ಬಾಡಿ ಶೇಮಿಂಗ್‌ : ʼಡಿಂಪಲ್‌ ಕ್ವೀನ್‌ʼ ರಚಿತಾ ರಾಮ್‌ ನೀಡಿದ ಎಚ್ಚರಿಕೆ ಏನು ಗೊತ್ತೇ?

Date:

ಹೆಣ್ಣು ಮಗಳು, ಬೆಳಗ್ಗೆ ಎದ್ದು ಕನ್ನಡಿಯ ಮುಂದೆ ನಿಂತು ತನ್ನನ್ನು ನೋಡಿ ನಗುತ್ತಾಳೆ. ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಬರುವ “ದಪ್ಪ ಆಗಿದ್ದೀಯಾ?” ಎಂಬ ಒಂದು ಕಾಮೆಂಟ್ ಆ ನಗುವನ್ನು ಕಸಿದುಕೊಳ್ಳುತ್ತದೆ. ಕನ್ನಡ ಸಿನಿರಂಗದಲ್ಲಿ “ಡಿಂಪಲ್ ಕ್ವೀನ್” ಅಂತ ಕರೆಸಿಕೊಳ್ಳುವ ರಚಿತಾ ರಾಮ್‌, ‘ಬುಲ್ ಬುಲ್’ನ ಗುಳಿ ಕೆನ್ನೆ ಚೆಲುವೆ, ಇಂದಿನ ‘ಕಲ್ಟ್’ ಚಿತ್ರದ ಸೂಪರ್ ಸ್ಟಾರ್. ಅವರು ಬದಲಾಗಿದ್ದಾರೆ ಅಂತ ಹೇಳೋದು ಸುಲಭ. ಆದ್ರೆ ಅವರು ಬದಲಾಗೋಕೆ ಕಾರಣವಾದ ಜೀವನ, ಒತ್ತಡ, ಶ್ರಮ, ಮಾನಸಿಕ ಹೋರಾಟ ಬಗ್ಗೆ ಮಾತಾಡುವವರು ಯಾರು? ಸಿನಿಮಾ, ರಿಯಾಲಿಟಿ ಶೋ, ಪ್ರಚಾರ, ಶೂಟಿಂಗ್, ಸೋಷಿಯಲ್ ಮೀಡಿಯಾ, ಈ ಎಲ್ಲದರ ಮಧ್ಯೆ ಪ್ರತಿ ದಿನವೂ ಕ್ಯಾಮೆರಾ ಎದುರು ನಿಂತು, ಪ್ರತಿಕ್ಷಣವೂ ಸಾರ್ವಜನಿಕ ತೀರ್ಪಿಗೆ ಒಳಗಾಗುವ ಜೀವನ ಅವರದ್ದು.

ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಈಗ ‘ಲೇಡಿ ಬಾಸ್’ ಆಗಿರೋದು ಗೊತ್ತೇ ಇದೆ. ಆಟೋ ಚಾಲಕರ ಸಂಘಕ್ಕೆ ರಾಯಭಾರಿಯೂ ಆಗಿರುವ ನಟಿ ರಚಿತಾ ರಾಮ್ ಅವರನ್ನು ಅವರ ಅಭಿಮಾನಿಗಳು ‘ಲೇಡಿ ಬಾಸ್’ ಎಂದೇ ಕರೆಯತೊಡಗಿದ್ದಾರೆ.

photo 6303030769818996095 y

‘ಬುಲ್ ಬುಲ್’ ಸಿನಿಮಾದಲ್ಲಿ ಸಪೂರವಾಗಿ ಕಾಣಿಸಿ ಪ್ರೇಕ್ಷಕರ ಮನ ಗೆದ್ದ ಆ ಸುಂದರ ವದನದ ನಟಿ, ಇಂದು ಕೇವಲ ಸಿನಿಮಾಗಳ ಮೂಲಕವಲ್ಲದೇ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಪ್ರತಿ ಮನೆ ಮನಸ್ಸನ್ನು ತಲುಪಿದ್ದಾರೆ. ಆದರೆ, ಈ ಚಂದದ ಹಿಂದೆ ಒಂದು ಕಹಿ ಸತ್ಯ ಇದೆ ಅದು ಬಾಡಿ ಶೇಮಿಂಗ್. ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ನಡೆಯುವ ಈ ಮಾನಸಿಕ ಹಿಂಸೆ, ವಿಶೇಷವಾಗಿ ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ಇರುವವರ ಜೀವನವನ್ನು ಹೇಗೆ ಕಾಡುತ್ತದೆ ಎಂಬುದಕ್ಕೆ ರಚಿತಾ ರಾಮ್‌ ಅವರ ಅನುಭವಗಳೇ ಸಾಕ್ಷಿಯಾಗಿದೆ.

2026ರ ಆರಂಭದಲ್ಲೇ ರಚಿತಾ ಅವರಿಗೆ ಅದೃಷ್ಟ ಒಲಿದಿದೆ. ಒಂದೇ ದಿನ ಎರಡು ಸಿನಿಮಾಗಳು ದುನಿಯಾ ವಿಜಯ್ ಅಭಿನಯದ ‘ಲ್ಯಾಂಡ್‌ಲಾರ್ಡ್’ ಮತ್ತು ಝೈದ್ ಖಾನ್ ಅಭಿನಯದ ‘ಕಲ್ಟ್’ ಸಿನಿಮಾ ರಿಲೀಸ್ ಆಗುತ್ತಿವೆ. ಎರಡೂ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸುತ್ತಿರುವ ರಚಿತಾ, ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ‘ಕಲ್ಟ್’ ಸಿನಿಮಾದ ಪ್ರೆಸ್ ಮೀಟ್‌ನಲ್ಲಿ ಒಂದು ಪ್ರಶ್ನೆ ಅವರನ್ನು ಕಾಡಿತ್ತು, ಬಾಡಿ ಶೇಮಿಂಗ್ ಕುರಿತು. ‘ಬುಲ್ ಬುಲ್’ನ ರಚಿತಾ ಮತ್ತು ಈಗಿನ ರಚಿತಾ ನಡುವೆ ದೈಹಿಕ ಬದಲಾವಣೆಗಳು ಇದ್ದರೂ, ಅದನ್ನು ನೆಗೆಟಿವ್ ಕಾಮೆಂಟ್‌ಗಳ ಮೂಲಕ ಕೆಟ್ಟದಾಗಿ ಬಿಂಬಿಸುವವರಿಗೆ ಅವರು ಖಡಕ್ ಉತ್ತರ ನೀಡಿದ್ದಾರೆ. ಇದು ಕೇವಲ ಒಬ್ಬ ನಟಿಯ ಸಮಸ್ಯೆ ಅಲ್ಲ ಇದು ಲಕ್ಷಾಂತರ ಹೆಣ್ಣು ಮಕ್ಕಳ ಮೇಲೆ ನಡೆಯುವ ಮಾನಸಿಕ ದೌರ್ಜನ್ಯ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹೆಣ್ಣು ಮಕ್ಕಳಿಗೆ ಬಾಡಿ ಶೇಮಿಂಗ್ ಏಕೆ ಹೆಚ್ಚು? ಸಮಾಜದ ನಿರೀಕ್ಷೆಗಳು ಹೆಣ್ಣನ್ನು ಒಂದು ಸೌಂದರ್ಯದ ಚೌಕಟ್ಟಿನಲ್ಲಿ ನೋಡಬೇಕೆಂದು ಬಯಸುತ್ತವೆ. ಸಣ್ಣ, ದಪ್ಪ, ಉದ್ದ, ಕುಳ್ಳ ಯಾವುದೇ ದೇಹದ ರೂಪಕ್ಕೆ ಕಾಮೆಂಟ್‌ಗಳು ಬರುತ್ತವೆ. ಆದರೆ, ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ಇದು ಇನ್ನಷ್ಟು ತೀವ್ರ. ಪ್ರತಿದಿನ ಕ್ಯಾಮರಾ ಮುಂದೆ ನಿಲ್ಲುವವರು, ಸಾವಿರಾರು ಕಣ್ಣುಗಳ ನಡುವೆ ತಮ್ಮ ದೇಹವನ್ನು ಪ್ರದರ್ಶಿಸಬೇಕು. ಒಂದು ಸಣ್ಣ ಬದಲಾವಣೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗಳ ಆಹಾರವಾಗುತ್ತದೆ. ರಚಿತಾ ರಾಮ್ ಹೇಳಿದಂತೆ, “ನೆಗೆಟಿವ್ ಕಾಮೆಂಟ್ ಮಾಡೋರಿಗೆ ಕ್ಯಾರೇ ಅನ್ನಬಾರದು. ಆದರೆ, ಇದು ಅಷ್ಟು ಸುಲಭ ಅಲ್ಲ.

ರಚಿತಾ ಅವರ ಮಾತುಗಳು ಹೆಣ್ಣು ಮಕ್ಕಳ ದೇಹದ ಸಮಸ್ಯೆಗಳನ್ನು ತೆರೆದುಕೊಳ್ಳುವಂತಿವೆ. “ಎಲ್ಲಾ ಹೆಣ್ಮಕ್ಕಳ ಬಾಡಿ ಟೈಪ್ಸ್ ಒಂದೊಂದು ಥರಾ ಇರುತ್ತೆ. ಕೆಲವರು ಡಯಟ್ ಮಾಡಿದ್ರು ದಪ್ಪ ಆಗ್ತಾರೆ. ಕೆಲವರಿಗೆ ಪಿಸಿಒಎಸ್, ಪಿಸಿಒಡಿ ಸಮಸ್ಯೆ ಇರುತ್ತೆ. ಕೆಲವರು ಮೆಂಟಲ್ ಸ್ಟ್ರೆಸ್‌ನಿಂದಲೂ ದಪ್ಪ ಆಗ್ತಾರೆ. “ಪೀರಿಯಡ್ಸ್ ಸಮಯದಲ್ಲಿ ಬಾಡಿ ಬ್ಲೋಟಿಂಗ್, ನಿದ್ದೆಯ ಕೊರತೆಯಿಂದ ದೇಹದ ಬದಲಾವಣೆ ಆಗುತ್ತೆ, ಇವೆಲ್ಲವನ್ನೂ ರಚಿತಾ ರಾಮ್‌ ಓಪನ್‌ ಆಗೇ ಧೈರ್ಯವಾಗಿ ಹೇಳಿದ್ದಾರೆ. ಆದರೆ, ಸಮಾಜಕ್ಕೆ ಇದು ಗೊತ್ತಿಲ್ಲವಾ ಅಥವಾ ಗೊತ್ತಿದ್ದರೂ ಅಡಗಿಸಿಕೊಂಡು ಕಾಮೆಂಟ್ ಮಾಡುವುದೇ ಒಂದಿಷ್ಟು ವಿಕೃತ ಮನಸ್ಸಿಗೆ ಖುಷಿ ಕೊಡುತ್ತಾ? ರಚಿತಾ ಹೇಳುವಂತೆ, “ನಮ್ಮ ಬಾಡಿ.. ನಮ್ಮ ಇಷ್ಟ… ನಮ್ಮ ಲೈಫು.” ಇದು ಎಲ್ಲಾ ಹೆಣ್ಣು ಮಕ್ಕಳ ಮಂತ್ರವಾಗಬೇಕು.

ಈ ಹಿಂದೆ ವಿದ್ಯಾ ಬಾಲನ್‌ ಅವರಿಗೆ “ದಪ್ಪ”, “ಅನ್‌ಫಿಟ್”, “ಹೀರೋಯಿನ್ ಲುಕ್ ಇಲ್ಲ” ಅಂತ ವರ್ಷಗಳ ಕಾಲ ಟೀಕೆ ಬಂದಿತ್ತು. ಅವರು ಹೇಳಿದ್ದು ಇಷ್ಟೇ, “ನನಗೆ ನನ್ನ ದೇಹದ ಬಗ್ಗೆ ಖುಷಿ ಇದೆ, ಸಮಾಜದ ಅಭಿಪ್ರಾಯ ನನಗೆ ಅಪ್ರಸ್ತುತ” ಅಂತ. ಕಹಾನಿ, ಡರ್ಟಿ ಪಿಕ್ಚರ್ ನಂತರವೂ ಅವರ ದೇಹವನ್ನು ಪಾತ್ರಕ್ಕಿಂತ ಹೆಚ್ಚು ಚರ್ಚೆ ಮಾಡಲಾಯಿತು.

vidya balan 2
ವಿದ್ಯಾ ಬಾಲನ್‌

ದೀಪಿಕಾ ಪಡುಕೋಣೆ ಡಿಪ್ರೆಶನ್ ಬಗ್ಗೆ ಮಾತನಾಡಿದ ಮೊದಲ ನಟಿ. ಅವರು ಸ್ಪಷ್ಟವಾಗಿ ಹೇಳಿದ್ದರು, “ಬಾಡಿ ಶೇಮಿಂಗ್ ಮತ್ತು ಟ್ರೋಲಿಂಗ್ ಮಾನಸಿಕ ಆರೋಗ್ಯದ ಮೇಲೆ ಭಾರೀ ಪರಿಣಾಮ ಬೀರುತ್ತದೆ.” Padmaavat ಸಮಯದಲ್ಲಿ “ತೂಕ ಜಾಸ್ತಿ”, “ಲುಕ್ ಬದಲಾಗಿದೆ” ಅನ್ನೋ ಕಾಮೆಂಟ್ಸ್ ಅವರ ಮೆಂಟಲ್ ಹೆಲ್ತ್ ಮೇಲೆ ಪರಿಣಾಮ ಬೀರಿತ್ತು ಅಂತ ದೀಪಿಕಾ ಒಪ್ಪಿಕೊಂಡಿದ್ದಾರೆ.

deepika 1
ದೀಪಿಕಾ ಪಡುಕೋಣೆ

ಸಮಂತಾ ಮಯೋಸೈಟಿಸ್‌ ಕಾಯಿಲೆಯಿಂದ ಬಳಲುತ್ತಿದ್ದಾಗಲೂ ಸಮಂತಾ ಮೇಲೆ  ಹಲವಾರು ನೆಗೆಟೀವ್‌ ಕಾಮೆಂಟ್ಸ್ ಬಂದಿತ್ತು. ಸಮಂತಾ ಹೇಳಿದ್ದು ಇಷ್ಟೇ, “ನಾನು ಬದುಕುಳಿಯಲು ಹೋರಾಡುತ್ತಿದ್ದಾಗ, ಜನ ನನ್ನ ದೇಹವನ್ನು ತೀರ್ಪು ಮಾಡುತ್ತಿದ್ದರು. ಇದು ಕ್ರೂರತೆ. ಆರೋಗ್ಯ ಸಮಸ್ಯೆಗೂ ಜಾಗ ಕೊಡದ ಸಮಾಜ” ಅಂತ ಬೇಸರ ವ್ಯಕ್ತಪಡಿಸಿದ್ದರು. 

samanth 2
ಸಮಂತಾ

ಕೇವಲ 2 ತಿಂಗಳ ಹಿಂದೆ, ಬಾಡಿ ಶೇಮಿಂಗ್ ಮತ್ತು ಲೈಂಗಿಕ ಉದ್ದೇಶವನ್ನು ಹೊಂದಿರುವ ಪ್ರಶ್ನೆ ಕೇಳಿದ ಯೂಟ್ಯೂಬ್ ಪತ್ರಕರ್ತನನ್ನು ನಟಿ ಗೌರಿ ಕಿಶನ್ ತೀವ್ರ ತರಾಟೆ ತೆಗೆದುಕೊಂಡ ಘಟನೆ ನಡೆದಿತ್ತು.  ಗೌರಿ ಮತ್ತು ಪತ್ರಕರ್ತರ ನಡುವಿನ ವಾಗ್ವಾದ, ಗೌರಿ ಪುರುಷ ಪತ್ರಕರ್ತರನ್ನು ಏಕಾಂಗಿಯಾಗಿ ಮತ್ತು ಧೈರ್ಯವಾಗಿ ಎದುರಿಸಿದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಗೌರಿಯ ನಡೆಗೆ ವ್ಯಾಪಕ ಬೆಂಬಲ ಮತ್ತು ಪ್ರಶಂಸೆ ವ್ಯಕ್ತವಾಗಿತ್ತು. ತಮಿಳಿನ ’96’, ‘ಸೂರರೈ ಪೊಟ್ರು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಗೌರಿ ಕಿಶನ್, ತಮ್ಮ ಮುಂಬರುವ ಚಿತ್ರ ‘ಅದರ್ಸ್’ನ ಪ್ರಚಾರ ಪತ್ರಿಕಾಗೋಷ್ಠಿಯಲ್ಲಿ ತನ್ನ ಸಹ ನಟ ಆದಿತ್ಯ ಮಾಧವನ್ ಜೊತೆ ಕುಳಿತಿದ್ದರು. ಮಾಧವನ್ ಪತ್ರಕರ್ತರ ಜೊತೆ ಮಾತನಾಡುವಾಗ, ಯೂಟ್ಯೂಬ್ ಪತ್ರಕರ್ತ ಆರ್‌.ಎಸ್‌ ಕಾರ್ತಿಕ್ ಎಂಬವರು ಗೌರಿಯ ತೂಕದ ಬಗ್ಗೆ ಮಾಧವನ್ ಅವರಿಗೆ ಪ್ರಶ್ನೆ ಹಾಕಿದ್ದರು. “ಚಿತ್ರದಲ್ಲಿ ನೀವು ಗೌರಿಯನ್ನು ಎತ್ತುತ್ತೀರಾ, ಆಕೆಯ ತೂಕ ಎಷ್ಟು?” ಎಂದು ಪತ್ರಕರ್ತ ಕಾರ್ತಿಕ್ ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಕೋಪಗೊಂಡ ಗೌರಿ, ಮಾಧವನ್ ಅವರಿಂದ ಮೈಕ್ ತೆಗೆದುಕೊಂಡು ಪತ್ರಕರ್ತನಿಗೆ ತಿರುಗೇಟು ನೀಡಿದ್ದರು.

ಈ ಬಾಡಿ ಶೇಮಿಂಗ್ ಮಾನಸಿಕ ಆರೋಗ್ಯದ ಮೇಲೆ ಬೀರುವ ಪರಿಣಾಮ ಅಪಾರ. ಸಿನಿಮಾ ನಟಿಯರಂತೆ ಪ್ರತಿದಿನ ಸಾರ್ವಜನಿಕರ ನಡುವೆ ಇರುವವರು, ಈ ಕಾಮೆಂಟ್‌ಗಳಿಂದ ಡಿಪ್ರೆಷನ್, ಆತ್ಮವಿಶ್ವಾಸದ ಕೊರತೆ, ಸೂಸೈಡ್ ಆಲೋಚನೆಗಳಿಗೆ ತುತ್ತಾಗುತ್ತಾರೆ. ರಚಿತಾ ರಾಮ್ ಖಡಕ್‌ಗೆ ಹೇಳಿದ್ದಾರೆ: “ಬಾಡಿ ಶೇಮಿಂಗ್ ಕಾರಣಕ್ಕೆ ಸೂಸೈಡ್ ಮಾಡಿಕೊಳ್ಳುವವರು ಮುಠ್ಠಾಳರು ಅಂತ. ಅವರ ಅಪ್ಪ-ಅಮ್ಮ ಜೀವ ಕೊಟ್ಟಿರೋದು, ಬೆಳೆಸಿರೋದು ಸೂಸೈಡ್ ಮಾಡಿಕೊಳ್ಳುವುದಕ್ಕಾ?” ಅಂತ ಖಡಕ್‌ ಆಗೇ ಪ್ರಶ್ನೆ ಕೇಳಿದ್ದಾರೆ. ಇದು ನಿಜ. ಆದರೆ, ಎಷ್ಟೋ ಹೆಣ್ಣು ಮಕ್ಕಳು ಈ ಒತ್ತಡಕ್ಕೆ ಬಲಿಯಾಗುತ್ತಾರೆ. ಧಾರಾವಾಹಿ ನಟಿಯರು, ಮಾಡಲ್‌ಗಳು – ಎಲ್ಲರೂ ಇದನ್ನು ಎದುರಿಸುತ್ತಾರೆ. ಒಂದು ಸಣ್ಣ ತೂಕದ ಹೆಚ್ಚಳಕ್ಕೂ “ದಪ್ಪ ಆಗಿದ್ದೀಯಾ?” ಎಂಬ ಪ್ರಶ್ನೆಗಳು. ಇದು ಕೇವಲ ದೇಹದ ಬಗ್ಗೆಯಲ್ಲ, ಇದು ಆತ್ಮಗೌರವದ ಮೇಲಿನ ದಾಳಿಯಂತಾಗಿ ಬಿಡುತ್ತೆ. ಅವರು ನಟಿಯರು ಆಗಿರಬಹುದು. ಆದ್ರೆ ಅವರ ದೇಹವೂ, ಮನಸ್ಸೂ ನಮ್ಮಂಥದ್ದೇ. 

ರಚಿತಾ ರಾಮ್‌

ರಚಿತಾ ರಾಮ್‌ ಹೇಳಿದಂತೆ, “ನಾನು ಏನು ಮಾಡುತ್ತಿದ್ದೇನೆ ಪ್ರತಿ ದಿನ ಅಂತ ನನಗೆ ಗೊತ್ತು. ನಾನು ಏನು ತಿಂತೀನಿ.. ಹೇಗೆ ವರ್ಕೌಟ್ ಮಾಡ್ತೀನಿ” ಅಂತ. ನಿದ್ದೆಯ ಕೊರತೆಯಿಂದ ದೇಹದ ಬದಲಾವಣೆ, ಶೂಟಿಂಗ್ ಸಮಯದಲ್ಲಿ ಬೆಳಿಗ್ಗೆ ದಪ್ಪ ಕಾಣುವುದು ಇವೆಲ್ಲವನ್ನೂ ಅವರು ಹೇಳಿದ್ದಾರೆ.

ಸಮಾಜದಲ್ಲಿ ಬದಲಾವಣೆ ಬೇಕು. ಹೆಣ್ಣು ಮಕ್ಕಳನ್ನು ಅವರ ದೇಹದ ಆಧಾರದಲ್ಲಿ ನಿರ್ಣಯಿಸುವುದನ್ನು ನಿಲ್ಲಿಸಬೇಕು. ಸಿನಿಮಾ ಕ್ಷೇತ್ರದಲ್ಲಿ ಇದು ಇನ್ನಷ್ಟು ಅಗತ್ಯವಿದೆ. ನಟಿಯರು ಕೇವಲ ಚಂದದ ಮುಖಗಳಲ್ಲ ಅವರು ನಮ್ಮ ನಿಮ್ಮಂತೆ ಮನುಷ್ಯರು, ಭಾವನೆಗಳುಳ್ಳವರು. ಬಾಡಿ ಶೇಮಿಂಗ್ ಮಾನಸಿಕ ಆರೋಗ್ಯವನ್ನು ಹಾಳುಮಾಡುತ್ತದೆ = ಡಿಪ್ರೆಷನ್, ಆಂಕ್ಸೈಟಿ, ಅಸಮಾಧಾನ. ಇದನ್ನು ತಡೆಯಲು, ಸಾಮಾಜಿಕ ಮಾಧ್ಯಮಗಳಲ್ಲಿ ಜಾಗೃತಿ ಅಭಿಯಾನಗಳು, ಶಿಕ್ಷಣ – ಎಲ್ಲವೂ ಬೇಕು. ರಚಿತಾ ರಾಮ್‌ ಅವರ ಈ ಸ್ಫೋಟಕ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗುರಿಯಾಗಿವೆ. ಈ ಧೈರ್ಯವಂತಿಕೆಗೆ ಫ್ಯಾನ್ಸ್‌ನಿಂದ ಬೆಂಬಲದ ಸುರಿಮಳೆಯಾಗುತ್ತಿದೆ.

ರಚಿತಾ ರಾಮ್‌ರಂತಹ ನಟಿಯರು ಮುಂದೆ ಬಂದು ಮಾತನಾಡುತ್ತಾರೆಂದರೆ, ಇನ್ನು ಮುಂದೆ ಹೆಣ್ಣು ಮಕ್ಕಳು ತಮ್ಮ ದೇಹವನ್ನು ಗೌರವಿಸುವಂತಾಗಬೇಕು. ಕೊನೆಯಲ್ಲಿ, ರಚಿತಾ ರಾಮ್‌ರ ಮಾತುಗಳೇ ನಮ್ಮೆಲ್ಲರಿಗೂ ಪಾಠವಾಗಬೇಕು. “ಯಾರೋ ನನ್ನ ಇಡಿಯಟ್ ಅಂದ್ರೇ ನಾನು ಇಡಿಯಟ್ ಆಗ್ಬೀಡ್ತೀನಾ? ನನ್ನ ಹೆಸರು ರಚಿತಾ… ರಚಿತಾ ಅಂತ ಕರೆದರೇ ಮಾತ್ರ ನಾನು ರೆಸ್ಪಾನ್ಸ್ ಮಾಡ್ತೀನಿ ಅಷ್ಟೆ. ಗೆಟ್ ಲಾಸ್ಟ್. ಹೆಣ್ಣು ಮಕ್ಕಳೇ, ನಿಮ್ಮ ದೇಹ ನಿಮ್ಮ ದೇಗುಲ. ಅದನ್ನು ಪೂಜಿಸಿ, ಪ್ರೀತಿಸಿ. ಬಾಡಿ ಶೇಮಿಂಗ್‌ಗೆ ಕಿವಿ ಕೊಡಬೇಡಿ. ನಿಮ್ಮ ಜೀವನ ನಿಮ್ಮದು, ನಿಮ್ಮ ಇಷ್ಟದಂತೆ ಬಾಳಿ. 

ಇದು ಸಿನಿರಂಗದ ಸಮಸ್ಯೆಯಲ್ಲ ಇದೊಂದು ವಿಕೃತಿ. ಹೆಣ್ಣು ಮಕ್ಕಳ ದೇಹವನ್ನು ನಾವು ನೋಡೋದಿಲ್ಲ  ನಾವು ಅಳೆಯುತ್ತೇವೆ. ತೂಕದಲ್ಲಿ, ಗಾತ್ರದಲ್ಲಿ, ಫೋಟೋಗಳಲ್ಲಿ, ಕಾಮೆಂಟ್ಸ್‌ನಲ್ಲಿ. ಒಂದು ಕೈಯಲ್ಲಿ ಮೊಬೈಲ್ ಹಿಡಿದು “ಮೋಟು”, “ಲುಕ್ ಹೋಯ್ತು” ಅಂತ ಟೈಪ್ ಮಾಡುವಾಗ, ಇನ್ನೊಂದು ಕೈಯಲ್ಲಿ ನಾವು ಒಬ್ಬ ಹೆಣ್ಣು ಮಗುವಿನ ಆತ್ಮವಿಶ್ವಾಸವನ್ನು ಕತ್ತರಿಸುತ್ತಿದ್ದೇವೆ ಅನ್ನೋ ಅರಿವು ನಮಗಿದೆಯಾ? ಇಂದು ಅದು ರಚಿತಾ ರಾಮ್, ವಿದ್ಯಾ, ದೀಪಿಕಾ, ಸಮಂತಾ ಆಗಿರಬಹುದು. ನಾಳೆ ಅದು ನಿಮ್ಮ ಮನೆ ಒಳಗಿರೋ ಮಗಳು, ತಂಗಿ, ಹೆಂಡತಿ ಆಗಿದ್ರೆ? ಆಗಲೂ ಇದು “ಅಭಿಪ್ರಾಯ” ಅಂತಲೇ ಹೇಳ್ತೀರಾ? ನಟಿಯರ ದೇಹವನ್ನು ಮನರಂಜನೆಯ ವಸ್ತುವಾಗಿ ನೋಡೋ ಈ ವ್ಯವಸ್ಥೆಯಲ್ಲಿ ನಾಳೆ ನಮ್ಮ ಮನೆಗಳ ಹೆಣ್ಣು ಮಕ್ಕಳು ಸುರಕ್ಷಿತರಿರ್ತಾರಾ? ಬಾಡಿ ಶೇಮಿಂಗ್ ಒಂದು ಪದ ಅಲ್ಲ, ಅದು ನಿಧಾನವಾಗಿ ಕೊಲ್ಲುವ ಹಿಂಸೆ. ನಾವು “ಇದು ಜೋಕ್”, “ಇದು ಅಭಿಪ್ರಾಯ” ಅಂತ ತಲೆ ತಗ್ಗಿಸಿಕೊಳ್ಳಬೇಕಾ? ಇಲ್ಲ, ಇಲ್ಲಿ ಒಂದು ಗಟ್ಟಿಯಾದ ತೀರ್ಮಾನ ಬೇಕು, ಹೆಣ್ಣು ಮಕ್ಕಳ ದೇಹಕ್ಕೆ ತೀರ್ಪು ಕೊಡುವ ಹಕ್ಕು ಯಾರಿಗೂ ಇಲ್ಲ. ನಿಮ್ಮ ದೇಹ ನಿಮ್ಮದು, ಅದನ್ನು ಪ್ರೀತಿಸಿ, ರಕ್ಷಿಸಿ ಅಂತ. ದೇಹ ಸಣ್ಣ ಇರೋದು ಸಾಧನೆ ಅಲ್ಲ. ದೇಹ ದಪ್ಪ ಇರೋದು ಅಪರಾಧ ಅಲ್ಲ.  

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...