ಸೆ.19ರಂದು ಬಿಡುಗಡೆಗೆ ಸಿದ್ಧವಾಗಿದೆ ʼಅರಸಯ್ಯನ ಪ್ರೇಮ ಪ್ರಸಂಗʼ

Date:

ಟ್ರೇಲರ್‌ನಲ್ಲಿ ಸದ್ದು ಮಾಡಿದ್ದ ಫ್ರೆಂಚ್‌ ಬಿರಿಯಾನಿ ಖ್ಯಾತಿಯ ಮಹಾಂತೇಶ್‌ ಹಿರೇಮಠ ನಾಯಕನಾಗಿ ನಟಿಸಿರುವ ಗ್ರಾಮೀಣ ಸೊಗಡಿನ ಕಾಮಿಡಿ ಜಾನರ್‌ ಚಿತ್ರ ಅರಸಯ್ಯನ ಪ್ರೇಮ ಪ್ರಸಂಗ ಇದೇ ಸೆ.19ರಂದು ಬಿಡುಗಡೆಯಾಗಲಿದೆ. ಇತ್ತೇಚೆಗೆ ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ ಜರುಗಿದ್ದು, ʼಪೋಸ್ಟ್‌ ಕಾರ್ಡ್‌ʼ ಎನ್ನುವ ಹಾಡು ಬಿಡುಗಡೆಯಾಗಿದೆ.

ವಿಕ್ರಮ್ ವಸಿಷ್ಠ ಸಾಹಿತ್ಯ, ಪ್ರವೀಣ್-ಪ್ರದೀಪ್ ಸಂಗೀತವಿರುವ ಪೋಸ್ಟ್‌ ಕಾರ್ಡ್‌ ಹಾಡಿಗೆ ನಿತಿನ್ ರಾಜಾರಾಮ್ ಶಾಸ್ತ್ರಿ ಹಾಗೂ ಜೋಗಿ ಸುನಿತಾ ಧ್ವನಿ ನೀಡಿದ್ದಾರೆ. ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿರ್ದೇಶಕ ಆರ್ ಚಂದ್ರು ಅವರು ಹಾಡನ್ನು ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ನಿರ್ಮಾಪಕರಾದ ನವರಸನ್, ಸಂಜಯ್ ಗೌಡ, ಚೇತನ್ ಗೌಡ ಹಾಗೂ ವಿತರಕರಾದ ಜಗದೀಶ್ ಗೌಡ, ಕೃಷ್ಣ ಸಾರ್ಥಕ್, ಗುರುದೇವ್ ಮುಂತಾದವರು “ಅರಸಯ್ಯನ ಪ್ರೇಮ ಪ್ರಸಂಗ” ಚಿತ್ರಕ್ಕೆ ಶುಭ ಕೋರಿದ್ದಾರೆ.

“ಕನ್ನಡದ ಜನರು ಉತ್ತಮ ಕಂಟೆಂಟ್ ಇರುವ ಚಿತ್ರವನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ‌. ನಮ್ಮ ಚಿತ್ರದಲ್ಲೂ ಅಂತಹ ಉತ್ತಮ ಕಂಟೆಂಟ್ ಇದೆ. ಈಗಾಗಲೇ ಹಾಡುಗಳು ಹಾಗೂ ಟ್ರೇಲರ್ ಜನರ ಮನಸ್ಸಿಗೆ ಹತ್ತಿರವಾಗಿದೆ. ಚಿತ್ರ ಸೆಪ್ಟೆಂಬರ್ 19 ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಮೈಸೂರಿನಲ್ಲಿ ಪೇಡ್ ಪ್ರೀಮಿಯರ್ ‌ನಡೆಯಲಿದೆ. ಸಮಾರಂಭಕ್ಕೆ ಆಗಮಿಸಿರುವ ಗಣ್ಯರಿಗೆ ಹಾಗೂ ಚಿತ್ರತಂಡದ ಸದಸ್ಯರಿಗೆ ನನ್ನ ಧನ್ಯವಾದ” ಎಂದರು ನಿರ್ಮಾಪಕ ರಾಜೇಶ್ ಗೌಡ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿ: ಈ ದಿನ ಸಂಪಾದಕೀಯ | ರಾಹುಲ್ ಹೇಳಿದ್ದನ್ನೆಲ್ಲ ಮೋದಿ ಮಾಡುತ್ತಿದ್ದಾರಲ್ಲ?

“ಚಿತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವ ಪ್ರತಿಯೊಬ್ಬ ಗಣ್ಯರಿಗೆ ಹಾಗೂ ಚಿತ್ರತಂಡದ ಸದಸ್ಯರಿಗೆ ಅನಂತ ಧನ್ಯವಾದ. ನಮ್ಮ ಚಿತ್ರದ ಬಗ್ಗೆ ಒಂದಂತೂ ಹೇಳಬಹುದು; ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಯಾವುದೇ ಮೋಸ ಆಗದಂತ ಸಿನಿಮಾ ಇದು. ಮನೋರಂಜನೆಯೇ ಪ್ರಧಾನವಾಗಿರುವ “ಅರಸಯ್ಯನ ಪ್ರೇಮ ಪ್ರಸಂಗ”ವನ್ನು ಚಿತ್ರಮಂದಿರಗಳಲ್ಲಿ ನೋಡುವ ಮೂಲಕ ಪ್ರೋತ್ಸಾಹ ನೀಡಬೇಕು” ಎಂದರು ನಾಯಕ ಮಹಾಂತೇಶ್ ಹಿರೇಮಠ.

ಕಾರ್ಯಕ್ರಮದಲ್ಲಿ ನಾಯಕಿ ರಶ್ಮಿತ ಆರ್‌ ಗೌಡ, ನಿರ್ಮಾಪಕಿ ಮೇಘಶ್ರೀ ರಾಜೇಶ್, ಚಿತ್ರದಲ್ಲಿ ನಟಿಸಿರುವ ಪಿ ಡಿ ಸತೀಶ್, ವಿಜಯ್ ಚೆಂಡೂರ್, ಸುಜಿತ್, ಸುಧಾ, ಚಿಲ್ಲರ್ ಮಂಜು, ಮಹದೇವ್ ಲಾಲಿಪಾಳ್ಯ , ಸಂಗೀತ ನಿರ್ದೇಶಕ ಪ್ರವೀಣ್ – ಪ್ರದೀಪ್, ಛಾಯಾಗ್ರಾಹಕ ಗುರುಪ್ರಸಾದ್‌ ನಾರ್ನಾಡ್, ಸಂಕಲನಕಾರ ಸುನೀಲ್ ಕಶ್ಯಪ್, ಹಾಡು ಬರೆದಿರುವ ವಿಕ್ರಮ್ ವಸಿಷ್ಠ, ಗಾಯಕ ನಿತಿನ್ ರಾಜರಾಮ್ ಶಾಸ್ತ್ರಿ, ನೃತ್ಯ ನಿರ್ದೇಶಕ ರಾಮ್ ಪ್ರಸಾದ್ ಮುಂತಾದವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...