15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು(ಮಾ.7) ತೆರೆಬಿದ್ದಿದ್ದು, ಕನ್ನಡ ವಿಭಾಗದಲ್ಲಿ ತುಳು ಭಾಷೆಯಲ್ಲಿರುವ ‘ನಿರ್ವಾಣ’ ಚಿತ್ರವು ಕನ್ನಡ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಅಮರ್ ಎಲ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.
Check out the movies part of our Kannada Cinema Competition.
For more details please visit – https://t.co/apY7kuNYDm#15thBIFFes #BIFFes2024 #WorldInBengaluru #FIAPF #Biffes #Biffesblr #Filmfestival #Bengaluru #Indaincinema #tulu #tulunadu #tulucinema pic.twitter.com/6zmqzshykF
— BIFFES (@BIFFESBLR) February 15, 2024
ಉಳಿದಂತೆ ಕನ್ನಡ ಸಿನಿಮಾ ವಿಭಾಗದಲ್ಲಿ ಕೆ ಯಶೋಧಾ ಪ್ರಕಾಶ್ ನಿರ್ದೇಶನದ ಕಂದೀಲು ಎರಡನೇ ಸ್ಥಾನ ಗಳಿಸಿದ್ದರೆ, ರಂಗಸ್ವಾಮಿ ಎಸ್ ನಿರ್ದೇಶನದ ‘ಆಲ್ ಇಂಡಿಯಾ ರೇಡಿಯೋ’ ಸಿನಿಮಾ ತೃತೀಯ ಸ್ಥಾನ ಪಡೆದುಕೊಂಡಿದೆ.

15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಎಲ್ಲ ಪ್ರಶಸ್ತಿಗಳ ವಿವರ ಹೀಗಿದೆ:
ಜೀವಮಾನ ಸಾಧನೆ ಪ್ರಶಸ್ತಿ: ಖ್ಯಾತ ನಿರ್ದೇಶಕ ಎಂ.ಎಸ್.ಸತ್ಯು
ಅತ್ಯುತ್ತಮ ಕನ್ನಡ ಸಿನಿಮಾ ವಿಭಾಗ
ಪ್ರಥಮ ಪ್ರಶಸ್ತಿ: ನಿರ್ವಾಣ – ನಿರ್ದೇಶಕರು: ಅಮರ್ ಎಲ್
ದ್ವಿತೀಯ ಪ್ರಶಸ್ತಿ: ಕಂದೀಲು – ನಿರ್ದೇಶಕರು: ಕೆ ಯಶೋಧಾ ಪ್ರಕಾಶ್
ತೃತೀಯ ಪ್ರಶಸ್ತಿ: ಆಲ್ ಇಂಡಿಯಾ ರೇಡಿಯೋ- ನಿರ್ದೇಶಕರು: ರಂಗಸ್ವಾಮಿ ಎಸ್
ತೀರ್ಪುಗಾರರ ಮೆಚ್ಚುಗೆ ಪಡೆದ ಸಿನಿಮಾ
ಕ್ಷೇತ್ರಪತಿ ಸಿನಿಮಾ – ನಿರ್ದೇಶಕರು: ಶ್ರೀಕಾಂತ್ ಕಟಗಿ
ಸ್ವಾತಿ ಮುತ್ತಿನ ಮಳೆ ಹನಿಯೇ: ನಿರ್ದೇಶಕರು: ರಾಜ್ ಬಿ ಶೆಟ್ಟಿ
ಅತ್ಯುತ್ತಮ ಭಾರತೀಯ ಸಿನಿಮಾ ವಿಭಾಗ
ಪ್ರಥಮ ಪ್ರಶಸ್ತಿ: ಶ್ಯಾಮ್ ಚಿ ಆಯಿ(ಮರಾಠಿ) – ನಿರ್ದೇಶಕರು: ಸುಜಯ್ ದಹಾಕೆ
ದ್ವಿತೀಯ ಪ್ರಶಸ್ತಿ: ಅಯೋತಿ(ತಮಿಳು) – ನಿರ್ದೇಶಕರು: ಆರ್ ಮಂಥಿರಾ ಮೂರ್ತಿ
ತೃತೀಯ ಪ್ರಶಸ್ತಿ: ಚಾವೇರ್(ಮಲಯಾಳಂ) ನಿರ್ದೇಶಕರು: ಟಿನು ಪಾಪಚ್ಚನ್
FIRPRESCI ಪ್ರಶಸ್ತಿ : ಶ್ಯಾಮ್ ಚಿ ಆಯಿ(ಮರಾಠಿ) – ನಿರ್ದೇಶಕರು: ಸುಜಯ್ ದಹಾಕೆ
ಏಷ್ಯಾದ ಅತ್ಯುತ್ತಮ ಸಿನಿಮಾ ವಿಭಾಗ
ಪ್ರಥಮ ಪ್ರಶಸ್ತಿ: ಇನ್ ಷಾ ಅಲ್ಲಾಹ್ ಎ ಬಾಯ್ (ಅರೆಬಿಕ್) – ನಿರ್ದೇಶಕರು: ಅಮ್ಜದ್ ಅಲ್ ರಶೀದ್
ದ್ವಿತೀಯ ಪ್ರಶಸ್ತಿ: ಸ್ಥಳ್(ಮರಾಠಿ) – ನಿರ್ದೇಶಕರು: ಜಯಂತ್ ದಿಗಂಬರ್ ಸೋಮಾಲ್ಕರ್
ತೃತೀಯ ಪ್ರಶಸ್ತಿ: ಸಂಡೇ(ಉಜ್ಬೇಕ್) ನಿರ್ದೇಶಕರು: ಶೋಕಿರ್ ಕಿಲಿಖೋವ್
ತೀರ್ಪುಗಾರರ ಮೆಚ್ಚುಗೆ ಪಡೆದ ಸಿನಿಮಾ: ಮಿಥ್ಯ(ಕನ್ನಡ) ನಿರ್ದೇಶಕರು: ಸುಮಂತ್ ಭಟ್
ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಎಲ್ಲ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.





