ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬರುವ ಯುದ್ಧ ಆಧಾರಿತ ಚಿತ್ರ ಬ್ಯಾಟಲ್ ಆಫ್ ಗಲ್ವಾನ್ ಟೀಸರ್‌ಗೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಗ್ಲೋಬಲ್ ಟೈಮ್ಸ್ ಲೇಖನವು ಗಲ್ವಾನ್ ಕಣಿವೆಯು ಚಿತ್ರದಲ್ಲಿ ಚಿತ್ರೀಕರಿಸಿರುವ ದೃಶ್ಯಗಳು ಜೂನ್ 2020 ರ ಘರ್ಷಣೆಯ ಘಟನೆಗಳು ಸತ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದಿದೆ. ಗಲ್ವಾನ್ ಕಣಿವೆ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್‌ನ ಚೀನಾ ಭಾಗದಲ್ಲಿದೆ. ಘರ್ಷಣೆಗೆ ಭಾರತೀಯ ಸೈನಿಕರು ಎಲ್‌ಎಸಿ ದಾಟಿ, ಪ್ರಚೋದಿಸಿದ್ದೇ ಕಾರಣ ಎಂದು ದೂಷಿಸಿದೆ.
ಗಲ್ವಾನ್ ಚಿತ್ರದಲ್ಲಿ ಸಲ್ಮಾನ್ ಖಾನ್ 16ನೇ ಬಿಹಾರ್ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿಕ್ಕುಮಳ್ಳ ಸಂತೋಷ್ ಬಾಬು ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರವು 2026ರ ಏಪ್ರಿಲ್ 17ರಂದು ಬಿಡುಗಡೆಯಾಗಲಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಇನ್ನಾದರೂ ಪ್ರೀತಿ ಬಿತ್ತೋಣ, ಮಾನವೀಯತೆ ಮೆರೆಯೋಣ…
“ದೇಶದಲ್ಲಿ ಕಲಾತ್ಮಕ ಸ್ವಾತಂತ್ರ್ಯವಿದೆ”: ಚೀನಾಕ್ಕೆ ಭಾರತ ತಿರುಗೇಟು
ಸಲ್ಮಾನ್ ಖಾನ್ ಅಭಿನಯದ ‘ಬ್ಯಾಟಲ್ ಆಫ್ ಗಲ್ವಾನ್’ ಚಿತ್ರವು ಸತ್ಯಗಳನ್ನು ತಿರುಚಿದೆ ಎಂದು ಚೀನಾದ ಮಾಧ್ಯಮಗಳು ಪ್ರತಿಪಾದಿಸಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ‘ಕಲಾತ್ಮಕ ಸ್ವಾತಂತ್ರ’ವಿದೆ ಮತ್ತು ನಿರ್ಮಾಪಕರು ಈ ಸ್ವಾತಂತ್ರವನ್ನು ಬಳಸಿಕೊಂಡು ಚಲನಚಿತ್ರಗಳನ್ನು ನಿರ್ಮಿಸುವ ಹಕ್ಕನ್ನು ಹೊಂದಿದ್ದಾರೆ ಎಂದು ಭಾರತವು ಮಂಗಳವಾರ ಹೇಳಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಭಾರತವು ಅಭಿವ್ಯಕ್ತಿ ಸ್ವಾತಂತ್ರವನ್ನು ಹೊಂದಿರುವ ದೇಶವಾಗಿದೆ ಮತ್ತು ಸಿನಿಮೀಯ ಅಭಿವ್ಯಕ್ತಿಯು ಅದರ ಅವಿಭಾಜ್ಯ ಭಾಗವಾಗಿದೆ. ಈ ಕಲಾತ್ಮಕ ಸ್ವಾತಂತ್ರ್ಯದಂತೆ ಚಿತ್ರಗಳನ್ನು ನಿರ್ಮಿಸಲು ಭಾರತದ ಚಲನಚಿತ್ರ ನಿರ್ಮಾಪಕರು ಸ್ವತಂತ್ರರಿದ್ದಾರೆ. ಈ ನಿರ್ದಿಷ್ಟ ಚಿತ್ರದ ಬಗ್ಗೆ ಕಳವಳಗಳಿದ್ದವರು ಯಾವುದೇ ಸ್ಪಷ್ಟೀಕರಣಕ್ಕಾಗಿ ಭಾರತದ ರಕ್ಷಣಾ ಸಚಿವಾಲಯವನ್ನು ಸಂಪರ್ಕಿಸಬಹುದು. ಚಿತ್ರದಲ್ಲಿ ಸರಕಾರದ ಯಾವುದೇ ಪಾತ್ರವಿಲ್ಲ ಎಂದು ಮೂಲಗಳು ಹೇಳಿದ್ದನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.





