ಹಿಂದಿಯ ‘ಸೈಯಾರಾ’: ಸೋಶಿಯಲ್‌ ಮೀಡಿಯಾ ಲೆನ್ಸಿನಲ್ಲಿ ನೋಡಿದಾಗ!

Date:

ದಕ್ಷಿಣ ಭಾರತದ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಶುರುವಾದಾಗಿನಿಂದ ಹಿಂದಿ ಸಿನಿಮಾಗಳಿಗೆ ಗರ ಬಡಿದಂತಾಗಿದೆ. ಸೌತ್‌ ಜೊತೆಗಿನ ಸ್ಪರ್ಧೆ ಹೆಚ್ಚಾದಂತೆಲ್ಲಾ ತಮ್ಮ ಸಿನಿಮಾಗಳಲ್ಲಿ ಹೊಸತನ ತರಲು, ಚಿತ್ರಮಂದಿರಗಳತ್ತ ಜನರನ್ನ ಸೆಳೆಯಲು ಹಾದಿ ಹುಡುಕುತ್ತಿದ್ದಾರೆ. ಆದರೆ ಸೃಜನಶೀಲತೆಯನ್ನು ಸೈಡಿಗೆ ಸರಿಸಿ, ಭಾವೋದ್ರೇಕಗೊಳಿಸುವ, ಅದನ್ನೇ ನಿಜಸಂವೇದನೆ ಎಂದು ತೋರುವ ನಿಟ್ಟಿನಲ್ಲಿ ಕೆಲವರು ದಾಪುಗಾಲಿಡುತ್ತಿದ್ದಾರೆ. ಅಂತಹ ಕೆಲ ಸಿನಿಮಾಗಳು ಸಮಾಜದಲ್ಲಿ ಗೊಂದಲಮಯ ಪರಿಣಾಮವನ್ನೂ ಬೀರುತ್ತವೆ. ಈಗ ಹೇಳಹೊರಟಿರುವುದು ಅದೇ ರೀತಿಯ ಚಿತ್ರ ಹಾಗೂ ಅದು ಸಮಾಜದಲ್ಲಿ ಎಬ್ಬಿಸುತ್ತಿರುವ ವಿಲಕ್ಷಣ ಗಾಳಿಯ ಕುರಿತು. ಚಿತ್ರದ ಹೆಸರು ‘ಸೈಯಾರಾ’.

ಈ ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಬ್ಬರೂ “ಸಾಮಾಜಿಕ ಮಾಧ್ಯಮದ ನಟ”ರಾಗಿಬಿಡುತ್ತಾರೆ. ಯಾವ ಕ್ಷಣದಲ್ಲಿ ಯಾರ ನಡೆ, ಮಾತು, ಭಾವನೆ ವೈರಲ್ ಆಗುತ್ತದೋ ಯಾರಿಗೂ ತಿಳಿಯದು. ಇದರಲ್ಲಿ ಸಕಾರಾತ್ಮಕ ಅಂಶಗಳಿದ್ದರೂ, ನಕಾರಾತ್ಮಕ ಪರಿಣಾಮಗಳೇ ಹೆಚ್ಚು. ಮನರಂಜನೆ, ಮಾಹಿತಿ ಮೂಲ, ಶಿಕ್ಷಣ, ಕಾಲಹರಣ, ಹೀಗೆ ಎಲ್ಲದಕ್ಕೂ ಸೋಶಿಯಲ್ ಮೀಡಿಯಾ ಅವಲಂಬಿಸಿರುವ ಈ ಕಾಲಘಟ್ಟದಲ್ಲಿ ಸಾಮಾನ್ಯನೊಬ್ಬ ದೊಡ್ಡ ಸೆಲೆಬ್ರಿಟಿಯೂ ಆಗಬಹುದು. ದೊಡ್ಡ ಸೆಲೆಬ್ರಿಟಿಯಾದವರ ಮತ್ತೊಂದು ಮುಖ ಅನಾವರಣಗೊಂಡು ಕ್ಷಣ ಮಾತ್ರದಲ್ಲಿ ಗಟಾರ ಸೇರಲೂಬಹುದು. ಈ ವಿಷಯದಲ್ಲಿ ಸಿನಿಮಾಗಳು ಅದೆಷ್ಟರಮಟ್ಟಿಗೆ ಪ್ರಭಾವ ಬೀರುತ್ತವೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಆ ಗುಂಪಿಗೆ ಸೇರುವ ‘ಸೈಯಾರಾ’ ಸಿನಿಮಾ ಸದ್ಯಕ್ಕೆ ವೈರಲ್‌ ಆಗುತ್ತಿದೆ. ಆ ವೈರಲ್ ರಿಯಾಕ್ಷನ್ಸ್‌ ವಿಡಿಯೋ ನೋಡಿಕೊಂಡೇ ಹಲವರು ಸಿನಿಮಾ ನೋಡುತ್ತಿದ್ದಾರೆ. ಇದು, ಹಿಂದಿ ಚಿತ್ರಗಳು ಗಟ್ಟಿ ಕಥೆ ಇಲ್ಲದೆ ತೋಪೆದ್ದು ಹೋಗುತ್ತಿವೆ ಎನ್ನುವ ಸಂದರ್ಭದಲ್ಲಿ, ಚಿತ್ರಮಂದಿರದತ್ತ ಸಿನಿಪ್ರಿಯರನ್ನು, ಅದರಲ್ಲೂ ಯುವಕರನ್ನು ಸೆಳೆಯುವ ತಂತ್ರವಾಗಿರಲೂಬಹುದು.

ಹಿಂದಿಯ ಸೈಯಾರಾ ಸಿನಿಮಾ ನೋಡಿ ಜನ ಹುಚ್ಚುಚ್ಚಾಗಿ ಪ್ರತಿಕ್ರಿಯಿಸುತ್ತಿರುವ ವಿಡಿಯೋಗಳು ಎಕ್ಸ್‌ನಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗ್ತಿವೆ. ಕೆಲವರು ಅಳುತ್ತಿದ್ದರೆ, ಕೆಲ ಪ್ರೇಮಿಗಳು ಸ್ಕ್ರೀನ್‌ ಮುಂದೆಯೇ ಕುಣಿಯುತ್ತಿದ್ದಾರೆ. ಕೆಲವರು ಆಕ್ರೋಶಗೊಂಡವರಂತೆ ಆಡುತ್ತಿದ್ದಾರೆ. ಆ ವಿಡಿಯೋಗಳಿಗೂ ಜನ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬರು, “ಸಿನಿಮಾವನ್ನು ನೋಡಿದೆ, ಕಥೆ ತುಂಬಾ ಚೆನ್ನಾಗಿದೆ ಮತ್ತು ನಟರು ಪಾತ್ರಗಳೊಂದಿಗೆ ನ್ಯಾಯಯುತವಾಗಿ ನಟಿಸಿದ್ದಾರೆ, ಅದು ನಿಮ್ಮನ್ನು ಭಾವನಾತ್ಮಕವಾಗಿ ಬಿಗಿದಪ್ಪುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ. ಮತ್ತೊಬ್ಬರು, “ವಸ್ತುವು ಅವರ ನಿರೀಕ್ಷೆಗಳನ್ನು ಮೀರಿದಾಗ, ಜನರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಜನರು ತಮಗೆ ಸರಿಹೊಂದುವಂತೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಬಿಡಿ” ಎಂದು ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

 “‘ಬ್ಯಾಡ್ ಬಾಯ್ ಮೀಟ್ಸ್ ಗುಡ್ ಗರ್ಲ್’ ಶೈಲಿಯ ಹಳೆ ಕಥೆಯನ್ನೇ ಹೊಸದಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಮೋಹಿತ್ ಸೂರಿ. ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ತಮ್ಮ ಮೊದಲ ಚಿತ್ರದಲ್ಲಿಯೇ ಪ್ರಭಾವ ಬೀರಿದ್ದಾರೆ. ಸೈಯಾರಾ, ಬರ್ಬಾದ್, ತುಮ್ ಹೋ ತೋ ಹಾಡುಗಳು ಹಿಟ್‌ ಆಗಿವೆ. ರೊಮ್ಯಾಂಟಿಕ್‌ ಡ್ರಾಮಾ ಜಾನರ್‌ನ ಸೈಯಾರಾ ಜುಲೈ 18ಕ್ಕೆ ತೆರೆ ಕಂಡಿದ್ದು, ಕಳೆದ ವಾರಾಂತ್ಯಕ್ಕೆ ದೇಶದ ಬಾಕ್ಸ್‌ಆಫೀಸ್‌ ನಲ್ಲಿ 83 ಕೋಟಿ ಗಳಿಕೆ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಹಿಂದಿ ಚಿತ್ರರಂಗವು ಸಂವೇದನೆಗಳನ್ನು ತೀಕ್ಷ್ಣವಾಗಿ ಅಭಿವ್ಯಕ್ತಪಡಿಸುವ ಶಕ್ತಿಯನ್ನು ಕೆಲವು ವರ್ಷಗಳಿಂದ ತೆರೆದಿಟ್ಟಂತಿಲ್ಲ. ಮೋಹಿತ್ ಸೂರಿಯವರ ʼಸೈಯಾರಾʼ ಕೂಡ ಅದೇ ಸಾಲಿಗೆ ಸೇರಿದಂತಿದೆ. ಸಂಕಲ್ಪ ಸದನ ಅವರ ಕಥೆ ಮತ್ತು ಚಿತ್ರಕಥೆಯಲ್ಲಿ ಅಗತ್ಯವಾದ ಸಂವೇದನೆ ಅಥವಾ ನಿಖರತೆ ಇಲ್ಲ. ಇದು ತರ್ಕದ ಲೋಪಗಳಿಂದ ತುಂಬಿರುವ, ಮೇಲೋಡ್ರಾಮಾಗೆ ಜಾಸ್ತಿ ಒತ್ತು ನೀಡುವ ಚಿತ್ರವಾಗಿದೆ. ಭಾವನೆಗಳು ಸಹಜವಾಗಿ ಹೊರಹೊಮ್ಮಲು ಬಿಡದೆ, ಬಲವಂತವಾಗಿ ತೋರಿಸಲು ಪ್ರಯತ್ನಿಸಿದಂತಿದೆ. ಚಿತ್ರದ ಮೊದಲಾರ್ಧ ಚುರುಕಾಗಿ ಸಾಗುತ್ತದಾದರೂ, ದ್ವಿತೀಯಾರ್ಧ ಸಂಪೂರ್ಣ ವಿಭಿನ್ನ ಧಾಟಿಯಲ್ಲಿದೆ – ಹಾಗೆ ನೋಡಿದರೆ ಎರಡು ವಿಭಿನ್ನ ಚಲನಚಿತ್ರಗಳಂತೆ ತೋರುತ್ತದೆ. ಹೀಗಾಗಿ ಇದು “ಸ್ಕಿಜೋಫ್ರೇನಿಕ್” ಚಿತ್ರ ಅನ್ನಿಸುವಂತಿದೆ. ಚಿತ್ರದ ಸಂಭಾಷಣೆಗಳು ಕೂಡ ಅತೀ ಎನಿಸುವ, ಕ್ಲಿಷೆ ಮತ್ತು ಸ್ವಲ್ಪ ಸ್ವಯಂಪ್ರಶಂಸೆಯ ಸಂಯೋಜನೆಯಾಗಿದೆ. ಕೊನೆ ಭಾಗ ಹೆಚ್ಚಿನ ಗೊಂದಲವನ್ನೇ ಉಂಟುಮಾಡುತ್ತದೆ” ಎಂದು KOIMOI ಈ ಚಿತ್ರ ವಿಮರ್ಶಿಸಿದೆ.

ಇದನ್ನೂ ಓದಿ: ದೃಶ್ಯಂ ಸಿನಿಮಾ ಪ್ರೇರಣೆ | ಗಂಡನನ್ನು ಕೊಲೆ ಮಾಡಿ ಶವವನ್ನು ಮನೆಯಲ್ಲೇ ಹೂತಿಟ್ಟ ಪತ್ನಿ

‘ಸೈಯಾರಾ’ ಸಿನಿಮಾ ಒಂದು ದೃಶ್ಯಮಾಧ್ಯಮದ ಪ್ರಭಾವೀ ಪ್ರತಿಬಿಂಬವಾಗಿ ಚಿತ್ರಮಂದಿರದಿಂದ ಸಾಗಿ ಸಾಮಾಜಿಕ ಮಾಧ್ಯಮಗಳಲ್ಲಿಯೂ ಭಾವೋದ್ರೇಕದ ಅಲೆ ಎಬ್ಬಿಸಿದೆ. ಆದರೆ ಈ ಭಾವನೆಗಳ ಹಿಂದೆ ತರ್ಕವಿದೆಯೇ ಎಂಬ ಪ್ರಶ್ನೆ ಅನಿವಾರ್ಯವಾಗಿ ಏಳುತ್ತದೆ. ಕಥೆಯ ಸ್ಫೂರ್ತಿ, ನಟನೆಯ ಶಕ್ತಿ, ಸಂಗೀತದ ಆಕರ್ಷಣೆ ಎಲ್ಲವೂ ಇದೆ. ಆದರೆ, ಬಲವಂತದ ನಾಟಕೀಯತೆ ಮತ್ತು ವಿವೇಕದ ಕೊರತೆಯಿಂದ ಸೊರಗುತ್ತಿದೆ. ಜನರ ಭಾವನೆಗಳನ್ನು ತೂಕಕ್ಕಿಡುವ ಈ ರೀತಿಯ ಸಿನಿಮಾಗಳು ನಿಜಕ್ಕೂ ಮನರಂಜನೆ ನೀಡುತ್ತವೆಯೋ, ಅಥವಾ ಭ್ರಮಾಧೀನತೆಗೆ ಎಳೆಯುತ್ತವೆಯೋ ಎಂಬ ಚಿಂತೆ ಕಾಡದಿರದು. ಭಾವನೆಗಳನ್ನು ಪ್ರಚೋದಿಸುವುದರಲ್ಲಿ ಸಿನಿಮಾದ ಶಕ್ತಿಯಂತೂ ಇದೆ. ಆದರೆ, ಆ ಶಕ್ತಿ ಜವಾಬ್ದಾರಿಯುತವಾಗಿರಬೇಕು ಎಂಬ ಸತ್ಯವನ್ನು ಮರೆಯಬಾರದು.

ನೋಡಿದ ಎಲ್ಲಾ ಚಿತ್ರಗಳಿಗೂ ಅದೇ ಪ್ರತಿಕ್ರಿಯೆ ಕೊಡಲು ಸಾಧ್ಯವಿಲ್ಲ. ಈ ಚಿತ್ರಕ್ಕೆ ಅಂಥದ್ದೊಂದು ಶಕ್ತಿ ಇರಬಹುದು, ಭಾವೋದ್ವೇಗಕ್ಕೆ ಒಳಗಾಗಿಸುವ ಯಾವುದೋ ಅಂಶವಿರಬಹುದು… ಎಂದು ಕೆಲವರು ಹೇಳಬಹುದು. ಆದರೆ, ಸಿನಿಮಾವೊಂದು ಕಲಾತ್ಮಕ ಅಭಿವ್ಯಕ್ತಿ. ಅದು ನಿಜ ಜೀವನದ ಪ್ರತಿಬಿಂಬವಲ್ಲದೆ, ನಿರ್ದಿಷ್ಟ ದೃಷ್ಟಿಕೋನಾಧಾರಿತ ಕಥಾನಕವಷ್ಟೆ. ಪ್ರತಿಯೊಂದು ದೃಶ್ಯ, ಸಂಭಾಷಣೆ, ಮತ್ತು ಸಂಗೀತವನ್ನು ಪ್ರೇಕ್ಷಕರ ಭಾವನೆಗಳನ್ನು ಕೆರಳಿಸುವಂತೆಯೇ ರೂಪಿಸಲಾಗಿರುತ್ತದೆ. ಆದರೆ ಎಲ್ಲವನ್ನೂ ನಂಬಬೇಕಾದ ಅಥವಾ ಅನಗತ್ಯವಾಗಿ ಅದರೊಳಗೆ ಹೊಕ್ಕು ಭಾವನೆಗಳಿಗೆ ಸ್ವಯಂ ಘಾಸಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಅತಿಶಯಿತ ಭಾವನೆಗಳು ಹಾಗೂ ಗೊಂದಲಕಾರಿ ಕ್ಲೈಮ್ಯಾಕ್ಸ್‌ಗಳು ಪ್ರೇಕ್ಷಕರ ಭಾವೋದ್ರೇಕವನ್ನು ನಿರ್ದಿಷ್ಟ ದಿಕ್ಕಿಗೆ ಹಿತವಾಗಿ ನೂಕಲ್ಪಡಬಹುದು. ಚಿತ್ರ ನಿರ್ಮಾತೃಗಳಿಗೆ ಬೇಕಾಗಿರುವುದೂ ಇದೇ ತಾನೆ. ಒಂದೊಮ್ಮೆ ತರ್ಕ ಮಾಡುವುದ ಬಿಟ್ಟು ಕಂಡಿದ್ದನ್ನು ಒಪ್ಪಿಕೊಂಡುಬಿಟ್ಟರೆ ಅದು ಸಿನಿಮಾ ಮಾಡುವವರ ಗೆಲುವು, ನೋಡುವವರ ಸೋಲು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇರಳ ಚುನಾವಣೆ | ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ನಾಲ್ವರ ಪೈಪೋಟಿ; ಹಿಂದೆ ಸರಿಯುವ ಮಾತೇ ಇಲ್ಲ!

ಕಾಂಗ್ರೆಸ್‌ನ ನಾಲ್ವರು ನಾಯಕರು ಒಳಗೆಷ್ಟು ಅಸಮಾಧಾನ, ಪೈಪೋಟಿ ಹೊಂದಿದ್ದರೂ ರಾಜ್ಯದ ಕಾಂಗ್ರೆಸ್...

‘ಜೋಗಿ’ಯಿಂದ ‘ಕೆಡಿ’ವರೆಗೆ: ಕಲಾತ್ಮಕ ಮೌಲ್ಯಗಳ ಕುಸಿತ?

ʼನಾನು ಎಣ್ಣೆ ಹಾಗೂ ಉಪ್ಪಿನಕಾಯಿಯ ಬಗ್ಗೆ ಬರೆದಿದ್ದೇನೆʼ. ʼಈ ಹಾಡಿನ ಸಾಹಿತ್ಯದಲ್ಲಿ...

ಟ್ರಂಪ್‌ಗೆ ಚಿತ್ತಭ್ರಮೆಯೇ?; ಅಮೆರಿಕ ಅಧ್ಯಕ್ಷರ ಮಾನಸಿಕ ಆರೋಗ್ಯದ ಸುತ್ತ ಅನುಮಾನದ ಹುತ್ತ

ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರದ ಚುಕ್ಕಾಣಿ ಹಿಡಿದಿರುವ ನಾಯಕನೊಬ್ಬನ ಮಾನಸಿಕ ಸ್ಥಿರತೆ...