ಕೃತಿಚೌರ್ಯ ಆರೋಪ: ಪೊನ್ನಿಯಿನ್ ಸೆಲ್ವನ್ 2 ನಿರ್ಮಾಪಕ, ರೆಹಮಾನ್‌ಗೆ 2 ಕೋಟಿ ರೂ. ಭದ್ರತೆ ಇಡಲು ಸೂಚನೆ

Date:

ಜೂನಿಯರ್ ಡಾಗರ್ ಸಹೋದರರ ‘ಶಿವ ಸ್ತುತಿ’ ಹಾಡಿನ ಶಾಸ್ತ್ರೀಯ ರಾಗದ ಕೃತಿಚೌರ್ಯ ಆರೋಪದಲ್ಲಿ ದೆಹಲಿ ಹೈಕೋರ್ಟ್ ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್‌ ಮತ್ತು ‘ಪೊನ್ನಿಯಿನ್ ಸೆಲ್ವನ್ 2’ ಚಿತ್ರದ ನಿರ್ಮಾಪಕರಿಗೆ ನ್ಯಾಯಾಲಯದಲ್ಲಿ 2 ಕೋಟಿ ರೂ.ಗಳ ಭದ್ರತೆ ಇಡುವಂತೆ ನಿರ್ದೇಶಿಸಿದೆ.

ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಏಪ್ರಿಲ್ 25ರಂದು ಮಧ್ಯಂತರ ಆದೇಶ ಹೊರಡಿಸಿದ್ದಾರೆ. ಶಿವ ಸ್ತುತಿ ಶಾಸ್ತ್ರೀಯ ಗೀತೆಯ ರಾಗವನ್ನು ಸಿನಿಮಾದ ‘ವೀರ ರಾಜಾ ವೀರ’ ಹಾಡಿನ ಪ್ರತಿಯೊಂದು ಲಯ, ಭಾವದಲ್ಲೂ ಬಳಸಲಾಗಿದೆ. ಇದು ಶಿವನಿಗೆ ಅರ್ಪಿಸಿದ ಗೀತೆಯ ಮೂಲ ಸಂಯೋಜಕರ ಹಕ್ಕು ಸ್ವಾಮ್ಯದ ಉಲ್ಲಂಘನೆ ಎಂದು ಆರೋಪಿಸಲಾಗಿದೆ. ಈ ವಾದವನ್ನು ಕೋರ್ಟ್ ಮಧ್ಯಂತರ ಆದೇಶದಲ್ಲಿ ಪುರಸ್ಕರಿಸಿದೆ.

ಇದನ್ನು ಓದಿದ್ದೀರಾ? ನೂರರ ನೆನಪು | ದೇವಾನಂದ್ ಎಂಬ ಸಾಹಸಿಗ, ಚಿರಯೌವನಿಗ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಾಗೆಯೇ, “ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿರುವ ಸಿನಿಮಾದ ‘ವೀರ ರಾಜಾ ವೀರ’ ಹಾಡು ಪ್ರಸಾರದ ವೇಳೆ ಜೂನಿಯರ್ ಡಾಗರ್ ಸಹೋದರಾದ ದಿ. ಉಸ್ತಾದ್ ಎನ್ ಫಯಾಜುದ್ದೀನ್ ಡಾಗರ್ ಮತ್ತು ದಿ. ಉಸ್ತಾದ್ ಜಹೀರುದ್ದೀನ್ ಡಾಗರ್ ಅವರ ಹೆಸರುಗಳನ್ನು ಪ್ರಸಾರ ಮಾಡಬೇಕು. ಜೊತೆಗೆ ಕಲಾವಿದರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ನೀಡಬೇಕು” ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

“ಅಂತಿಮ ವಿಶ್ಲೇಷಣೆಯಲ್ಲಿ ನ್ಯಾಯಾಲಯವು ಆಕ್ಷೇಪಾರ್ಹ ಹಾಡು ಕೇವಲ ಶಿವ ಸ್ತುತಿಯನ್ನು ಆಧರಿಸಿಲ್ಲ ಅಥವಾ ಅದರಿಂದ ಪ್ರೇರಿತವಾಗಿಲ್ಲ. ಬದಲಾಗಿ ಸಾಹಿತ್ಯದಲ್ಲಿ ಕೇವಲ ಬದಲಾವಣೆಯೊಂದಿಗೆ ಉಳಿದೆಲ್ಲಾ ಸಂಯೋಜನೆಗೆ ಹೋಲುತ್ತದೆ. ಹಾಡನ್ನು ಆಧುನಿಕ ಸಂಯೋಜನೆಯಂತೆ ಮಾಡಿರಬಹುದು. ಆದರೆ ಮೂಲ ಸಂಗೀತ ಒಂದೇ ಆಗಿದೆ” ಎಂದು ಕೋರ್ಟ್ ಅಭಿಪ್ರಾಯಿಸಿದೆ.

ಆದ್ದರಿಂದ ಇದು ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ. ಪ್ರತಿವಾದಿಗಳಾದ ರೆಹಮಾನ್, ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ – ನ್ಯಾಯಾಲಯದಲ್ಲಿ 2 ಕೋಟಿ ರೂ.ಗಳನ್ನು ಠೇವಣಿ ಇಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಆದರೆ, “ಶಿವ ಸ್ತುತಿಯು ಮೂಲತಃ ಶಾಸ್ತ್ರೀಯ ದೃಪದ್ ರಾಗದಲ್ಲಿದೆ. ಹಾಗಾಗಿ ಗೀತೆಯನ್ನು ಹಾಡುವುದು, ಸಂಯೋಜನೆ ಮಾಡಿರುವುದು ಮೂಲ ಗೀತೆಯ ಹೋಲಿಕೆಯಾಗುವುದಿಲ್ಲ. ಇದು ಕೃತಿಚೌರ್ಯವಲ್ಲ” ಎಂಬುದು ರೆಹಮಾನ್ ಪರ ವಕೀಲರ ವಾದವಾಗಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...