ಬಿ.ಆರ್. ಚೋಪ್ರಾ ಅವರ ‘ಮಹಾಭಾರತ’ ಚಿತ್ರದಲ್ಲಿ ಕರ್ಣನ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ನಟ ಪಂಕಜ್ ಧೀರ್ ಅಕ್ಟೋಬರ್ 15ರಂದು ನಿಧನರಾಗಿದ್ದಾರೆ. ಪಂಕಜ್ ಅವರ ಸ್ನೇಹಿತ ಮತ್ತು ಸಹೋದ್ಯೋಗಿ ಅಮಿತ್ ಬೆಹ್ಲ್ ಮಾಹಿತಿಯನ್ನು ದೃಢಪಡಿಸಿದ್ದಾರೆ.
ಪಂಕಜ್ ಅವರಿಗೆ ಕ್ಯಾನ್ಸರ್ ಇತ್ತು. ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ ಕೆಲವು ತಿಂಗಳ ಹಿಂದೆ ಮತ್ತೆ ಕ್ಯಾನ್ಸರ್ ಕಾಣಿಸಿಕೊಂಡಿದೆ. ಮತ್ತೆ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ತಮಿಳು ನಟ ಮದನ್ ಬಾಬ್ ನಿಧನ
ಧೀರ್ ಅವರು ನಿಧನರಾಗಿರುವುದನ್ನು ದೃಢಪಡಿಸಿದ ಸಿನ್ಟಾ (ಸಿನಿ ಮತ್ತು ಟಿವಿ ಕಲಾವಿದರ ಸಂಘ) ಮಂಗಳವಾರ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. “ನಮ್ಮ ಟ್ರಸ್ಟ್‌ನ ಹಿಂದಿನ ಅಧ್ಯಕ್ಷರು ಮತ್ತು ಸಿನ್ಟಾದ ಮಾಜಿ ಗೌರವಾನ್ವಿತ ಪ್ರಧಾನ ಕಾರ್ಯದರ್ಶಿ ಪಂಕಜ್ ಧೀರ್ ಅವರು ಅಕ್ಟೋಬರ್ 15ರಂದು ನಿಧನರಾದರು ಎಂದು ನಾವು ನಿಮಗೆ ತಿಳಿಸುತ್ತೇವೆ. ಇಂದು ಸಂಜೆ 4:30ಕ್ಕೆ ಮುಂಬೈನ ವಿಲೇ ಪಾರ್ಲೆ (ಪಶ್ಚಿಮ) ದಲ್ಲಿರುವ ಪವನ್ ಹನ್ಸ್ ಬಳಿ ಅಂತ್ಯಕ್ರಿಯೆ ನಡೆಯಲಿದೆ” ಎಂದು ಹೇಳಿದೆ.
1956ರ ನವೆಂಬರ್ 9ರಂದು ಪಂಜಾಬ್‌ನಲ್ಲಿ ಜನಿಸಿದ ಪಂಜಕ್ ಧೀರ್ ಅವರು ಬಿ.ಆರ್. ಚೋಪ್ರಾ ಅವರ ಮಹಾಭಾರತ ಸೀರಿಯಲ್‌ನಲ್ಲಿ ಕರ್ಣನ ಪಾತ್ರಕ್ಕಾಗಿ ಖ್ಯಾತರಾಗಿದ್ದಾರೆ. ಪಂಕಜ್ ಧೀರ್ ಹಿಂದಿ ಚಲನಚಿತ್ರಗಳು ಮತ್ತು ಟಿವಿ ಸೀರಿಯಲ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಸಾದಕ್, ಸೋಲ್ಡಿಯರ್, ಬಾದ್‌ಶಾ, ಸದಾ ಮುಕದ್ದರ್, ಇಕ್ಕೆ ಪೆ ಇಕ್ಕಾ, ತಾರ್ಜನ್: ದಿ ವಂಡರ್ ಕಾರ್ – ಹಿಂದಿ ಸಿನಿಮಾಗಳಲ್ಲೂ ಪಂಕಜ್ ನಟಿಸಿದ್ದಾರೆ.





