ಜೈಲು ಪಾಲಾದ ಹಿಂದಿ ಹಾಸ್ಯನಟ ರಾಜ್‌ಪಾಲ್ ಯಾದವ್: ಏನಿದು ಪ್ರಕರಣ, ನೆರವಿಗೆ ಧಾವಿಸಿದ ದಿಗ್ಗಜರುಗಳಾರು?

Date:

ಹಿಂದಿ ಮಾತ್ರವಲ್ಲದೆ ಹಲವು ಚಿತ್ರರಂಗಗಳಲ್ಲಿ, ಕನ್ನಡ ಚಿತ್ರರಂಗದಲ್ಲಿಯೂ ನಟರು, ಕಷ್ಟದಲ್ಲಿರುವ ತಮ್ಮ ಸಹೋದ್ಯೋಗಿಗಳಿಗೆ, ಹಿರಿಯ ಕಲಾವಿದರಿಗೆ ಮತ್ತು ಚಿತ್ರರಂಗದ ಕಾರ್ಮಿಕರಿಗೆ ಆರ್ಥಿಕವಾಗಿ ಸಹಾಯ ಮಾಡಿದ ಹಲವಾರು ನಿದರ್ಶನಗಳಿವೆ. 

ಸುಮಾರು 9 ಕೋಟಿ ರೂಪಾಯಿಗಳ ಚೆಕ್ ಬೌನ್ಸ್ ಪ್ರಕರಣದಲ್ಲಿ ಹಿಂದಿ ಹಾಸ್ಯನಟ ರಾಜ್‌ಪಾಲ್ ಯಾದವ್ ತಿಹಾರ್ ಜೈಲಿಗೆ ಶರಣಾಗಿದ್ದಾರೆ. ಕಾನೂನು ಮತ್ತು ಆರ್ಥಿಕ ಸಂಕಷ್ಟಗಳ ನಡುವೆ ರಾಜ್‌ಪಾಲ್ ಕೊನೆಗೂ ಶರಣಾಗಿದ್ದಾರೆ. ಶರಣಾಗುವ ಮುನ್ನ ಯಾದವ್ ಭಾವನಾತ್ಮಕ ಹೇಳಿಕೆ ನೀಡಿದ್ದಾರೆ. “ಸ್ನೇಹಿತರಿಲ್ಲ. ನಾನು ಈ ಬಿಕ್ಕಟ್ಟನ್ನು ನಾನೇ ನಿಭಾಯಿಸಬೇಕು” ಎಂದು ಹೇಳಿಕೊಂಡಿದ್ದಾರೆ.

ಈ ಹೇಳಿಕೆಯೊಂದಿಗೆ ಯಾದವ್ ಶರಣಾಗುತ್ತಿದ್ದಂತೆ ಈಗ ಬಾಲಿವುಡ್‌ನ ಹಲವು ದಿಗ್ಗಜರು, ಸ್ಟಾರ್ ನಟರುಗಳು ಹಾಸ್ಯನಟನ 9 ಕೋಟಿ ರೂಪಾಯಿಗಳ ಸಾಲವನ್ನು ತೀರಿಸಲು ಮುಂದೆ ಬಂದಿದ್ದಾರೆ. “ರಾಜ್‌ಪಾಲ್ ಯಾದವ್‌ಗೆ ಸಹಾಯ ಮಾಡಲು ಬಹಳಷ್ಟು ಜನರು ಮುಂದೆ ಬಂದಿದ್ದಾರೆ” ಎಂದು ನಟನ ಮ್ಯಾನೇಜರ್ ಗೋಲ್ಡಿ ಸ್ಕ್ರೀನ್‌ಗೆ ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ಮಲಯಾಳಂ ನಟ ಮೋಹನ್‌ಲಾಲ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸೋನು ಸೂದ್, ಅಜಯ್ ದೇವಗನ್, ಸಲ್ಮಾನ್ ಖಾನ್, ವರುಣ್ ಧವನ್ ಮುಂತಾದ ನಟರು ಸಹಾಯ ಮಾಡಿದ್ದಾರೆ. “ನಾನು ಡೇವಿಡ್ ಧವನ್ ಅವರೊಂದಿಗೆ ಮಾತನಾಡುತ್ತಿದ್ದೆ. ಅವರೂ ಸಹ ನಮ್ಮನ್ನು ಸಂಪರ್ಕಿಸಿದ್ದಾರೆ” ಎಂದು ಹೇಳಿದ್ದಾರೆ. ತಿಹಾರ್ ಜೈಲಿನಲ್ಲಿ ಶರಣಾಗುವ ಮೊದಲು ರಾಜ್‌ಪಾಲ್ ಸಹಾಯಕ್ಕಾಗಿ ಯಾರನ್ನಾದರೂ ಸಂಪರ್ಕಿಸಿದ್ದಾರೆಯೇ ಎಂಬ ಪ್ರಶ್ನೆಗೆ ಮಾತ್ರ ಗೋಲ್ಡಿ ಉತ್ತರಿಸಿಲ್ಲ. ಈ ಬಗ್ಗೆ ಉತ್ತರಿಸಲು ಇಷ್ಟಪಡಲ್ಲ ಎಂದು ಹೇಳಿದ್ದಾರೆ.

ಏನಿದು ಚೆಕ್‌ಬೌನ್ಸ್ ಪ್ರಕರಣ?

2010ರಲ್ಲಿ ತಮ್ಮ ಮೊದಲ ನಿರ್ದೇಶನದ ಚಿತ್ರ ‘ಅತಾ ಪತಾ ಲಾಪತಾ’ (Ata Pata Laapata) ನಿರ್ಮಾಣಕ್ಕಾಗಿ ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಸುಮಾರು 5 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಈ ಸಾಲ ಮರುಪಾವತಿಸಲು ನೀಡಿದ್ದ ಚೆಕ್‌ಗಳು ಬೌನ್ಸ್ ಆಗಿದ್ದವು. ಬಡ್ಡಿ ಮತ್ತು ದಂಡದ ಮೊತ್ತ ಸೇರಿ ಒಟ್ಟು ಬಾಕಿ ಸುಮಾರು 9 ಕೋಟಿ ರೂಪಾಯಿಗೆ ಏರಿದೆ. 2018ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಇವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು, ಅದನ್ನು ಉನ್ನತ ನ್ಯಾಯಾಲಯಗಳು ಎತ್ತಿ ಹಿಡಿದಿವೆ. ದೆಹಲಿ ಹೈಕೋರ್ಟ್ ಸೂಚನೆಯಂತೆ ಫೆಬ್ರವರಿ 5ರಂದು ರಾಜ್‌ಪಾಲ್ ಯಾದವ್ ಅವರು ಪೊಲೀಸರಿಗೆ ಶರಣಾಗಿದ್ದಾರೆ.

ಈ ಹಿಂದೆ ಅವರಿಗೆ ನೀಡಲಾಗಿದ್ದ 6 ತಿಂಗಳ ಜೈಲು ಶಿಕ್ಷೆಯನ್ನು ಜಾರಿಗೊಳಿಸಲು ನ್ಯಾಯಾಲಯ ಆದೇಶಿಸಿತ್ತು. ಫೆಬ್ರವರಿ 12ರಂದು ನಡೆದ ವಿಚಾರಣೆಯಲ್ಲಿ ಕುಟುಂಬದ ವಿವಾಹದ ಕಾರಣ ನೀಡಿ ರಾಜ್‌ಪಾಲ್ ಯಾದವ್ ಜಾಮೀನು ಕೋರಿದ್ದರು. ಆದರೆ, ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದ್ದು, ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಹಲವು ನಟರುಗಳು ಮಾತ್ರವಲ್ಲದೇ ರಾಜಕಾರಣಿಗಳು ಯಾದವ್ ಸಹಾಯಕ್ಕೆ ಮುಂದಾಗಿದ್ದಾರೆ.

ಹಾಸ್ಯನಟನಿಗೆ ಸಹಾಯ ಮಾಡಿದವರಾರು?

ಸಲ್ಮಾನ್ ಖಾನ್, ಅಜಯ್ ದೇವಗನ್, ಡೇವಿಡ್ ಧವನ್: ಸಲ್ಮಾನ್ ಖಾನ್, ಅಜಯ್ ದೇವಗನ್ ಮತ್ತು ನಿರ್ದೇಶಕ ಡೇವಿಡ್ ಧವನ್, ಯಾದವ್ ಅವರಿಗೆ ಸಹಾಯ ಮಾಡಲು ಮುಂದೆ ಬಂದಿರುವುದಾಗಿ ಮ್ಯಾನೇಜರ್ ಗೋಲ್ಡಿ ದೃಢಪಡಿಸಿದ್ದಾರೆ. “ರಾಜ್‌ಪಾಲ್ ಯಾದವ್‌ಗೆ ಸಹಾಯ ಮಾಡಲು ಅನೇಕ ಜನರು ತಲುಪಿದ್ದಾರೆ. ಸೋನು ಸೂದ್, ಸಲ್ಮಾನ್ ಖಾನ್ ಮತ್ತು ಅಜಯ್ ದೇವಗನ್ ಅವರಂತಹ ನಟರು ತಮ್ಮ ಬೆಂಬಲವನ್ನು ನೀಡಿದ್ದಾರೆ. ನಾನು ಡೇವಿಡ್ ಧವನ್ ಅವರೊಂದಿಗೆ ಮಾತನಾಡಿದ್ದೇನೆ. ಅವರು ಕೂಡ ಬಂದಿದ್ದಾರೆ. ರತನ್ ನೈನ್, ವರುಣ್ ಧವನ್ – ಹೀಗೆ ಯಾದವ್ ಅವರಿಗೆ ಸಹಾಯ ಮಾಡಲು ಅನೇಕ ಜನರು ಮುಂದೆ ಬರುತ್ತಿದ್ದಾರೆ” ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ಒಡಿಶಾ ರೈಲು ದುರಂತ | ಸಂತ್ರಸ್ತರ ನೆರವಿಗೆ ಸಹಾಯವಾಣಿ ತೆರೆದ ಸೋನು ಸೂದ್‌

ಸೋನು ಸೂದ್: ರಾಜ್‌ಪಾಲ್ ಯಾದವ್‌ಗೆ ಸಹಾಯ ಮಾಡಿದ ಮೊದಲ ಸೆಲೆಬ್ರಿಟಿಗಳಲ್ಲಿ ಸೋನು ಸೂದ್ ಒಬ್ಬರು. ಸೋನು ಸೂದ್ ತಮ್ಮ ಚಿತ್ರದಲ್ಲಿ ಒಂದು ಪಾತ್ರವನ್ನು ಮತ್ತು ಅದರ ಮೊತ್ತವನ್ನು ನೀಡಿದ್ದಾರೆ. “ರಾಜ್‌ಪಾಲ್ ಯಾದವ್ ಒಬ್ಬ ಪ್ರತಿಭಾನ್ವಿತ ನಟ, ಅವರು ನಮ್ಮ ಚಿತ್ರರಂಗಕ್ಕೆ ವರ್ಷಗಳ ಕಾಲ ಮರೆಯಲಾಗದ ಕೊಡುಗೆ ನೀಡಿದ್ದಾರೆ. ಕೆಲವೊಮ್ಮೆ ಜೀವನದಲ್ಲಿ ಅನ್ಯಾಯ ನಡೆಯುತ್ತದೆ. ಕಷ್ಟದ ಸಮಯ ಬರುತ್ತದೆ. ಅವರು ಈಗ ನನ್ನ ಚಿತ್ರದ ಭಾಗವಾಗಿದ್ದಾರೆ. ಇದು ನಾವೆಲ್ಲರೂ – ನಿರ್ಮಾಪಕರು, ನಿರ್ದೇಶಕರು, ಸಹೋದ್ಯೋಗಿಗಳು – ಒಟ್ಟಿಗೆ ನಿಲ್ಲುವ ಕ್ಷಣ” ಎಂದು ಹೇಳಿದ್ದಾರೆ. ಹಾಗೆಯೇ ನೀಡುವ ಮೊತ್ತ ದಾನವಲ್ಲ. ಇದು ಅವರ ಘನತೆಯ ಹಣ. ಅವರಿಗೆ ಸಿನಿಮಾದಲ್ಲಿ ಒಂದು ಪಾತ್ರ ನೀಡಿ ನೀಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಗುರ್ಮೀತ್ ಚೌಧರಿ: ಟಿವಿ ತಾರೆ ಗುರ್ಮೀತ್ ಚೌಧರಿ ಕೂಡಾ ಸಹಾಯ ಮಾಡಿದ್ದಾರೆ. “ರಾಜ್‌ಪಾಲ್ ಯಾದವ್ ಜಿ ಅವರಂತಹ ಹಿರಿಯ, ಪ್ರತಿಭಾನ್ವಿತ ಕಲಾವಿದ ಇಂತಹ ನೋವಿನ ಹಂತವನ್ನು ತಲುಪಿದ್ದು ನನಗೆ ಆಘಾತ ಉಂಟು ಮಾಡಿದೆ. ಅವರು ನಮ್ಮನ್ನು ನಗಿಸಿದವರು. ಈಗ ಅವರಿಗೆ ನಮ್ಮ ಅಗತ್ಯವಿದೆ. ಒಬ್ಬ ನಟನಾಗಿ ಮತ್ತು ಮನುಷ್ಯನಾಗಿ, ನಾನು ಸಾಧ್ಯವಾದಷ್ಟು ಸಹಾಯ ಮಾಡಲು ಮುಂದೆ ಬರುತ್ತಿದ್ದೇನೆ. ನಮ್ಮ ಎಲ್ಲಾ ನಿರ್ಮಾಪಕರು, ನಿರ್ದೇಶಕರು ಮತ್ತು ನಮ್ಮ ಚಲನಚಿತ್ರ ಭ್ರಾತೃತ್ವದ ಸದಸ್ಯರನ್ನು ಸಹಾಯ ಮಾಡುವಂತೆ ನಾನು ವಿನಮ್ರವಾಗಿ ವಿನಂತಿಸುತ್ತೇನೆ” ಎಂದು ತಿಳಿಸಿದ್ದಾರೆ.

ತೇಜ್ ಪ್ರತಾಪ್ ಯಾದವ್: ಸಿನಿಮಾ ತಾರೆಯರು ಮಾತ್ರವಲ್ಲದೆ ರಾಜಕಾರಣಿಗಳು ಸಹ ನಟನನ್ನು ಬೆಂಬಲಿಸಲು ಮುಂದೆ ಬಂದಿದ್ದಾರೆ. ಜನಶಕ್ತಿ ಜನತಾದಳದ ರಾಷ್ಟ್ರೀಯ ಅಧ್ಯಕ್ಷ ತೇಜ್ ಪ್ರತಾಪ್ ಯಾದವ್, ” ರಾಜ್‌ಪಾಲ್ ಯಾದವ್ ಜಿ ಅವರ ಕುಟುಂಬದ ನೋವಿನ ಬಗ್ಗೆ ನನ್ನ ಹಿರಿಯ ಸಹೋದರ ರಾವ್ ಇಂದ್ರಜೀತ್ ಯಾದವ್ ಜಿ ಅವರ ಪೋಸ್ಟ್ ಮೂಲಕ ತಿಳಿಯಿತು. ಈ ಅತ್ಯಂತ ಕಷ್ಟದ ಸಮಯದಲ್ಲಿ, ನಾನು ಮತ್ತು ನನ್ನ ಸಂಪೂರ್ಣ ಜೆಜೆಡಿ (ಜನಶಕ್ತಿ ಜನತಾದಳ) ಕುಟುಂಬವು ಅವರೊಂದಿಗೆ ನಿಲ್ಲುತ್ತದೆ. ಜೆಜೆಡಿ ಕುಟುಂಬದ ಪರವಾಗಿ ನಾನು ಅವರ ಕುಟುಂಬಕ್ಕೆ 11,00,000 ರೂ. (ಹನ್ನೊಂದು ಲಕ್ಷ ರೂಪಾಯಿ) ಆರ್ಥಿಕ ಸಹಾಯವನ್ನು ನೀಡುತ್ತಿದ್ದೇನೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಾವ್ ಇಂದ್ರಜೀತ್ ಸಿಂಗ್ ಯಾದವ್: ಜೆಮ್‌ಟ್ಯೂನ್ಸ್ ಮ್ಯೂಸಿಕ್‌ನ ಮಾಲೀಕ ರಾವ್ ಇಂದ್ರಜೀತ್ ಸಿಂಗ್ ಯಾದವ್, ರಾಜ್‌ಪಾಲ್ ಯಾದವ್‌ಗೆ 1.1 ಕೋಟಿ ರೂ.ಗಳನ್ನು ನೀಡಿದ್ದಾರೆ. “ರಾಜ್‌ಪಾಲ್ ಜಿ ಪ್ರೇಕ್ಷಕರಿಗೆ ಅಪಾರ ಸಂತೋಷವನ್ನು ನೀಡಿದವರು. ಭಾರತೀಯ ಚಿತ್ರರಂಗದ ಅವಿಭಾಜ್ಯ ಅಂಗ. ಇದು ಬರೀ ಹಣದ ವಿಚಾರವಲ್ಲ, ಮನುಷ್ಯನ ಅಗತ್ಯದ ಸಮಯದಲ್ಲಿ ಆತನೊಂದಿಗೆ ನಿಲ್ಲುವುದು. ನಮ್ಮ ಉದ್ಯಮವು ಒಂದು ಕುಟುಂಬ. ಕುಟುಂಬದಲ್ಲಿ ಪರಸ್ಪರ ಬೆಂಬಲವಿರುತ್ತವೆ” ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ನಟ-ಹಾಸ್ಯನಟನಿಗೆ ಸಹಾಯ ಮಾಡಲು ಹೆಚ್ಚಿನ ಜನರು ಮುಂದೆ ಬರಬೇಕೆಂದು ಒತ್ತಾಯಿಸಿದರು.

ಗುರು ರಾಂಧವ: ಜನಪ್ರಿಯ ಪಂಜಾಬಿ ಗಾಯಕ ಗುರು ರಾಂಧವ ರಾಜ್‌ಪಾಲ್ ಯಾದವ್‌ಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. “ನಮ್ಮ ಹಿರಿಯ ನಟ ರಾಜ್‌ಪಾಲ್ ಯಾದವ್ ಸರ್‌ಗೆ ನಾವೆಲ್ಲರೂ ಸಹಾಯ ಮಾಡೋಣ. ನನ್ನ ಮುಂಬರುವ ವೀಡಿಯೊಗಳಲ್ಲಿ ಒಂದರಲ್ಲಿ ಅವರಿಗೆ ಮಾತ್ರ ನೀಡಿ ಅವರಿಗೆ ಮುಂಗಡ ಹಣವನ್ನು ವರ್ಗಾಯಿಸುತ್ತೇನೆ. ನಾವೆಲ್ಲರೂ ಸಹಾಯ ಮಾಡೋಣ ಮತ್ತು ಅವರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸೋಣ” ಎಂದು ಬರೆದುಕೊಂಡಿದ್ದಾರೆ.

ಇದನ್ನು ಓದಿದ್ದೀರಾ? ನಟ ಸೋನು ಸೂದ್ ವಿರುದ್ಧ ಬಂಧನ ವಾರಂಟ್ ಜಾರಿ

ಮಿಕಾ ಸಿಂಗ್: ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಳ್ಳುವ ಬದಲಾಗಿ ನೇರವಾಗಿ ಯಾದವ್ ಅವರಿಗೆ ಸಹಾಯ ಮಾಡುವಂತೆ ಪಂಜಾಬಿ ಗಾಯಕ, ರಾಪರ್ ಮಿಕಾ ಸಿಂಗ್ ಮನವಿ ಮಾಡಿದ್ದಾರೆ. “ದಯವಿಟ್ಟು ಕೇವಲ ಪೋಸ್ಟ್‌ ಮಾಡಬೇಡಿ. ನಿಜವಾಗಿಯೂ, ಪಾರದರ್ಶಕವಾಗಿ ಸಹಾಯ ಮಾಡಿ. ನಾವು ಪೋಸ್ಟ್ ಮಾಡುವ ಬದಲಾಗಿ ಕಾರ್ಯರೂಪಕ್ಕೆ ತರೋಣ. ಸಹಾಯ ಮಾಡೋಣ” ಎಂದು ವಿಡಿಯೋ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.

ಹೀಗೆ ಹಿಂದಿ ಮಾತ್ರವಲ್ಲದೆ ಹಲವು ಚಿತ್ರರಂಗಗಳಲ್ಲಿ, ಕನ್ನಡ ಚಿತ್ರರಂಗದಲ್ಲಿಯೂ ನಟರು, ಕಷ್ಟದಲ್ಲಿರುವ ತಮ್ಮ ಸಹೋದ್ಯೋಗಿಗಳಿಗೆ, ಹಿರಿಯ ಕಲಾವಿದರಿಗೆ ಮತ್ತು ಚಿತ್ರರಂಗದ ಕಾರ್ಮಿಕರಿಗೆ ಆರ್ಥಿಕವಾಗಿ ಸಹಾಯ ಮಾಡಿದ ಹಲವಾರು ನಿದರ್ಶನಗಳಿವೆ. ಅಮಿತಾಭ್ ಬಚ್ಚನ್ ಅವರ ಕಂಪನಿ (ABCL) ನಷ್ಟ ಅನುಭವಿಸಿ ಅವರು ದಿವಾಳಿಯಾದಾಗ, ಕೈಗಾರಿಕೋದ್ಯಮಿ ಧೀರೂಭಾಯಿ ಅಂಬಾನಿ ಅವರು ತಮ್ಮ ಮಗ ಅನಿಲ್ ಅಂಬಾನಿ ಮೂಲಕ ಬಚ್ಚನ್ ಅವರಿಗೆ ದೊಡ್ಡ ಮೊತ್ತದ ಹಣದ ಸಹಾಯ ನೀಡಲು ಮುಂದಾಗಿದ್ದರು. ಬಚ್ಚನ್ ಆ ಹಣವನ್ನು ಸ್ವೀಕರಿಸದೆ ಸ್ವಪ್ರಯತ್ನದಿಂದ ಮೇಲೆ ಬಂದರೂ, ಆ ಕಷ್ಟದ ಸಮಯದಲ್ಲಿ ಸಿಕ್ಕ ಬೆಂಬಲ ಮಾನಸಿಕ ಧೈರ್ಯ ನೀಡಿತ್ತು ಎಂದು ನಂತರ ಸ್ಮರಿಸಿದ್ದಾರೆ.

ಇನ್ನು ನಟ ಯಶ್ ಅವರು ಕೋವಿಡ್ ಸಂಕಷ್ಟದ ಸಮಯದಲ್ಲಿ ಕನ್ನಡ ಚಿತ್ರರಂಗದ ಸುಮಾರು 3,000 ಕಾರ್ಮಿಕರಿಗೆ ಮತ್ತು ಕಲಾವಿದರಿಗೆ ತಲಾ ₹5,000 ರಂತೆ ಒಟ್ಟು ₹1.5 ಕೋಟಿ ಆರ್ಥಿಕ ಸಹಾಯವನ್ನು ತಮ್ಮ ವೈಯಕ್ತಿಕ ಹಣದಿಂದ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು. ಇನ್ನು ಕೋವಿಡ್ ಸಂದರ್ಭದಲ್ಲಿ ಕಿಚ್ಚ ಚಾರಿಟಬಲ್ ಟ್ರಸ್ಟ್ ಮೂಲಕ ಸುದೀಪ್ ಅವರು ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ ಅನೇಕ ಹಿರಿಯ ಕಲಾವಿದರಿಗೆ ಹಣಕಾಸಿನ ನೆರವು ಮತ್ತು ದಿನಸಿ ಕಿಟ್‌ಗಳನ್ನು ನೀಡಿದ್ದಾರೆ. ಅಲ್ಲದೆ, ಅನಾರೋಗ್ಯದಿಂದ ಬಳಲುತ್ತಿರುವ ಚಿತ್ರರಂಗದ ಸದಸ್ಯರ ವೈದ್ಯಕೀಯ ಚಿಕಿತ್ಸೆಗೂ ಇವರು ಸಹಾಯ ಹಸ್ತ ಚಾಚುತ್ತಿರುತ್ತಾರೆ.

sonu sood 3
ಕೋವಿಡ್ ಸಂದರ್ಭದಲ್ಲಿ ವಲಸೆ ಕಾರ್ಮಿಕರು ತಮ್ಮ ಊರು ತಲುಪಲು ಸಹಾಯ ಮಾಡಿದ ನಟ ಸೋನು ಸೂದ್

ಅದರಲ್ಲೂ ಈ ಸಹಾಯದ ವಿಚಾರದಲ್ಲಿ ಹೆಚ್ಚು ಜನಪ್ರಿಯವಾಗಿರುವುದು ನಟ ಸೋನು ಸೂದ್. ರಾಷ್ಟ್ರ ಪ್ರಶಸ್ತಿ ವಿಜೇತ ಕೊರಿಯೋಗ್ರಾಫರ್ ಶಿವಶಂಕರ್ ಅವರು ಕೋವಿಡ್-19ನಿಂದ ಗಂಭೀರ ಸ್ಥಿತಿಯಲ್ಲಿದ್ದಾಗ, ಅವರ ಕುಟುಂಬವು ಚಿಕಿತ್ಸಾ ವೆಚ್ಚ ಭರಿಸಲು ಕಷ್ಟಪಟ್ಟಿತ್ತು. ಈ ವೇಳೆ ಸೋನು ಸೂದ್ ಚಿಕಿತ್ಸಾ ವೆಚ್ಚದ ಸುಮಾರು 70% ರಷ್ಟು ಹಣವನ್ನು ಭರಿಸಲು ಮುಂದೆ ಬಂದಿದ್ದರು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ ಬಾಲಿವುಡ್‌ನ ‘ಸಿನೆ ಡ್ಯಾನ್ಸರ್ಸ್ ಅಸೋಸಿಯೇಷನ್’ನ ಸುಮಾರು 800 ಸದಸ್ಯರಿಗೆ ಸೋನು ಸೂದ್ ಅವರು ಪಡಿತರ (Rations) ಮತ್ತು ಅಗತ್ಯ ವಸ್ತುಗಳನ್ನು ಪೂರೈಸಲು ಸಹಾಯ ಮಾಡಿದ್ದರು. ದೈನಂದಿನ ಕೂಲಿ ಕಾರ್ಮಿಕರಿಗೂ ಸಹಾಯಹಸ್ತ ಚಾಚಿದ್ದರು.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...