ʼಧುರಂಧರ್ʼ ಸೀಕ್ವೆಲ್‌ಗೆ ʼAʼ ಸರ್ಟಿಫಿಕೇಟ್; 21 ಕಡೆ ಕತ್ತರಿ, ರನ್‌ಟೈಮ್ ಎಷ್ಟು ಗೊತ್ತೇ?

Date:

ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ʼಧುರಂಧರ್‌ʼನ ಮುಂದುವರೆದ ಭಾಗ ‘ಧುರಂಧರ್: ದಿ ರಿವೆಂಜ್’ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದ ರನ್‌ ಟೈಮ್‌ ಕೂಡ ಬಹಿರಂಗವಾಗಿದೆ.

ಆದಿತ್ಯ ಧರ್ ನಿರ್ದೇಶಿಸಿ ರಣವೀರ್‌ ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (CBFC), ‘A’ (ವಯಸ್ಕರಿಗೆ ಮಾತ್ರ) ಪ್ರಮಾಣ ಪತ್ರ ನೀಡಿದೆ. ಜೊತೆಗೆ ಸುಮಾರು 21 ಕಡೆ ಕತ್ತರಿ ಪ್ರಯೋಗ ಮಾಡಿದೆ ಎಂದು ವರದಿಯಾಗಿದೆ. ಚಿತ್ರದ ರನ್‌ ಟೈಮ್‌ ಬರೋಬ್ಬರಿ 3 ಗಂಟೆ, 49 ನಿಮಿಷ ಮತ್ತು 6 ಸೆಕೆಂಡ್‌ ಇರಲಿದೆ ಎಂದು ನಿರ್ಮಾಪಕರು ಅಧಿಕೃತವಾಗಿ ಘೋಷಿಸಿದ್ದಾರೆ.

ನಾಳೆ (ಮಾ.19) ಬಿಡುಗಡೆಯಾಗಲಿರುವ ಚಿತ್ರದ ಮುಂಗಡ ಬುಕಿಂಗ್ ಮಾ.14 ರಂದೇ ಆರಂಭವಾಗಿದ್ದು, ಬಿಡುಗಡೆಗೂ ಮುನ್ನ ಭಾರೀ ಸೌಂಡ್ ಮಾಡುತ್ತಿದೆ. ಮಾರ್ಚ್ 18 ರಂದು ನಿಗದಿಯಾಗಿರುವ ‘ಪೇಯ್ಡ್ ಪ್ರಿವ್ಯೂ’ (Paid Previews) ಶೋಗಳ ಟಿಕೆಟ್‌ಗಳು ಕಳೆದ ವಾರವೇ ಮಾರಾಟವಾಗಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಟ್ರೇಡ್ ಟ್ರ್ಯಾಕರ್ ‘ಸ್ಯಾಕ್ನಿಲ್ಕ್’ (Sacnilk) ವರದಿಯ ಪ್ರಕಾರ, ವಿದೇಶಿ ಮಾರುಕಟ್ಟೆಯಲ್ಲೂ ಸ್ಪೈ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಮೆರಿಕದಲ್ಲಿ ಸುಮಾರು 678 ಸ್ಥಳಗಳ 1,684 ಶೋಗಳಿಂದ ಈಗಾಗಲೇ 61,491 ಟಿಕೆಟ್‌ಗಳು ಮಾರಾಟವಾಗಿದ್ದು, ಸುಮಾರು 9,82,374 ಯುಎಸ್ ಡಾಲರ್ ಸಂಗ್ರಹವಾಗಿದೆ.

ರಣವೀರ್ ಸಿಂಗ್ ಅವರ ಭಾರತೀಯ ಗೂಢಾಚಾರಿ ಹಮ್ಜಾ (ಜಸ್ಕಿರತ್ ಸಿಂಗ್ ರಂಗಿ) ಪಾತ್ರ ಈ ಸೀಕ್ವೆಲ್‌ನಲ್ಲಿ ಮರುಕಳಿಸಲಿದೆ. ಚಿತ್ರದಲ್ಲಿ ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಮೊದಲ ಭಾಗ ‘ಧುರಂಧರ್’ ವಿಶ್ವಾದ್ಯಂತ ಸುಮಾರು 1300 ಕೋಟಿ ರೂಪಾಯಿ ಗಳಿಸಿತ್ತು, ಹೀಗಾಗಿ ಈ ಎರಡನೇ ಭಾಗದ ಮೇಲೂ ಹೆಚ್ಚಿನ ನಿರೀಕ್ಷೆಗಳಿವೆ.

ಇದನ್ನೂ ಓದಿ: ‘ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿಗೆ ಆಕ್ರೋಶ: ತಕ್ಷಣ ಕ್ರಮಕ್ಕೆ ಮಹಿಳಾಪರ ಸಂಘಟನೆಗಳ ಆಗ್ರಹ

ಜಿಯೋ ಸ್ಟುಡಿಯೋಸ್ ಮತ್ತು B62 ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರಕ್ಕೆ ಜ್ಯೋತಿ ದೇಶಪಾಂಡೆ ಮತ್ತು ಲೋಕೇಶ್ ಧರ್ ಕೂಡ ಹಣ ಹೂಡಿದ್ದಾರೆ. ‘ಧುರಂಧರ್: ದಿ ರಿವೆಂಜ್’ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...

ಅಂತರ್‌ ಧರ್ಮೀಯ ವಿವಾಹ ಸಮರ್ಥಿಸಿದ ʼಕುಂಭಮೇಳʼ ಖ್ಯಾತಿ ಮೊನಾಲಿಸಾ; ‘ಲವ್ ಜಿಹಾದ್’ ಆರೋಪ ತಿರಸ್ಕಾರ

ಮಹಾ ಕುಂಭಮೇಳ–2025ರಲ್ಲಿ ರಾಷ್ಟ್ರವ್ಯಾಪಿ ಖ್ಯಾತಿಗೆ ಪಾತ್ರರಾದ ಮೊನಾಲಿಸಾ ಭೋಸ್ಲೆ ಅವರು ನಟ...