ಪ್ರಜಾಕೀಯದ ಸೋಲು : ಜನ ಅಸಾಮಾನ್ಯರು ಎಂದ ಉಪೇಂದ್ರಗೆ ನೆಟ್ಟಿಗರ ತರಾಟೆ

Date:

  • ಪ್ರಜಾಕೀಯ ಪಕ್ಷದ ಸೋಲಿಗೆ ಜನರನ್ನು ದೂಷಿಸಿದ ಉಪೇಂದ್ರ
  • ಅಭ್ಯರ್ಥಿಗಳ ಹೆಸರೇ ಗೊತ್ತಿರಲಿಲ್ಲ ಎಂದ ಅಭಿಮಾನಿಗಳು

ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಾಗಿದೆ. ನಾಲ್ಕೈದು ದಿನಗಳ ಆಂತರಿಕ ತಿಕ್ಕಾಟದ ಬಳಿಕ ಬಹುಮತ ಪಡೆದಿರುವ ಕಾಂಗ್ರೆಸ್‌ ಪಕ್ಷ ಸರ್ಕಾರ ರಚನೆಗೆ ಮುಂದಾಗಿದೆ. ಇದೇ ಶನಿವಾರ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ನಟ, ಉತ್ತಮ ಪ್ರಜಾಕೀಯ ಪಕ್ಷದ ಮುಖ್ಯಸ್ಥ ಉಪೇಂದ್ರ ಚುನಾವಣೆಯಲ್ಲಿ ತಮ್ಮ ಪಕ್ಷ ಸೋಲುನುಭವಿಸಿದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಉತ್ತಮ ಪ್ರಜಾಕೀಯ ಪಕ್ಷದ ಸೋಲಿನ ಬಗ್ಗೆ ಒಗಟಿನ ರೀತಿಯಲ್ಲಿ ಟ್ವೀಟ್‌ ಮಾಡಿರುವ ಉಪೇಂದ್ರ, “ಒಂದು ದೊಡ್ಡ ಕಲ್ಲು ರಸ್ತೆಗೆ ಅಡ್ಡವಾಗಿ ಬಿದ್ದಿದೆ. ಅದನ್ನು ಎತ್ತಲು ಹತ್ತು ಜನ ಬೇಕು. ಅದನ್ನು ನಾವೆಲ್ಲ ಸೇರಿ ತೆಗೆಯೋಣ ಎಂದರೆ, ನೀವು ಎತ್ತಿ ತೋರಿಸಿ ನಾವು ಜೊತೆ ಸೇರುತ್ತೇವೆ ಎನ್ನುತ್ತಿದ್ದಾರೆ. ಏನು ಮಾಡುವುದು? ಜನಸಾಮಾನ್ಯ ಅಲ್ಲ, ಜನ ಅಸಾಮಾನ್ಯರು ತಿಳಿಸಿ” ಎಂದಿದ್ದಾರೆ. ಅದಾದ ಬಳಿಕ ಮತ್ತೊಂದು ಟ್ವೀಟ್‌ ಮಾಡಿ, “ಯಾರನ್ನೂ ಬಲವಂತ ಮಾಡಬಾರದು” ಎಂದೂ ಹೇಳಿದ್ದಾರೆ.

ಪ್ರಜಾಕೀಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನ ಸಹಕರಿಸುತ್ತಿಲ್ಲ ಎಂಬ ಧಾಟಿಯ ಉಪೇಂದ್ರ ಅವರ ಮಾತಿಗೆ ನೆಟ್ಟಿಗರು ಕೂಡ ತಕ್ಕ ಉತ್ತರವನೇ ನೀಡಿದ್ದಾರೆ. “ಒಂದು ದೊಡ್ಡ ಕಲ್ಲು ರಸ್ತೆಗೆ ಅಡ್ಡವಾಗಿ ಬಿದ್ದಿದೆ, ಅದನ್ನು ಎತ್ತಲು ಹತ್ತು ಜನ ಬೇಕು, ಅದನ್ನು ನಾವು ಹೀಗೆ ತೆಗೆಯಬಹುದು ಹಾಗೆ ತೆಗೆಯಬಹುದು ಎಂದು ಹೇಳುತ್ತಾ ಕುಳಿತರೆ ಹೆಂಗೆ? ಕಲ್ಲಿನ ಹತ್ತಿರ ಬರಬೇಕಲ್ಲವೋ? ಸ್ವಲ್ಪ ಜನ ಬಂದ್ರೆ ಇನ್ನೊಂದಿಷ್ಟು ಜನ ಸೇರುತ್ತಾರೆ. ಅದನ್ನು ಬಿಟ್ಟು ಮನೆಯಲ್ಲಿ ಕೂತು ಸ್ಕೆಚ್ ಹಾಕಿ ಪ್ಲಾನ್ ರೆಡಿ ಮಾಡಿದರೆ ಆಯಿತೋ?” ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಹಾಕಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಅಪರ್ಣಾ ಶಮಂತ್‌ ಎನ್ನುವವರು ಟ್ವೀಟ್‌ ಮಾಡಿ, “ನಾನು ಈ ಬಾರಿ ಪ್ರಜಾಕೀಯಕ್ಕೆ ಮತ ಹಾಕಬೇಕು ಎಂದುಕೊಂಡಿದ್ದೆ. ಡೈಲಾಗ್‌ ಹೊಡೆಯುವುದೇ ರಾಜಕೀಯ ಅಲ್ಲ ಎಂಬುದನ್ನು ಪ್ರಜಾಕೀಯ ಪಕ್ಷದವರು ಮೊದಲು ಅರಿತುಕೊಳ್ಳಬೇಕಿದೆ. ಹಾಗಂತ ಪ್ರಜಾಕೀಯದ ನಾಯಕರು ದುಬಾರಿ ಪ್ರಚಾರ ಮಾಡಬೇಕಿಲ್ಲ, ಜನ ಸಾಮಾನ್ಯರ ನಡುವೆ ಕೆಲಸ ಮಾಡಿ ಗುರುತಿಸಿಕೊಳ್ಳುವ ಅಗತ್ಯವಿದೆ. ಈ ಬಾರಿ ನಮ್ಮ ಕ್ಷೇತ್ರದಲ್ಲಿ ಪ್ರಜಾಕೀಯದ ಅಭ್ಯರ್ಥಿ ಯಾರೂ ಎಂಬ ಮಾಹಿತಿ ಕೂಡ ನಮಗಿರಲಿಲ್ಲ” ಎಂದು ಪಕ್ಷದ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ.

ನಿತಿನ್‌ ಎಂಬುವವರು ಟ್ವೀಟ್‌ ಮಾಡಿ, “ಜನರಿಗೆ ಗೊಂದಲ ಇರುವುದು ʼನಾನೇನು ಮಾಡಲ್ಲ, ಎಲ್ಲ ನೀವು ನೀವೇ ಸೇರಿ ಕಲ್ಲನ್ನು ಎತ್ತಿ ಹಾಕಿʼ ಅನ್ನುವ ವಾದ” ಎಂದು ಉಪೇಂದ್ರ ಅವರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒನ್ ಬ್ಯಾಟಲ್ ಆಫ್ಟರ್ ಅನದರ್ | ಸಾಧಾರಣ ಚಿತ್ರಕ್ಕೆ ಆಸ್ಕರ್ ಚಿನ್ನದ ಚೌಕಟ್ಟು!

ವಲಸೆಯಂತಹ ಜ್ವಲಂತ ಸಮಸ್ಯೆಯನ್ನು ಹೇಳುವ ರಾಜಕೀಯ ಚಿತ್ರವೆನಿಸಿದರೂ; ಕ್ರಾಂತಿಕಾರಿ ಚಟುವಟಿಕೆಗಳ ಕುರಿತು...

“ತಾಯಿನೇ ಎಲ್ಲಾ” ಎಂದಿದ್ದ ಪ್ರೇಮ್, ಈಗ “ಸರ್ಸೆ ನಿನ್ನ ಸೆರಗ” ಅಂತಾರೆ!; ಭಾರೀ ಟೀಕೆಗೆ ಗುರಿಯಾದ ʼಕೆಡಿ ದಿ ಡೆವಿಲ್‌ʼ ಹಾಡು

ಪ್ರೇಮ್‌ ನಿರ್ದೇಶನದ "ಕೆಡಿ ದಿ ಡೆವಿಲ್‌" ಸಿನಿಮಾ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ...

ಆಸ್ಕರ್ 2026​ ಪ್ರಶಸ್ತಿ | ಅತ್ಯುತ್ತಮ ನಟ ಮೈಕೆಲ್ ಬಿ, ನಟಿ ಜೆಸ್ಸಿ ಬಕ್ಲಿ: ಸಂಪೂರ್ಣ ವಿಜೇತರ ಪಟ್ಟಿ

ಆಸ್ಕರ್ 2026 ಪ್ರಶಸ್ತಿ ಸಮಾರಂಭವು ಮಾರ್ಚ್ 15ರಂದು ಲಾಸ್ ಏಂಜಲಿಸ್‌ನ ಡಾಲ್ಬಿ...