ಮಮ್ಮುಟ್ಟಿಗೆ ಪದ್ಮ ಭೂಷಣ ಪ್ರಶಸ್ತಿ: ಪ್ರತಿಭೆಗಾಗಿಯೇ, ಇಲ್ಲ ಕೇರಳ ಚುನಾವಣೆಗಾಗಿಯೇ?

Date:

ಭಾರತೀಯ ಚಿತ್ರರಂಗವೇ ಮಲಯಾಳಂ ಕಡೆ ತಿರುಗಿ ನೋಡುವಂತೆ ಮಾಡಿದ ಮಮ್ಮುಟ್ಟಿಗೆ ಕೇಂದ್ರದ ಎನ್‌ಡಿಎ ಸರ್ಕಾರ ಈಗ ಪದ್ಮ ಪ್ರಶಸ್ತಿ ಘೋಷಿಸಿದೆ. ಇದರ ಹಿಂದೆ ಕೇರಳದ ಚುನಾವಣಾ ರಾಜಕಾರಣವಿದೆಯೇ? ಮುಸ್ಲಿಂ ಮತ್ತು ಈಳವ ಮತಗಳ ಮೇಲೆ ಕಣ್ಣಿಟ್ಟು ಈ ಪ್ರಶಸ್ತಿಯನ್ನು ಕೊಟ್ಟಿದೆಯೇ?

ಭಾರತೀಯ ಚಿತ್ರರಂಗದಲ್ಲಿ ಎಂದಿಗೂ ಮರೆಯಲಾಗದ ಹೆಸರೆಂದರೆ ‘ಮಮ್ಮುಟ್ಟಿ‘. ಮಲಯಾಳಂ ಸಿನಿಮಾದ ಮೂಲಕ ತಮ್ಮ ಸಿನಿಮಾ ಬದುಕನ್ನು ಪ್ರವೇಶಿಸಿದ ನಟ ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲೂ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಮೇರು ನಟ ಮಮ್ಮುಟ್ಟಿಗೆ ಇದೀಗ ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ಭೂಷಣ ಪ್ರಶಸ್ತಿ ಒಲಿದು ಬಂದಿದೆ. ವೃತ್ತಿ ಬದುಕಿನ ಮತ್ತು ಜೀವನದ ಸಂ‍ಧ್ಯಾಕಾಲದಲ್ಲಿರುವ 74ರ ಹರೆಯದ ನಟ ಮಮ್ಮುಟ್ಟಿಗೆ ಪದ್ಮ ಪ್ರಶಸ್ತಿ ಇಷ್ಟೊಂದು ತಡವಾಗಿದ್ದಾದ್ದರೂ ಯಾಕೆ ಎಂಬ ಚರ್ಚೆ ಆರಂಭವಾಗಿದೆ.

ಪ್ರತಿ ವರ್ಷ ಕೇಂದ್ರ ಸರ್ಕಾರ ‘ಪದ್ಮ ಪ್ರಶಸ್ತಿ’ಗಳನ್ನು ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ಮಹನೀಯರಿಗೆ ಕೊಡುವುದು ವಾಡಿಕೆ. ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮ ಶ್ರೀ ಎಂಬ ಮೂರು ವಿಭಾಗಗಳಲ್ಲಿ ಕಲೆ, ಸಾಹಿತ್ಯ, ಸಿನಿಮಾ, ಸಂಗೀತ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸಲ್ಲುತ್ತದೆ. ಅದನ್ನು ಕೇಂದ್ರ ಸರ್ಕಾರವೇ ಗುರುತಿಸಿ ಕೊಡುತ್ತದೆ.

ಇದನ್ನು ಓದಿ: ಕೇರಳ, ತಮಿಳುನಾಡು ಲೋಕಸಭೆ ಚುನಾವಣೆ: ರಾಹುಲ್ ಮುನ್ನಡೆ, ತಮಿಳುನಾಡಿನಲ್ಲಿ ಸ್ಟ್ರಾಂಗ್ ರೂಮ್ ಕೀ ನಾಪತ್ತೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದು 12 ವರ್ಷಗಳಾಗುತ್ತಿದೆ. ಕಳೆದ 12 ವರ್ಷಗಳಿಂದಲೂ ಪ್ರಶಸ್ತಿಗಳನ್ನು ರಾಜಕೀಕರಣಗೊಳಿಸಲಾಗುತ್ತಿದೆ. ಅದಕ್ಕೆ ಉದಾಹರಣೆ ಎಂಬಂತೆ ಈ ವರ್ಷ ಬಿಡುಗಡೆಯಾಗಿರುವ ಪದ್ಮ ಪ್ರಶಸ್ತಿಯ ಪಟ್ಟಿಯನ್ನು ನೋಡಬಹುದಾಗಿದೆ. ಇದೇ ವರ್ಷ ಚುನಾವಣೆ ನಡೆಯಲಿರುವ ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡಿಗೆ ಹೆಚ್ಚಿನ ಪ್ರಶಸ್ತಿ ಸಿಕ್ಕಿದೆ. ಮೊದಲ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಯ ಐವರಲ್ಲಿ ಮೂವರು ಕೇರಳದವರಿದ್ದಾರೆ. ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ಭೂಷಣದಲ್ಲಿಯೂ ಕೇರಳದವರ ಪಾಲಿದೆ.

ಹೇಗಾದರೂ ಮಾಡಿ, ಈ ವರ್ಷದ ಕೇರಳ ಚುನಾವಣೆಯಲ್ಲಿ ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕೆಂಬ ಕಾರಣಕ್ಕಾಗಿ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್‌, ನಿವೃತ್ತ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಕೆ.ಟಿ.ಥಾಮಸ್‌ ಮತ್ತು ಲೇಖಕ, ಪತ್ರಕರ್ತ ಪಿ.ನಾರಾಯಣನ್‌ ಅವರಿಗೆ ಪದ್ಮ ವಿಭೂಷಣ ಹಾಗೂ ಭಾರತೀಯ ಚಿತ್ರರಂಗದ ಮೇರು ನಟ ಮಮ್ಮುಟ್ಟಿ ಮತ್ತು ಈಳವ ಸಮುದಾಯದ ಮುಖಂಡ ವೆಲ್ಲಪಳ್ಳಿ ನಟೇಶನ್‌ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ರಾಜಕೀಯ ವಿರೋಧಿ ವಿ.ಎಸ್‌.ಅಚ್ಯುತಾನಂದನ್‌ ಅವರಿಗೆ ಕೇಂದ್ರ ಬಿಜೆಪಿ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿ ಕೊಟ್ಟಿರುವ ಹಿಂದೆ ಈಳವ ಸಮುದಾಯದ ಮತ ಬ್ಯಾಂಕ್‌ಅನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಬಿಲ್ಲವರನ್ನು ಹೇಗೆ, ಬಿಜೆಪಿ ಹಿಡಿದಿಟ್ಟುಕೊಂಡಿದೆಯೋ ಅದೇ ರೀತಿಯಲ್ಲಿ ಕೇರಳದಲ್ಲಿಯೂ ಪ್ರಯತ್ನಿಸುತ್ತಿದೆ.

ಈಳವ ಸಮುದಾಯದ ನಾಯಕ ಎಂದು ಗುರುತಿಸಿಕೊಂಡ ನಟೇಶನ್‌ ಅವರು, ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವುದು ದ್ವೇಷ ಭಾಷಣದ ಕಾರಣಕ್ಕಾಗಿ. ನಟೇಶನ್‌ ಅನೇಕ ಸಲ ತಮ್ಮ ಭಾಷಣದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಯೇ ಮಾತನಾಡುತ್ತಾರೆ. ವಿಪರ್ಯಸ ಎಂದರೆ ನಟೇಶನ್‌ ಜೊತೆಯಲ್ಲಿಯೇ ಖ್ಯಾತನಟ ಮಮ್ಮುಟ್ಟಿಗೂ ಪ್ರಶಸ್ತಿಯನ್ನು ಘೋಷಿಸಿರುವುದು ದುರಂತವೆಂದು ಭಾವಿಸಬಹುದು.

ಕಳೆದ ವರ್ಷ ಮಲಯಾಳಂ ನಟ ಮೋಹನ್‌ ಲಾಲ್‌ ಅವರಿಗೆ ಸಿನಿಮಾ ರಂಗದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಕೊಡಲಾಗಿತ್ತು. ನಟ ಮೋಹನ್‌ ಲಾಲ್‌ ಅನೇಕ ಭಾರಿ ಬಲಪಂಥೀಯ ಸಿದ್ಧಾಂತಗಳನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಈ ಪ್ರಶಸ್ತಿ ರಾಜಕೀಯ ಪ್ರೇರಿತ ಎಂಬ ಟೀಕೆಗಳು ಬಂದವು. ಮಮ್ಮುಟ್ಟಿ ಒಬ್ಬ ಮುಸ್ಲಿಂ ಎನ್ನುವ ಕಾರಣಕ್ಕೆ ಅವರಿಗೆ ಈ ಪ್ರಶಸ್ತಿ ಬರಲಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾದವು.

ಆದರೆ ಬಿಜೆಪಿ ಈಗ ಮಮ್ಮುಟ್ಟಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಣೆ ಮಾಡಿರುವುದು ರಾಜಕೀಯ ಕಾರಣದಿಂದ ಎಂಬುದು ಇಲ್ಲಿ ಸ್ಪಷ್ಟವಾಗುತ್ತಿದೆ.

ಕೇರಳದ ಕರಾವಳಿ ಜಿಲ್ಲೆಯಾದ ಆಲಪ್ಪುಳ (ಹಿಂದೆ ಅಲೆಪ್ಪಿ) ಜಿಲ್ಲೆಯ ಚಂಡಿರೋರ್‌ ಎಂಬ ಪುಟ್ಟ ಗ್ರಾಮದಲ್ಲಿ ಕೃಷಿಕರಾಗಿದ್ದ ಇಸ್ಮಾಯಿಲ್‌ ಮತ್ತು ಫಾತೀಮ ದಂಪತಿಯ ಮಗನಾಗಿ ಸೆಪ್ಟೆಂಬರ್‌ 7, 1951ರಂದು ಮುಹಮ್ಮದ್‌ ಕುಟ್ಟಿ ಇಸ್ಮಾಯಿಲ್‌ ಪನಾಪರಂಬಿಲ್ (ಮಮ್ಮುಟ್ಟಿ) ಜನನವಾಗುತ್ತದೆ. ಬಾಲಕ ಮುಹಮ್ಮದ್‌ ಕುಟ್ಟಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ನಂತರ ಎಲ್‌ಎಲ್‌ಬಿ ಪದವಿಯನ್ನೂ ಪಡೆಯುತ್ತಾರೆ. ಓದುತ್ತಿರುವಾಗಲೇ ಸಿನಿಮಾ ರಂಗಕ್ಕೆ ಕಾಲಿಟ್ಟ ಮಮ್ಮುಟ್ಟಿ ಹಿಂದೆ ತಿರುಗಿ ನೋಡಿದ ಇತಿಹಾಸವಿಲ್ಲ.

1971ರಲ್ಲಿ ಕೆ.ಎಸ್‌.ಸೇತುಮಾಧವನ್‌ ನಿರ್ದೇಶನದ ‘ಅನುಭವಂಗಲ್‌ ಪಾಲಿಚಕಲ್‌’ ಎಂಬ ಕಾದಂಬರಿ ಆಧರಿತ ಸಿನಿಮಾದಲ್ಲಿ ಮೊದಲ ಭಾರಿ ಮಮ್ಮುಟ್ಟಿ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಾರೆ. ಕಪ್ಪು-ಬಿಳುಪು ಚಿತ್ರಗಳ ಮೂಲಕ ರಂಜಿಸಲು ಆರಂಭಿಸಿದ ನಟ ಇಂದಿಗೂ ಧಣಿವಾಗದೆ ನಟಿಸುತ್ತಿದ್ದಾರೆ. 425 ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮದೇ ಆದ ವಿಶೇಷ ಛಾಪನ್ನು ಮೂಡಿಸಿದ ನಟ 3 ರಾಷ್ಟ್ರಪ್ರಶಸ್ತಿಗಳು, 10 ಕೇರಳ ರಾಜ್ಯ ಸಿನಿಮಾ ಪ್ರಶಸ್ತಿಗಳು, 15 ಫಿಲ್ಮ್‌ ಫೇರ್‌ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವೆಲ್ಲವೂ ಮಮ್ಮುಟ್ಟಿಯ ನಟನೆಗೆ ಬಂದಿರುವುದು ವಿಶೇಷ. ಯಾವ ಪಾತ್ರವನ್ನಾದರೂ ಸಲೀಸಾಗಿ ಜೀವಿಸಬಲ್ಲ ನಟ ಮಮ್ಮುಟ್ಟಿ.

ಮಮ್ಮುಟ್ಟಿ ಸಿನಿಮಾ ರಂಗಕ್ಕೆ ಬಂದು 50 ವರ್ಷಗಳು ದಾಟಿವೆ. ಕೇವಲ ಕಮರ್ಷಿಯಲ್‌ ಚಿತ್ರಗಳಲ್ಲದೆ, ಕಾದಂಬರಿ ಆಧರಿತ ಚಿತ್ರಗಳಲ್ಲಿಯೂ ಅಭಿನಯಿಸಿ, ಗೆದ್ದವರು ಮಮ್ಮುಟ್ಟಿ. ಉದಾಹರಣೆಗೆ, ಅಡೂರ್ ಗೊಪಾಲಕೃಷ್ಣನ್‌ ಅವರ ‘ಮಥಿಲುಗಲ್’, ‘ವಿಧೇಯನ್‌ʼಗಳನ್ನು ಹೆಸರಿಸಬಹುದು. ಇತ್ತೀಚೆಗೆ ‘ಕಲಾಮ್‌ಕಾವಲ್‌’ ಎಂಬ ಚಿತ್ರದಲ್ಲಿ ಸೈನೆಡ್‌ ಮೋಹನ್‌ ಪಾತ್ರವನ್ನೂ ನಿರ್ವಹಿಸಿದ್ದರು. ಬಹುಮುಖಿ ಪ್ರತಿಭೆ ಮಮ್ಮುಟ್ಟಿಗೆ ನಟನೆ ಎನ್ನುವುದು ಲೀಲಾಜಾಲ.

ಅದೇ ರೀತಿಯಲ್ಲಿ ಎರಡು ವರ್ಷದ ಹಿಂದೆ ‘ಬ್ರಹ್ಮಯುಗಂ’ ಚಿತ್ರದಲ್ಲಿ ಪ್ರತಿನಾಯಕನ ಪಾತ್ರವನ್ನು, ‘ಪುಝು’ ಚಿತ್ರದಲ್ಲಿ ಮಾರ್ಯದೆಗೇಡು ಹತ್ಯೆ ಮಾಡುವ ಬ್ರಾಹ್ಮಣನ ಪಾತ್ರವನ್ನು, ‘ಕಥಲ್‌ ದಿ ಕೋರ್‌’ ಸಿನಿಮಾದಲ್ಲಿ ಸಲಿಂಗಪ್ರೇಮಿಯ ಪಾತ್ರವನ್ನು, ಬಾಬಾಸಾಹೇಬ್‌ ಅಂಬೇಡ್ಕರ್‌ ಪಾತ್ರವನ್ನು ನಿರ್ವಹಿಸಿದ ಬಗೆಯನ್ನು ನೋಡಬಹುದು. ದಕ್ಷಿಣ ಭಾರತ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಯಾವ ನಟರೂ ಮಮ್ಮುಟ್ಟಿ ತರದ ಪಾತ್ರಗಳ ಪ್ರಯೋಗಗಳನ್ನು ಮಾಡಿಲ್ಲ ಎನ್ನಬಹುದು.

ಹಾಲಿವುಡ್‌ ಅಂಗಳದಲ್ಲಿ ಮರ್ಲನ್‌ ಬ್ರಾಂಡೊ, ರಾಬರ್ಟ್‌ ಡಿ ನಿರೊ ಮತ್ತು ಅಲ್‌ ಪ್ಯಾಚಿನೋ ತರದ ನಟರು ಪ್ರತಿನಾಯಕನ ಪಾತ್ರಗಳನ್ನು ನಿರ್ವಹಿಸಿ ಗೆದ್ದಿದ್ದಾರೆ. ಅದೇ ಸಾಲಿನಲ್ಲಿ ನಿಲ್ಲಬಲ್ಲಂತಹ ನಟ ಮಮ್ಮುಟ್ಟಿ. ಇಡೀ ತಮ್ಮ ಸಿನಿಮಾ ಬದುಕಿನಲ್ಲಿ ನಿಜವಾದ ಕಲಾವಿದನಂತೆ ಬದುಕಿದ್ದಾರೆ.

ಇಂತಹ ಮೇರು ನಟ ಮತ್ತು ಭಾರತೀಯ ಚಿತ್ರರಂಗವೇ ಮಲಯಾಳಂ ಕಡೆ ತಿರುಗಿ ನೋಡುವಂತೆ ಮಾಡಿದ ಮಮ್ಮುಟ್ಟಿಗೆ ಈಗ ಪದ್ಮ ಪ್ರಶಸ್ತಿ ಘೋಷಿಸಿರುವುದು ಚುನಾವಣಾ ರಾಜಕಾರಣದ ಭಾಗವೇ ಆಗಿದೆ ಎಂಬುದು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿರುವ ಮಾತು. ಬಿಜೆಪಿ ಮೊದಲಿನಿಂದಲೂ ಒಡೆದು ಆಳುವ ನೀತಿ ಇಲ್ಲವೇ, ಓಲೈಕೆ ರಾಜಕಾರಣವನ್ನು ಪಾಲಿಸಿಕೊಂಡೇ ಬಂದಿರುವುದು. ಅದೇ ರೀತಿಯಲ್ಲಿ ಮುಸ್ಲಿಂ ಮತ್ತು ಈಳವ ಮತಗಳ ಮೇಲೆ ಕಣ್ಣಿಟ್ಟು ಈ ಪ್ರಶಸ್ತಿಯನ್ನು ಕೊಟ್ಟಿದೆ ಎಂಬ ಮಾತೂ ಇದೆ.

Manoj
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...