ಪ್ರಗತಿ ಅಶ್ವತ್ಥರ ಕ್ಯಾಮೆರಾ ಕಣ್ಣಲ್ಲಿ ನಟ ಧರ್ಮೇಂದ್ರ!

Date:

ರಾಮನಗರದ ಬೆಟ್ಟಗುಡ್ಡಗಳಲ್ಲಿ 1974ರಲ್ಲಿ 'ಶೋಲೆ' ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ವೃತ್ತಿಪರ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆಟ್‌ಗೆ ಭೇಟಿ ನೀಡಿದ್ದರ ಒಂದು ನೆನಪು...

‘ಶೋಲೆ’ ಹಿಂದಿ ಸಿನಿಮಾದಲ್ಲಿ ಛಾಯಾಗ್ರಾಹಕ ದ್ವಾರಕಾ ದಿವೇಚಾ ಅವರು ರಾಮನಗರ ಬೆಟ್ಟಗಳನ್ನು ಸೊಗಸಾಗಿ ಸೆರೆಹಿಡಿದಿದ್ದಾರೆ. ರಾಮಘಡ ಗ್ರಾಮ ಸೇರಿದಂತೆ ಡಕಾಯಿತ ಗಬ್ಬರ್‌ ಸಿಂಗ್‌ ಅಡ್ಡಾಗಳನ್ನು ಇಲ್ಲಿ ಚಿತ್ರಿಸಲಾಗಿದೆ. 1974ರಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ವೃತ್ತಿಪರ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆಟ್‌ಗೆ ಭೇಟಿ ನೀಡಿದ್ದರು. ಆಗ ಬೆಂಗಳೂರಿನಲ್ಲಿ ಹಿಂದಿ ಸಿನಿಮಾಗಳ ಪ್ರಚಾರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಹೀರಾನಾಥ್‌ ರಾವ್‌ ಅವರ ಕರೆಯ ಮೇರೆಗೆ ಅವರು ಸೆಟ್‌ಗೆ ತೆರಳಿದ್ದರು.

ಈ ಸಂದರ್ಭದ ಬಗ್ಗೆ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಹೇಳುವುದು ಹೀಗೆ- ‘ಆಗ ನಾನು ಮೇನಕಾ ಚಲನಚಿತ್ರ ಪತ್ರಿಕೆ ಸೇರಿದಂತೆ ಇತರೆ ಕೆಲವು ಪತ್ರಿಕೆಗಳಿಗೂ ಫೋಟೊಗಳನ್ನು ಒದಗಿಸುತ್ತಿದ್ದೆ. PRO ಹೀರಾನಾಥ್‌ ರಾವ್‌ ಅವರ ಆಹ್ವಾನದ ಮೇರೆಗೆ ಸೆಟ್‌ಗೆ ಭೇಟಿ ನೀಡಿದ್ದೆ. ರಾಮನಗರದ ಬೆಟ್ಟ ಪ್ರದೇಶವನ್ನು ಈ ರೀತಿ ತೋರಿಸಬಹುದು ಎನ್ನುವ ಚಿತ್ರದ ನಿರ್ದೇಶಕ ರಮೇಶ್‌ ಸಿಪ್ಪಿ ಅವರ ಕಲ್ಪನೆಯೇ ನನಗೆ ಇಷ್ಟವಾಗಿತ್ತು. ನಾನು ಭೇಟಿ ನೀಡಿದಾಗ ಚಿತ್ರದ ಸುಮಾರು ಅರ್ಧದಷ್ಟು ಚಿತ್ರೀಕರಣ ಪೂರ್ಣಗೊಂಡಿತ್ತು ಎಂದು ಕಾಣುತ್ತದೆ. ಕ್ಲೋಸ್‌ ಅಪ್‌, ವೈಡ್‌ ಆಂಗಲ್‌ ಸೇರಿದಂತೆ ಅಲ್ಲಿ ಹಲವು ಫೋಟೊಗಳನ್ನು ಕ್ಲಿಕ್ಕಿಸಿಕೊಂಡೆ. ಲ್ಯಾಂಡ್‌ಮಾರ್ಕ್‌ ಹಿಂದಿ ಚಿತ್ರವೊಂದರ ಮೇಕಿಂಗ್‌ ಸೆರೆಹಿಡಿಯುವ ಅಪೂರ್ವ ಅವಕಾಶ ನನ್ನದಾಯ್ತು…’

ಇದನ್ನು ಓದಿದ್ದೀರಾ?: ಬಾಲಿವುಡ್‌ನ ಸ್ಫುರದ್ರೂಪಿ ನಟ ಧರ್ಮೇಂದ್ರ… ಇನ್ನು ನೆನಪು ಮಾತ್ರ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಲ್ಲಿ ರಾಮಘಡ ಗ್ರಾಮದ ಸಂಪೂರ್ಣ ಚಿತ್ರಣ ನೀಡುವ ಒಂದು ವೈಡ್‌ ಆಂಗಲ್‌ ಫೋಟೊ ಇದೆ. ಈ ಫೋಟೊ ನೋಡುತ್ತಿದ್ದಂತೆ ಇಲ್ಲಿ ಚಿತ್ರಣಗೊಂಡಿರುವ ಚಿತ್ರದ ಹಲವು ಸನ್ನಿವೇಶಗಳು ಸಿನಿಪ್ರೇಮಿಗಳ ಮನಸ್ಸಿನಲ್ಲಿ ಮೂಡಬಹುದು. ಧರ್ಮೇಂದ್ರ ಅವರು ಕೂಲ್‌ಡ್ರಿಂಕ್‌ ಬಾಟಲ್‌ ಹಿಡಿದಿರುವ ಮತ್ತೊಂದು ಫೋಟೊ ಇದೇ ಸಂದರ್ಭದ್ದು. ಶೂಟಿಂಗ್‌ ಬಿಡುವಿನ ವೇಳೆಯಲ್ಲಿ ಸೆರೆಯಾದ ಚಿತ್ರವಿದು. ಧರ್ಮೇಂದ್ರ ಅವರು ಉಪಾಹಾರ ಸೇವಿಸುತ್ತಿರುವ ಮತ್ತೊಂದು ಫೋಟೊ ಬೆಂಗಳೂರಿಗೆ ಮತ್ತೊಂದು ಬಾರಿ ಅವರು ಭೇಟಿ ನೀಡಿದ್ದಾಗಿನ ಸಂದರ್ಭ. ‘ಇದು ಹಿಂದಿ ಸಿನಿಮಾವೊಂದರ ಔತಣಕೂಟದ ಸಂದರ್ಭ. ಯಾವ ಸಿನಿಮಾ ಎನ್ನುವುದು ನನಗೆ ನೆನಪಾಗುತ್ತಿಲ್ಲ’ ಎನ್ನುತ್ತಾರೆ ಪ್ರಗತಿ ಅಶ್ವತ್ಥ ನಾರಾಯಣ.

(ಫೋಟೊಗಳು: ಪ್ರಗತಿ ಅಶ್ವತ್ಥ ನಾರಾಯಣ, ಬರಹ: ಶಶಿಧರ ಚಿತ್ರದುರ್ಗ)

ಪ್ರಗತಿ ಅಶ್ವತ್ಥ ನಾರಾಯಣ 1
ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಮತ್ತು ಧರ್ಮೇಂದ್ರ
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...