2023ರ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆಯಾಗಿದ್ದು, ‘ದಿ ಕೇರಳ ಸ್ಟೋರಿ’ ಚಿತ್ರದ ನಿರ್ದೇಶಕ ಸುದಿಪ್ತೋ ಸೇನ್‌ಗೆ ‘ಅತ್ಯುತ್ತಮ ನಿರ್ದೇಶಕ’ ಮತ್ತು ಚಿತ್ರಕ್ಕೆ ‘ಅತ್ಯುತ್ತಮ ಛಾಯಾಗ್ರಹಣ’ ಪ್ರಶಸ್ತಿ ನೀಡಿರುವುದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಚಿತ್ರವು ಕೋಮುವಾದವನ್ನು ಪ್ರಚೋದಿಸಿ, ಕೇರಳಕ್ಕೆ ಅವಮಾನ ಮಾಡುವ ಯತ್ನ ಮಾಡಿದೆ ಎಂದು ಆರೋಪಿಸಿರುವ ವಿಜಯನ್, ಈ ಆಯ್ಕೆಯಿಂದ ರಾಷ್ಟ್ರೀಯ ಸಮಗ್ರತೆ ಮತ್ತು ಕೋಮು ಸಾಮರಸ್ಯಕ್ಕೆ ಹೆಸರಾದ ಭಾರತೀಯ ಚಿತ್ರರಂಗವನ್ನು ತೀರ್ಪುಗಾರರು ಅವಮಾನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನು ಓದಿದ್ದೀರಾ? ನಟಿ ರಮ್ಯಾಗೆ ಅತ್ಯಾಚಾರದ ಬೆದರಿಕೆ; ಯಥಾ ಹೀರೋ ತಥಾ ಫ್ಯಾನ್ಸು
‘ದಿ ಕೇರಳ ಸ್ಟೋರಿ’ 2023ರಲ್ಲಿ ಬಿಡುಗಡೆಯಾಗಿದ್ದು, ಕೇರಳದ 32,000 ಮಹಿಳೆಯರನ್ನು ಮತಾಂತರಗೊಳಿಸಿ ಭಯೋತ್ಪಾದನಾ ಸಂಘಟನೆಗೆ ಸೇರಿಸಲಾಗಿದೆ ಎಂಬ ವಿವಾದಾತ್ಮಕ ಟೀಸರ್‌ನಿಂದಾಗಿ ರಾಜ್ಯದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಈ ಚಿತ್ರ ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ರಾಷ್ಟ್ರೀಯ ಪ್ರಶಸ್ತಿ ವಿಜೇತರು (ಪ್ರಮುಖ ವಿಭಾಗಗಳು):
- ಅತ್ಯುತ್ತಮ ನಟ: ಶಾರುಖ್ ಖಾನ್, ವಿಕ್ರಾಂತ್ ಮಾಸ್ಸೆ
- ಅತ್ಯುತ್ತಮ ನಟಿ: ರಾಣಿ ಮುಖರ್ಜಿ
- ಅತ್ಯುತ್ತಮ ಪೋಷಕ ನಟಿ: ಊರ್ವಶಿ (ಉಲ್ಲೊಜೊಕ್ಕು), ಜಾನಕಿ (ವಾಶ್)
- ಅತ್ಯುತ್ತಮ ಪೋಷಕ ನಟ: ವಿಜಯರಾಘವನ್ (ಪೂಕಲಂ), ಮುತ್ತುಪೆಟ್ಟೈ (ಪಾರ್ಕಿಂಗ್)
- ಅತ್ಯುತ್ತಮ ಚಿತ್ರಗಳು:
- ಕನ್ನಡ: ಕಂದೀಲು: ಭರವಸೆಯ ಕಿರಣ
- ಮಲಯಾಳಂ: ಉಲ್ಲೊಜೊಕ್ಕು
- ತಮಿಳು: ಪಾರ್ಕಿಂಗ್
- ಹಿಂದಿ: ಕಥಲ್: ಎ ಜಾಕ್‌ಫ್ರೂಟ್ ಆಫ್ ಮಿಸ್ಟರಿ
- ಗುಜರಾತಿ: ವಾಶ್
- ತೆಲುಗು: ಭಗವಂತ ಕೇಸರಿ
- ಮರಾಠಿ: ಶ್ಯಾಮ್ಚಿ ಆಯಿ
- ಬಂಗಾಳಿ: ಡೀಪ್ ಫ್ರಿಡ್ಜ್
- ಅಸ್ಸಾಮಿ: ರಂಗತಪು 1982
- ಪಂಜಾಬಿ: ಗಾಡ್ಡೇ ಗಾಡ್ಡೇ ಚಾ
- ಒಡಿಯಾ: ಪುಷ್ಕರ
- ಅತ್ಯುತ್ತಮ ಛಾಯಾಗ್ರಹಣ: ದಿ ಕೇರಳ ಸ್ಟೋರಿ
- ಅತ್ಯುತ್ತಮ ನಿರ್ದೇಶನ: ಸುದಿಪ್ತೋ ಸೇನ್ (ದಿ ಕೇರಳ ಸ್ಟೋರಿ)
- ಅತ್ಯುತ್ತಮ ಸಂಗೀತ ನಿರ್ದೇಶನ: ವಾತಿ (ತಮಿಳು)
- ಅತ್ಯುತ್ತಮ ಸಾಹಸ ನಿರ್ದೇಶನ: ಹನು-ಮಾನ್ (ತೆಲುಗು)
- ಅತ್ಯುತ್ತಮ ಧ್ವನಿ ವಿನ್ಯಾಸ: ಅನಿಮಲ್
- ಅತ್ಯುತ್ತಮ ಸಂಕಲನ: ಪೂಕಲಂ (ಮಲಯಾಳಂ)





