ಡೆವಿಲ್ ನಲ್ಲಿ ಮಿಂಚಿದ ನಮ್ಮೂರ ಹುಡುಗ ಹುಲಿ ಕಾರ್ತಿಕ್

Date:

ಕಡುಬಡತನದಿಂದ ಬಂದ, ಕೌಟುಂಬಿಕ ದುರಂತಗಳನ್ನು ಕಂಡ ಕಾರ್ತಿಕ್ ವಾಸ್ತವ-ಭ್ರಮೆಗಳ ವ್ಯತ್ಯಾಸವನ್ನು ತನ್ನ ಅನುಭವದಿಂದಲೇ ಅರಿತುಕೊಂಡಿದ್ದಾನೆ. ಹೊರಗೆ ವರ್ಣರಂಜಿತವಾಗಿ ಕಾಣುವ ಚಿತ್ರರಂಗದ ನೇಪಥ್ಯದಲ್ಲಿರುವ ಎಲ್ಲ ಬಗೆಯ ಜನರ ಹಿತಾಸಕ್ತಿಯನ್ನು ತಿಳಿದು ತನ್ನ ಆಯ್ಕೆಯನ್ನು ಖಚಿತಪಡಿಸಿಕೊಂಡು ಆತ ಹೆಜ್ಜೆ ಹಾಕಲಿ

ನನ್ನ ಹೈಸ್ಕೂಲು ದಿನಗಳಿಂದ ಕಾಲೇಜು ಮುಗಿಸುವವರೆಗೂ ನನ್ನ ಮನಸ್ಸನ್ನು ವೈಚಾರಿಕವಾಗಿ ರೂಪಿಸುತ್ತಿದ್ದ ಲಂಕೇಶ್ ಪತ್ರಿಕೆಯ ಜತೆ ಊರಲ್ಲಿ ನನಗೆ ಇಬ್ಬರು ವ್ಯಕ್ತಿಗಳು ಸಾಥ್ ಕೊಡುತ್ತಿದ್ದರು. ಒಬ್ಬರು ನನ್ನ ಅಣ್ಣನ ವಯೋಮಾನದ ವೆಂಕಟೇಶ್ ಮತ್ತು ಆಗಲೇ ಎಪ್ಪತ್ತು ವರ್ಷ ಮೀರಿದ್ದ ಹಿರಿಯ ರಾಮ ಪೂಜಾರರು. ವೆಂಕಟೇಶ್ ಅವರದು ನಮ್ಮೂರಿನಲ್ಲಿ ಕಿರಾಣಿ ಅಂಗಡಿಯಿದೆ. ಈ ಕಿರಾಣಿ ಅಂಗಡಿಯೊಂದು ನಮ್ಮ ಅಡ್ಡಾ. ಇಲ್ಲಿ ಚರ್ಚಿಸದ ವಿಷಯವೇ ಇಲ್ಲ.

ಆಗಲೇ ನಾವು ಮಾಡಿದ ಸಣ್ಣಪುಟ್ಟ ಕ್ರಾಂತಿಗಳೆಲ್ಲದರಕ್ಕೆ ಸ್ಕೆಚ್ ಹಾಕಿದ್ದು ಇಲ್ಲಿಯೇ. ವೆಂಕಟೇಶ್ ಲಂಕೇಶರ ದೊಡ್ಡ ಅಭಿಮಾನಿ. ನನಗೆ ಲಂಕೇಶ್ ಪತ್ರಿಕೆಯ ಓದಿನ ರುಚಿಹತ್ತಿಸಿದ್ದು ವೆಂಕಟೇಶ್. ರಾಮ ಪೂಜಾರರು ಆಗಾಗ ಸಂಜೆ ಈ ಅಡ್ಡೆಗೆ ಬರುವುದಿತ್ತು. ಇವರು ಶಾಲೆ ಹತ್ತಿದಂತೆ ಕಾಣುತ್ತಿರಲಿಲ್ಲ. ಆದರೆ, ಅಲ್ಲಿ ಇಲ್ಲಿ ಸುದ್ದಿಯಾಗುತ್ತಿದ್ದ ಗಣಮಕ್ಕಳ (ದೇವರು ಮೈಮೇಲೆ ಬರಿಸಿಕೊಳ್ಳುವವರು) ಮರ್ಮವನ್ನೆಲ್ಲ, ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಅನಾಚಾರಗಳನ್ನೆಲ್ಲ ಈ ಪೂಜಾರರು ಸ್ವಾರಸ್ಯಕರವಾಗಿ ವಿವರಿಸುತ್ತಿದ್ದರು. ಈ ಕಾರಣಗಳಿಗಾಗಿಯೋ ಏನೋ ನಾನು ಇವರೊಂದಿಗೆ ಮಾತನಾಡಲು ಕಾತರಿಸುತ್ತಿದ್ದೆ. ರಾಮ ಪೂಜಾರರದು ನಮ್ಮಂತೆಯೇ ಒಂದು ಬಡ ಆದರೆ ದೊಡ್ಡ ಕುಟುಂಬ. ಒಂದು ಚೂರು ಗದ್ದೆಯಿತ್ತಷ್ಟೆ. ರಾಮ ಪೂಜಾರರ ಹಿರಿಯ ಮಗ ಸಂಜೀವ ಹರಳಿಮಠದ ಸರ್ಕಾರಿ ಶಾಲೆಯಲ್ಲಿ ನನ್ನ ಸಹಪಾಠಿ. ದಾಂಡಿಗ ದೇಹ ಅವನದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ರಾಮ ಪೂಜಾರರ ಕಾರಣದಿಂದಲೇ ನಾನು ನಿನ್ನೆ ಕುಟುಂಬ ಸಮೇತ ‘ಡೆವಿಲ್’ ಸಿನಿಮಾ ನೋಡಿದೆ!
ರಾಮ ಪೂಜಾರರಿಗೂ, ಡೆವಿಲ್ ಸಿನಿಮಾಗೂ ಏನು ಸಂಬಂಧ ಎಂದು ಕೇಳಬಹುದು. ‘ಕಾಟೇರಾ’ ಸಿನಿಮಾವನ್ನು ನಾನು ನೋಡಿ ಇಷ್ಟಪಟ್ಟಿದ್ದೆ. ಇದು ದರ್ಶನ್ ಮುಖ್ಯಪಾತ್ರದಲ್ಲಿದ್ದ ಚಿತ್ರ. ಡೆವಿಲ್ ಸಿನಿಮಾ ನೋಡಲು ನನ್ನನ್ನು ಥಿಯಟೇರಿಗೆ ಕರೆದುಕೊಂಡು ಹೋದದ್ದು ರಾಮ ಪೂಜಾರರ ಮಗಳು ತುಳಸಿ ಅವರ ಮಗ ಕಾರ್ತಿಕ್. ಕಾರ್ತಿಕ್ ಎನ್ನುವುದಕ್ಕಿಂತ ‘ಹುಲಿ ಕಾರ್ತಿಕ್’ ಎಂದರೆ ಹೆಚ್ಚು ಜನರಿಗೆ ತಿಳಿಯುತ್ತದೆ.

DEvil 1

ಕಿರುತೆರೆಯ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ಮುನ್ನಲೆಗೆ ಬಂದ ಕಾರ್ತಿಕ್ ಈ ಹಂತಕ್ಕೆ ಬರುವ ಮುನ್ನ ಬದುಕು ಕಟ್ಟಿಕೊಳ್ಳಲು ಹರ ಸಾಹಸ ಪಟ್ಟವನು. ಅವನ ಪ್ರತಿಭೆ, ಶ್ರದ್ಧೆ ಇಂದು ಅವನನ್ನು ಒಬ್ಬ ಸಿನಿಮಾನಟನನ್ನಾಗಿ ರೂಪಿಸಿದೆ. ಈ ಮೊದಲು ಕಾರ್ತಿಕ್ ‘ಟಗರು ಪಲ್ಯ’ ಸಿನಿಮಾದಲ್ಲಿ ಚಿಕ್ಕದಾದರೂ, ಗಮನ ಸೆಳೆಯುವ ಪಾತ್ರ ಮಾಡಿದ್ದ. ‘ಡೆವಿಲ್’ ಸಿನಿಮಾದಲ್ಲಿ ನಾಯಕನಟನ ಸ್ನೇಹಿತನ ಪಾತ್ರ ಕಾರ್ತಿಕನದು. ಪಾತ್ರಕ್ಕೆ ಕಾರ್ತಿಕ್ ಜೀವ ತುಂಬಿದ್ದಾನೆ. ಆದರೆ ಈತನ ಪ್ರತಿಭೆಯ ಅನಾವರಣಕ್ಕೆ ಈ ಪಾತ್ರದಲ್ಲಿ ಹೆಚ್ಚಿನ ಅವಕಾಶವೇ ಇಲ್ಲ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕುಸ್ತಿ ಅಖಾಡಕ್ಕೆ ಮರಳುವ ವಿನೇಶ್‌ ಫೋಗಟ್‌ ನಿರ್ಧಾರಕ್ಕೆ ಸ್ವಾಗತ!

ನಮ್ಮೂರಿನ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯ ಮೂಲಕ ಮಿಂಚುತ್ತಿರುವುದನ್ನು ನೋಡುವುದು ನನಗೆ ಅತ್ಯಂತ ಖುಷಿ ಕೊಡುವ ಸಂಗತಿ. ಆದ್ದರಿಂದ ಸಿನಿಮಾ ಬಗ್ಗೆ, ನಾಯಕನಟರ ಗಂಭೀರ ಕೃತ್ಯಗಳ ಬಗ್ಗೆ ತಕರಾರು, ಸಮಾಧಾನಗಳಿದ್ದರೂ ನಮ್ಮೂರಿನ ಹುಡುಗನನ್ನು ತೆರೆಯ ಮೇಲೇ ನೋಡಲು ನಾನು ಕುಟುಂಬ ಸಮೇತ ಥಿಯಟೇರಿಗೆ ಹೋಗಿ ಬಂದೆ.

ಹಾಗೆ ನೋಡಿದರೆ, ‘ಬಿಗ್ ಬಾಸ್’ ‘ಕಾಮಿಡಿ ಕಿಲಾಡಿಗಳು’ ಭರ್ಜರಿ ಬ್ಯಾಚುಲರ್ಸ್ ಇತ್ಯಾದಿ ರಿಯಾಲಿಟಿ ಶೋಗಳನ್ನು, ಟಿವಿ ಕಾರ್ಯಕ್ರಮಗಳನ್ನು ಹತ್ತು ನಿಮಿಷಕ್ಕಿಂತ ಹೆಚ್ಚು ನನಗೆ ನೋಡಲಾಗುವುದಿಲ್ಲ. ಇಲ್ಲಿನ ಕೃತಕ ಅಳು, ನಗು, ಸೋಗಲಾಡಿ ಮಾನವೀಯತೆ, ಜತೆಗೆ ಜಡ್ಜ್‌ಸ್ ಎಂದು ಕುಳಿತುಕೊಂಡ ನಟ,ನಟಿಯರು, ಸಿನಿಮಾ ನಿರ್ದೇಶಕರ ಅಸಹ್ಯ ಹುಟ್ಟಿಸುವ ದ್ವಂದ್ವಾರ್ಥದ ಮಾತುಗಳು ರೇಜಿಗೆ ಹುಟ್ಟಿಸುತ್ತವೆ. ಹೀಗಿದ್ದರೂ, ಇಷ್ಟವಿಲ್ಲದಿದ್ದರೂ ಈ ಟಿವಿಗಳು ಜನರ ಮೇಲೆ ತಮ್ಮದೇ ಪ್ರಭಾವ ಬೀರುವುದರಿಂದ ಇಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯುವುದಕ್ಕಾದರೂ ಇವುಗಳನ್ನು ಗಮನಿಸುತ್ತಿರಬೇಕಾಗುತ್ತದೆ. ನಮ್ಮ ಕಡೆಯ ಮಕ್ಕಳು ಯಾರಾದರೂ ಇಲ್ಲಿ ಕಂಡರೆ ಆ ಕಾರಣಕ್ಕಾಗಿಯಾದರೂ ಕಣ್ಣು ಒಂದು ಕ್ಷಣ ಅತ್ತ ಹೋಗುತ್ತದೆ.

ನಾನು ಗಮನಿಸಿದಂತೆ ಕಡುಬಡತನದಿಂದ ಬಂದ, ಕೌಟುಂಬಿಕ ದುರಂತಗಳನ್ನು ಕಂಡ ಕಾರ್ತಿಕ್ ವಾಸ್ತವ-ಭ್ರಮೆಗಳ ವ್ಯತ್ಯಾಸವನ್ನು ತನ್ನ ಅನುಭವದಿಂದಲೇ ಅರಿತುಕೊಂಡಿದ್ದಾನೆ. ಹೊರಗೆ ವರ್ಣರಂಜಿತವಾಗಿ ಕಾಣುವ ಚಿತ್ರರಂಗದ ನೇಪಥ್ಯದಲ್ಲಿರುವ ಎಲ್ಲ ಬಗೆಯ ಜನರ ಹಿತಾಸಕ್ತಿಯನ್ನು ತಿಳಿದು ತನ್ನ ಆಯ್ಕೆಯನ್ನು ಖಚಿತಪಡಿಸಿಕೊಂಡು ಆತ ಹೆಜ್ಜೆ ಹಾಕಲಿ, ಮುಂದೆ ಕನ್ನಡ ಚಿತ್ರರಂಗದ ಉಜ್ವಲತಾರೆಯಾಗಿ ಬೆಳಗಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ.

ಡಾ.ಸರ್ಜಾಶಂಕರ ಹರಳಿಮಠ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಗಧರ್ಮ | ಚುನಾವಣೆಗಳಲ್ಲಿ ಭ್ರಷ್ಟಾಚಾರ ಒಂದು ಅಭ್ಯಾಸವಾಗಿಬಿಟ್ಟಿದೆ

ಪ್ರಧಾನಿ ಮೋದಿ ಮಾರ್ಚ್ 13 ಮತ್ತು 14ರಂದು ಅಸ್ಸಾಂಗೆ ಭೇಟಿ ನೀಡಿದರು....

ʼಧುರಂಧರ್ʼ ಸೀಕ್ವೆಲ್‌ಗೆ ʼAʼ ಸರ್ಟಿಫಿಕೇಟ್; 21 ಕಡೆ ಕತ್ತರಿ, ರನ್‌ಟೈಮ್ ಎಷ್ಟು ಗೊತ್ತೇ?

ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ʼಧುರಂಧರ್‌ʼನ ಮುಂದುವರೆದ ಭಾಗ 'ಧುರಂಧರ್: ದಿ...

ʼಸೆರಗ ಸರ್ಸೆʼ ಚೀಪ್‌ ಗಿಮಿಕ್‌ನ ಭಾಗ- ಕಂಗನಾ ಗುಡುಗು, ಅರ್ಮಾನ್‌ ಅಸಹನೆ

ಪ್ರೇಮ್‌ ನಿರ್ದೇಶನದ ಕೆಡಿ ದ ಡೆವಿಲ್‌ ಸಿನಿಮಾದ ವಿವಾದಿತ ಹಾಡು ʼಸೆರಗ...