ಸ್ಯಾಂಡಲ್‌ವುಡ್ ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮೊದಲ ಬಾರಿಗೆ ಪ್ರೊಡ್ಯೂಸರ್ ಆಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸದ್ಯ ಸಹೋದರ ಪ್ರಣಮ್ ದೇವರಾಜ್ ಚಿತ್ರದ ನಾಯಕನಾಗಿದ್ದು, ಚಿತ್ರದ ಫರ್ಸ್ಟ್ ಲುಕ್ ರಿಲೀಸ್ ಆಗಿದೆ.
ಡೈನಮಿಕ್ ವೆಂಚರ್ಸ್ ಹಾಗೂ ಪುರಾತನ ಫಿಲಂಸ್ ಪ್ರೊಡಕ್ಷನ್ ಸಹಯೋಗದಲ್ಲಿ ಚಿತ್ರ ಮೂಡಿಬರಲಿದೆ. ಎಂಜಿಆರ್ ಚಿತ್ರದ ಶೀರ್ಷಿಕೆ. ನಾಯಕ ಪ್ರಣಮ್ ಅವರ ಹುಟ್ಟುಹಬ್ಬದ ಪ್ರಯುಕ್ತ ಟೈಟಲ್ ಹಾಗೂ ರಗಡ್ ಲುಕ್‌ನ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ.
ಇದೊಂದು ಸಂತಸದ ಕ್ಷಣ. ನಾನು ಚಿತ್ರರಂಗಕ್ಕೆ ಬಂದು 30 ವರ್ಷಗಳ ಬಳಿಕ ನಿರ್ಮಾಪಕನಾದೆ. ಈಗ ನನ್ನ ಮಗ ನಿರ್ಮಾಪಕನ ಜವಾಬ್ದಾರಿ ಹೊತ್ತಿದ್ದಾನೆ. ನಮಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ಇದರಲ್ಲೇ ಏನಾದರೂ ಮಾಡಬೇಕೆಂಬ ಆಸೆಯಿರುತ್ತದೆ. ಪುರಾತನ ಫಿಲಂಸ್‌ನವರು ಮಗನ ಜೊತೆ ಎರಡನೇ ಸಿನಿಮಾ ಮಾಡ್ತಿದಾರೆ. ನನಗೆ ಇಷ್ಟವಾದ ಚರಣ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಬಹುತೇಕರು ನಮ್ಮನ್ನು ಅರ್ಥಮಾಡಿಕೊಂಡವರೇ ಚಿತ್ರದ ಕೆಲಸ ಮಾಡಿದ್ದಾರೆ. ಇದು ಒಂದು ರೀತಿಯ ಖುಷಿ ತಂದಿದೆ. ಚಿತ್ರಕ್ಕೆ ಶುಭವಾಗಲಿ ಎಂದರು ಹಿರಿಯ ನಟ ದೇವರಾಜ್.

ನಿರ್ದೇಶಕ ಶ್ರೀಕಾಂತ್ ಹುಣಸೂರು ಮಾತನಾಡಿ, ಪ್ರಣಂ ಜೊತೆ ಮುತ್ತಣ್ಣ ಬಳಿಕ ಇದು ಎರಡನೇ ಚಿತ್ರ. ಅವರನ್ನು ವಿಭಿನ್ನ ರೀತಿಯಲ್ಲಿ ತೋರಿಸಲು ಪ್ರಯತ್ನಿಸಿದ್ದೇನೆ. ಚಿತ್ರದ ಟೈಟಲ್ ಸಮಸ್ಯೆಯಾಗಬಹುದು, ಆದರೆ ಕಾನ್ಸೆಪ್ಟ್ ಬಹಳ ಚೆನ್ನಾಗಿದೆ. ಮುಂದಿನ ದಿನಗಳಲ್ಲಿ ಎಂಜಿಆರ್ ಎಂದರೇನು ಎಂದು ತಿಳಿಸುತ್ತೇವೆ. 2005ರಲ್ಲಿ ನಡೆದ ಕಥೆಯಾಧರಿಸಿ ಚಿತ್ರ ತಯಾರಾಗಲಿದೆ. ಮಾರ್ಚ್ ಎಂಡ್ ಅಥವಾ ಯುಗಾದಿ ವೇಳೆಗೆ ಚಿತ್ರದ ಮುಹೂರ್ತ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಬೆಂಗಳೂರು | ಜ.29ರಂದು ‘ಗೌರಿ ದಿನ’ ಕಾರ್ಯಕ್ರಮ; ನಟ ದುನಿಯಾ ವಿಜಯ್ ಭಾಗಿ!
ಸ್ಕೇಟಿಂಗ್ ಕೃಷ್ಣ ಅವರ ಛಾಯಾಗ್ರಹಣ ಹಾಗೂ ಚರಣ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿರಲಿದೆ. ತಂಡ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.





