ಕನ್ನಡ ಚಲನಚಿತ್ರ ನಟ ಚೇತನ್ ಚಂದ್ರ ತಮ್ಮ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಬೈಕ್‍ನಲ್ಲಿ ಹಿಂಬಾಲಿಸಿಕೊಂಡು ಬಂದ ಕೆಲ ಕಿಡಿಗೇಡಿಗಳು, ಬೈಕ್‍ಗೆ ಟಚ್ ಮಾಡಿದ್ದೀರಿ ಎಂದು ಗಲಾಟೆ ಶುರುಮಾಡಿದ್ದಾರೆ. ಅಲ್ಲದೇ ಈ ವೇಳೆ ಚೈನ್ ಒಂದನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಹಲ್ಲೆಯಿಂದ ಮೂಗಿಗೆ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ನಟ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾರೆ. ದೇವಸ್ಥಾನಕ್ಕೆ ಹೋಗಿ ಬರುವ ವೇಳೆ ಈ ಘಟನೆ ನಡೆದಿದೆ. ಘಟನೆ ಬಗ್ಗೆ ನಟ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪಕ್ಷವೊಂದರ ಬಗ್ಗೆ ಪ್ರಚಾರದ ನಕಲಿ ವಿಡಿಯೋ: ಪ್ರಕರಣ ದಾಖಲಿಸಿದ ಅಮೀರ್ ಖಾನ್
‘ಕಗ್ಗಲಿಪುರ ಬಳಿ ಕಾರಿನಲ್ಲಿ ಹೋಗುತ್ತಿದ್ದಾಗ ಮತ್ತಿನಲ್ಲಿದ್ದ ಕೆಲವರು ಕಾರು ಅಡ್ಡಗಟ್ಟಿದರು. ದರೋಡೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ನಾನು ಪ್ರತಿರೋಧ ತೋರಿಸಿದೆ. ಆಮೇಲೆ ಅವರು ಸುಮಾರು 20 ಜನ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಸದ್ಯ ಅಪಾಯದಿಂದ ಪಾರಾಗಿದ್ದು ತಂದೆ– ತಾಯಿ, ಹೆಂಡತಿ ಮಕ್ಕಳು ಹೆದರಿಕೊಳ್ಳಬೇಡಿ ಎಂದಿದ್ದಾರೆ. ಪೊಲೀಸರ ಬಳಿಹೋಗಿದ್ದೆ. ಮೊದಲು ಚಿಕಿತ್ಸೆ ಪಡೆದುಕೊಂಡು ಬನ್ನಿ ಎಂದಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.
‘ಜಾತ್ರೆ’, ‘ರಾಜಧಾನಿ’, ‘ಪ್ರೇಮಿಸಂ’, ‘ಪ್ಲಸ್’ ಸೇರಿದಂತೆ ಕೆಲ ಚಿತ್ರಗಳಲ್ಲಿ ಚೇತನ್ ಚಂದ್ರ ನಟಿಸಿದ್ದಾರೆ.





