ಶಾರೂಖ್ ಜನ್ಮದಿನ | ಮಧ್ಯರಾತ್ರಿಯೇ ‘ಜವಾನ್’ ಬಿಡುಗಡೆಗೊಳಿಸಿ ‘ಸರ್‌ಪ್ರೈಸ್’ ನೀಡಿದ ನೆಟ್‌ಫ್ಲಿಕ್ಸ್

Date:

‘ಬಾಲಿವುಡ್‌ ಕಿಂಗ್’ ಎಂದೇ ಪ್ರಸಿದ್ಧಿ ಪಡೆದಿರುವ ನಟ ಶಾರೂಖ್‌ ಖಾನ್‌ 58ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ನಡುವೆ ಮಧ್ಯರಾತ್ರಿ 12 ಗಂಟೆಗೇ ‘ಜವಾನ್’ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆಗೊಳಿಸಿ ಅಭಿಮಾನಿಗಳಿಗೆ ನೆಟ್‌ಫ್ಲಿಕ್ಸ್ ಜನ್ಮದಿನದ ‘ಸರ್‌ಪ್ರೈಸ್’ ನೀಡಿದೆ.

ಬಿಡುಗಡೆಗೂ ಮುನ್ನ ನಟ ಶಾರುಖ್ ಖಾನ್ ‘ನೆಟ್‌ಫ್ಲಿಕ್ಸ್’ಗಾಗಿಯೇ ಹೊಸ ಟ್ರೇಲರ್ ಅನ್ನು ರಚಿಸಿದ್ದು, ಅದನ್ನು ನೆಟ್‌ಫ್ಲಿಕ್ಸ್‌ ಬಿಡುಗಡೆ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಶಾರುಖ್ ಖಾನ್ ಪತ್ನಿ ಗೌರಿ ಖಾನ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ‘ಜವಾನ್‌’ ಸಿನಿಮಾ ಸೆ. 7ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಈ ಸಿನಿಮಾ ಮೂಲಕ ತಮಿಳಿನ ನಿರ್ದೇಶಕ ಆಟ್ಲಿ ಮತ್ತು ನಟಿ ನಯನ್ ತಾರಾ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು.

ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ‘ಜವಾನ್’ ಚಿತ್ರದ ಡಿಜಿಟಲ್‌ ಹಕ್ಕನ್ನು ನೆಟ್‌ಫ್ಲಿಕ್ಸ್‌ ಸಂಸ್ಥೆ ₹250 ಕೋಟಿ ನೀಡಿ ಖರೀದಿಸಿದೆ ಎಂದು ವರದಿಯಾಗಿದೆ.

ಜವಾನ್ ಗಳಿಕೆ ₹1150

‘ಜವಾನ್‌’ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಅಂದಾಜು ₹1150 ಕೋಟಿ ಬಾಕ್ಸ್‌ ಆಫೀಸ್‌ ಗಳಿಕೆ ಮಾಡಿತ್ತು. ಹಿಂದಿ ಚಿತ್ರರಂಗದಲ್ಲಿ ಈ ಗಳಿಕೆ ದಾಖಲೆಯಾಗಿದೆ. ಕೇವಲ ಹಿಂದಿಯಲ್ಲಿಯೇ ₹590 ಕೋಟಿ ಗಳಿಸಿದೆ. ತಮಿಳು ಮತ್ತು ತೆಲುಗು ಸಿನಿ ಮಾರುಕಟ್ಟೆಯಲ್ಲೂ ಉತ್ತಮ ಗಳಿಕೆ ಮಾಡಿತ್ತು. ‘ಪಠಾಣ್’ ಚಿತ್ರದ ನಂತರ ಸಾವಿರ ಕೋಟಿ ಕ್ಲಬ್ ಸೇರಿದ ಚಿತ್ರ ಇದಾಗಿತ್ತು.

‘ಮನ್ನತ್’ ಮುಂದೆ ಅಭಿಮಾನಿಗಳ ದಂಡು
ಶಾರೂಖ್‌ ಖಾನ್‌ ಜನ್ಮದಿನಕ್ಕೆ ಶುಭಕೋರಲು ಮಧ್ಯರಾತ್ರಿಯೇ ಅವರ ಮುಂಬೈ ನಿವಾಸ ‘ಮನ್ನತ್’ ಮುಂದೆ ಸಾವಿರಾರು ಅಭಿಮಾನಿಗಳು ನೆರೆದಿದ್ದರು.

12 ಗಂಟೆಯ ಸುಮಾರಿಗೆ ಮನೆಯಿಂದ ಹೊರಬಂದು, ಮನೆಯ ಬಾಲ್ಕನಿಯಲ್ಲಿ ನಿಂತ ಶಾರೂಖ್‌ ಖಾನ್‌ ಅಭಿಮಾನಿಗಳಿಗೆ ಕೈ ಬೀಸಿ, ಕೈ ಮುಗಿದರು, ಫ್ಲೈಯಿಂಗ್ ಕಿಸ್‌ ನೀಡುವುದರ ಜತೆಗೆ ತನ್ನ ‘ಸಿಗ್ನೇಚರ್‌ ಪೋಸ್‌’ ನೀಡಿ, ಖುಷಿಪಟ್ಟರು.

ಆ ಬಳಿಕ ‘ಎಕ್ಸ್’ ಖಾತೆಯಲ್ಲಿ ಟ್ವೀಟ್ ಮಾಡಿದ ಶಾರೂಖ್‌ ಖಾನ್‌, ‘ನನ್ನ ಹುಟ್ಟುಹಬ್ಬದ ಆಚರಣೆ ನಂಬಲಾಗುತ್ತಿಲ್ಲ. ನೀವಿಷ್ಟು ಜನರು ನನಗಾಗಿ ಬಂದು, ಮಧ್ಯರಾತ್ರಿಯವರೆಗೆ ಇದ್ದು, ಪ್ರೀತಿ ತೋರಿದ್ದೀರಿ. ನನ್ನಂಥ ನಟನಿಗೆ ಇದಕ್ಕಿಂತ ಖುಷಿಯ ವಿಚಾರ ಏನಿದೆ. ನಾನು ಇನ್ನಷ್ಟು ನಿಮ್ಮನ್ನು ಮನರಂಜಿಸಲು ಇದು ಸ್ಪೂರ್ತಿಯಾಗಿದೆ. ನಾನು ನಿಮ್ಮ ಪ್ರೀತಿಯ ಕನಸಿನಲ್ಲಿ ಬದುಕುವೆ. ನಿಮ್ಮನ್ನು ಮನರಂಜಿಸುವ ನನ್ನನ್ನು ಫಾಲೋ ಮಾಡುವ ನಿಮಗೆಲ್ಲರಿಗೂ ಧನ್ಯವಾದ” ಎಂದು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಡಿಸೆಂಬರ್ 23ಕ್ಕೆ ‘ಡಂಕಿ’
ಜವಾನ್ ಹಾಗೂ ಪಠಾಣ್ ಗೆಲುವಿನ ಅಲೆಯಲ್ಲಿರುವ ಶಾರೂಖ್ ಖಾನ್, ಈ ವರ್ಷ ‘ಡಂಕಿ’ ಸಿನಿಮಾದ ಮೂಲಕ ಮತ್ತೊಮ್ಮೆ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ.

ರಾಜ್ ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಚಿತ್ರ ಡಿ. 23ಕ್ಕೆ ತೆರೆ ಕಾಣಲಿದ್ದು, ಚಿತ್ರದ ಪೋಸ್ಟರ್ ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ. ಪಿಕೆ, ತ್ರೀ ಈಡಿಯಟ್ಸ್ ಮೊದಲಾದ ಸದಭಿರುಚಿಯ ಚಿತ್ರಗಳ ಮೂಲಕ ತಮ್ಮದೇ ಆದ ಅಭಿಮಾನಿ ವರ್ಗ ಸೃಷ್ಟಿಸಿಕೊಂಡಿರುವ ನಿರ್ದೇಶಕ ಹಿರಾನಿ ಅವರ ಈ ಹೊಸ ಚಿತ್ರಕ್ಕೆ ನಿರೀಕ್ಷೆಗಳೂ ಕೂಡ ಹೆಚ್ಚಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...