‘ಆದಿಪುರಷ್‌’ ಮಕಾಡೆ ಮಲಗಿದ ಮೇಲೆ ಎಚ್ಚರಗೊಂಡ ಮನೋಜ್‌ ಮುಂತಾಶಿರ್‌

Date:

ಕೀಳುಮಟ್ಟದ ಸಂಭಾಷಣೆ ಬರೆದು ಟೀಕೆಗೆ ಗುರಿಯಾಗಿದ್ದ ಮನೋಜ್‌ ಮುಂತಾಶಿರ್‌

ಆದಿಪುರುಷ್‌ ಸಿನಿಮಾ ಸೋತ ನಂತರ ಬೇಷರತ್‌ ಕ್ಷಮೆ ಯಾಚಿಸಿದ ಸಂಭಾಷಣೆಕಾರ

ಪ್ರಭಾಸ್‌ ನಟನೆಯ ʼಆದಿಪುರುಷ್‌ʼ ಸಿನಿಮಾ ಚಿತ್ರಮಂದಿರಗಳಲ್ಲಿ ಹೀನಾಯವಾಗಿ ಸೋತಿದೆ. ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಈ ಚಿತ್ರವನ್ನು ನಿಷೇಧಿಸುವಂತೆ ಹಲವು ಬಲಪಂಥೀಯ ಸಂಘಟನೆಗಳು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದವು. ಈ ಚಿತ್ರಕ್ಕೆ ವಿವಾದಾತ್ಮಕ ಸಂಭಾಷಣೆ ಬರೆದಿದ್ದ ಚಿತ್ರ ಸಾಹಿತಿ ಮನೋಜ್‌ ಮುಂತಾಶಿರ್‌ ಮತ್ತು ನಿರ್ದೇಶಕ ಓಂ ರಾವತ್‌ಗೆ ಜೀವ ಬೆದರಿಕೆ ಕೂಡ ಎದುರಾಗಿತ್ತು. ಟೀಕೆಗಳು ಕೇಳಿಬಂದಾಗ ತಾವು ಬರೆದ ಸಂಭಾಷಣೆಗಳನ್ನು ಸಮರ್ಥಿಸಿಕೊಂಡಿದ್ದ ಅದೇ ಮನೋಜ್‌ ಮುಂತಾಶಿರ್‌ ಇದೀಗ ಪ್ರೇಕ್ಷಕರ ಬಳಿ ಬೇಷರತ್‌ ಕ್ಷಮೆ ಯಾಚಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಕಪಡಾ ತೇರೆ ಬಾಪ್‌ ಕಾ, ತೇಲ್‌ ತೇರೆ ಬಾಪ್‌ ಕಾ, ಜಲೇಗಿ ಭೀ ತೆರೆ ಬಾಪ್‌ ಕಿ” ಸೇರಿದಂತೆ ಆದಿಪುರುಷ್‌ ಚಿತ್ರದಲ್ಲಿ ಮನೋಜ್‌ ಮುಂತಾಶಿರ್‌ ಬರೆದ ಹಲವು ಸಂಭಾಷಣೆಗಳು ಟೀಕೆಗೆ ಗುರಿಯಾಗಿದ್ದವು. ಹನುಮಂತನ ಪಾತ್ರಕ್ಕೆ ಕೀಳು ಮಟ್ಟದ ಸಂಭಾಷಣೆಗಳನ್ನು ಬರೆದ ಮನೋಜ್‌ ಮುಂತಾಶಿರ್‌ನನ್ನು ಕೊಲೆ ಮಾಡುವುದಾಗಿ ಬಲ ಪಂಥೀಯ ಸಂಘಟನೆಯ ಮುಖಂಡರು ಬೆದರಿಕೆ ಹಾಕಿದ್ದರು. ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ವಿವಾದಕ್ಕೆ ಕಾರಣವಾಗಿದ್ದ ಸಂಭಾಷಣೆಗಳನ್ನು ಚಿತ್ರತಂಡ ಬದಲು ಮಾಡಿತ್ತು. ಆದರೆ, ಮನೋಜ್‌ ಮುಂತಾಶಿರ್‌ ಮಾತ್ರ ಕ್ಷಮೆ ಕೇಳಿರಲಿಲ್ಲ.

ಸದ್ಯ ʼಆದಿಪುರುಷ್‌ʼ ಸಿನಿಮಾ ಬಹುತೇಕ ಚಿತ್ರಮಂದಿರಗಳಿಂದ ಎತ್ತಂಗಡಿಯಾಗಿದೆ. ಇಡೀ ವಿವಾದ ತಣ್ಣಗಾದ ಬಳಿಕ ಮರೆಯಲ್ಲೇ ಕುಳಿತು ಟ್ವೀಟ್‌ ಮಾಡಿರುವ ಮನೋಜ್‌, “ಆದಿಪುರುಷ್‌ ಸಿನಿಮಾದಿಂದ ಜನರ ಭಾವನೆಗಳಿಗೆ ನೋವುಂಟಾಗಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಅದಕ್ಕಾಗಿ ಎರಡೂ ಕೈಗಳನ್ನು ಜೋಡಿಸಿ, ಜನರ ಬಳಿ ಬೇಷರತ್‌ ಕ್ಷಮೆ ಯಾಚಿಸುತ್ತೇನೆ. ಹನುಮಂತ ದೇವರು ನಮ್ಮೆನ್ನೆಲ್ಲ ಒಗ್ಗೂಡಿಸುವಂತಾಗಲಿ” ಎಂದಿದ್ದಾರೆ.

ʼಆದಿಪುರುಷ್‌ʼ ಸಿನಿಮಾ ಸೆಟ್ಟೇರಿದ ದಿನದಿಂದಲೂ ಇಡೀ ಚಿತ್ರತಂಡ ಧಾರ್ಮಿಕ ಭಾವನೆಗಳನ್ನು ಮುಂದಿಟ್ಟುಕೊಂಡು ಚಿತ್ರದ ಪ್ರಚಾರ ಮಾಡಿತ್ತು. ಅಂದಾಜು 700 ಕೋಟಿ ರೂಪಾಯಿ ಬಂಡವಾಳದಲ್ಲಿ ʼ3ಡಿʼ ಎಫೆಕ್ಟ್‌ನಲ್ಲಿ ರಾಮಾಯಣದ ಕಥೆ ತೆರೆಗೆ ಬರಲಿದೆ ಎಂದು ಬಿಂಬಿಸಲಾಗಿತ್ತು. ಅಬ್ಬರ ಮತ್ತು ಅತಿರೇಕದ ಪ್ರಚಾರವನ್ನು ನಂಬಿಕೊಂಡು ಭಾರೀ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರು ಚಿತ್ರವನ್ನು ನೋಡಿದ ಮರುಕ್ಷಣವೇ ನಿಷೇಧಿಸುವಂತೆ ಅಭಿಯಾನ ಶುರುವಿಟ್ಟುಕೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...