97ನೇ ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳನ್ನು ಗುರುವಾರ ಘೋಷಿಸಲಾಗಿದ್ದು, ಹಿಂದಿ ಸಿನಿಮಾ ‘ಹೋಮ್ ಬೌಂಡ್’ ಆಸ್ಕರ್ ರೇಸ್‌ನಿಂದ ಹೊರಕ್ಕೆ ಉಳಿದಿದೆ. ವಿಶಾಲ್ ಜೆತ್ವಾ ಮತ್ತು ಇಶಾನ್ ಖಟ್ಟರ್ ನಟಿಸಿರುವ ನೀರಜ್ ಘಯ್ವಾನ್ ನಿರ್ದೇಶನದ ಧರ್ಮ ಪ್ರೊಡಕ್ಷನ್ಸ್‌ನ ಹೋಮ್‌ಬೌಂಡ್ ಈ ವರ್ಷದ ಆಸ್ಕರ್‌ಗೆ ಭಾರತದ ಅಧಿಕೃತ ಆಯ್ಕೆಯಾಗಿತ್ತು.
ಚಿತ್ರವು ಟಾಪ್ 15ರಲ್ಲಿ ಸ್ಥಾನ ಪಡೆದಿದ್ದರಿಂದ ಭಾರತೀಯ ಪ್ರೇಕ್ಷಕರು ಆಸ್ಕರ್‌ನ ಟಾಪ್ 5ರಲ್ಲಿ ಭಾರತದ ಸಿನಿಮಾವನ್ನು ಕಾಣುವ ನಿರೀಕ್ಷೆಯಲ್ಲಿದ್ದರು. ಆದರೆ ಸಿನಿಮಾ ರೇಸ್‌ನಿಂದ ಹೊರಕ್ಕೆ ಉಳಿದಿದೆ.
ಇದನ್ನು ಓದಿದ್ದೀರಾ? ಆಸ್ಕರ್ 2025 ರೇಸ್‌ನಿಂದ ಹೊರಗುಳಿದ ‘ಲಾಪತಾ ಲೇಡೀಸ್’
‘ಹೋಮ್ ಬೌಂಡ್’ ಆಸ್ಕರ್ ನಾಮನಿರ್ದೇಶನದಲ್ಲಿ ಉಳಿಯುವಲ್ಲಿ ಯಶಸ್ವಿಯಾಗಿದ್ದರೆ ಆಮಿರ್ ಖಾನ್ ಅವರ ಲಗಾನ್ ನಂತರ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ವಿಭಾಗದಲ್ಲಿ ಸ್ಥಾನ ಪಡೆದ ಮೊದಲ ಚಿತ್ರ ಇದಾಗುತ್ತಿತ್ತು.
ಉತ್ತರ ಭಾರತದ ಹಳ್ಳಿಯ ಇಬ್ಬರು ಬಾಲ್ಯದ ಗೆಳೆಯರಾದ ಚಂದನ್ ಮತ್ತು ಶೋಯೆಬ್ ಅವರ ಕಥೆಯಿದು. 2020ರ ಲಾಕ್‌ಡೌನ್ ಮತ್ತು ಸಾಮಾಜಿಕ ಸವಾಲುಗಳು ಅವರ ಜೀವನವನ್ನು ಹೇಗೆ ಬದಲಿಸುತ್ತವೆ ಎಂಬುದನ್ನು ಈ ಚಿತ್ರವು ಭಾವನಾತ್ಮಕವಾಗಿ ಚಿತ್ರಿಸಿದೆ. ಈ ಸಿನಿಮಾ ಪ್ರಸ್ತುತ ನೆಟ್‌ಫ್ಲಿಕ್ಸ್ (Netflix) ಓಟಿಟಿ ತಾಣದಲ್ಲಿ ಲಭ್ಯವಿದೆ.





