ಉದ್ಯೋಗ ಮಾಹಿತಿ | SBI ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಅರ್ಹತೆಗಳೇನು?

Date:

ಪ್ರಮುಖ ಸರ್ಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) 2025ನೇ ಸಾಲಿಗೆ ಪ್ರೊಬೇಷನರಿ ಆಫೀಸರ್(Probationary Officer) ಹುದ್ದೆಗಳ ನೇಮಕಾತಿ ಕುರಿತ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ. ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಜುಲೈ 14ರೊಳಗೆ ಅರ್ಜಿ ಸಲ್ಲಿಸಬಹುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) 541 ಖಾಲಿ ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳನ್ನು ಭರ್ತಿ ಮಾಡಲು ಜೂನ್ 24ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, 21 ವರ್ಷದಿಂದ 30 ವರ್ಷ ವಯಸ್ಸಿನ ಮತ್ತು ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ

SBI Bank ಹುದ್ದೆಗಳ ವಿವರ:

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪದವಿಯ ಹೆಸರು: ಪ್ರೊಬೇಷನರಿ ಆಫೀಸರ್(PO)
ಒಟ್ಟು ಹುದ್ದೆಗಳು: 541
ಸ್ಥಳ: ಭಾರತದೆಲ್ಲೆಡೆ
ವೇತನ ಶ್ರೇಣಿ: ₹48,480 ರಿಂದ ₹85,920 (ತಿಂಗಳಿಗೆ)

ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿರಬೇಕು.
ವಯೋಮಿತಿ (01-04-2025ರ ಪ್ರಕಾರ):
ಕನಿಷ್ಠ: 21 ವರ್ಷ
ಗರಿಷ್ಠ: 30 ವರ್ಷ

ವಯೋಮಿತಿ ಸಡಿಲಿಕೆ: ವರ್ಗ ಸಡಿಲಿಕೆ
OBC(NCL) ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.
SC/ST ಅಭ್ಯರ್ಥಿಗಳಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ.
PwBD(UR/EWS) ಮಾನದಂಡ ಅಂಗವೈಕಲ್ಯ ಹೊಂದಿರುವ ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
PwBD(OBC) ಮಾನದಂಡ ಅಂಗವೈಕಲ್ಯ ಹೊಂದಿರುವ ಇತರೆ ಹಿಂದುಳಿದ ವರ್ಗಗಳಿಗೆ 13 ವರ್ಷ ವಯೋಮಿತಿ ಸಡಿಲಿಕೆ ಇದೆ.
PwBD (SC/ST) ಮಾನದಂಡ ಅಂಗವೈಕಲ್ಯ ಹೊಂದಿರುವ ಎಸ್‌ಸಿ/ಎಸ್‌ಟಿ ಸಮುದಾಯದ ಅಭ್ಯರ್ತಿಗಳಿಗೆ 15 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
UR/OBC/EWS ಅಭ್ಯರ್ಥಿಗಳಿಗೆ ₹750 ಅರ್ಜಿ ಶುಲ್ಕ ಇರುತ್ತದೆ.
ಪಾವತಿ ವಿಧಾನ: ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ನೆಟ್‌ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.

SBI PO 2025- ಪರೀಕ್ಷಾ ಸಾರಾಂಶ

ಪ್ರೊಬೇಷನರಿ ಆಫೀಸರ್ ಆಯ್ಕೆ ವಿಧಾನವು ಮೂರು ಹಂತಗಳನ್ನು ಒಳಗೊಂಡಿದ್ದು, ಪ್ರಾಥಮಿಕ ಆನ್‌ಲೈನ್ ಪರೀಕ್ಷೆ(ಪ್ರಿಲಿಮ್ಸ್), ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮುಖಾಂತರ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯ ಎಲ್ಲ ಹಂತಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ನೇಮಿಸಲಾಗುತ್ತದೆ. ₹48,480 ವೇತನ ಶ್ರೇಣಿ ಇರುತ್ತದೆ. ಭಾರತದ ಯಾವುದೇ ಸ್ಥಳದಲ್ಲಿಯಾದರೂ ನೇಮಕಾತಿಯಾಗಬಹುದು.

SBI Bank ಸಲ್ಲಿಸುವ ವಿಧಾನ:
ಅಧಿಕೃತ ವೆಬ್‌ಸೈಟ್: sbi.co.in
ಆನ್‌ಲೈನ್ ಫಾರ್ಮ್ ನವೀಕರಿಸಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ದಾಖಲಿಸಿ.
ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಿ.
ಅರ್ಜಿ ಶುಲ್ಕ ಪಾವತಿಸಿ(ಅಗತ್ಯವಿದ್ದರೆ).
ಅಂತಿಮವಾಗಿ “Submit” ಕ್ಲಿಕ್ ಮಾಡಿ.

ಇದನ್ನೂ ಓದಿದ್ದೀರಾ? ಉದ್ಯೋಗ ಮಾಹಿತಿ | SSC CHSL ನೇಮಕಾತಿ; ಪಿಯುಸಿ ಪಾಸ್ ಆದವರು ಅರ್ಜಿ ಹಾಕಬಹುದು

ಮುಖ್ಯ ದಿನಾಂಕಗಳು:
ಅರ್ಜಿ ಆರಂಭವಾಗಿರುವ ದಿನಾಂಕ 24-06-2025, 14-07-2025 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜುಲೈ 3ನೇ ಅಥವಾ 4ನೇ ವಾರ ಪ್ರಾಥಮಿಕ ಹಾಲ್ ಟಿಕೆಟ್ ಪಡೆಯಬಹುದು. ಜುಲೈ /ಆಗಸ್ಟ್ 2025ರಂದು ಪ್ರಾಥಮಿಕ ಪರೀಕ್ಷೆ ನಡೆಯುತ್ತದೆ. ಆಗಸ್ಟ್ / ಸೆಪ್ಟೆಂಬರ್ 2025 ರಂದು ಪ್ರಾಥಮಿಕ ಫಲಿತಾಂಶ ಪ್ರಕಟವಾಗುತ್ತದೆ.

ಪ್ರಾಥಮಿಕ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಗಳಿಗೆ ಸೆಪ್ಟೆಂಬರ್ 2025ರಂದು ಮುಖ್ಯ ಪರೀಕ್ಷೆ ನಡೆಯುತ್ತದೆ. ಬಳಿಕ ಅಕ್ಟೋಬರ್/ನವೆಂಬರ್ 2025ರಂದು ಅಂತಿಮ ಸಂದರ್ಶನ ನಡೆಯಲಿದೆ.

ಮೂರು ರೀತಿಯ ಪರೀಕ್ಷೆಗಳನ್ನು ಎದುರಿಸಿದ ಅಭ್ಯರ್ಥಿಗಳಿಗೆ ನವೆಂಬರ್/ಡಿಸೆಂಬರ್ 2025ರಂದು ಅಂತಿಮ ಫಲಿತಾಂಶ ಬರುತ್ತದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯ ಬಜೆಟ್; ದಾವಣಗೆರೆಗೆ ಕೊಟ್ಟಿದ್ದೆಷ್ಟು? ನಿರೀಕ್ಷೆಗಳೇನಿತ್ತು

2026–27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಿಗೆ ವಿವಿಧ...

ದಾವಣಗೆರೆ ಬಂದ್ | ಒಳಮೀಸಲಾತಿಯಿಲ್ಲದೆ ನೇಮಕಾತಿ ಬೇಡ: ಗೊಂದಲ ಪರಿಹಾರಕ್ಕೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹ

ಒಳ ಮೀಸಲಾತಿ ಜಾರಿಗೊಳಿಸಿ ಸರಕಾರಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕು, ಒಳಮೀಸಲಾತಿ ಸಂಬಂಧ...

ದಾವಣಗೆರೆ | ಗ್ಯಾರಂಟಿಗಳು ಮಹಿಳೆಯರ ಆರ್ಥಿಕ ಶಕ್ತಿ ಹಾಗೂ ಬಸವಣ್ಣನ ದಾಸೋಹ ತತ್ವ: ಮುಖಂಡರ ಅಭಿಮತ

ಗ್ಯಾರಂಟಿ ಯೋಜನೆಯ ಅನುಷ್ಠಾನಗಳ ಕಾರ್ಯಕ್ರಮ ಮತ್ತು ಜಿಲ್ಲಾಮಟ್ಟದ ಕಾರ್ಯಗಳು ಎಲ್ಲಾ ಜಿಲ್ಲಾ...

ದಾವಣಗೆರೆ | ಮೀಸಲಾತಿಯ ಬಹುಪಾಲು ಕಬಳಿಸಿದ್ದು ಒಳಮೀಸಲಾತಿ ವಿರೋಧಿಗಳು; ಮಾಜಿ ಸಚಿವ ಆಂಜನೇಯ ಆಕ್ರೋಶ

"56 ಸಾವಿರ ಹುದ್ದೆಗಳ ಭರ್ತಿಗೆ ಒಳಮೀಸಲಾತಿ ಇಲ್ಲದೆ ನೇಮಕಾತಿ ನಡೆದರೆ ಬಹುಪಾಲು...