ನಾಸೀರುದ್ದೀನ್‌ ಶಾ ಮನೆಯ ಬಚ್ಚಲು ಕೋಣೆ ಬಾಗಿಲಿಗೆ ಹಿಡಿಕೆಯಾದ ʼಫಿಲ್ಮ್‌ ಫೇರ್‌ʼ ಪ್ರಶಸ್ತಿ

Date:

ಫಿಲ್ಮ್ ಫೇರ್‌ ಪ್ರಶಸ್ತಿಗಳ ಹಿಂದೆ ದೊಡ್ಡ ರಾಜಕೀಯವಿದೆ

ಪೈಪೋಟಿಗಾಗಿ ಕೊಡುವ ಪ್ರಶಸ್ತಿಗಳಿಗೆ ಯಾವುದೇ ಬೆಲೆ ಇಲ್ಲ

ಬಾಲಿವುಡ್‌ನ ಹಿರಿಯ ನಟ ನಾಸೀರುದ್ದೀನ್‌ ಶಾ ತಮಗೆ ಬಂದ ʼಫಿಲ್ಮ್‌ ಫೇರ್‌ʼ ಪ್ರಶಸ್ತಿಗಳನ್ನು ತೋಟದ ಮನೆಯ ಬಚ್ಚಲು ಕೋಣೆಯ ಬಾಗಿಲಿಗೆ ಹಿಡಿಕೆಗಳನ್ನಾಗಿ ಬಳಸುತ್ತಿದ್ದೇನೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಾಸೀರುದ್ದೀನ್‌ ಶಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ʼತಾಜ್‌ʼ ವೆಬ್‌ ಸರಣಿ ಇತ್ತೀಚೆಗೆ ʼಝೀ 5ʼ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಈ ಹಿನ್ನೆಲೆ ಯುಟ್ಯೂಬ್‌ ಮಾಧ್ಯಮವೊಂದಕ್ಕೆ ವಿಶೇಷ ಸಂದರ್ಶನ ನೀಡಿರುವ ಅವರು, ʼಫಿಲ್ಮ್‌ ಫೇರ್‌ʼ ಪ್ರಶಸ್ತಿಗಳ ಕುರಿತು ಮಾತನಾಡಿದ್ದಾರೆ.

“ನಿಮಗೆ ಬಂದ ಪ್ರಶಸ್ತಿಗಳನ್ನು ತೋಟದ ಮನೆಯ ಬಾಗಿಲಿಗೆ ಹಿಡಿಕೆಯಾಗಿ ಬಳಸುತ್ತಿದ್ದೀರಿ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದು ನಿಜವೇ” ಎಂದು ನಿರೂಪಕರು ಕೇಳಿದ ಪ್ರಶ್ನೆಗೆ ನಗುತ್ತಾ ಉತ್ತರಿಸಿರುವ ಅವರು, “ನನ್ನ ಪ್ರಕಾರ ಈ ರೀತಿಯ ಪ್ರಶಸ್ತಿಗಳಿಗೆ ಯಾವುದೇ ಬೆಲೆ ಇಲ್ಲ. ಮೊದ ಮೊದಲು ಫಿಲ್ಮ್‌ ಫೇರ್‌ ಪ್ರಶಸ್ತಿಗಳನ್ನು ಪಡೆದುಕೊಂಡಾಗ ಖುಷಿಪಡುತ್ತಿದೆ. ಈ ಪ್ರಶಸ್ತಿಗಳ ಹಿಂದೆ ದೊಡ್ಡ ರಾಜಕಾರಣವೇ ನಡೆಯುತ್ತದೆ ಎಂಬುದು ಕ್ರಮೇಣವಾಗಿ ನನಗೆ ಅರ್ಥವಾಯಿತು. ಈ ಪ್ರಶಸ್ತಿಗಳು ಅರ್ಹತೆಯ ಆಧಾರದ ಮೇಲೆ ಸಿಗುವುದಿಲ್ಲ. ಹೀಗಾಗಿ ಈ ರೀತಿಯ ಪ್ರಶಸ್ತಿಗಳನ್ನು ಪಡೆಯುವುದನ್ನು ನಾನು ಸಂಪೂರ್ಣವಾಗಿ ನಿಲ್ಲಿಸಿದ್ದೇನೆ. ಆದರೆ, ಪದ್ಮಶ್ರೀ ಮತ್ತು ಪದ್ಮ ಭೂಷಣ ತರಹದ ಪ್ರಶಸ್ತಿಗಳು ಬಂದಾಗ ಖುಷಿಪಟ್ಟಿದ್ದೆ. ಆ ಪ್ರಶಸ್ತಿಗಳು ನನ್ನ ತಂದೆಯ ಮಾತನ್ನು ನೆನಪಿಸುತ್ತಿದ್ದವು. ʼನಟನೆಯನ್ನು ನಂಬಿಕೊಂಡು ಹೀಗೆ ಕೆಲಸಕ್ಕೆ ಬಾರದವನ ರೀತಿ ಬದುಕಬೇಡʼ ಎನ್ನುತ್ತಿದ್ದರು. ನಾನು ಆ ಪ್ರಶಸ್ತಿಗಳನ್ನು ಪಡೆಯಲು ರಾಷ್ಟ್ರಪತಿ ಭವನಕ್ಕೆ ಹೋದಾಗ ಅಪ್ಪನನ್ನು ನೆನೆಸಿಕೊಂಡಿದ್ದೆ. ನನಗೆ ದಕ್ಕಿರುವ ಪ್ರಶಸ್ತಿಗಳನ್ನು ನೋಡಿ ಮೇಲಿರುವ ಅಪ್ಪ ಖುಷಿ ಪಟ್ಟಿರುತ್ತಾರೆ ಎಂದುಕೊಂಡೆ. ಆದರೆ, ಪೈಪೋಟಿಗಾಗಿ ಕೊಡಮಾಡುವ ಈ ಪ್ರಶಸ್ತಿಗಳು ನನಗೆ ಹಿಡಿಸಲ್ಲ” ಎಂದಿದ್ದಾರೆ.

“ಶ್ರಮವಹಿಸಿ ಪಾತ್ರಗಳಿಗೆ ಜೀವ ತುಂಬುವ ಪ್ರತಿಯೊಬ್ಬರೂ ಅತ್ಯುತ್ತಮ ಕಲಾವಿದರೇ. ಅಂತಹ ಹಲವಾರು ಕಲಾವಿದರಲ್ಲಿ ಒಬ್ಬರನ್ನು ಆರಿಸಿ, ಇವರೇ ಈ ವರ್ಷದ ಅತ್ಯುತ್ತಮ ಕಲಾವಿದ ಎನ್ನುವುದು ನ್ಯಾಯವೇ? ಇಂತಹ ಪ್ರಶಸ್ತಿಗಳಿಗೆ ನಾನು ಬೆಲೆ ಕೊಡುವುದಿಲ್ಲ. ಇತ್ತೀಚೆಗೆ ನನಗೆ ಬಂದ ಎರಡು ಪಶಸ್ತಿಗಳನ್ನು ಪಡೆಯಲು ಸಮಾರಂಭಗಳಿಗೇ ಹೋಗಿಲ್ಲ. ಹೀಗಾಗಿಯೇ ನಾನು ತೋಟದ ಮನೆ ಕಟ್ಟಿಸಿದಾಗ ಎರಡು ಪ್ರಶಸ್ತಿಗಳನ್ನು ತೋಟದ ಮನೆಯಲ್ಲಿ ಇಡಲು ನಿರ್ಧರಿಸಿದ್ದೆ. ಅದರಂತೆಯೇ ತೋಟದ ಮನೆಯ ಬಚ್ಚಲು ಕೋಣೆ ಬಾಗಲಿಗೆ ಈ ಎರಡೂ ಪ್ರಶಸ್ತಿಗಳು ಹಿಡಿಕೆಯಾಗಿವೆ. ಯಾರೇ ಬಚ್ಚಲು ಕೋಣೆಗೆ ಹೋಗಿ ಬಂದರೂ ಅವರಿಗೆ ಎರಡು ಪ್ರಶಸ್ತಿ ಸಿಗುತ್ತವೆ” ಎಂದು ಹಾಸ್ಯಮಯವಾಗಿ ತಮ್ಮ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...