ಧರ್ಮಸ್ಥಳ ಪ್ರಕರಣ | ನೀವು ಜನಪ್ರತಿನಿಧಿಯಾ – ದಳ್ಳಾಳಿಯಾ: ಆರ್‌ ಅಶೋಕ್‌ಗೆ ಪ್ರಕಾಶ್‌ ರಾಜ್ ತರಾಟೆ

Date:

ಧರ್ಮಸ್ಥಳದಲ್ಲಿ ಮೃಹದೇಹಗಳ ಸರಣಿ ಅಹಸ್ಯ ಅಂತ್ಯಕ್ರಿಯೆ ಬಗ್ಗೆ ದೂರು ನೀಡಿರುವ ದೂರುದಾರ ವಿಚಾರವಾಗಿ ದ್ವೇಷ-ವಿವಾದದ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಆರ್‌ ಅಶೋಕ್‌ ಅವರನ್ನು ನಟ ಪ್ರಕಾಶ್ ರಾಜ್ ತರಾಟೆಗೆ ತೆಗೆದುಕೊಂಡಿದ್ದಾರೆ. “ನೀವು ಜನ ಪ್ರತಿನಿಧಿಗಳಾ ಅಥವಾ ಇನ್ಯಾರದೋ ದಲ್ಲಾಳಿಗಳಾ” ಎಂದು ಪ್ರಶ್ನಿಸಿದ್ದಾರೆ.

ಧರ್ಮಸ್ಥಳ ಪ್ರಕರಣದ ಮೈಸೂರಿನಲ್ಲಿ ಮಾತನಾಡಿದ್ದ ಆರ್‌ ಅಶೋಕ್, “ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರ್ಕಾರ ಇದೆ. ಯಾವುದೋ ಕಾರಣದ ಕೈ ಇಲ್ಲಿ ಕೆಲಸ ಮಾಡುತ್ತಿದೆ. ಈ ಪ್ರಕರಣ ಜಟಿಲ ಆಗುತ್ತಿಲ್ಲ, ಜಟಿಲ ಮಾಡುತ್ತಿದ್ದಾರೆ. ಆರೋಪ ಮಾಡುತ್ತಿರುವವರು ಯಾರೋ ಮುಸ್ಲಿಂ ಆಗಿದ್ದಾನೆ” ಎಂದು ಆರೋಪಿಸಿದ್ದರು.

ಅಶೋಕ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಟ ಪ್ರಕಾಶ್‌ ರಾಜ್, “ಅಲ್ರೀ ⁦ಆಶೋಕ್‌⁩ ಅವರೇ, ದಶಕಗಳಿಂದ ನಮ್ಮ ಹೆಣ್ಣುಮಕ್ಕಳ ಅತ್ಯಾಚಾರಗಳಾಗಿವೆ, ಅಮಾನವೀಯ ಹತ್ಯೆಗಳಾಗಿವೆ,ಜನರ ಆಕ್ರೋಶ ಭುಗಿಲೆದ್ದಿದೆ. ಕೊನೆಗೂ ಸರ್ಕಾರ ಸ್ಪಂದಿಸಿ SIT ರಚನೆಯಾಗಿದೆ. ತನಿಖೆ ನಡೆಯುತ್ತಿದೆ. ಮದ್ಯದಲ್ಲಿ ನಿಮ್ದೇನ್ರಿ. ನೀವು ಜನ ಪ್ರತಿನಿಧಿಗಳಾ.. ಅಥವಾ ಇನ್ಯಾರದೋ ದಲ್ಲಾಳಿಗಳಾ” ಎಂದು ಕಿಡಿಕಾರಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ

ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಎಂಬುದು...