ಬೆಂಗಳೂರು | ಕಪಾಲಿ ಚಿತ್ರಮಂದಿರವಿದ್ದ ಜಾಗಕ್ಕೆ ಮರುಕಳಿಸಿದ ಗತವೈಭವ!

Date:

ಬೆಂಗಳೂರಿನ ಮೆಜೆಸ್ಟಿಕ್ ಮತ್ತು ಗಾಂಧಿನಗರ ಎಂದ ಕೂಡಲೇ ನೆನಪಾಗುವುದು ಅಲ್ಲಿನ ಗಿಜಿಗುಟ್ಟುವ ಜನಸಂದಣಿ ಮತ್ತು ಹಳೆಯ ಚಿತ್ರಮಂದಿರಗಳು. ಬೆಂಗಳೂರಿನ ಹೃದಯಭಾಗವಾದ ಮೆಜೆಸ್ಟಿಕ್ ಪ್ರದೇಶದಲ್ಲಿ ಒಂದು ಕಾಲದಲ್ಲಿ ಚಿತ್ರಮಂದಿರಗಳದ್ದೇ ಕಾರುಬಾರು. ಅವುಗಳಲ್ಲಿ, ಏಷ್ಯಾದಲ್ಲಿಯೇ ಅತೀ ದೊಡ್ಡ ಥಿಯೇಟರ್‌ ಎಂಬ ಖ್ಯಾತಿ ಪಡೆದಿದ್ದ ‘ಕಪಾಲಿ’ ಚಿತ್ರಮಂದಿರವೂ ಒಂದು. ಸುಮಾರು 50 ವರ್ಷಗಳ ಕಾಲ ಸಿನಿಪ್ರಿಯರಿಗೆ ಮನರಂಜನೆ ನೀಡಿದ್ದ ಈ ಚಿತ್ರಮಂದಿರ ಮತ್ತು ಅದರ ಹೆಸರು ಕೇವಲ ಹೆಸರಾಗಿ ಉಳಿದಿರಲಿಲ್ಲ, ಭಾವನೆಯಾಗಿ ಬೆಳೆದಿತ್ತು. 2017ರಲ್ಲಿ ಕಪಾಲಿ ಚಿತ್ರಮಂದಿರವನ್ನು ನೆಲಸಮಗೊಂಡು, ಇತಿಹಾಸದ ಪುಟ ಸೇರಿದಾಗ, ಸಿನಿಮಾ ಪ್ರೇಮಿಗಳಿಗೆ ಅತೀವ ನೋವುಂಟುಮಾಡಿತ್ತು. ಇದೀಗ, ಅದೇ ಜಾಗದಲ್ಲಿ ಬೃಹತ್ ಮಲ್ಟಿಫ್ಲೆಕ್ಸ್‌ ತಲೆ ಎತ್ತಿದೆ. ಉದ್ಘಾಟನೆಗೆ ಸಜ್ಜಾಗಿದೆ.

1968ರಲ್ಲಿ ಬೆಂಗಳೂರಿನ ಸುಬೇದಾರ್ ಛತ್ರಂ ರಸ್ತೆಯಲ್ಲಿ ಪ್ರಾರಂಭವಾದ ಕಪಾಲಿ ಚಿತ್ರಮಂದಿರವು ಆಗಿನ ಕಾಲಕ್ಕೆ ದಕ್ಷಿಣ ಭಾರತದ ಅತಿದೊಡ್ಡ ಚಿತ್ರಮಂದಿರವಾಗಿತ್ತು. ಸುಮಾರು 1,400ಕ್ಕೂ ಹೆಚ್ಚು ಆಸನಗಳನ್ನು ಹೊಂದಿದ್ದ ಈ ಥಿಯೇಟರ್‌, ಭಾರತದ ಮೊದಲ ‘ಸಿನಿಮಾಸ್ಕೋಪ್’ ಅಥವಾ ‘ವೈಡ್ ಸ್ಕ್ರೀನ್’ಅನ್ನು ಹೊಂದಿತ್ತು. ಚಿತ್ರಮಂದಿರವನ್ನು ವರನಟ ಡಾ. ರಾಜ್‌ಕುಮಾರ್ ಉದ್ಘಾಟಿಸಿದ್ದರು. ಮಾತ್ರವಲ್ಲ, ಅವರ ‘ಮಣ್ಣಿನ ಮಗ’ ಚಿತ್ರವು ಕಪಾಲಿಯಲ್ಲಿ ಪ್ರದರ್ಶನಗೊಂಡ ಮೊದಲ ಸಿನಿಮಾ ಕೂಡ ಆಗಿತ್ತು.

ಅಂದಿನಿಂದ, 2017ರವರೆಗೂ ಕಪಾಲಿ ಚಿತ್ರಮಂದಿರವು ನೂರಾರು ಸಿನಿಮಾಗಳು ಪ್ರದರ್ಶನ ಕಂಡಿತ್ತು, ಲಕ್ಷಾಂತರ ಸಿನಿಮಾ ಪ್ರೇಮಿಗಳನ್ನು ರಂಜಿಸಿದ್ದತ್ತು. ಆದರೆ, ಬದಲಾದ ಕಾಲಘಟ್ಟ ಮತ್ತು ತಂತ್ರಜ್ಞಾನಗಳ ಅಬ್ಬರ ಹಾಗೂ ಮಲ್ಪಿಫ್ಲೆಕ್ಸ್‌ ಹಾವಳಿಗೆ ಸಿಲುಕಿ, 2017ರಲ್ಲಿ ಪ್ರದರ್ಶನ ನಿಲ್ಲಿಸಿತು. ಅದೇ ವರ್ಷ ನೆಲಸಮಗೊಂಡಿತು.  

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈಗ, ಕಪಾಲಿ ಚಿತ್ರಮಂದಿರವಿದ್ದ ಸುಮಾರು 45,000 ಚದರ ಅಡಿ ವಿಸ್ತೀರ್ಣದ ಜಾಗದಲ್ಲಿ ಬೃಹತ್ ‘ಮಲ್ಟಿಫ್ಲೆಕ್ಸ್‌’ ತಲೆ ಎತ್ತಿದೆ. ಆಧುನಿಕತೆಯ ಸ್ಪರ್ಶದೊಂದಿಗೆ ಹೊಸ ರೂಪದಲ್ಲಿ ನಿರ್ಮಾಣಗೊಂಡಿದೆ. ಹಳೆಯ ಕಪಾಲಿ ಒಂದೇ ಪರದೆಯಲ್ಲಿ 1,400 ಜನರಿಗೆ ಸಿನಿಮಾ ಪ್ರದರ್ಶಿಸುತ್ತಿತ್ತು. ಆ ಹಳೆಯ ಸಿಂಗಲ್ ಸ್ಕ್ರೀನ್ ಯುಗಕ್ಕೆ ಬದಲಾಗಿ, ಹಲವು ಪರದೆಗಳ ‘ಮಲ್ಟಿಪ್ಲೆಕ್ಸ್’ ಕಟ್ಟಡ ಮತ್ತು ವಾಣಿಜ್ಯ ಸಂಕೀರ್ಣಗಳು ಸಿದ್ದಗೊಂಡಿವೆ. ಏಕಕಾಲದಲ್ಲಿ ನಾನಾ ಭಾಷೆಯ, ವಿವಿಧ ಸಿನಿಮಾಗಳು ತೆರೆಯಲ್ಲಿ ಪ್ರೇಕ್ಷಕರನ್ನು ರಂಚಿಸಲಿವೆ.

ಹೊಸ ಮಲ್ಪಿಫ್ಲೆಕ್ಸ್‌ಅನ್ನು ತೆಲುಗು ನಟ ಮಹೇಶ್‌ ಬಾಬು ಅವರ ‘ಎಎಂಬಿ ಸಿನಿಮಾಸ್‌’ ಸಂಸ್ಥೆ ನಿರ್ಮಾಣ ಮಾಡಿದೆ. ಈ ಮಲ್ಟಿಫ್ಲೆಕ್ಸ್‌ ಪ್ರೇಕ್ಷಕರಿಗೆ ನೈಜ ಅನುಭವ ನೀಡುವ  ‘ಡಾಲ್ಬಿ ಅಟ್ಮಾಸ್’ ಅತ್ಯಾಧುನಿಕ ಧ್ವನಿ ವ್ಯವಸ್ಥೆಯನ್ನು ಹೊಂದಿದೆ.  ಚಿತ್ರದ ಸ್ಪಷ್ಟತೆಗಾಗಿ ಅತ್ಯುನ್ನತ ‘4K ಪ್ರೊಜೆಕ್ಷನ್’ ಗುಣಮಟ್ಟದ ಪರದೆಗಳಿವೆ. ಪ್ರೇಕ್ಷಕರು ನಿರಾಯಸವಾಗಿ ಕೂರಬಹುದಾದ ‘ಪುಶ್-ಬ್ಯಾಕ್ ಸೀಟು’ಗಳಿವೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಈ ಲೇಖನ ಓದಿದ್ದೀರಾ?: ಬೆಂಗಳೂರು – ಮೈಸೂರು ಕಾರಿಡಾರ್ | ಸರ್ಕಾರಕ್ಕೆ ಯೋಜನೆ ರದ್ದುಗೊಳಿಸಲು ಸೂಚಿಸಿದ ಹೈಕೋರ್ಟ್

ಕಪಾಲಿಯಿದ್ದ ಜಾಗದಲ್ಲಿ ‘ಮಲ್ಟಿಫ್ಲೆಕ್ಸ್‌’ ತಲೆ ಎತ್ತಿರುವುದು ಮೆಜೆಸ್ಟಿಕ್‌ನ ಸಿನಿಮಾ ಸಂಸ್ಕೃತಿ ಮರುಕಳಿಸುವಂತೆ ಮಾಡಿದೆ ಎಂದೇ ಭಾವಿಸಲಾಗಿದೆ. ಕಟ್ಟಡವು ಚಿತ್ರಮಂದಿರಗಳ ಜೊತೆಗೆ ‘ಶಾಪಿಂಗ್ ಮಾಲ್’, ಫುಡ್ ಕೋರ್ಟ್’ಅನ್ನೂ ಹೊಂದಿದ್ದು, ಯುವ ಪೀಳಿಗೆ ಮತ್ತೆ ಮೆಜೆಸ್ಟಿಕ್‌ನತ್ತ ಮುಖ ಮಾಡುವ ವಿಶ್ವಾಸ ಎಎಂಬಿ ಸಿನಿಮಾಸ್‌ ಸಂಸ್ಥೆಯಲ್ಲಿದೆ.

ಕಟ್ಟಡ ಹೊಸದಾದರೂ, ಆ ಜಾಗಕ್ಕೆ ಇಂದಿಗೂ ‘ಕಪಾಲಿ’ ಎಂಬ ಹೆಸರೇ ಜನಜನಿತವಾಗಿದೆ. ಹೊಸ ಮಲ್ಟಿಪ್ಲೆಕ್ಸ್ ಬಂದಿದ್ದರೂ, ಹಳೆಯ ತಲೆಮಾರಿನ ಜನರು ಇದನ್ನು ‘ಹೊಸ ಕಪಾಲಿ’ ಎಂದೇ ಗುರುತಿಸುತ್ತಿದ್ದಾರೆ. ಡಾ. ರಾಜ್‌ಕುಮಾರ್ ಅವರ ಸಿನಿಮಾಗಳ ವೈಭವದ ನೆನಪುಗಳನ್ನು ಹೊತ್ತ ಈ ಜಾಗ, ಈಗಿನ ತಲೆಮಾರಿನ ಸ್ಟಾರ್ ನಟರ ಚಿತ್ರಗಳನ್ನು ಸ್ವಾಗತಿಸುವ ವಿಶ್ವಾಸ ಹೊಂದಿದ್ದಾರೆ.

ಆದಾಗ್ಯೂ, ಹೊಸ ಮಲ್ಟಿಫ್ಲೆಕ್ಸ್‌ ಕಟ್ಟಡವು ತೆಲುಗು ನಟ ಮಹೇಶ್‌ ಬಾಬು ಅವರ ಒಡೆತನಕ್ಕೆ ಸೇರಿರುವುದರಿಂದ, ಈ ಕಟ್ಟಡದಲ್ಲಿ ತೆಲುಗು ಸಿನಿಮಾಗಳಿಗೆ ಹೆಚ್ಚು ಆದ್ಯತೆ ನೀಡಬಹುದೆಂಬ ಕಳವಳವೂ ಪ್ರೇಕ್ಷಕರಲ್ಲಿದೆ. ಆದರೆ, ಚಿತ್ರಮಂದಿರ ಅಥವಾ ಮಲ್ಟಿಫ್ಲೆಕ್ಸ್‌ ಎಲ್ಲ ಭಾಷೆಯ ಸಿನಿಮಾಗಳನ್ನೂ ಒಂದೇ ಸಮಾನಾಗಿ ನೋಡಬೇಕು, ಎಲ್ಲ ಭಾಷೆಯ ಚಿತ್ರಗಳಿಗೂ ಸಮಾನ ಅವಕಾಶ ದೊರೆಯಬೇಕು. ಆಗಲೇ, ಮಲ್ಟಿಫ್ಲೆಕ್ಸ್‌ಗಳು ಜೀವಂತವಿರಲು ಸಾಧ್ಯ ಎಂಬುದು ವಾಸ್ತವ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...