 ವರ್ಷ ವಯಸ್ಸಿನ ನಿರುದ್ಯೋಗಿ ಯುವಜನರಲ್ಲಿ ಪದವೀಧರರ ಪಾಲು ಕಳೆದ ಎರಡು ದಶಕಗಳಲ್ಲಿ ಎರಡಕ್ಕಿಂತ ಹೆಚ್ಚು ಪಟ್ಟು ಹೆಚ್ಚಾಗಿದೆ ಎಂಬುದನ್ನು ಬಹಿರಂಗ ಪಡಿಸಿದೆ.

2004ರಲ್ಲಿ ದೇಶದ ನಿರುದ್ಯೋಗಿ ಯುವಜನರಲ್ಲಿ 32% ರಷ್ಟಿದ್ದ (30 ಲಕ್ಷ) ಪದವೀಧರರ ಸಂಖ್ಯೆಯು, 2023ರಲ್ಲಿ ಸುಮಾರು 67%ಗೆ (ಸುಮಾರು 1.1 ಕೋಟಿ) ಏರಿಕೆಯಾಗಿದೆ. ಅದೇ ಸಮಯದಲ್ಲಿ, ದೇಶದ ಒಟ್ಟು ಯುವಜನರಲ್ಲಿ ಪದವೀಧರರ ಪಾಲು 2004ರಲ್ಲಿದ್ದ 10% (1.9 ಕೋಟಿ) ಇತ್ತು. 2023ರ ವೇಳೆಗೆ, 28%ಗೆ (6.3 ಕೋಟಿ) ಏರಿಕೆಯಾಗಿದೆ ಎಂದು ವರದಿ ವಿವರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

2004 ಮತ್ತು 2023ರ ನಡುವೆ ಪ್ರತಿ ವರ್ಷ ಸರಿಸುಮಾರು 50 ಲಕ್ಷ ಯುವಜನರು ಪದವೀಧರರಾಗಿ ಶಿಕ್ಷಣ ಕ್ಷೇತ್ರದಿಂದ ಹೊರಬರುತ್ತಿದ್ದಾರೆ. ಆದಾಗ್ಯೂ, ಉದ್ಯೋಗ ಪಡೆಯುವ ಪದವೀಧರರ ಸಂಖ್ಯೆ ವಾರ್ಷಿಕವಾಗಿ ಕೇವಲ 28 ಲಕ್ಷ ಮಾತ್ರ. ಇದರಲ್ಲಿ ಕೇವಲ 17 ಲಕ್ಷ ಮಂದಿ ಮಾತ್ರ ವೇತನ ಪಡೆಯುವ ಉದ್ಯೋಗಿಗಳಾಗಿದ್ದಾರೆ ಎಂದು ವರದಿ ಗಮನಿಸಿದೆ.

“ಪದವೀಧರರ ಪೂರೈಕೆಗೆ ಅನುಗುಣವಾಗಿ ಪದವೀಧರ ಉದ್ಯೋಗದ ಬೆಳವಣಿಗೆಯಾಗಿಲ್ಲ. ಬೆಳೆಯುತ್ತಿರುವ ಪದವೀಧರ ಜನಸಂಖ್ಯೆಗೆ ತಕ್ಕಂತೆ ಉದ್ಯೋಗಗಳನ್ನು ಸೃಷ್ಟಿಸುವಲ್ಲಿನ ವೈಫಲ್ಯವು, ಹೆಚ್ಚಿನ ಸಂಖ್ಯೆಯ ಪದವೀಧರರು ನಿರುದ್ಯೋಗಿಗಳಾಗಿ ಉಳಿದಿದ್ದಾರೆ. ಇದು ಪದವೀಧರರ ಗಳಿಕೆಯ ಬೆಳವಣಿಗೆ ಕುಂಠಿತಗೊಳ್ಳಲೂ ಕಾರಣವಾಗಿದೆ” ಎಂದು ವರದಿ ಹೇಳಿದೆ.

ಉದ್ಯೋಗವನ್ನು ಹುಡುಕುವ ಮೊದಲು ಕಾಯುವ ಸಾಮರ್ಥ್ಯವು ಯುವಜನರಲ್ಲಿ ಹೆಚ್ಚಾಗಿದೆ. ಆರಂಭಿಕ ಹಂತದ ಉದ್ಯೋಗಗಳಲ್ಲಿ ಪದವೀಧರರಲ್ಲದವರಿಗಿಂತ ಪದವೀಧರರು ಹೆಚ್ಚು ಮಾಸಿಕ ಆದಾಯವನ್ನು ಪಡೆಯುತ್ತಿದ್ದರೂ, ಕಾಲಾನಂತರದಲ್ಲಿ ಈ ಆದಾಯದ ಅಂತರವು ಕುಗ್ಗುತ್ತಿದೆ ಎಂದು ವರದಿ ಗಮನಿಸಿದೆ.

ಈ ಲೇಖನ ಓದಿದ್ದೀರಾ?: ಬಂಗಾಳ ಚುನಾವಣೆ | ಮಮತಾ ಬ್ಯಾನರ್ಜಿ vs ಸುವೇಂದು ಅಧಿಕಾರಿ: ಭಂಟನಿಂದ ಎದುರಾಳಿವರೆಗೆ

ವಿಶೇಷವಾಗಿ 2004 ಮತ್ತು 2011ರ ನಡುವೆ ಯುವ ಪದವೀಧರರು ಮತ್ತು ಪದವೀಧರರಲ್ಲದವರ ಆದಾಯದ ನಡುವಿನ ವ್ಯತ್ಯಾಸವು ಗಣನೀಯವಾಗಿ ಹೆಚ್ಚಿತ್ತು. ಆದರೆ, 2017ರಿಂದ ಯುವಕರ ಆದಾಯದ ಬೆಳವಣಿಗೆಯಲ್ಲಿ ಮಂದಗತಿ ಕಂಡುಬಂದಿದೆ ಎಂದು ವರದಿ ವಿವರಿಸಿದೆ.

ಗಮನಾರ್ಹವಾಗಿ, ಉನ್ನತ ಶಿಕ್ಷಣದ ಲಭ್ಯತೆಯ ವಿಷಯದಲ್ಲಿ, ಆರ್ಥಿಕ ಅಡೆತಡೆಗಳು ಇಂದಿಗೂ ಅಡ್ಡಿಯಾಗಿವೆ. ವಿಶೇಷವಾಗಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯದಂತಹ ವೃತ್ತಿಪರ ಕ್ಷೇತ್ರಗಳಲ್ಲಿ ಪದವಿಗಳನ್ನು ಪಡೆಯುವ ವೆಚ್ಚವು ಬಡ ಕುಟುಂಬಗಳ ವಾರ್ಷಿಕ ತಲಾ ವೆಚ್ಚಕ್ಕಿಂತ ಹೆಚ್ಚಾಗಿರುತ್ತದೆ ಎಂದು ವರದಿ ತಿಳಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...